ನಿಮಗೂ ಗೊತ್ತಿದೆ. ಪ್ರವಾಸವೆಂದರೆ ಪ್ರಯಾಸವನ್ನು ಕಳೆಯುವುದು! ಬದುಕಿನ ಎಲ್ಲ ಜಂಜಾಟಗಳನ್ನು ಪಕ್ಕಕ್ಕೆ ಒಗೆದು ಆರಾಮವಾಗಿ ಜೀವಿಸುವ, ನಗರದ ಗದ್ದಲಗಳನ್ನು ನೂಕಿ ನಗಿಸುವ, ಪ್ರತಿದಿನದ ಸಂಕಟಗಳನ್ನು ಮರೆಸುವ ಜೀವನಪ್ರೀತಿ ಮತ್ತು ಜೀವನೋತ್ಸಾಹ ಅರಳುವಂತೆ ಮಾಡುವ ಒಂದು ಸಾಧನವೆಂದರೆ ಅದು ಪ್ರವಾಸ ಎಂಬುದನ್ನು ನೀವು ಮರೆತಿಲ್ಲ ಅಲ್ಲವೇ? ಇಷ್ಟಬಂದಂತೆ ಓಡಾಡುವುದು ಪ್ರವಾಸವಲ್ಲ. ನಮ್ಮನ್ನು ಮಾನಸಿಕ ಮತ್ತು ಬೌದ್ಧಿಕ ಶ್ರೀಮಂತರನ್ನಾಗಿಸುವುದು ಪ್ರವಾಸ. ನಾವು ಏನನ್ನು ನೋಡುತ್ತೇವೆ, ಏನನ್ನು ಅಲ್ಲಿ ತಿಳಿಯುತ್ತೇವೆ ಮತ್ತು ಇನ್ನೇನನ್ನು ಮಾಡುತ್ತೇವೆ ಎಂಬುದು ಬಹಳ ಮುಖ್ಯ. ಬಂದ ಪುಟ್ಟ ಹೋದ ಪುಟ್ಟ ಎನ್ನುವಂತೆ ನೀವು ಪ್ರವಾಸ ಮಾಡಿದರೆ ಅದು ನಿಜವಾದ ಪ್ರವಾಸವಲ್ಲ. ಅದಕ್ಕೆ ಸ್ಥಳೀಯತೆಯ ಸ್ವಾದ ಬೇಕೇಬೇಕು. ನೋಟ ಅದೂ ಕೇವಲ ಕಲ್ಲು, ಮಣ್ಣು, ಪ್ರಾಣಿಗಳನ್ನು ನೋಡುವುದಲ್ಲ. ಅಲ್ಲಿನ ಇತಿಹಾಸ, ವನವಾಸ ಅಷ್ಟೇಕೆ ಜನಮನಗಳನ್ನೂ ನೋಡಬೇಕು. ನಮ್ಮ ನಾಡೇ ನಮಗೆ ಈ ಎಲ್ಲ ಅವಕಾಶಗಳನ್ನು ನೀಡುತ್ತದೆ. ಇಲ್ಲಿ ವೈವಿಧ್ಯ ಜನಾಂಗಗಳಿವೆ, ವೈವಿಧ್ಯ ಭೌಗೋಳಿಕ ವಾತಾವರಣಗಳಿವೆ. ಕರ್ನಾಟಕದ ಆಚೆಗೂ ನಮ್ಮನ್ನು ಚೈತನ್ಯ ರೂಪಿಯಾಗಿಸಬಲ್ಲ ತಾಣಗಳಿವೆ.

