ಶಿಲೆಗಳು ಸಂಗೀತವಾ ಹಾಡಿವೆ…
ಆತಿಥ್ಯಕ್ಕೆ ಮಯೂರ ಕನ್ನಡದ ಮಯೂರನಷ್ಟೇ ಹೆಸರುವಾಸಿಯಾಗಿದೆ. ಆತಿಥ್ಯದ ಆದಿತ್ಯ ಎನ್ನುವಂತೆ ದೇಶ-ವಿದೇಶಗಳಿಂದ ಕರ್ನಾಟಕ ಪ್ರವಾಸಕ್ಕೆ ಬರುವ ಜನರಲ್ಲೂ ಹೊಟೇಲ್ ಮಯೂರ ಗುರುತಿಸಿಕೊಂಡಿದೆ. ಕಾರಣ ಅಲ್ಲಿ ಇರಬಹುದಾದ ಶುಚಿತ್ವ ಮತ್ತು ರುಚಿಯಾದ ಊಟ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಊಟೋಪಚಾರದ ಜತೆಗೆ ಆಟೋಪಾಟ ಚಟುವಟಿಕೆಗಳು, ಮನರಂಜಿಸುವ ಸುತ್ತಮುತ್ತಲಿನ ಸುಂದರ ವಾತಾವರಣ ನಿಮಗೆ ಅಲ್ಲಿ ಮನಸೆಳೆಯುತ್ತವೆ. ರಾಜ್ಯದ ಮೂಲೆ ಮೂಲೆಯಲ್ಲೂ ಹೊಟೇಲ್ ಮಯೂರ ಮನೆಮಾಡಿದೆ.
ಪ್ರವಾಸವೆಂದರೆ ಜೀವನದ ಜಂಜಾಟಗಳನ್ನು ಪಕ್ಕಕ್ಕೆ ಒಗೆದು ಜೀವಿಸುವ, ನಗರದ ಗದ್ದಲಗಳನ್ನು ನೂಕಿ ನಗಿಸುವ, ಪ್ರತಿದಿನದ ಪ್ರಯಾಸಗಳನ್ನು ಮರೆಸುವ ಜೀವನೋತ್ಸಾಹ ಮತ್ತೆ ಪ್ರವಹಿಸುವಂತೆ ಮಾಡುವ ಅವಕಾಶ. ಇಂಥ ಅವಕಾಶ ಎಷ್ಟು ಪ್ರಬುದ್ಧವಾಗಿರುತ್ತದೋ ಅಷ್ಟು ಫಲವನ್ನು ನೀಡುತ್ತದೆ. ಮನಬಂದಂತೆ ಓಡಾಡುವುದು ಪ್ರವಾಸವಲ್ಲ. ಅದು ಕೇವಲ ಓಡಾಟವಾಗುತ್ತದೆ. ನಾವು ಏನನ್ನು ನೋಡುತ್ತೇವೆ, ಏನನ್ನು ಅಲ್ಲಿ ತಿಳಿಯುತ್ತೇವೆ ಮತ್ತು ಇನ್ನೇನನ್ನು ಮಾಡುತ್ತೇವೆ ಎಂಬುದು ಬಹಳ ಮುಖ್ಯ. ಬಂದ ಪುಟ್ಟ ಹೋದ ಪುಟ್ಟ ಎನ್ನುವಂತೆ ನೀವು ಪ್ರವಾಸ ಮಾಡಿದರೆ ಅದು ನಿಜವಾದ ಪ್ರವಾಸವಲ್ಲ. ಅದಕ್ಕೆ ಸ್ಥಳೀಯತೆಯ ಸ್ವಾದ ಬೇಕೇಬೇಕು. ನೋಟ ಅದೂ ಕೇವಲ ಕಲ್ಲು, ಮಣ್ಣು, ಪ್ರಾಣಿಗಳನ್ನು ನೋಡುವುದಲ್ಲ. ಅಲ್ಲಿನ ಇತಿಹಾಸ, ವನವಾಸ ಅಷ್ಟೇಕೆ ಜನಮನಗಳನ್ನೂ ನೋಡಬೇಕು.
