ವಿಂಟರ್ ಟೂರಿಸಂ ಉತ್ತೇಜನಕ್ಕೆ ಉತ್ತರಾಖಂಡ್ ಸರಕಾರದಿಂದ ಹೊಸ ಯೋಜನೆ
ಅಪರೂಪದ ಮತ್ತು ಅಪಾಯದಲ್ಲಿರುವ ವನ್ಯಜೀವಿ ಪ್ರಜಾತಿಯಾದ ಸ್ನೋ ಲೆಪರ್ಡ್‌ಗಳ ಸಂರಕ್ಷಣೆಗೆ ಧಕ್ಕೆ ಬಾರದಂತೆ, ಈ ಪ್ರವಾಸವನ್ನು ಮಾರ್ಗಸೂಚಿಗಳ ಅನುಸಾರ ನಡೆಸಲಾಗುವುದು ಎಂದು ಸರಕಾರ ತಿಳಿಸಿದೆ. ಪ್ರವಾಸಿಗರಿಗೆ ವನ್ಯಜೀವಿ ವೀಕ್ಷಣೆಯ ಜತೆಗೆ ಹಿಮಾಲಯ ಪ್ರದೇಶದ ಪ್ರಕೃತಿ ಸೌಂದರ್ಯವನ್ನು ಅನುಭವಿಸುವ ಅವಕಾಶ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ.
ವಿಂಟರ್ ಟೂರಿಸಂ ಗೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ಉತ್ತರಾಖಂಡ್ ಸರಕಾರ ‘ಸ್ನೋ ಲೆಪರ್ಡ್ ಪ್ರವಾಸ’ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ಉತ್ತರಕಾಶಿ ಜಿಲ್ಲೆಯ ಗಂಗೋತ್ರಿ ರಾಷ್ಟ್ರೀಯ ಉದ್ಯಾನವನದಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ.
ಅಪರೂಪದ ಮತ್ತು ಅಪಾಯದಲ್ಲಿರುವ ವನ್ಯಜೀವಿ ಪ್ರಜಾತಿಯಾದ ಸ್ನೋ ಲೆಪರ್ಡ್‌ಗಳ ಸಂರಕ್ಷಣೆಗೆ ಧಕ್ಕೆ ಬಾರದಂತೆ, ಈ ಪ್ರವಾಸವನ್ನು ಮಾರ್ಗಸೂಚಿಗಳ ಅನುಸಾರ ನಡೆಸಲಾಗುವುದು ಎಂದು ಸರಕಾರ ತಿಳಿಸಿದೆ. ಪ್ರವಾಸಿಗರಿಗೆ ವನ್ಯಜೀವಿ ವೀಕ್ಷಣೆಯ ಜತೆಗೆ ಹಿಮಾಲಯ ಪ್ರದೇಶದ ಪ್ರಕೃತಿ ಸೌಂದರ್ಯವನ್ನು ಅನುಭವಿಸುವ ಅವಕಾಶ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ.

ಚಳಿಗಾಲದಲ್ಲಿ ಸಾಮಾನ್ಯವಾಗಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುವ ಹಿನ್ನೆಲೆಯಲ್ಲಿ, ಈ ಹೊಸ ಪ್ರವಾಸ ಯೋಜನೆಯ ಮೂಲಕ ಹಿಮಾಲಯದ ಗಡಿ ಪ್ರದೇಶಗಳಲ್ಲಿ ಪ್ರವಾಸ ಚಟುವಟಿಕೆಗಳನ್ನು ಸಕ್ರಿಯಗೊಳಿಸಲು ಸರ್ಕಾರ ಮುಂದಾಗಿದೆ. ಇದರೊಂದಿಗೆ ಹೋಮ್‌ಸ್ಟೇ ವ್ಯವಸ್ಥೆ, ಸ್ಥಳೀಯ ಮಾರ್ಗದರ್ಶಕರ ಸೇವೆ ಹಾಗೂ ಅಡ್ವೆಂಚರ್ ಟೂರಿಸಂ ಚಟುವಟಿಕೆಗಳಿಗೂ ಉತ್ತೇಜನ ನೀಡಲಾಗಲಿದೆ.
ಸರಕಾರದ ಪ್ರಕಾರ, ಈ ಯೋಜನೆಯಿಂದ ಸ್ಥಳೀಯ ನಿವಾಸಿಗಳಿಗೆ ಉದ್ಯೋಗಾವಕಾಶಗಳು ಹೆಚ್ಚುವ ಸಾಧ್ಯತೆ ಇದ್ದು, ಗ್ರಾಮೀಣ ಆರ್ಥಿಕತೆಗೆ ಸಹಕಾರಿಯಾಗಲಿದೆ. ಜತೆಗೆ ವನ್ಯಜೀವಿ ಸಂರಕ್ಷಣೆ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಒತ್ತು ನೀಡಿದಂತಾಗುತ್ತದೆ.