ಇದನ್ನೂ ಓದಿ: ಶಿಲೆಗಳು ಸಂಗೀತವಾ ಹಾಡಿವೆ…

ಓಕೆ ಸರ್,‌ ಅಂಥ ತಾಣಗಳಿಗೆ ನಮ್ಮನ್ನು ಕೈಗೆಟುಕುವ ಹಣದಲ್ಲಿ ಕರೆದೊಯ್ಯುವವರು ಯಾರು? ಎಂದು ಕೇಳಿದ್ರಾ? ನಮ್ಮಂಥವರಿಗಾಗಿಯೇ ಕೆಎಸ್‌ಟಿಡಿಸಿ ಇದೆ. ನಾಡು, ಹೊರನಾಡು ಎಲ್ಲ ಕಡೆಗೂ ನಮ್ಮನ್ನು ಕರೆದೊಯ್ಯುತ್ತದೆ. ಸರ್ವವನ್ನೂ ಅರಿತ ಸರ್ವಜ್ಞನಂತೆ ಕೆಎಸ್‌ಟಿಡಿಸಿ ನಿಮ್ಮನ್ನು ಮುನ್ನಡೆಸುತ್ತದೆ. ಪ್ರವಾಸದಲ್ಲಿ ನೀವು ಕಂಡು, ಕೇಳಿ, ಅನುಭವಿಸಿ ಅರಿತು ಅಳವಡಿಸಿಕೊಳ್ಳಬಹುದಾದ ಹಲವು ವಿಷಯಗಳನ್ನು ಮರಳಿ ಬರುವಾಗ ಹೊತ್ತು ತರುತ್ತೀರಿ. ಅಷ್ಟರಮಟ್ಟಿಗೆ ಪ್ರವಾಸಿ ತಾಣವೊಂದರ ಪ್ರಸ್ತುತ ಮತ್ತು ಪುರಾತನ ಸ್ಥಿತಿಗತಿಗಳನ್ನು ಕೆಎಸ್‌ಟಿಡಿಸಿ ಬಲ್ಲದು. ನುರಿತ ಟೂರ್ ಗೈಡ್‌ಗಳು ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಇಂಥ ಪ್ರವಾಸಕ್ಕೆ ಸಹಕರಿಸುವ ಹಲವು ಇತಿಹಾಸ, ವನವಾಸ, ಊಟೋಪಚಾರ, ಆಚರಣೆ, ಸಂಸ್ಕೃತಿ, ಉಡುಗೆ-ತೊಡುಗೆ, ಸ್ಥಳ ಪುರಾಣಗಳನ್ನು ಪರಿಚಯಿಸುತ್ತಾ ನಿಮ್ಮನ್ನು ಸುತ್ತಿಸುತ್ತಾರೆ. ಆಯಾಸ ಮರೆಸಲು ಮನಮೋಹಿಸುವ ತಾಣಗಳಲ್ಲಿ ಉಳಿದುಕೊಳ್ಳಲು ವಾಸ್ತವ್ಯಗಳನ್ನು ಕಲ್ಪಿಸಿ ಕೆಎಸ್‌ಟಿಡಿಸಿ ಈಗಾಗಲೇ ಜನಮನಗಳನ್ನು ಗೆದ್ದಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಈ ಕಾರ್ಯಕ್ಕೆ ಈಗಾಗಲೇ ಹಲವು ವರ್ಷಗಳ ಇತಿಹಾಸವಿದೆ. ಮುಖ್ಯ ವಿಷಯಕ್ಕೆ ಬರ್ತೀವಿ ಕೇಳಿ. ಕೆಎಸ್‌ಟಿಡಿಸಿ ಇದೀಗ ಎರಡು ಬಗೆಯ ವಿಶೇಷ ಟೂರ್‌ ಪ್ಯಾಕೇಜ್‌ ಘೋಷಿಸಿದೆ.

