ರೀವಾ–ದೆಹಲಿ ನೇರ ವಿಮಾನಸೇವೆ ಆರಂಭ
ಈ ವಿಮಾನಸೇವೆ ಮೂಲಕ ರೀವಾ ಮತ್ತು ದೆಹಲಿಯ ನಡುವಿನ ಪ್ರಯಾಣ ಸಮಯವು ಗಮನಾರ್ಹವಾಗಿ ಕಡಿಮೆಯಾಗಿದ್ದು, ಹಿಂದಿನ ರೈಲು ಅಥವಾ ರಸ್ತೆ ಪ್ರಯಾಣದ ಬದಲು ಈಗ ಕೇವಲ ಕೆಲವು ಗಂಟೆಗಳಲ್ಲಿ ರಾಷ್ಟ್ರ ರಾಜಧಾನಿಗೆ ತಲುಪುವುದು ಸಾಧ್ಯವಾಗಲಿದೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರು ರೀವಾ–ದೆಹಲಿ ನೇರ ವಿಮಾನಸೇವೆಯನ್ನು ಅಧಿಕೃತವಾಗಿ ಉದ್ಘಾಟಿಸಿದರು. ಈ ಹೊಸ ವೈಮಾನಿಕ ಸಂಪರ್ಕವು ವಿಂದ್ಯ ಪ್ರದೇಶದ ಪ್ರವಾಸೋದ್ಯಮ ಮತ್ತು ಆರ್ಥಿಕಾಭಿವೃದ್ಧಿಗೆ ಹೊಸ ಹಾದಿ ತೆರೆಯಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ವಿಮಾನಸೇವೆ ಮೂಲಕ ರೀವಾ ಮತ್ತು ದೆಹಲಿಯ ನಡುವಿನ ಪ್ರಯಾಣ ಸಮಯವು ಗಮನಾರ್ಹವಾಗಿ ಕಡಿಮೆಯಾಗಿದ್ದು, ಹಿಂದಿನ ರೈಲು ಅಥವಾ ರಸ್ತೆ ಪ್ರಯಾಣದ ಬದಲು ಈಗ ಕೇವಲ ಕೆಲವು ಗಂಟೆಗಳಲ್ಲಿ ರಾಷ್ಟ್ರ ರಾಜಧಾನಿಗೆ ತಲುಪುವುದು ಸಾಧ್ಯವಾಗಲಿದೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಮಾತನಾಡಿ- “ವಿಂದ್ಯಾ ಪ್ರದೇಶವು ರಾಜ್ಯದ ಸಾಂಸ್ಕೃತಿಕ, ಐತಿಹಾಸಿಕ ಹಾಗೂ ನೈಸರ್ಗಿಕ ಸೌಂದರ್ಯದಿಂದ ಕೇಂದ್ರವಾಗಿದೆ. ಈ ನೇರ ವಿಮಾನಸೇವೆ ವಿಂದ್ಯಾ ಪ್ರದೇಶದ ಪ್ರವಾಸೋದ್ಯಮ ಸಾಮರ್ಥ್ಯವನ್ನು ರಾಷ್ಟ್ರಮಟ್ಟದಲ್ಲಿ ತೋರ್ಪಡಿಸಲು ಸಹಕಾರಿಯಾಗಿದೆ” ಎಂದು ತಿಳಿಸಿದರು.
ಮಧ್ಯಪ್ರದೇಶ ಪ್ರವಾಸೋದ್ಯಮ ಇಲಾಖೆಯ ಅಧಿಕಾರಗಳ ಪ್ರಕಾರ, ಈ ವಿಮಾನಸೇವೆ ವಿಂದ್ಯಾ ಪ್ರದೇಶದ ವ್ಯಾಪಾರ, ಶಿಕ್ಷಣ ಮತ್ತು ವೈದ್ಯಕೀಯ ಪ್ರವಾಸೋದ್ಯಮಕ್ಕೂ ಪ್ರೋತ್ಸಾಹ ನೀಡಲಿದೆ. ಜತೆಗೆ, ಈ ಪ್ರದೇಶದ ಯುವಜನತೆಗೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.