ವಿದೇಶ ಪ್ರವಾಸಿಗರಿಗೆ ಒಂದೇ ಆ್ಯಪ್ನಲ್ಲಿ ಇ-ಸಿಮ್, ವಿಮಾನ ನಿಲ್ದಾಣದ ಸೇವೆಗಳು
ವಿದೇಶ ಪ್ರವಾಸ ಕೈಗೊಳ್ಳುವ ಭಾರತೀಯ ಪ್ರಯಾಣಿಕರ ಅನುಕೂಲಕ್ಕಾಗಿ ZetSIM ಸಂಸ್ಥೆ ಮೊಬೈಲ್ ಡೇಟಾ ಮತ್ತು ವಿಮಾನ ನಿಲ್ದಾಣದ ವಿವಿಧ ಸೇವೆಗಳನ್ನು ಒಂದೇ ಆ್ಯಪ್ನಲ್ಲಿ ಒದಗಿಸುತ್ತಿದೆ. 180ಕ್ಕೂ ಹೆಚ್ಚು ದೇಶಗಳಲ್ಲಿ ಇ-ಸಿಮ್ ಡೇಟಾ ಯೋಜನೆಗಳನ್ನು ಖರೀದಿಸುವುದರ ಜತೆಗೆ ವಿಮಾನ ನಿಲ್ದಾಣದ ಮೀಟ್ ಆ್ಯಂಡ್ ಗ್ರೀಟ್, ಲೌಂಜ್ ಪ್ರವೇಶ ಮತ್ತು ಫಾಸ್ಟ್ಟ್ರ್ಯಾಕ್ ಸೇವೆಗಳನ್ನು ಮುಂಗಡವಾಗಿ ಬುಕ್ ಮಾಡಬಹುದು.

Zetexa Globalನ ಈ ಬ್ರ್ಯಾಂಡ್ ಒದಗಿಸುವ ಇ-ಸಿಮ್ ಸೇವೆಗಳು 450ಕ್ಕೂ ಹೆಚ್ಚು ಸ್ಥಳೀಯ ಮೊಬೈಲ್ ನೆಟ್ವರ್ಕ್ಗಳ ಮೂಲಕ ಲಭ್ಯವಿದ್ದು, ಅಗತ್ಯವಿರುವ ಕಡೆ 4G ಮತ್ತು 5G ಸಂಪರ್ಕವನ್ನು ಒದಗಿಸುತ್ತವೆ. ಯೋಜನೆಗಳ ಬೆಲೆ 2.20 ಅಮೆರಿಕನ್ ಡಾಲರ್ನಿಂದ ಆರಂಭವಾಗುತ್ತದೆ. ಪ್ರತಿ ಯೋಜನೆಯಲ್ಲೂ ಹಾಟ್ಸ್ಪಾಟ್ ಹಂಚಿಕೆ ಸೌಲಭ್ಯವಿದೆ. ಭಾರತೀಯ ಸಿಮ್ ಅನ್ನು ಫೋನ್ನಲ್ಲಿ ಸಕ್ರಿಯವಾಗಿರಿಸಿಕೊಂಡೇ ಇ-ಸಿಮ್ ಮೂಲಕ ಡೇಟಾ ಬಳಸಬಹುದು. ಇದರಿಂದ ಕರೆಗಳು, ಸಂದೇಶಗಳು ಮತ್ತು ಬ್ಯಾಂಕ್ OTPಗಳನ್ನು ಪಡೆಯಲು ಅನುಕೂಲವಾಗುತ್ತದೆ.
ಭಾರತದ ಏಳು ವಿಮಾನ ನಿಲ್ದಾಣಗಳಲ್ಲಿ ಮೀಟ್ ಆ್ಯಂಡ್ ಗ್ರೀಟ್ ಸೇವೆ ಲಭ್ಯವಿದ್ದು, ಬೆಂಗಳೂರು, ದೆಹಲಿ, ಮುಂಬಯಿ ಮತ್ತು ಹೈದರಾಬಾದ್ ಕೂಡ ಇದರಲ್ಲಿ ಸೇರಿವೆ. ಈ ಸೇವೆಯಡಿ ಸಿಬ್ಬಂದಿ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ, ಚೆಕ್ಇನ್, ಭದ್ರತಾ ತಪಾಸಣೆ ಮತ್ತು ವಲಸೆ ವಿಭಾಗದ ಪ್ರಕ್ರಿಯೆಗಳಲ್ಲಿ ನೆರವಾಗುತ್ತಾರೆ. ಭಾರತದ 31 ವಿಮಾನ ನಿಲ್ದಾಣಗಳು ಸೇರಿದಂತೆ 116 ದೇಶಗಳ 500ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಲ್ಲಿ ಲೌಂಜ್ ಪ್ರವೇಶ ಸೌಲಭ್ಯವಿದೆ. ದುಬೈ, ಅಬುಧಾಬಿ ಸೇರಿದಂತೆ 48 ವಿಮಾನ ನಿಲ್ದಾಣಗಳಲ್ಲಿ ಫಾಸ್ಟ್ಟ್ರ್ಯಾಕ್ ಭದ್ರತಾ ತಪಾಸಣೆ ಸೇವೆಯನ್ನೂ ಪಡೆಯಬಹುದು.
ಪ್ರಯಾಣಕ್ಕೂ ಮುನ್ನವೇ ಇ-ಸಿಮ್ ಅನ್ನು ಮೊಬೈಲ್ನಲ್ಲಿ ಅಳವಡಿಸಿಕೊಳ್ಳಬಹುದು. ವಿದೇಶದ ಸ್ಥಳೀಯ ನೆಟ್ವರ್ಕ್ಗೆ ಸಂಪರ್ಕಗೊಂಡ ಬಳಿಕವಷ್ಟೇ ಯೋಜನೆಯ ಅವಧಿ ಆರಂಭವಾಗುತ್ತದೆ. ಒಂದು ಬಾರಿ ಅಳವಡಿಸಿದ ಇ-ಸಿಮ್ ಅನ್ನು ಮುಂದಿನ ಪ್ರವಾಸಗಳಲ್ಲಿಯೂ ಮರುಬಳಕೆ ಮಾಡಬಹುದು ಎಂದು ಸಂಸ್ಥೆ ತಿಳಿಸಿದೆ.