Untitled design (43)

ಒಂದು ದಿನದ ವಿಶ್ವ ಪಾರಂಪರಿಕ ಪ್ರವಾಸವನ್ನು ಪರಿಚಯಿಸಿದೆ. ಶ್ರವಣಬೆಳಗೊಳ, ಬೇಲೂರು ಮತ್ತು ಹಳೇಬೀಡು ಕಡೆಗೆ ಪ್ರವಾಸಿಗರನ್ನು ಕೆಎಸ್‌ಟಿಡಿಸಿ ಕರೆದೊಯ್ಯುತ್ತಿದೆ. ಇತ್ತ ಕಡೆ ಎರಡು ದಿನಗಳ ಪ್ರವಾಸ ಪ್ಯಾಕೇಜ್‌ ಮೂಲಕ ಚಿಕ್ಕಮಗಳೂರಿಗೂ ಕರೆದೊಯ್ಯಲು ಸಿದ್ಧವಾಗಿದೆ. ಯಗಚಿ ಡ್ಯಾಮ್‌, ಝರಿ ಫಾಲ್ಸ್‌, ಸಿರಿ ಸ್ಟ್ಯಾಚ್ಯೂ, ಮಾಣಿಕ್ಯಧಾರ ಫಾಲ್ಸ್‌, ಭದ್ರಾ ವನ್ಯಜೀವಿ ಅಭಯಾರಣ್ಯ, ಬಾಬ ಬುಡನ್‌ ಗಿರಿ, ಮುಳ್ಳಯ್ಯನ ಗಿರಿ, ಝಡ್‌ ಪಾಯಿಂಟ್., ಶೂಟಿಂಗ್‌ ಪಾಯಿಂಟ್‌ ಹೀಗೆ ಪ್ರಕೃತಿಯ ಮೈಮಾಟದಲ್ಲಿ ನೀವು ಕಳೆದು ಹೋಗಬಹುದು. ವರ್ಷ ಕಳೆಯುತ್ತಿದೆ. ಮುಂದಿನ ವರ್ಷದ ನಿಮ್ಮ ಟ್ರಾವೆಲ್‌ ರೆಸಲ್ಯೂಷನ್‌ ಏನು? 2025ರಲ್ಲಂತೂ ಎಲ್ಲಿಗೂ ಹೋಗಲಿಲ್ಲ. 2026ರಲ್ಲಿ ಆದರೂ? ಪ್ಲೀಸ್‌ ಮನಸು ಮಾಡಿ. ನಿಮ್ಮ ಮನಸಿಗಿಂತ ಯಾವುದೂ ದೊಡ್ಡದಲ್ಲ. ಹ್ಯಾವ್‌ ಎ ನೈಸ್‌ ಟ್ರಿಪ್!‌ ಎಂದು ಮುಂಚಿತವಾಗಿಯೇ ಹೇಳುತ್ತಿದ್ದೇವೆ. ನಿಮ್ಮನ್ನು ಸುತ್ತಿಸಲು ಕೆಎಸ್‌ಟಿಡಿಸಿ ನಿಮ್ಮ ಜತೆಗಿದೆ ಎಂಬುದನ್ನು ಮಾತ್ರ ಮರೆಯಬೇಡಿ..

ವಿಶ್ವ ಪಾರಂಪರಿಕ ತಾಣಗಳತ್ತ ಪ್ರವಾಸ

ದಿನ-1

ಬೆಳಗ್ಗೆ 6:30 ಗಂಟೆ : ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್, ಬಿಎಂಟಿಸಿ ಬಸ್ ನಿಲ್ದಾಣ ಯಶವಂತಪುರದಿಂದ ಹೊರಡಲಾಗುತ್ತದೆ

ಬೆಳಗ್ಗೆ 8:30 ಗಂಟೆ : ದಾರಿ ಮಧ್ಯೆ ಉಪಾಹಾರ

ಬೆಳಗ್ಗೆ 9:00 ಗಂಟೆ : ಯಡಿಯೂರಿನಿಂದ ಹೊರಡಲಾಗುತ್ತದೆ

ಬೆಳಗ್ಗೆ 10:30 ಗಂಟೆ : ಶ್ರವಣಬೆಳಗೊಳಕ್ಕೆ ಭೇಟಿ ಮತ್ತು ಬಾಹುಬಲಿ ದರ್ಶನ

ಬೆಳಗ್ಗೆ 11:30 ಗಂಟೆ : ಶ್ರವಣಬೆಳಗೊಳದಿಂದ ಹೊರಡಲಾಗುತ್ತದೆ

ಮಧ್ಯಾಹ್ನ 1:30 ಗಂಟೆ : ಬೇಲೂರಿಗೆ ತಲುಪಲಾಗುತ್ತದೆ. ಹೊಟೇಲ್ ಮಯೂರ ವೇಲಾಪುರಿಯಲ್ಲಿ ಊಟ ಮತ್ತು ಚೆನ್ನಕೇಶವ ದೇವಸ್ಥಾನಕ್ಕೆ ಭೇಟಿ

