ಇದು ಪ್ಯಾರಿಸ್ ಪ್ರಣಯವಲ್ಲ, ಉತ್ತರ ಪ್ರದೇಶದ ಸಂಸ್ಕೃತಿಯ ರಿಂಗಣ!
ಈ ಬಾರಿಯ ʼಪ್ಯಾರಿಸ್ ಎಕ್ಸ್‌ಪೋʼ ದಲ್ಲಿ ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಭಾಗವಹಿಸಿದ್ದು, ಪವಿತ್ರ ಯಾತ್ರಾ ವಲಯಗಳಾದ ಅಯೋಧ್ಯೆ, ಮಥುರಾ, ವೃಂದಾವನದಿಂದ ಹಿಡಿದು ಬೌದ್ಧ ಪರಂಪರೆಯ ಪಥ ಹಾಗೂ ಕಾಶಿಯ ಅಮರ ಘಾಟ್‌ಗಳ ವೈಶಿಷ್ಟ್ಯತೆಯ ಪ್ರದರ್ಶನ ಮಾಡಲಿದ್ದಾರೆ. ಜತೆಗೆ, ವಿಶ್ವ ಪ್ರಸಿದ್ಧ ತಾಜ್ ಮಹಲ್‌ನ ವೈಭವದ ಪರಿಚಯ ಪ್ರವಾಸಿಗರಿಗೆ ವಿಶೇಷ ಆಕರ್ಷಣೆಯಾಗಲಿದೆ.
ಫ್ರಾನ್ಸ್‌ನ ಪೋರ್ಟ್ ದೆ ವರ್ಸೈಸ್‌ನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ʼಪ್ಯಾರಿಸ್ ಎಕ್ಸ್‌ಪೋʼ ದಲ್ಲಿ ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಭಾಗವಹಿಸಿದೆ. ರಾಜ್ಯದ ವಿವಿಧ ಸಂಸ್ಕೃತಿ, ಆಧ್ಯಾತ್ಮಿಕತೆಯ ಆಳ ಹಾಗೂ ವಿಶಿಷ್ಟ ಪ್ರವಾಸಿ ಅನುಭವಗಳನ್ನು ಯುರೋಪಿನ ಪ್ರವಾಸಿ ಸಮುದಾಯಕ್ಕೆ ಪರಿಚಯಿಸುವ ಉದ್ದೇಶದಿಂದ ಈ ಪ್ರದರ್ಶನದಲ್ಲಿ ಭಾಗಿಯಾಗಿರುವುದಾಗಿ ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯ ಮುಖ್ಯಸ್ಥರು ತಿಳಿಸಿದ್ದಾರೆ.

“ಎಕ್ಸ್‌ಪೋದ ಪೆವಿಲಿಯನ್‌ನಲ್ಲಿ ಉತ್ತರ ಪ್ರದೇಶದ ಪವಿತ್ರ ಯಾತ್ರಾ ಸ್ಥಳಗಳಾದ – ಅಯೋಧ್ಯೆ, ಮಥುರಾ, ವೃಂದಾವನದಿಂದ ತೊಡಗಿ ಬೌದ್ಧ ಪರಂಪರೆಯ ಪಥ ಹಾಗೂ ಕಾಶಿಯ ಅಮರ ಘಾಟ್‌ಗಳ ವೈಶಿಷ್ಟ್ಯತೆಯ ಅನಾವರಣವಾಗಲಿದೆ. ಜತೆಗೆ, ವಿಶ್ವಪ್ರಸಿದ್ಧ ತಾಜ್ ಮಹಲ್‌ನ ವೈಭವದ ಪರಿಚಯ ಪ್ರವಾಸಿಗರಿಗೆ ವಿಶೇಷ ಆಕರ್ಷಣೆಯಾಗಲಿದೆ. ಕನೌಜ್‌ನ ಸುಗಂಧ ಪ್ರವಾಸೋದ್ಯಮ, ಅಲ್ಲಿ ಇನ್ನೂ ಶತಮಾನಗಳಿಂದ ಮುಂದುವರಿಯುತ್ತಿರುವ ಡೆಗ್–ಭಾಪ್ಕಾ ಶೈಲಿಯ ನೈಸರ್ಗಿಕ ಸುಗಂಧ ತಯಾರಿಕೆ, ಈ ಪ್ರದರ್ಶನದ ಭಾಗವಾಗಿರಲಿದೆ” ಎಂದು ಪ್ರವಾಸೋದ್ಯಮ ಇಲಾಖೆ ಮಾಹಿತಿ ನೀಡಿದೆ.

ಈ ಕುರಿತು ಮಾತನಾಡಿದ ಉತ್ತರ ಪ್ರದೇಶದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಯವೀರ ಸಿಂಗ್, “ಈ ವೇದಿಕೆ ಮೂಲಕ ನಮ್ಮ ಸಂಸ್ಕೃತಿಯನ್ನು ಯುರೋಪಿನ ಜನತೆಗೆ ಪರಿಚಯಿಸುವುದು ಮಾತ್ರವಲ್ಲ, ಇನ್ನಷ್ಟು ಪ್ರವಾಸಿಗರನ್ನು ಉತ್ತರ ಪ್ರದೇಶದ ಪ್ರವಾಸಿ ತಾಣಗಳತ್ತ ಸೆೆಳೆಯುವ ಅವಕಾಶ ಸಿಕ್ಕಿದೆ” ಎಂದು ಹೇಳಿದರು.