IRCTC : ‘ಶ್ರೀಲಂಕಾ ರಾಮಾಯಣ ಯಾತ್ರಾʼ ಪ್ಯಾಕೇಜ್ ಘೋಷಣೆ
ರಾಮ ಮತ್ತು ರಾವಣನ ಪೌರಾಣಿಕ ಕಥೆಗಳನ್ನು ನೆನಪಿಸುವ ನೆಗೊಂಬೊ, ಕ್ಯಾಂಡಿ, ನುವಾರಾ ಎಲಿಯಾ ಹಾಗೂ ಕೊಲಂಬೊ ಪ್ರದೇಶಗಳಲ್ಲಿ ಇಂದಿಗೂ ಅವರ ಇತಿಹಾಸದ ಗುರುತುಗಳನ್ನು ನಾವು ಕಾಣಬಹುದು. ಇಂತಹ ಪವಿತ್ರ ತಾಣಗಳ ಭೇಟಿಗೆ IRCTC ‘ಶ್ರೀಲಂಕಾ ರಾಮಾಯಣ ಯಾತ್ರೆ’ ಎಂಬ ವಿಶಿಷ್ಟ ಪ್ಯಾಕೇಜ್ ಅನ್ನು ಪ್ರಕಟಿಸಿದೆ.
ರಾಮಾಯಣದ ಕುರುಹುಗಳಿರುವ ಶ್ರೀಲಂಕಾದ ಸ್ಥಳಗಳನ್ನು ನೋಡಬಯಸುವವರಿಗೆ ಈಗ IRCTC ಅಪೂರ್ವ ಅವಕಾಶವನ್ನು ಒದಗಿಸಿದೆ. ರಾಮಾಯಣ ಮತ್ತು ಮಹಾಭಾರತದ ಮಹಾಕಾವ್ಯಗಳು ಕೇವಲ ಪೌರಾಣಿಕ ಕಥೆಗಳಲ್ಲ, ಭಾರತೀಯ ಸಂಸ್ಕೃತಿಯ ಜೀವಂತ ಸಂಕೇತಗಳಾಗಿವೆ. ರಾಮ ಮತ್ತು ರಾವಣನ ಪೌರಾಣಿಕ ಕಥೆಗಳನ್ನು ನೆನಪಿಸುವ ನೆಗೊಂಬೊ, ಕ್ಯಾಂಡಿ, ನುವಾರಾ ಎಲಿಯಾ ಹಾಗೂ ಕೊಲಂಬೊ ಪ್ರದೇಶಗಳಲ್ಲಿ ಇಂದಿಗೂ ಅವರ ಇತಿಹಾಸದ ಗುರುತುಗಳನ್ನು ನಾವು ಕಾಣಬಹುದು. ಇಂತಹ ಪವಿತ್ರ ತಾಣಗಳ ಭೇಟಿಗೆ IRCTC ‘ಶ್ರೀಲಂಕಾ ರಾಮಾಯಣ ಯಾತ್ರೆ’ ಎಂಬ ವಿಶಿಷ್ಟ ಪ್ಯಾಕೇಜ್ ಅನ್ನು ಪ್ರಕಟಿಸಿದೆ.

ಈ ಯಾತ್ರೆ 2026ರ ಜನವರಿ 8ರಿಂದ 13ರವರೆಗೆ ನಡೆಯಲಿದ್ದು, 5 ರಾತ್ರಿ ಮತ್ತು 6 ದಿನಗಳ ಪಯಣವಾಗಿರಲಿದೆ. ಈ ಪ್ಯಾಕೇಜ್‌ನಲ್ಲಿ ವಿಮಾನ ಪ್ರಯಾಣ, ರಸ್ತೆ ಸಾರಿಗೆ, ಹೊಟೇಲ್ ವಸತಿ, ಊಟ, ಮಾರ್ಗದರ್ಶಿ ಸೇವೆ ಮತ್ತು ವಿಮೆ ಸೇರಿದಂತೆ ಎಲ್ಲ ಸೌಲಭ್ಯಗಳೂ ಸೇರಿವೆ. ಪ್ರವಾಸಿಗರು ತ್ರಿಕೂಟ ಪರ್ವತಗಳ ಮಧ್ಯದಲ್ಲಿರುವ ರಾವಣನ ಕೋಟೆ, ಸೀತಾ ಎಲಿಯಾ ಮತ್ತು ಅಶೋಕ ವಾಟಿಕೆಯಂತಹ ರಾಮಾಯಣದ ಪೌರಾಣಿಕ ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ.
ಪ್ಯಾಕೇಜ್ ದರಗಳು ಆಯ್ಕೆಮಾಡಿದ ವಸತಿ ಪ್ರಕಾರ ಬದಲಾಗುತ್ತವೆ. ಸಿಂಗಲ್ ಅಕ್ಯೂಪೆನ್ಸಿಗೆ ರುಪಾಯಿ 89,980, ಡಬಲ್ ಅಕ್ಯೂಪೆನ್ಸಿಗೆ ರುಪಾಯಿ 71,440 ಹಾಗೂ ತ್ರಿಬಲ್ ಅಕ್ಯೂಪೆನ್ಸಿಗೆ ರುಪಾಯಿ 70,070 ನಿಗದಿಪಡಿಸಲಾಗಿದೆ. ಮಕ್ಕಳಿಗೆ ವಿಶೇಷ ರಿಯಾಯಿತಿಯೂ ಇದೆ — ಹಾಸಿಗೆಯೊಂದಿಗೆ ರುಪಾಯಿ 54,765 ಮತ್ತು ಹಾಸಿಗೆಯಿಲ್ಲದೆ ರುಪಾಯಿ 51,905. 2 ರಿಂದ 4 ವರ್ಷದೊಳಗಿನ ಮಕ್ಕಳಿಗೆ ರುಪಾಯಿ 35,480 ಪ್ಯಾಕೇಜ್ ದರ ನಿಗದಿ ಪಡಿಸಲಾಗಿದೆ.

ವಸತಿಯನ್ನು 3 ಸ್ಟಾರ್ ಮಟ್ಟದ ಹೊಟೇಲ್‌ಗಳಲ್ಲಿ ಕಲ್ಪಿಸಲಾಗಿದೆ. ನೆಗೊಂಬೊ, ಕ್ಯಾಂಡಿ, ನುವಾರಾ ಎಲಿಯಾ ಮತ್ತು ಕೊಲಂಬೊ ನಗರಗಳಲ್ಲಿ ಪ್ರವಾಸಿಗರಿಗೆ ಸುಸಜ್ಜಿತ ಹೊಟೇಲ್‌ಗಳಲ್ಲಿ ವಾಸದ ವ್ಯವಸ್ಥೆ ಇದೆ. ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಭೋಜನವನ್ನು ಕೊಡಲಾಗುತ್ತದೆ.
ಈ ಪ್ಯಾಕೇಜ್ ಬುಕ್ ಮಾಡಲು ಕೊನೆಯ ದಿನಾಂಕ 2025ರ ಡಿಸೆಂಬರ್ 23 ಎಂದು ಘೋಷಿಸಲಾಗಿದೆ. ಆಸಕ್ತರು IRCTC ಅಧಿಕೃತ ವೆಬ್‌ಸೈಟ್ (https://surl.li/avfjlc) ಮೂಲಕ ಟಿಕೆಟ್ ಬುಕ್ ಮಾಡಬಹುದು.