ನಮ್ಮ ನಾಡೇ ನಮಗೆ ಈ ಎಲ್ಲಾ ಅವಕಾಶಗಳನ್ನು ನೀಡುತ್ತದೆ. ಇಲ್ಲಿ ವೈವಿಧ್ಯ ಜನಾಂಗಗಳಿವೆ, ವೈವಿಧ್ಯ ಭೌಗೋಳಿಕ ವಾತಾವರಣಗಳಿವೆ ಇನ್ನೂ ಅದೆಷ್ಟೋ ಹೊಸತನಗಳನ್ನು ಪ್ರವಾಸ ನಿಮಗೆ ಪರಿಚಯಿಸಬೇಕು. ವೈವಿಧ್ಯ ಜನಮನಗಳ ಮಧ್ಯೆ ಬೆರೆಯಬೇಕು. ತಿನ್ನಲು ಭಿನ್ನ ರುಚಿಗಳನ್ನು ಬಡಿಸಲೂಬೇಕು. ಈ ಎಲ್ಲ ಅಂಶಗಳು ಎಲ್ಲವನ್ನು ಬಲ್ಲ ಅನುಭವಿಯಿಂದ ನಿಮಗೆ ದೊರೆಯಬಲ್ಲವು. ಕರ್ನಾಟಕದಲ್ಲಿ ಇವುಗಳನ್ನೆಲ್ಲ ಅರಿತವರು ಯಾರು ಎಂಬುದು ಒಂದು ಪ್ರಶ್ನೆಯೇ ಅಲ್ಲ. ಯಾಕೆಂದರೆ ಇವುಗಳನ್ನೆಲ್ಲ ಬಲ್ಲ ದೊಡ್ಡಣ್ಣ ಪ್ರವಾಸೋದ್ಯಮ ನಿಗಮದ ಹೊರತು ಇನ್ಯಾರಾಗಿರಲು ಸಾಧ್ಯ.

ಸರೀ ಸ್ವಾಮಿ, ನಾನು ಅಂಥ ಪ್ರವಾಸವನ್ನು ಮಾಡಬೇಕು. ಎನ್ನುವವರಿಗೆ ಇದೊಂದಿದೆ ಸುಂದರ ಅವಕಾಶ. ಮತ್ತದೇ ಕೆಎಸ್‌ಟಿಡಿಸಿಯ ಜವಾಬ್ದಾರಿಯುತ ಪ್ರವಾಸ. ಇದರಿಂದಲೇ ಎಲ್ಲೆಡೆಯ ಇಂಥ ಸುಂದರ ಅನುಭವಗಳು ನಿಮಗಾಗಬಹುದು. ನೀವು ಹೋಗಲಿರುವ ಪ್ರವಾಸದಲ್ಲಿ ನೋಡಲಿರುವ ಪ್ರದೇಶದ ಸರ್ವವನ್ನೂ ಅರಿತ ಸರ್ವಜ್ಞನಂತೆ ಕೆಎಸ್‌ಟಿಡಿಸಿ ನಿಮ್ಮನ್ನು ಮುನ್ನಡೆಸುತ್ತದೆ. ಈ ಪ್ರವಾಸದಲ್ಲಿ ನೀವು ಕಂಡು, ಕೇಳಿ, ಅನುಭವಿಸಿ ಅರಿತು ಅಳವಡಿಸಿಕೊಳ್ಳಬಹುದಾದ ಹಲವು ವಿಷಯಗಳನ್ನು ಮರಳಿ ಬರುವಾಗ ಹೊತ್ತು ತರುತ್ತೀರಿ. ಅಷ್ಟರಮಟ್ಟಿಗೆ ಪ್ರವಾಸಿ ತಾಣವೊಂದರ ಪ್ರಸ್ತುತ ಮತ್ತು ಪುರಾತನ ಸ್ಥಿತಿಗತಿಗಳನ್ನು ಕೆಎಸ್‌ಟಿಡಿಸಿ ಬಲ್ಲದು. ಹಲವು ಬಾರಿ ಅಡ್ಡಾಡಿ ಇತಿಹಾಸ ಪುಟಗಳಲ್ಲಿ ಓದಿಯೂ ಬಲ್ಲ ನುರಿತ ಗೈಡ್‌ಗಳು ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಇಂಥ ಪ್ರವಾಸಕ್ಕೆ ಸಹಕರಿಸುವ ಹಲವು ಇತಿಹಾಸ, ವನವಾಸ, ಊಟೋಪಚಾರ, ಆಚರಣೆ, ಸಂಸ್ಕೃತಿ, ಉಡುಗೆ-ತೊಡುಗೆ, ಸ್ಥಳ ಪುರಾಣಗಳನ್ನು ಪರಿಚಯಿಸುತ್ತ ನಿಮ್ಮನ್ನು ಸುತ್ತಿಸುತ್ತಾರೆ. ಆಯಾಸ ಮರೆಸಲು ಮನಮೋಹಿಸುವ ತಾಣಗಳಲ್ಲಿ ಉಳಿದುಕೊಳ್ಳಲು ವಾಸ್ತವ್ಯಗಳನ್ನು ಕಲ್ಪಿಸಿ ಕೆಎಸ್‌ಟಿಡಿಸಿ ಈಗಾಗಲೇ ಜನಮನಗಳನ್ನು ಗೆದ್ದಿದೆ.
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಈ ಕಾರ್ಯಕ್ಕೆ ಈಗಾಗಲೇ ಹಲವು ವರ್ಷಗಳ ಇತಿಹಾಸವಿದೆ. ಹೀಗೆಂದ ಮೇಲೆ ಇನ್ನೂ ಹೇಳುವ ಅವಶ್ಯಕತೆಯಿಲ್ಲ. ರಾಜ್ಯದಲ್ಲಿನ ಎಲ್ಲಾ ಪ್ರವಾಸಿ ತಾಣಗಳನ್ನು ಬಲ್ಲ ಹಿರಿಯಣ್ಣ, ಅನುಭವಿ ನಿಮ್ಮ ಕೈಹಿಡಿದು ನಡೆಸುತ್ತಾನೆ ಎಂದಮೇಲೆ ಮತ್ತೆ ಕಾಯುವುದೇಕೆ? ನಮ್ಮ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ತೋರಿಸದ ತಾಣವಿಲ್ಲ. ಪ್ರವಾಸಿ ತಾಣಗಳ ನೈಜ ಸ್ಥಳೀಯತೆಯ ಸ್ವಾದವನ್ನು ನಿಮಗೆ ನೀಡುವ ತವಕದಲ್ಲಿದೆ.
ಹಾಗಾಗಿಯೇ, ವಿಶ್ವ ಪ್ರಸಿದ್ಧ ಮೈಸೂರಿನಿಂದ ಮತ್ತದೇ ವಿಶ್ವ ಪ್ರಸಿದ್ಧ ಮತ್ತು ಸೇರಿನಲ್ಲಿ ಬಂಗಾರ ತೂಗಿ ಅಳೆದು ಮಾರಿದ ಇತಿಹಾಸದ ಹಂಪಿಯನ್ನು ತೋರಿಸಿಕೊಂಡು ಮಂತ್ರಾಲಯದಲ್ಲಿ ರಾಯರ ಅನುಗ್ರಹವನ್ನು ದೊರಕಿಸಿ ಪಯಣಿಗರನ್ನು ಹೊತ್ತು ಸಾಗಲು, ನೂತನ ಪ್ರವಾಸ ಪ್ಯಾಕೇಜ್ ಹೊರ ತಂದಿದೆ. ನಾಲ್ಕು ದಿನಗಳ ಈ ಪ್ರವಾಸ ಪ್ಯಾಕೇಜ್ ಬೇರೆಲ್ಲೆಡೆಗಿಂತ ಕಡಿಮೆ ಖರ್ಚು ಅನುಭವ ಹೆಚ್ಚು ನೀಡುವ ಬಜೆಟ್ ಸ್ನೇಹಿ ಪ್ಯಾಕೇಜ್ ಆಗಿದೆ. ಧಾರ್ಮಿಕ, ಇತಿಹಾಸ, ಬೆಟ್ಟಗಳ ನಡುವೆ ಓಡಾಟ ಸಮೃದ್ಧ ಪ್ರವಾಸ ಇದು. ʻಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು ಮುಂದೆ ಹರುಷಕ್ಕಿದೆ ದಾರಿʼ ಡಿವಿಜಿಯ ಈ ಮಾತು ಮರೆಯದಿರಿ. ಮತ್ತೇಕೆ ತಡ ಸಿದ್ಧರಾಗಿ ಹೊರಡಿ, ಕೆಎಸ್‌ಟಿಡಿಸಿ ನಿಮಗಾಗಿ ಕಾಯುತ್ತಿದೆ.

