Wednesday, March 4, 2026
Wednesday, March 4, 2026

ಪ್ಲಾನ್‌ ಮಾಡಿ-ಟ್ರಾವೆಲ್‌ ಮಾಡಿ

ವಿದೇಶಕ್ಕೆ ಟ್ರಾವೆಲ್‌ ಮಾಡೋದು ಅಂದ್ರೆ ಪಾಸ್‌ಪೋರ್ಟ್‌ ಮತ್ತು ವೀಸಾದ ತಲೆನೋವು ಶುರು. ಆದರೆ ವಿಶ್ವದ ಹಲವಾರು ದೇಶಗಳಿಂದ ʼಇ- ಟೂರಿಸ್ಟ್‌ ವೀಸಾʼವನ್ನು ಬಳಸಿ ನಿಶ್ಚಿಂತೆಯಿಂದ ಭಾರತಕ್ಕೆ ಬರುವುದು ಅಥವಾ ಇಲ್ಲಿಂದ ಬೇರೆಡೆ ತೆರಳುವುದು ಸಾಧ್ಯ. ಈ ಸುದ್ದಿ ನಮ್ಮ ದೇಶಕ್ಕೆ ಬರಬೇಕು ಅನ್ನುವವರಿಗೆ ಗುಡ್‌ ನ್ಯೂಸ್‌.

ಟ್ರಾವೆಲ್ Deep

  • ಬಡೆಕ್ಕಿಲ ಪ್ರದೀಪ

ಕೈಯಲ್ಲಿ ಸ್ಮಾರ್ಟ್‌ ಫೋನ್‌ ಇಟ್ಕೊಂಡು ಹತ್ತೂರನ್ನು ಒಂದೇ ಕ್ಲಿಕ್‌ನಲ್ಲಿ ಸುತ್ತಿ ಬರೋದಾ ಅಥವಾ ಆ ಸ್ಮಾರ್ಟ್‌ಫೋನ್‌ ಬಳಸಿ ಹತ್ತೂರಿಗೆ ಹೋಗಿ ಬರೋದಾ?

ನೀವು ಯಾವ ಆಯ್ಕೆಯನ್ನು ಮಾಡಿದರೂ ಒಂದು ಕಾಮನ್ನು, ಅದು ನಿಮ್ಮ ಸ್ಮಾರ್ಟ್‌ಫೋನ್‌.

ಜಗತ್ತು ದಿನೇ ದಿನೇ ಚಿಕ್ಕದಾಗುತ್ತಿದೆ ಅನ್ನುತ್ತಾ ಬಂದವರಿಗೆಲ್ಲಾ, ಅದು ಅಂಗೈಯಲ್ಲೇ ಅವಿತು ಕುಳಿತುಕೊಳ್ಳುವಷ್ಟು ಚಿಕ್ಕದಾದೀತು ಅನ್ನುವ ಯೋಚನೆ ಇದ್ದಿರಲಿಕ್ಕಿಲ್ಲ. ಎತ್ತಿನಗಾಡಿಯಲ್ಲಿ ಶುರುವಾಗಿದ್ದ ನಮ್ಮ ಪ್ರಯಾಣ, ಶಬ್ದದ ವೇಗದಲ್ಲಿ ಚಲಿಸುವಷ್ಟು ಮುಂದೆ ಬಂದಿದೆ. ಬೆಳಕಿನ ವೇಗದಲ್ಲಿ ಮಾಹಿತಿ ಸಹಸ್ರಾರು ಮೈಲಿ ಕಳುಹಿಸುವ ನಮಗೆ ನಮ್ಮ ಟ್ರಾವೆಲ್‌ ಮೇಲೆ ಅದು ಮಾಡಿರುವ ಇಂಪ್ಯಾಕ್ಟ್‌ ಊಹಿಸೋದಕ್ಕೆ ಸಾಧ್ಯವಾಗದೇ ಇರುವಷ್ಟಿದೆ.

