ಉತ್ತರ ಪ್ರದೇಶದಲ್ಲಿ ‘ವಿಸ್ಟಾಡೋಮ್ ಟ್ರೇನ್ ಸಫಾರಿ’
ವಿಸ್ಟಾಡೋಮ್ ಕೋಚ್‌ಗಳಲ್ಲಿ ವಿಶಾಲ ಗಾಜಿನ ಕಿಟಕಿಗಳು ಮತ್ತು ಪಾರದರ್ಶಕ ಮೇಲ್ಛಾವಣಿಯ ವ್ಯವಸ್ಥೆ ಇರಲಿದ್ದು, ಪ್ರಯಾಣಿಕರು ಕಿಟಕಿಯಿಂದಲೇ ನಿಸರ್ಗದ ಸೊಬಗನ್ನು ಕಾಣಬಹುದಾಗಿದೆ. ಈ ಸೇವೆ ಪ್ರತೀ ಶನಿವಾರ ಮತ್ತು ಭಾನುವಾರ ಲಭ್ಯವಿದ್ದು, ಟಿಕೆಟ್‌ಗಳನ್ನು ಐಆರ್‌ಸಿಟಿಸಿ (IRCTC) ಪೋರ್ಟಲ್ ಮೂಲಕ ಬುಕ್ ಮಾಡಬಹುದು.
ಉತ್ತರ ಪ್ರದೇಶ ಸರ್ಕಾರ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡುವ ಉದ್ದೇಶದಿಂದ ‘ವಿಸ್ಟಾಡೋಮ್ ಟ್ರೇನ್ ಸಫಾರಿ’ಯನ್ನು ಪ್ರಾರಂಭಿಸಿದೆ. ಈ ವಿಶಿಷ್ಟ ರೈಲು ಸೇವೆ ಪರಿಸರ ಸ್ನೇಹಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಜತೆಗೆ ಪ್ರವಾಸಿಗರು ನೈಸರ್ಗಿಕ ಸೌಂದರ್ಯವನ್ನು ಆಸ್ವಾದಿಸಲು ವಿನ್ಯಾಸಗೊಳಿಸಲಾಗಿದೆ.
ಬಿಚಿಯಾ ಮತ್ತು ಮೈಲಾನಿ ರೈಲು ನಿಲ್ದಾಣಗಳ ನಡುವೆ ಸುಮಾರು 107 ಕಿಮೀ ದೂರದವರೆಗೆ ಈ ಸಫಾರಿ ರೈಲು ಸಂಚರಿಸಲಿದೆ. ಕತರ್ನಿಯಾ ಘಾಟ್ ವನ್ಯಜೀವಿ ಸಂರಕ್ಷಣಾ ಪ್ರದೇಶದ ಸುತ್ತಮುತ್ತಲಿನ ಕಾಡುಗಳು ಮತ್ತು ತೋಪುಗಳ ಮಧ್ಯೆ ಸಾಗುವ ಈ ಪ್ರಯಾಣ ಪ್ರವಾಸಿಗರಿಗೆ ಅಪರೂಪದ ದೃಶ್ಯಾನುಭವವನ್ನು ನೀಡಲಿದೆ.

ವಿಸ್ಟಾಡೋಮ್ ಕೋಚ್‌ಗಳಲ್ಲಿ ವಿಶಾಲ ಗಾಜಿನ ಕಿಟಕಿಗಳು ಮತ್ತು ಪಾರದರ್ಶಕ ಮೇಲ್ಛಾವಣಿಯ ವ್ಯವಸ್ಥೆ ಇರಲಿದ್ದು, ಪ್ರಯಾಣಿಕರು ಕಿಟಕಿಯಿಂದಲೇ ನಿಸರ್ಗದ ಸೊಬಗನ್ನು ಕಾಣಬಹುದಾಗಿದೆ. ಈ ಸೇವೆ ಪ್ರತೀ ಶನಿವಾರ ಮತ್ತು ಭಾನುವಾರ ಲಭ್ಯವಿದ್ದು, ಟಿಕೆಟ್‌ಗಳನ್ನು ಐಆರ್‌ಸಿಟಿಸಿ (IRCTC) ಪೋರ್ಟಲ್ ಮೂಲಕ ಬುಕ್ ಮಾಡಬಹುದು.
ಜಂಗಲ್ ಸಫಾರಿಗೆ ಹೊಸ ಆಯಾಮ ನೀಡುವುದಷ್ಟೇ ಅಲ್ಲ, ಪರಿಸರದ ಮೇಲೆ ಜೀಪ್ ಸಫಾರಿಗಳಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡುವ ಮೂಲಕ ಪರಿಸರ ಸ್ನೇಹಿ ಕ್ರಮವನ್ನು ಉತ್ತೇಜಿಸುವುದು ಸೇರಿ ಅನೇಕ ಉದ್ದೇಶಗಳನ್ನು ಈ ಯೋಜನೆ ಹೊಂದಿದೆ.