Friday, April 24, 2026
Friday, April 24, 2026

ವಿಶ್ವ ಪಾರಂಪರಿಕ ದಿನ: ಸ್ಮಾರಕಗಳ ಸಂರಕ್ಷಣೆಗಿದು ಸೂಕ್ತ ಸಮಯ

ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಮೌಲ್ಯಮಾಪನ ವಿಭಾಗದ ಕುಲಸಚಿವರಾದ ಪ್ರೊ. ವೈ ರಮೇಶ್ ಅವರು ಮಾತನಾಡಿ, ಇತಿಹಾಸ ಎನ್ನುವುದು ಒಂದು ನೆನಪು ಮತ್ತು ಆ ನೆನಪನ್ನು ಮರೆತರೆ ಇತಿಹಾಸವೇ ಇಲ್ಲ. ಮುಂದಿನ ಪೀಳಿಗೆಗೆ ಈ ಸ್ಮಾರಕಗಳ ಪರಿಚಯವಾಗಬೇಕು. ನಮ್ಮ ದೇಶದಲ್ಲಿ ಶಿಲ್ಪಗಳೇ ಮಾತನಾಡುತ್ತವೆ. ಸ್ಮಾರಕಗಳನ್ನು ರಕ್ಷಿಸಬೇಕೇ ಹೊರತು, ನಾಶಪಡಿಸುವ ಕಾರ್ಯ ಮಾಡಬಾರದು ಎಂದು ತಿಳಿಸಿಕೊಟ್ಟರು.

ವಿಶ್ವ ಪಾರಂಪರಿಕ ದಿನಾಚರಣೆಯ ನಿಮಿತ್ತವಾಗಿ ಸ್ಮಾರಕಗಳ ಸಂರಕ್ಷಣೆ ದೇಶದ ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ ಎಂದು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಆಡಳಿತ ವಿಭಾಗದ ಕುಲಸಚಿವರು ಶ್ರೀಮತಿ ಸೀಮಾ ಬಿ. ನಾಯಕ್, ಕೆ.ಎ.ಎಸ್. ಅವರು ನುಡಿದರು. ಕರ್ನಾಟಕ ರಾಜ್ಯದ ಐತಿಹಾಸಿಕ ಮತ್ತು ಪಾರಂಪರಿಕ ಸ್ಥಳಗಳ ಮಹತ್ವವನ್ನು ತಿಳಿಸಿಕೊಡುವುದಕ್ಕಾಗಿ, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಗ್ರಾಮೀಣ ವಿಕಾಸ ಕೇಂದ್ರ - ಆರ್.ಜಿ.ವಿ.ಕೆ. ಇಂಡಿಯಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ 'ವಿಶ್ವ ಪಾರಂಪರಿಕ ದಿನಾಚರಣೆ'ಯನ್ನು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಾರಾಣಿ ಕಾಲೇಜಿನ ಕಟ್ಟಡವು 100 ವರ್ಷಗಳನ್ನು ಪೂರೈಸಿರುವುದರಿಂದಾಗಿ ಈ ಸ್ಮಾರಕವು ಒಂದು ವಿಶ್ವ ಪಾರಂಪರಿಕ ಕಟ್ಟಡವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಪಶ್ಚಿಮ ಬಂಗಾಳದಿಂದ ಪ್ರವಾಸಿಗರು ಹೊರಹೋಗಬೇಕು

ಇದೇ ವೇಳೆ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಮೌಲ್ಯಮಾಪನ ವಿಭಾಗದ ಕುಲಸಚಿವರಾದ ಪ್ರೊ. ವೈ ರಮೇಶ್ ಅವರು ಮಾತನಾಡಿ, ಇತಿಹಾಸ ಎನ್ನುವುದು ಒಂದು ನೆನಪು ಮತ್ತು ಆ ನೆನಪನ್ನು ಮರೆತರೆ ಇತಿಹಾಸವೇ ಇಲ್ಲ. ಮುಂದಿನ ಪೀಳಿಗೆಗೆ ಈ ಸ್ಮಾರಕಗಳ ಪರಿಚಯವಾಗಬೇಕು. ನಮ್ಮ ದೇಶದಲ್ಲಿ ಶಿಲ್ಪಗಳೇ ಮಾತನಾಡುತ್ತವೆ. ಸ್ಮಾರಕಗಳನ್ನು ರಕ್ಷಿಸಬೇಕೇ ಹೊರತು, ನಾಶಪಡಿಸುವ ಕಾರ್ಯ ಮಾಡಬಾರದು ಎಂದು ತಿಳಿಸಿಕೊಟ್ಟರು.

ಇನ್ನು ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್‌ನ ಅಧ್ಯಕ್ಷರಾದ ರಾಧಾಕೃಷ್ಣ ಹೊಳ್ಳರವರು ವಿದೇಶದ ಕೆಲವು ಪಾರಂಪರಿಕ ತಾಣಗಳ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಕರ್ನಾಟಕದ ಐತಿಹಾಸಿಕ ಪಾರಂಪರಿಕ ತಾಣಗಳು - ಸಮೀಕ್ಷೆ' ಕುರಿತಾಗಿ ಒಂದು ಉಪನ್ಯಾಸವನ್ನು ವಿದ್ಯಾರ್ಥಿಗಳು ಮತ್ತು ಸಮಾಜದ ವಿವಿಧ ಸಂಘ ಸಂಸ್ಥೆಗಳ ಗಣ್ಯರಿಗಾಗಿ ಏರ್ಪಡಿಸಲಾಗಿತ್ತು. ಅಲ್ಲದೆ ವಿಶ್ವ ಪಾರಂಪರಿಕ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಪಾರಂಪರಿಕ ಸ್ಥಳಗಳ ಕುರಿತಾಗಿ ಪ್ರಬಂಧ, ಚಿತ್ರಕಲೆ ಮತ್ತು ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಎಲ್ಲ ವಿದ್ಯಾರ್ಥಿಗಳಿಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ಬಿಡಿಸಿದ್ದ ಚಿತ್ರಕಲಾ ರೂಪಕಗಳನ್ನು ಪ್ರದರ್ಶಿಸಲಾಯಿತು. ಸಮಯದಲ್ಲಿ ಪಾರಂಪರಿಕ ಸ್ಥಳಗಳ ಸಂರಕ್ಷಣೆಯ ಕುರಿತಾಗಿ ಒಂದು ಪ್ರತಿಜ್ಞಾವಿಧಿಯನ್ನು ಬೋಧಿಸಿದ್ದು ವಿಶೇಷವಾಗಿತ್ತು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