ಟಿಕೆಟ್‌ ಬುಕಿಂಗ್‌ನಿಂದ ತೊಡಗಿ ನಮ್ಮ ಪ್ರಯಾಣದ ಪ್ರತಿ ಹೆಜ್ಜೆಯನ್ನೂ ಮೊದಲೇ ಪ್ಲಾನ್‌ ಮಾಡುವ, ಅಷ್ಟೇ ಸರಳ-ಸುರಕ್ಷಿತ ಹಾಗೂ ಜೇಬಿಗೆ ಹಿತಕರವಾಗಿ ಮಾಡುವ ನಿಟ್ಟಿನಲ್ಲಿ ನಾವು ಹೇಗೆ ನಮ್ಮ ಗ್ಯಾಜೆಟ್‌ಗಳನ್ನು ಬಳಸೋದು ಅನ್ನುವುದು ನಮ್ಮ ಆಯ್ಕೆಗೆ ಬಿಟ್ಟಿದ್ದು.

ಲೇಟೆಸ್ಟ್‌ ಅಪ್‌ಡೇಟ್‌

ವಿದೇಶಕ್ಕೆ ಟ್ರಾವೆಲ್‌ ಮಾಡೋದು ಅಂದ್ರೆ ಪಾಸ್‌ಪೋರ್ಟ್‌ ಮತ್ತು ವೀಸಾದ ತಲೆನೋವು ಶುರು. ಆದರೆ ವಿಶ್ವದ ಹಲವಾರು ದೇಶಗಳಿಂದ ʼಇ- ಟೂರಿಸ್ಟ್‌ ವೀಸಾʼವನ್ನು ಬಳಸಿ ನಿಶ್ಚಿಂತೆಯಿಂದ ಭಾರತಕ್ಕೆ ಬರುವುದು ಅಥವಾ ಇಲ್ಲಿಂದ ಬೇರೆಡೆ ತೆರಳುವುದು ಸಾಧ್ಯ. ಈ ಸುದ್ದಿ ನಮ್ಮ ದೇಶಕ್ಕೆ ಬರಬೇಕು ಅನ್ನುವವರಿಗೆ ಗುಡ್‌ ನ್ಯೂಸ್‌. ಈಗ 166 ದೇಶಗಳಿಂದ ಇ-ವೀಸಾ ಬಳಸಿ ಭಾರತಕ್ಕೆ ಪ್ರಯಾಣ ಮಾಡಬಹುದು. ಈ ತಿಂಗಳಷ್ಟೇ ಮಾಡಲಾದ ಹೊಸ ಬದಲಾವಣೆಯಂತೆ 157 ಇದ್ದ ಈ ಸಂಖ್ಯೆ 9 ಜಾಸ್ತಿಯಾಗಿ 166ಕ್ಕೇರಿದೆ.

ಅಂದ್ರೆ ಟ್ರಾವೆಲ್‌ ಟಿಕೆಟ್‌ ಬುಕ್‌ ಮಾಡುವಾಗಲೇ ಅವು ಈ 166 ದೇಶಗಳಲ್ಲಿ ಒಂದಾಗಿದ್ದಲ್ಲಿ 30 ದಿನಗಳ ರೀ-ಎಂಟ್ರಿ ಪ್ರವಾಸಿ ವೀಸಾಗೆ ಅಲ್ಲೇ ಅಪ್ಲೈ ಮಾಡಬಹುದು. ಅದಕ್ಕನುಗುಣವಾದ ಶುಲ್ಕ ಅಲ್ಲೇ ಕಟ್ಟಿ 72 ಗಂಟೆಯೊಳಗೆ ನಿಮ್ಮ ಇ-ವೀಸಾವನ್ನು ಪಡೆಯಬಹುದು.

ಈ ಮೂಲಕ ಸರಳವಾಗಿ ಭಾರತಕ್ಕೆ ಪ್ರಯಾಣ ಮಾಡುವ ಅವಕಾಶ ಕೀನ್ಯಾ, ಅರ್ಮೇನಿಯಾ, ಫಿಜಿ, ಅಲ್ಜೀರಿಯ, ಉರುಗ್ವೇಯಂಥ ಒಟ್ಟು ಒಂಬತ್ತು ದೇಶಗಳ ಪ್ರಜೆಗಳಿಗೆ ಸಿಗಲಿದೆ.

