Thursday, August 6, 2026
Thursday, August 6, 2026

‘ವಂಡರ್‌’ಲಾಗೆ ಈ ಸಲ ವಿಸಿಟ್‌ ಮಾಡಿದ ಜನರೆಷ್ಟು ಗೊತ್ತಾ?

ಸಂಸ್ಥೆಯ ಈ ಸಾರ್ವಕಾಲಿಕ ದಾಖಲೆಯ ಯಶಸ್ಸಿಗೆ ನೂತನವಾಗಿ ಕಾರ್ಯಾಚರಣೆ ಆರಂಭಿಸಿರುವ ಚೆನ್ನೈ ವಂಡರ್‌ಲಾ ಪಾರ್ಕ್ ಹಾಗೂ 'ದಿ ಐಲ್' ಐಷಾರಾಮಿ ವಾಟರ್‌ಸೈಡ್ ರೆಸಾರ್ಟ್ ಪ್ರಮುಖ ಕಾರಣವಾಗಿವೆ.

ಭಾರತದ ಪ್ರಮುಖ ವಾಟರ್ ಮತ್ತು ಅಮ್ಯೂಸ್‌ಮೆಂಟ್ ಪಾರ್ಕ್ ಸರಣಿ ಸಂಸ್ಥೆಯಾದ 'ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್' ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅತ್ಯುತ್ತಮ ಆರ್ಥಿಕ ಸಾಧನೆಯನ್ನು ಮಾಡಿದೆ. ಒಟ್ಟು ಆದಾಯದಲ್ಲಿ ವರ್ಷದಿಂದ ವರ್ಷಕ್ಕೆ ಬರೋಬ್ಬರಿ 41% ರಷ್ಟು ಭಾರಿ ಪ್ರಗತಿ ಕಂಡುಬಂದಿದ್ದು, ಒಟ್ಟು ಆದಾಯ ರು. 252.10 ಕೋಟಿಗೆ ಏರಿಕೆಯಾಗಿದೆ.

ಇದನ್ನೂ ಓದಿ: ಸ್ವಾತಂತ್ರ್ಯೋತ್ಸವಕ್ಕೆ ಸಜ್ಜಾಗುತ್ತಿದೆ ಲಾಲ್‌ಬಾಗ್

ಸಂಸ್ಥೆಯ ಈ ಸಾರ್ವಕಾಲಿಕ ದಾಖಲೆಯ ಯಶಸ್ಸಿಗೆ ನೂತನವಾಗಿ ಕಾರ್ಯಾಚರಣೆ ಆರಂಭಿಸಿರುವ ಚೆನ್ನೈ ವಂಡರ್‌ಲಾ ಪಾರ್ಕ್ ಹಾಗೂ 'ದಿ ಐಲ್' ಐಷಾರಾಮಿ ವಾಟರ್‌ಸೈಡ್ ರೆಸಾರ್ಟ್ ಪ್ರಮುಖ ಕಾರಣವಾಗಿವೆ.

ಪ್ರಸಕ್ತ ತ್ರೈಮಾಸಿಕದಲ್ಲಿ ವಂಡರ್‌ಲಾ ಪಾರ್ಕ್‌ಗಳಿಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ 33% ನಷ್ಟು ಹೆಚ್ಚಾಗಿದ್ದು, ಒಟ್ಟು 12.25 ಲಕ್ಷ ಸಂದರ್ಶಕರು ಪಾರ್ಕ್‌ಗಳನ್ನು ಕಣ್ತುಂಬಿಕೊಂಡಿದ್ದಾರೆ.

ಹೊಸದಾಗಿ ಆರಂಭವಾದ ಚೆನ್ನೈ ಪಾರ್ಕ್ ತನ್ನ ಮೊದಲ ವರ್ಷದಲ್ಲೇ 2.42 ಲಕ್ಷ ಸಂದರ್ಶಕರೊಂದಿಗೆ ಬರೋಬ್ಬರಿ ರು. 45 ಕೋಟಿ ಆದಾಯ ತಂದುಕೊಟ್ಟಿದೆ. ಹಳೆಯ ಬೆಂಗಳೂರು, ಕೊಚ್ಚಿ, ಹೈದರಾಬಾದ್ ಹಾಗೂ ಭುವನೇಶ್ವರ ಪಾರ್ಕ್‌ಗಳು ಒಟ್ಟಾರೆಯಾಗಿ 15% ನಷ್ಟು ಆದಾಯ ವೃದ್ಧಿ ದಾಖಲಿಸಿವೆ.

ಪಾರ್ಕ್‌ಗಳಲ್ಲಿ ಗ್ರಾಹಕರಿಗೆ ನೀಡಲಾಗುತ್ತಿರುವ ಪ್ರೀಮಿಯಂ ಸೇವೆಗಳು ಮತ್ತು ಉತ್ತಮ ಅನುಭವದಿಂದಾಗಿ ಪ್ರತಿಯೊಬ್ಬ ಗ್ರಾಹಕನ ಸರಾಸರಿ ವೆಚ್ಚ 7% ರಷ್ಟು ಏರಿಕೆಯಾಗಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