ರಾಯರ ಮಂತ್ರಾಲಯ
ಮಂತ್ರಾಲಯ, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಒಂದು ಯಾತ್ರಾ ಗ್ರಾಮ. 1671ರಲ್ಲಿ ಶ್ರಾವಣ ಕೃಷ್ಣ ಪಕ್ಷದ ದ್ವಿತೀಯ ದಿನದಂದು ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಇಲ್ಲಿ ಬೃಂದಾವನ ವಾಸಿಗಳಾದರು. 700 ವರ್ಷಗಳ ಕಾಲ ಬೃಂದಾವನದಲ್ಲಿಯೇ ನೆಲೆಸಿ ಭಕ್ತರನ್ನು ಹರಸುತ್ತಿದ್ದಾರೆ ಎನ್ನಲಾಗಿದೆ. ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ದ್ವಾಪರ ಯುಗದಲ್ಲಿ ರಾಜ ಪ್ರಹ್ಲಾದರಾಗಿದ್ದರು. ಎಂದು ನಂಬಲಾಗಿದ್ದು, ʻಅಂದು ಭಕ್ತ ಪ್ರಹ್ಲಾದರು ಭಗವಾನ್ ರಾಮನಿಗಾಗಿ ಯಜ್ಞಗಳನ್ನು ಮಾಡಿದ ಪ್ರದೇಶವೇ ಈ ಮಂತ್ರಲಾಯʼ ಎಂಬುದಾಗಿ ಈ ತಾಣದ ಕುರಿತು ಗುರು ರಾಘವೇಂದ್ರ ಸ್ವಾಮಿಗಳೇ ಹೇಳಿದ್ದಾರೆ ಎನ್ನುವ ಉಲ್ಲೇಖಗಳಿವೆ. ತುಂಗಭದ್ರಾ ನದಿಯ ದಡದಲ್ಲಿ ಈ ಮಂತ್ರಾಲಯವಿದ್ದು, ಯುಗಯುಗಗಳಲ್ಲೂ ಅನೇಕ ಯುಗಪುರುಷರ ಓಡಾಡಿದ ಪುಣ್ಯ ನೆಲ ಇದಾಗಿದೆ.
ಪ್ಯಾಕೇಜ್
ದಿನ : 1
ಸಂಜೆ 6:00 ಗಂಟೆಗೆ ಹೊಟೇಲ್ ಮಯೂರ ಹೊಯ್ಸಳ, ಮೈಸೂರಿನಿಂದ ಹೊರಡುವುದು, ಮಾರ್ಗ ಮಧ್ಯೆ ರಾತ್ರಿ ಊಟ
ದಿನ : 2
ಬೆಳಗ್ಗೆ 5:30 ಗಂಟೆಗೆ ಮಂತ್ರಾಲಯಕ್ಕೆ ತಲುಪುತ್ತದೆ
ಬೆಳಗ್ಗೆ 5.30 – 9:30ರವರೆಗೆ ಫ್ರೆಶ್‌ಅಪ್ ಆಗಿ, ಶ್ರೀ ರಾಘವೇಂದ್ರ ಸ್ವಾಮಿ ದರ್ಶನ (ಬೃಂದಾವನ)
ಬೆಳಗ್ಗೆ 11:00 ಗಂಟೆಗೆ ಮಂತ್ರಾಲಯದಿಂದ ಹೊರಡುವುದು
ಮಧ್ಯಾಹ್ನ 1:30 - 2:30 ರವರೆಗೆ ಮಾರ್ಗಮಧ್ಯೆ ಊಟದ ವಿರಾಮ.
