ವನ್ಯಜೀವಿ ಛಾಯಾಗ್ರಹಣ ಸ್ಪರ್ಧೆ, ಪ್ರದರ್ಶನ
ಮೈಸೂರು ಮೃಗಾಲಯದ ವತಿಯಿಂದ 2025ರ ವನ್ಯಜೀವಿ ಸಪ್ತಾಹದ ಆಚರಣೆಉ ಉದ್ದೇಶದಿಂದ ವನ್ಯಜೀವಿ ಛಾಯಾಗ್ರಹಣ ಸ್ಪರ್ಧೆ ಮತ್ತು ಪ್ರದರ್ಶನ ನಡೆಯಲಿದೆ.
ಮೈಸೂರು ಮೃಗಾಲಯದ ವತಿಯಿಂದ 2025ರ ವನ್ಯಜೀವಿ ಸಪ್ತಾಹದ ಆಚರಣೆ ಹಿನ್ನೆಲೆ ಅ.2ರಿಂದ 8ರವರೆಗೆ ವನ್ಯಜೀವಿ ಛಾಯಾಗ್ರಹಣ ಸ್ಪರ್ಧೆ ಮತ್ತು ಪ್ರದರ್ಶನವನ್ನು ಆಯೋಜಿಸಿದೆ. ಸ್ಪರ್ಧೆ ಮತ್ತು ಪ್ರದರ್ಶನವು ಎರಡು ವರ್ಗಗಳಲ್ಲಿ ನಡೆಯಲಿದ್ದು, ವನ್ಯಜೀವಿ ಪ್ರವರ್ಗ ಮತ್ತು ವನ್ಯಜೀವಿ ಮೃಗಾಲಯ ಪ್ರವರ್ಗಗಳಿವೆ. ಪ್ರತಿ ವರ್ಗದಲ್ಲಿ 2 ನಗದು ಬಹುಮಾನ ಮತ್ತು 3 ಪ್ರಮಾಣ ಪತ್ರಗಳನ್ನು ಒಳಗೊಂಡಿರುತ್ತದೆ.
ಆಸಕ್ತರು ಛಾಯಾಚಿತ್ರಗಳನ್ನು ಸೆ.8 ರಿಂದ 18 ರವರೆಗೆ ಬೆಳಗ್ಗೆ10 ರಿಂದ ಸಂಜೆ 5 ಗಂಟೆಯ ಒಳಗಾಗಿ ಸಲ್ಲಿಸಬಹುದು. ಛಾಯಾಚಿತ್ರಗಳನ್ನು ಸಲ್ಲಿಸಲು ಸೆ.18 ಕೊನೆಯ ದಿನಾಂಕ. ಸಾಫ್ಟ್ ಕಾಪಿಯನ್ನು educationmysuruzoo. org ಇ-ಮೇಲ್‌ಗೆ ಕಳುಹಿಸಬೇಕು. ಪ್ರತಿ ಛಾಯಾಚಿತ್ರದ ಸಾಫ್ಟ್ ಕಾಪಿ 5 ಎಂ.ಬಿ. ಗಿಂತ ಹೆಚ್ಚು ಇರಬಾರದು. 1920x1080 ರೆಸೆಲ್ಯೂಷನ್ ಹೊಂದಿರಬೇಕು. ಇಲ್ಲಿ ತೀರ್ಪುಗಾರರು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ.
ಇದರ ಜತೆಗೆ ಅ.2 ರಿಂದ 8 ರ ವರೆಗೆ ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗುವುದು. ಹೆಚ್ಚಿನ ವಿವರಗಳಿಗೆ ವೆಬ್ ಸೈಟ್ www.mysuruzoo.info ಭೇಟಿ ನೀಡಲು ಪ್ರಕಟಣೆಯಲ್ಲಿ ತಿಳಿಸಿದೆ.