ಟ್ರಾವೆಲ್‌ ಟೆಕ್‌ ಟೂಲ್‌

ನೀವು ಆಗಾಗ ವಿಮಾನಯಾನ ಮಾಡುವವರಾಗಿದ್ದರೆ ಅಥವಾ ನಿಮ್ಮ ಮ್ಯೂಸಿಕ್‌ ಸಿಸ್ಟಮ್‌ನಲ್ಲಿ ಬ್ಲೂಟೂತ್ ವ್ಯವಸ್ಥೆ ಇಲ್ಲದೇ ಇದ್ದರೆ (ಇಂದಿನ ಗ್ಯಾಜೆಟ್‌ಗಳಲ್ಲಿ ಬ್ಲೂಟೂತ್‌ ಇರುವುದು ಸರ್ವೇಸಾಮಾನ್ಯ) ಆಡಿಯೋ ಜ್ಯಾಕ್‌ಗೆ ಈ ಡಿವೈಸ್‌ ಅನ್ನು ಹಾಕಿದರೆ ನಿಮ್ಮ ವೈರ್‌ಲೆಸ್‌ ಹೆಡ್‌ಸೆಟ್‌ ಅನ್ನು ಕನೆಕ್ಟ್‌ ಮಾಡಿ ಆಡಿಯೋ ಆನಂದಿಸಬಹುದು.

ಬ್ಲೂಟೂತ್‌ ಟ್ರಾನ್ಸ್‌ಮಿಟರ್‌-ರಿಸೀವರ್‌ (ಹಲವು ಬ್ರಾಂಡ್‌ಗಳಲ್ಲಿ ಇದ್ದರೂ ಏರ್‌ಫ್ಲೈ , ಹನಿವೆಲ್‌, ಟೋಬೋ ಮುಂತಾದ ಬ್ರಾಂಡ್‌ಗಳಲ್ಲಿ ಇದು ಲಭ್ಯ ಇದೆ.)

ಇವುಗಳಲ್ಲಿ 12ಗಂಟೆವರೆಗಿನ ಬ್ಯಾಟರಿ ಬ್ಯಾಕಪ್‌ ಜೊತೆ ಬ್ಲೂಟೂತ್‌ ಸ್ವೀಕರಿಸುವ ಹಾಗೂ ಟ್ರಾನ್ಸ್‌ಮಿಟ್‌ ಮಾಡುವ, ಆಕ್ಸ್‌ ಹಾಗೂ ಟೈಪ್‌-ಸಿ ಅಡ್ಯಾಪ್ಟರ್‌, ಹೀಗೆ, ಹಲವು ಫೀಚರ್‌ಗಳಿವೆ.

ಬೆಲೆ: ಸುಮಾರು 700 ರುಪಾಯಿಗೆ ಮಧ್ಯಮ ಗುಣಮಟ್ಟದ ಪ್ರಾಡಕ್ಟ್‌ಗಳು ಸಿಕ್ಕರೆ ಬ್ರ್ಯಾಂಡೆಡ್‌ ಹಾಗೂ ಉತ್ತಮ ಗುಣಮಟ್ಟದ ಟ್ರಾನ್ಸ್‌ಮಿಟರ್‌-ರಿಸೀವರ್‌ಗಳಿಗೆ 12-13 ಸಾವಿರದವರೆಗೂ ಇದೆ. ರಿವ್ಯೂ ನೋಡಿ ಖರೀದಿಸಿ. ಎಂಟ್ರೀ ಲೆವೆಲ್‌ ಗ್ಯಾಜೆಟ್‌ಗಳಲ್ಲಿ ಕನೆಕ್ಟಿವಿಟಿ, ಆಡಿಯೋ ಕ್ವಾಲಿಟಿ ಮುಂತಾದ ತೊಂದರೆಗಳು ಬರುವ ಸಾಧ್ಯತೆ ಹೆಚ್ಚು.

ಪಂಚ್‌-ರ್‌ ಶಾಪ್‌

ಮೊಬೈಲ್‌ ಫೋನ್‌ ತನ್ನ ಪ್ರಯಾಣವನ್ನು ಅರ್ಧಕ್ಕೇ ಮೊಟಕುಗೊಳಿಸಬೇಕಾಯ್ತು. ಕಾರಣ, ಅದಕ್ಕೆ ʼರೋಮಿಂಗ್‌ʼ ನಲ್ಲಿದ್ದು ಸುಸ್ತಾಗಿ ಹೋಗಿತ್ತು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!