ಮಧ್ಯಾಹ್ನ 3:00 ಗಂಟೆ : ಬೇಲೂರಿನಿಂದ ಹೊರಡಲಾಗುತ್ತದೆ

ಮಧ್ಯಾಹ್ನ 3:45 ಗಂಟೆ : ಹಳೇಬೀಡುವಿಗೆ ತಲುಪಲಾಗುತ್ತದೆ. ಹೊಯ್ಸಳೇಶ್ವರ ದೇವಸ್ಥಾನಕ್ಕೆ ಭೇಟಿ

ಸಂಜೆ 4:45 ಗಂಟೆ : ಹಳೇಬೀಡುವಿನಿಂದ ಹೊರಡಲಾಗುತ್ತದೆ

ರಾತ್ರಿ 10:00 ಗಂಟೆ : ಬೆಂಗಳೂರಿಗೆ ಹಿಂತಿರುಗಲಾಗುವುದು

Untitled design (45)

ಯಗಚಿ-ಚಿಕ್ಕಮಗಳೂರು ಪ್ರವಾಸ

ದಿನ-1

ಬೆಳಗ್ಗೆ 6:00 ಗಂಟೆ : ಯಶವಂತಪುರದ ಬಿಎಂಟಿಸಿ ಬಸ್ ನಿಲ್ದಾಣದ ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್‌ನಿಂದ ಹೊರಡಲಾಗುತ್ತದೆ.

ಬೆಳಗ್ಗೆ 8:00 - 8:30 ಗಂಟೆ : ಉಪಾಹಾರ

ಬೆಳಗ್ಗೆ 11:00 - ಮಧ್ಯಾಹ್ನ 2:00 ಗಂಟೆ : ಯಗಚಿ ಡ್ಯಾಮ್‌ಗೆ ಭೇಟಿ, ಬೋಟಿಂಗ್ ಮತ್ತು ಊಟ

ಮಧ್ಯಾಹ್ನ 2:30 - ಸಂಜೆ 6:00 ಗಂಟೆ : ಯಗಚಿ ಡ್ಯಾಮ್, ಯಗಚಿಯಲ್ಲಿ ಭದ್ರಾ ವನ್ಯಜೀವಿ ಅಭಯಾರಣ್ಯ ವೀಕ್ಷಣೆ

ದಿನ-2

ಬೆಳಗ್ಗೆ 8:00 - 8:30 ಗಂಟೆ : ಬೆಳಗಿನ ಉಪಾಹಾರದ ನಂತರ ಹೊಟೇಲ್‌ನಿಂದ ಚೆಕ್‌ ಔಟ್

ಬೆಳಗ್ಗೆ 8.30 - ಸಂಜೆ 4:00 ಗಂಟೆ : ಸಿರಿ ಸ್ಟ್ಯಾಚ್ಯೂ, ಹೊನ್ನಮಹಳ್ಳ ಫಾಲ್ಸ್‌, ಶೂಟಿಂಗ್ ಪಾಯಿಂಟ್, ಬಾಬಾಬುಡನಗಿರಿ, ಝಡ್ ಪಾಯಿಂಟ್, ಮಾಣಿಕ್ಯಧಾರ ಫಾಲ್ಸ್‌, ಝರಿ ವಾಟರ್ ಫಾಲ್ಸ್ ( ಜೀಪ್ ಶುಲ್ಕ ರು. 100 – 150/-) ಊಟ, ಸೀತಾಲಯನಗಿರಿ, ಮುಳ್ಳಯ್ಯನಗಿರಿ ಟ್ರೆಕ್ಕಿಂಗ್

