ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯಿಂದ ‘Viksit UP @ 2047’ ವರ್ಕ್‌ಶಾಪ್
ಮುಂದಿನ ಎರಡು ದಶಕಗಳ ಕಾಲ ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿಗೆ ಅವಶ್ಯವಿರುವ ಎಲ್ಲ ಕಾರ್ಯಸೂಚಿಗಳ ಬಗ್ಗೆ ವಿಸ್ತೃತ ಚರ್ಚೆ ಈ ವರ್ಕ್‌ಶಾಪ್‌ನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳು, ತಜ್ಞರು ಮತ್ತು ಪ್ರವಾಸೋದ್ಯಮ ಉದ್ಯಮಿಗಳು ಭಾಗವಹಿಸಿದ್ದರು.
ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಇತ್ತೀಚೆಗಷ್ಟೇ ಲಖನೌನಲ್ಲಿ “Viksit Uttar Pradesh @ 2047” ವರ್ಕ್‌ಶಾಪ್ ಅನ್ನು ಆಯೋಜಿಸಿತ್ತು. ಮುಂದಿನ ಎರಡು ದಶಕಗಳ ಕಾಲ ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿಗೆ ಅವಶ್ಯವಿರುವ ಎಲ್ಲ ಕಾರ್ಯಸೂಚಿಗಳ ಬಗ್ಗೆ ವಿಸ್ತೃತ ಚರ್ಚೆ ಈ ವರ್ಕ್‌ಶಾಪ್‌ನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳು, ತಜ್ಞರು ಮತ್ತು ಪ್ರವಾಸೋದ್ಯಮ ಉದ್ಯಮಿಗಳು ಭಾಗವಹಿಸಿದ್ದರು.
ಪ್ರವಾಸೋದ್ಯಮ ಸಚಿವ ಜೈವೀರ್ ಸಿಂಗ್ ಕಾರ್ಯಕ್ರಮದಲ್ಲಿ ಮಾತನಾಡಿ “ಈ ವರ್ಷ 100 ಕೋಟಿಗೂ ಅಧಿಕ ದೇಶೀಯ ಪ್ರವಾಸಿಗರು ರಾಜ್ಯಕ್ಕೆ ಭೇಟಿನೀಡಿರುವುದು ವಿಶೇಷ, ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಅವಶ್ಯವಿರುವ ಎಲ್ಲ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸರಕಾರ ಬದ್ಧವಾಗಿದೆ” ಎಂದು ತಿಳಿಸಿದರು.

ಈ ವಿಶಿಷ್ಟ ವರ್ಕ್‌ಶಾಪ್‌ನಲ್ಲಿ ಯು.ಪಿ. ರಾಜ್ಯದ ಪರಂಪರೆಯ ಪರಿಚಯ, ಹೆರಿಟೇಜ್ ಸಂರಕ್ಷಣೆ, ಇಕೋ ಟೂರಿಸಂ, ಗ್ರಾಮೀಣ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ ಮತ್ತು ಡಿಜಿಟಲ್ ಟೂರಿಸಂ ಸೇವೆಗಳ ಸುಧಾರಣೆ ಕುರಿತಂತೆ ಚರ್ಚೆಗಳು ನಡೆದವು.
ಮುಖ್ಯ ಮಂತ್ರಿಯ ಸಲಹೆಗಾರ ಅವನೀಶ್ ಅವಸ್ಥಿ ಮಾತನಾಡಿ ʼಪ್ರವಾಸೋದ್ಯಮದ ಅಭಿವೃದ್ಧಿ ಸ್ಥಳೀಯ ಸಮುದಾಯಗಳ ಆರ್ಥಿಕತೆಗೆ ನೇರ ಲಾಭ ನೀಡುವಂತಿರಬೇಕು, ಈ ನಿಟ್ಟಿನಲ್ಲಿ ನಮ್ಮ ಸರಕಾರ ಕಾರ್ಯನಿರ್ವಹಿಸುತ್ತದೆ ಮತ್ತು ಈ ವರ್ಕ್‌ಶಾಪ್‌ನಲ್ಲಿ ಸಂಗ್ರಹಿಸಿದ ಸಲಹೆಗಳ ಆಧಾರದ ಮೇಲೆ “UP Tourism Vision 2047” ಎಂಬ ದೀರ್ಘಕಾಲೀನ ರೋಡ್‌ಮ್ಯಾಪ್ ರೂಪಿಸಲಾಗುವುದುʼ ಎಂದು ಅವರು ತಿಳಿಸಿದರು.