ಸಾಂಸ್ಕೃತಿಕ ಸೊಬಗಿನ ಸಡಗರ ಈ ಹಾರ್ನ್‌ಬಿಲ್ ಫೆಸ್ಟಿವಲ್!
ಹಬ್ಬದ ಮೊದಲನೇ ದಿನ ನಡೆದ ಕಾರ್ಯಕ್ರಮದಲ್ಲಿ 18 ಸಮುದಾಯಗಳ ಗುಂಪು ಪ್ರಸ್ತುತ ಪಡಿಸಿದ ಕಲಾತ್ಮಕ ಪ್ರದರ್ಶನ, ಪಾರಂಪರಿಕ ನೃತ್ಯಗಳು, ನಡುಗೀಲಿ ಹಾಡುಗಳು ಹಾಗೂ ವಿವಿಧ ಟ್ರೈಬಲ್ ಶೋಗಳು ಜನರ ಮನಸ್ಸನ್ನು ಸೂರೆಗೊಳಿಸಿದವು. ʼಫೋಮ್ʼ ಸಮುದಾಯ ನಡೆಸಿಕೊಟ್ಟ “ಯಾಪೊ ಲೋ ಪೋ” ಎಂಬ ವಿಶೇಷ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.
ನಾಗಾಲ್ಯಾಂಡ್‌ನ ಪ್ರಮುಖ ಸಾಂಸ್ಕೃತಿಕ ಹಬ್ಬವಾದ ಹಾರ್ನ್‌ಬಿಲ್ ಫೆಸ್ಟಿವಲ್ ಇದೇ ಡಿಸೆಂಬರ್ 1ರಿಂದ ಶುರುವಾಗಿದೆ. ಸತತ 10 ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ನಾಗಾಲ್ಯಾಂಡ್ ರಾಜ್ಯದ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಅನೇಕ ಚಟುವಟಿಕೆಗಳು ನಡೆಯುತ್ತವೆ. ಈ ಹಬ್ಬದಲ್ಲಿ ನಿನ್ನೆ ನಡೆದ ಸುಂದರ ಸಾಂಸ್ಕೃತಿಕ ಕಾರ್ಯಕ್ರಮಗಳು ಅಪಾರ ಸಂಖ್ಯೆಯಲ್ಲಿ ನೆರೆದ ಜನರನ್ನು ರಂಜಿಸಿದವು.
ಹಬ್ಬದ ಮೊದಲನೇ ದಿನ ನಡೆದ ಕಾರ್ಯಕ್ರಮದಲ್ಲಿ 18 ಸಮುದಾಯಗಳ ಗುಂಪು ಪ್ರಸ್ತುತ ಪಡಿಸಿದ ಕಲಾತ್ಮಕ ಪ್ರದರ್ಶನ, ಪಾರಂಪರಿಕ ನೃತ್ಯಗಳು, ನಡುಗೀಲಿ ಹಾಡುಗಳು ಹಾಗೂ ವಿವಿಧ ಟ್ರೈಬಲ್ ಶೋಗಳು ಜನರ ಮನಸ್ಸನ್ನು ಸೂರೆಗೊಳಿಸಿದವು. ʼಫೋಮ್ʼ ಸಮುದಾಯ ನಡೆಸಿಕೊಟ್ಟ “ಯಾಪೊ ಲೋ ಪೋ” ಎಂಬ ವಿಶೇಷ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಹಿಂದೆ ನಡೆದ ಯುದ್ಧದಲ್ಲಿ ನಾಗಾ ಜನರು ಕೆಚ್ಚೆದೆಯಿಂದ ಹೋರಾಡಿ, ತಮ್ಮ ಸಮುದಾಯಕ್ಕಾಗಿ ಮಾಡಿದ ತ್ಯಾಗವನ್ನು ಈ ಕಾರ್ಯಕ್ರಮ ನೆನಪಿಸಿತು.
ಈ ಉತ್ಸವದಲ್ಲಿ ಕೇವಲ ನೃತ್ಯ, ಗಾನವಲ್ಲದೇ ಹಸ್ತಶಿಲ್ಪ ಮೇಳ, ಜಾನಪದ ಕ್ರೀಡೆಗಳು, ಚಿತ್ರ ಪ್ರದರ್ಶನಗಳು ಮತ್ತು ಸ್ಥಳೀಯ ಆಹಾರಗಳ ಸ್ಟಾಲ್‌ಗಳು ಗಮನ ಸೆಳೆದವು.