Monday, August 24, 2026
Monday, August 24, 2026

ಜೂ಼ಮ್‌ಕಾರ್‌-ಉಬರ್‌ ಪಾಲುದಾರಿಕೆ

ಪ್ರವಾಸಿಗರಿಗೆ ರಸ್ತೆ ಪ್ರಯಾಣವನ್ನು ಇನ್ನಷ್ಟು ಸುಲಭ ಹಾಗೂ ಹೊಂದಿಕೊಳ್ಳುವಂತೆ ಮಾಡಲು ಜೂ಼ಮ್‌ಕಾರ್‌ ಮತ್ತು ಉಬರ್‌ ಪಾಲುದಾರಿಕೆ ಮಾಡಿಕೊಂಡಿವೆ.

ಪ್ರವಾಸಿಗರಿಗೆ ರಸ್ತೆ ಪ್ರಯಾಣವನ್ನು ಇನ್ನಷ್ಟು ಸುಲಭ ಹಾಗೂ ಹೊಂದಿಕೊಳ್ಳುವಂತೆ ಮಾಡಲು ಜೂ಼ಮ್‌ಕಾರ್‌ ಮತ್ತು ಉಬರ್‌ ಪಾಲುದಾರಿಕೆ ಮಾಡಿಕೊಂಡಿವೆ. ಈ ಸಹಭಾಗಿತ್ವದ ಮೂಲಕ ಜೂ಼ಮ್‌ಕಾರ್‌ ಆ್ಯಪ್‌ನಲ್ಲಿಯೇ ಸ್ವಯಂ ಚಾಲಿತ ಕಾರುಗಳ ಜತೆಗೆ ಚಾಲಕರೊಂದಿಗೆ ಪ್ರಯಾಣಿಸುವ ಉಬರ್‌ ಇಂಟರ್‌ಸಿಟಿ ಸೇವೆಯ ಆಯ್ಕೆಗಳನ್ನೂ ಹೋಲಿಸಿ ಬುಕ್‌ ಮಾಡಬಹುದಾಗಿದೆ.

ಪ್ರಸ್ತುತ ಈ ಸೇವೆಯ ಏಕೀಕರಣ ಬೆಂಗಳೂರು, ದೆಹಲಿ-ಎನ್‌ಸಿಆರ್‌ ಮತ್ತು ಮುಂಬಯಿಯಲ್ಲಿ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಇತರ ನಗರಗಳಿಗೂ ವಿಸ್ತರಿಸುವ ಯೋಜನೆ ಇದೆ. ಜೂ಼ಮ್‌ಕಾರ್‌ನಲ್ಲಿ ಸೆಲ್ಫ್‌ ಡ್ರೈವ್‌ ವಾಹನವನ್ನು ಹುಡುಕುವ ಬಳಕೆದಾರರಿಗೆ ಆಯ್ದ ಮಾರ್ಗಗಳಲ್ಲಿ ಉಬರ್‌ ಇಂಟರ್‌ಸಿಟಿ ರೈಡ್‌ಗಳನ್ನು ಸಹ ಕಾಣಬಹುದು. ಇದರಿಂದ ಒನ್‌-ವೇ ಹಾಗೂ ರೌಂಡ್‌ ಟ್ರಿಪ್‌ಗಳಿಗೆ ಸ್ವತಃ ವಾಹನ ಚಲಾಯಿಸುವುದೋ ಅಥವಾ ಚಾಲಕರೊಂದಿಗೆ ಪ್ರಯಾಣಿಸುವುದೋ ಎಂಬುದನ್ನು ಪ್ರಯಾಣಿಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬಹುದು.

ವಾರಾಂತ್ಯದ ಪ್ರವಾಸ, ಕುಟುಂಬ ಭೇಟಿ, ರಜೆ ಅಥವಾ ನಗರಾಂತರ ಪ್ರಯಾಣಗಳಿಗೆ ರಸ್ತೆ ಸಾರಿಗೆಯ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಪಾಲುದಾರಿಕೆ ಮಹತ್ವ ಪಡೆದಿದೆ. ಸ್ವಂತ ವಾಹನ ಹೊಂದುವ ಬದಲು ಅಗತ್ಯಕ್ಕೆ ತಕ್ಕಂತೆ ಸಾರಿಗೆ ಸೇವೆ ಬಳಸುವ ಪ್ರವೃತ್ತಿಯೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಒಂದೇ ವೇದಿಕೆಯಲ್ಲಿ ವಿವಿಧ ಆಯ್ಕೆಗಳನ್ನು ಒದಗಿಸುವುದು ಈ ಸಹಭಾಗಿತ್ವದ ಪ್ರಮುಖ ಉದ್ದೇಶವಾಗಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..