ರಾತ್ರಿ 11.00‌ ಗಂಟೆ : ಬೆಂಗಳೂರಿಗೆ ಹಿಂತಿರುಗಲಾಗುವುದು

ಇಲ್ಲಿ ಗಮನಿಸಿ

ಕೆಎಸ್‌ಟಿಡಿಸಿ ಬುಕ್ ಮಾಡುವವರಿಗೆ ವಿಶೇಷ ಅವಕಾಶಗಳಿವೆ.

ಡಿಲಕ್ಸ್ ಎಸಿ ಬಸ್‌ನಲ್ಲಿ ಆರಾಮದಾಯಕ ಮತ್ತು ಸುಖಕರ ಪ್ರಯಾಣ.

ಆಯ್ಕೆ ಮಾಡಿಕೊಂಡ ಪ್ಯಾಕೇಜ್​ ಅನ್ವಯ ಪ್ರವಾಸ

ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯ

ಕೆಎಸ್‌ಟಿಡಿಸಿ ನಿಮ್ಮ ಆಯ್ಕೆಯಾಗಲಿ

ಕೆಎಸ್‌ಟಿಡಿಸಿಯ ಪ್ಯಾಕೇಜ್ ಬಜೆಟ್ ಸ್ನೇಹಿಯಾಗಿದೆ.

ಪ್ರವಾಸಿಗರಿಗೆ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜಿತ ಪ್ರವಾಸದ ಭರವಸೆಯನ್ನು ನೀಡುತ್ತದೆ.

ಆರಾಮದಾಯಕ ಪ್ರಯಾಣ: ಆಧುನಿಕ ಬಸ್‌ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.

ವಿಶೇಷ ಗೈಡ್‌ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್​ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.

ಸಮಗ್ರ ಯೋಜನೆ: ಪ್ಯಾಕೇಜ್‌ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನತಣಿಯುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್ ಕೂಡ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.

ಕೈಗೆಟುಕುವ ಬೆಲೆ: ಎಲ್ಲರಿಗೂ ಒಗ್ಗುವ, ಮಧ್ಯಮ ವರ್ಗದವರ ಕನಸು ನನಸು ಮಾಡುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ಮತ್ತೇನು ಯೋಚನೆ ಮಾಡ್ತಿದ್ದೀರಿ? ಕೆಎಸ್‌ಟಿಡಿಸಿ ನಿಮ್ಮ ಪ್ರವಾಸ ಸಂಗಾತಿ. ಈಗಲೇ ಬುಕ್ ಮಾಡಿ. ಹೊರಡಿ. ಜಗತ್ತು ಕೈ ಬೀಸಿ ಕರೆಯುತ್ತಿದೆ.

