ವಿಶಾಖಪಟ್ಟಣದಲ್ಲಿ ʼಪದ್ಮನಾಭಂ ಟೂರಿಸಂ ಸರ್ಕ್ಯುಟ್ʼ ಆರಂಭಕ್ಕೆ ಸಿದ್ಧತೆ
ಪದ್ಮನಾಭಂ ಮತ್ತು ಆನಂದಪುರಂ ಪ್ರದೇಶಗಳ ಸಾಂಪ್ರದಾಯಿಕ ದೇವಸ್ಥಾನಗಳು, ಐತಿಹಾಸಿಕ ತಾಣಗಳು, ನದಿ ತೀರದ ಸುಂದರ ಜಾಗಗಳು, ಸಮುದ್ರತೀರ ಪ್ರದೇಶಗಳನ್ನು ಈ ಟೂರಿಸಂ ಸರ್ಕ್ಯುಟ್‌ನ ಭಾಗವಾಗಿಸಲು ತೀರ್ಮಾನಿಸಲಾಗಿದೆ. ಈ ಮೂಲಕ ಭೇಟಿ ನೀಡುವ ಪ್ರವಾಸಿಗರಿಗೆ ನಗರದ ಸುಂದರ ಜಾಗಗಳ ವೀಕ್ಷಣೆಯೊಂದಿಗೆ ಹಳ್ಳಿ ಸೊಗಡಿನ ಸವಿಯನ್ನು ಉಣಬಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ.
ಆಂಧ್ರಪ್ರದೇಶ ರಾಜ್ಯ ಸರಕಾರವು ಪದ್ಮನಾಭಂ ಮತ್ತು ಸಮೀಪದ ಆನಂದಪುರಂ ಪ್ರದೇಶಗಳನ್ನು ಒಳಗೊಂಡ ಹೊಸ ʼಪದ್ಮನಾಭಂ ಟೂರಿಸಂ ಸರ್ಕ್ಯುಟ್ʼ ನಿರ್ಮಾಣಕ್ಕೆ ಚಿಂತನೆ ನಡೆಸಿದೆ. ಈ ಬಗ್ಗೆ ಅಧ್ಯಯನ ಮುಂದುವರೆದಿದ್ದು, ಯೋಜನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಕಾರ್ಯಸೂಚಿಗಳನ್ನು ನಿರ್ಮಿಸುವ ಚಟುವಟಿಕೆಗಳು ಚುರುಕಿನಿಂದ ಸಾಗಿವೆ.
ಪದ್ಮನಾಭಂ ಮತ್ತು ಆನಂದಪುರಂ ಪ್ರದೇಶಗಳ ಸಾಂಪ್ರದಾಯಿಕ ದೇವಸ್ಥಾನಗಳು, ಐತಿಹಾಸಿಕ ತಾಣಗಳು, ನದಿ ತೀರದ ಸುಂದರ ಜಾಗಗಳು, ಸಮುದ್ರತೀರ ಪ್ರದೇಶಗಳನ್ನು ಈ ಟೂರಿಸಂ ಸರ್ಕ್ಯುಟ್‌ನ ಭಾಗವಾಗಿಸಲು ತೀರ್ಮಾನಿಸಲಾಗಿದೆ. ಈ ಮೂಲಕ ಭೇಟಿ ನೀಡುವ ಪ್ರವಾಸಿಗರಿಗೆ ನಗರದ ಸುಂದರ ಜಾಗಗಳ ವೀಕ್ಷಣೆಯೊಂದಿಗೆ ಹಳ್ಳಿ ಸೊಗಡಿನ ಸವಿಯನ್ನು ಉಣಬಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ.

ಜಿಲ್ಲಾ ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆ ಈ ಯೋಜನೆಗೆ ಸಂಬಂಧಿಸಿದಂತೆ ಮೂಲಸೌಕರ್ಯ ಅಭಿವೃದ್ಧಿ, ಪ್ರವಾಸಿಗರಿಗೆ ಅಗತ್ಯವಿರುವ ಸೌಕರ್ಯಗಳು, ರಾತ್ರಿ ಸಮಯದಲ್ಲಿ ಪ್ರವಾಸಿಗರು ಬೀಚ್‍ರೋಡ್ ಮೇಲೆ ಅಡ್ಡಾಡಲು ಬೆಳಕಿನ ವ್ಯವಸ್ಥೆ, ಪ್ರವಾಸಿಗರಿಗಾಗಿ ಮಾಹಿತಿ ಕೇಂದ್ರಗಳು ಮತ್ತು ಪ್ರವಾಸಿ ತಾಣಗಳ ಪ್ರವೇಶ ಮಾರ್ಗಗಳ ಸುಧಾರಣೆ ಸೇರಿದಂತೆ ವಿವಿಧ ಕಾರ್ಯಗಳನ್ನು ಆರಂಭಿಸಲು ಸಿದ್ಧವಾಗಿದೆ.
ಈ ಯೋಜನೆಯು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವುದರ ಜತೆಗೆ ಆಂಧ್ರಪ್ರದೇಶದ ಪ್ರವಾಸೋದ್ಯಮಕ್ಕೆ ಚೈತನ್ಯ ತುಂಬಲಿದೆ ಎಂದು ರಾಜ್ಯ ಸರ್ಕಾರದ ಅಧಿಕಾರಿಗಳು ತಿಳಿಸಿದರು.