ಯಡಿಯೂರಿನಲ್ಲಿ ಮಯೂರ ಪವಿತ್ರ ಆತಿಥ್ಯ

ಆತಿಥ್ಯಕ್ಕೆ ಮಯೂರ ರಾಜ್ಯದಾದ್ಯಂತ ಹೆಸರುವಾಸಿಯಾಗಿದೆ.​ ದೇಶ-ವಿದೇಶದಿಂದ ಬರುವ ಪ್ರವಾಸಿಗರು ಮಯೂರವನ್ನು ಮೆಚ್ಚಿಕೊಂಡಿದ್ದಾರೆ.ಮಯೂರದ ಆತ್ಮೀಯ ಆತಿಥ್ಯವನ್ನು ಒಪ್ಪಿ ಅಪ್ಪಿಕೊಂಡಿದ್ದಾರೆ. ಶುಚಿ ಮತ್ತು ರುಚಿಯಾದ ಊಟದ ಜತೆಗೆ ಪ್ರವಾಸಿಗನ ಎಲ್ಲ ಬೇಕು ಬೇಡಗಳನ್ನು ಮಯೂರ ಈಡೇರಿಸುತ್ತಾ ಬಂದಿದೆ. ಊಟೋಪಚಾರದ ಜತೆಗೆ ಆಟೋಪಾಟ ಚಟುವಟಿಕೆಗಳು, ಮನರಂಜಿಸುವ ಸುತ್ತಮುತ್ತಲಿನ ಹಿತವಾದ ವಾತಾವರಣ ಪ್ರತಿ ಪ್ರವಾಸಿಗನ ಮನಸೆಳೆಯುತ್ತವೆ. ರಾಜ್ಯದ ಮೂಲೆ ಮೂಲೆಯಲ್ಲೂ ಹೊಟೇಲ್‌ ಮಯೂರ ಮನೆ ಮಾತಾಗಿದೆ. ಮಯೂರವೆಂದರೆ ಅದು ಬಜೆಟ್‌ ಫ್ರೆಂಡ್ಲಿ ಹೊಟೇಲ್‌ ಎಂದು ಪ್ರತಿಯೊಬ್ಬರೂ ಹೇಳುತ್ತಿದ್ದಾರೆ. ಕೆಎಸ್‌ಟಿಡಿಸಿ ಮೂಲಕ ಪ್ರವಾಸ ಕೈಗೊಳ್ಳುವ ಪ್ರತಿ ಪ್ರವಾಸಿಗನೂ ಮಯೂರ ಆತಿಥ್ಯವನ್ನು ಸ್ವೀಕರಿಸಬಹುದು. ಹತ್ತಾರು ವರ್ಷಗಳಿಂದ ಹೊಟೇಲ್‌ ಉದ್ಯಮದ ರಾಜನಂತೆ ಕಾರ್ಯ ನಿರ್ವಹಿಸುತ್ತಿದ್ದು, ಅಷ್ಟು ಜಾಗಗಳ, ಅಷ್ಟು ವರ್ಷಗಳ ಅನುಭವದ ಬುತ್ತಿಯೊಂದಿಗೆ ಮಯೂರ ತನ್ನಲ್ಲಿಗೆ ಬರುವ ಪ್ರವಾಸಿಯನ್ನು ಉಪಚರಿಸುತ್ತದೆ. ಹೀಗಾಗಿಯೇ ಆತಿಥ್ಯ ಕ್ಷೇತ್ರದಲ್ಲಿ ಎಷ್ಟೋ ಹೊಟೇಲ್‌ ಮತ್ತು ಉದ್ಯಮ ಸಂಸ್ಥೆಗಳು ಅವಿರತ ಶ್ರಮಿಸುತ್ತಿದ್ದರೂ ಅವುಗಳಿಗಿಂತ ಕೊಂಚ ಭಿನ್ನ ಮತ್ತು ವಿಭಿನ್ನವಾಗಿ ಮಯೂರ ತಲೆಯೆತ್ತಿ ನಿಂತಿದೆ. ಇಲ್ಲಿ ವಾಸ್ತವ್ಯಕ್ಕಂತೂ ಹೇಳಿ ಮಾಡಿಸಿದ ಅದ್ಭುತ ವಾತಾವರಣವಿದೆ.​ ಅಲ್ಲಿನ ಸಿಬ್ಬಂದಿ ಮನೆಯ ನೆಂಟರಂತೆ ಮಾತಿಗಿಳಿದು ಸತ್ಕರಿಸುತ್ತಾರೆ. ಮೊದಲೇ ಹೇಳಿದಂತೆ ಕೆಎಸ್‌ಟಿಡಿಸಿ ಪ್ಯಾಕೇಜ್‌ನಡಿ ಪ್ರವಾಸಕ್ಕೆ ಹೊರಡುವ ಎಲ್ಲ ಪ್ರವಾಸಿಗನಿಗೂ ಹೊಟೇಲ್ ಮಯೂರದಲ್ಲಿ ರಾಜಾತಿಥ್ಯವಿದೆ. ಇನ್ನು ಪ್ರತಿ ಜಿಲ್ಲೆಯಲ್ಲೂ ಮಯೂರ ಹೊಟೇಲ್​ನ ಶಾಖೆಗಳಿವೆ. ನಮ್ಮ ಯಡಿಯೂರಿನಲ್ಲೂ ಮಯೂರವಿದೆ. ಯಡಿಯೂರು ಸಿದ್ದಲಿಂಗೇಶ್ವರ ಕ್ಷೇತ್ರವು ಅತ್ಯಂತ ಪ್ರಸಿದ್ಧ ಧಾರ್ಮಿಕ ಸ್ಥಳ. ಧಾರ್ಮಿಕ ಮತ್ತು ಐತಿಹಾಸಿಕ ತಾಣವಾಗಿ ಯಡಿಯೂರು ಭಕ್ತರು ಮತ್ತು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಪುರಾಣದ ಐತಿಹ್ಯದೊಂದಿಗೂ ನಂಟು ಬೆಸದುಕೊಂಡಿರುವ ಯಡಿಯೂರಿಗೆ ಶತಮಾನದ ಕಥೆಯಿದೆ. ಹೊಟೇಲ್‌ ಮಯೂರ ಪವಿತ್ರವೆಂದರೆ ಸಾಕು ಅದು ಯಡಿಯೂರಿನ್ಲಲಿರುವ ಹೊಟೇಲ್‌ ಎಂದು ಎಲ್ಲರಿಗೂ ಗೊತ್ತಾಗುತ್ತದೆ. ಎಲ್ಲ ಶಾಖೆಗಳಲ್ಲಿರುವಂತೆ ಅಲ್ಲಿಯೂ ಐಷಾರಾಮಿ ಸೌಲಭ್ಯಗಳಿವೆ. ರೆಸ್ಟೋರೆಂಟ್‌ ಸುತ್ತಲೂ ಅಚ್ಚ ಹಸುರಿನ ವಾತಾವರಣವಿದೆ. ಕುಣಿಗಲ್‌ ಮತ್ತು ತುಮಕೂರು ಮಾರ್ಗವಾಗಿ ಹೋಗುವ ಪ್ರವಾಸಿಗರು ಈ ಹೊಟೇಲ್‌ನಲ್ಲಿ ಉಳಿದುಕೊಳ್ಳಬಹುದು. ತುಮಕೂರಿನಲ್ಲಿರುವ ಪ್ರವಾಸಿ ತಾಣಗಳನ್ನು ನೋಡಿಕೊಂಡು ಹೊಟೇಲ್‌ ಮಯೂರ ಪವಿತ್ರದಲ್ಲಿ ವಾಸ್ತವ್ಯ ಹೂಡಿ ಆನಂದದಿಂದ ಸಮಯ ಕಳೆಯಬಹುದು. ಹೊಟೇಲ್‌ನಲ್ಲಿ 10 ಹವಾನಿಯಂತ್ರಿತ ರೂಮ್ಸ್‌, 4 ಡಬಲ್ ರೂಮ್‌ಗಳು ಮತ್ತು 14 ಹಾಸಿಗೆಗಳ 1 ಡಾರ್ಮಿಟರಿಯಿಂದ ಹಿಡಿದು ವಿವಿಧ ವಸತಿ ಆಯ್ಕೆಗಳನ್ನು ಒದಗಿಸುತ್ತದೆ.

Untitled design (41)

ಸಂಪರ್ಕ:

Yogesh. MK

Manager (Tours)

Mob No: +91 960 6987 822 | Email ID: tour.manager@kstdc.co

Karnataka State Tourism Development Corporation Ltd. (KSTDC)

Corporate Office: 5th Floor | Indhana Bhavan|Race Cource Road | Opposite to Renaissance Hotel,

Bangalore- 560009 | Karnataka | India

Office: 080-43344334 | Fax: 080-43344376

Email: feedback@kstdc.co | info@kstdc.co | website: www.kstdc.co | www.goldenchariot.org