ಸಂಜೆ 5:00 ಗಂಟೆಗೆ ಹೋಟೆಲ್ ಮಯೂರ ವಿಜಯನಗರ ಟಿಬಿ ಡ್ಯಾಮ್‌ಗೆ ಆಗಮಿಸಿ. ರಾತ್ರಿ ನಿಲುಗಡೆಗಾಗಿ
ದಿನ 3
ಬೆಳಗ್ಗೆ 8:00 – ಮಧ್ಯಾಹ್ನ 1:30ರವರೆಗೆ ಹಂಪಿ ವೀಕ್ಷಣೆ (ವಿರೂಪಾಕ್ಷ ದೇವಸ್ಥಾನ, ಕಡಲೆ ಕಾಳು ಗಣೇಶ, ಸಾಸಿವೆ ಕಾಳು ಗಣೇಶ, ಕೃಷ್ಣ ದೇವಸ್ಥಾನ, ಲಕ್ಷ್ಮಿ ನರಸಿಂಹ, ಬಡವಿ ಲಿಂಗ, ಸಿಸ್ಟರ್ ಸ್ಟೋನ್ಸ್, ಭೂಗತ ದೇವಸ್ಥಾನ, ಟಂಕಸಾಲೆ, ಕಮಲ್ ಮಹಲ್, ಆನೆ ಬಿಡಾರ, ಹಜಾರಾ ರಾಮ ದೇವಸ್ಥಾನ, ಅರಮನೆ ಮೈದಾನ, ಮಹಾನವಮಿ ದಿಬ್ಬ, ರಾಣಿ ಸ್ನಾನಗೃಹ)
ಮಧ್ಯಾಹ್ನ 1:30 – 2:30ರವರೆಗೆ ಹೊಟೇಲ್ ಮಯೂರ ಭುವನೇಶ್ವರಿ ಹಂಪಿಯಲ್ಲಿ ಊಟದ ವಿರಾಮ
ಮಧ್ಯಾಹ್ನ 2:30 – 4:00 ಪುರಾತತ್ವ ವಸ್ತು ಸಂಗ್ರಹಾಲಯಕ್ಕೆ ಭೇಟಿ
ಸಂಜೆ 4:30 – 6:00ರವರೆಗೆ ವಿಜಯ ವಿಠಲ ದೇವಸ್ಥಾನ (ಕಲ್ಲಿನ ರಥ) ಭೇಟಿ, ಪುರಂದರ ಮಂಟಪ, ಹಳೆ ಸೇತುವೆ ವೀಕ್ಷಣೆ
ರಾತ್ರಿ 8:15-9:30ರವರೆಗೆ ಹೊಟೇಲ್ ಮಯೂರ ವಿಜಯನಗರ, ಟಿ.ಬಿ.ಡ್ಯಾಮ್‌ನಲ್ಲಿ ರಾತ್ರಿ ಊಟ
ರಾತ್ರಿ 9:30ಕ್ಕೆ ಮೈಸೂರಿನ ಕಡೆಗೆ ಹೊರಡುವುದು
ದಿನ 4
ಬೆಳಿಗ್ಗೆ 6:00 ಗಂಟೆಗೆ ಮೈಸೂರಿನಲ್ಲಿ ಪ್ರವಾಸ ಮುಕ್ತಾಯಗೊಳ್ಳುತ್ತದೆ.

ಪ್ಯಾಕೇಜ್
ಕೆಎಸ್‌ಟಿಡಿಸಿ ಬುಕ್ ಮಾಡುವವರಿಗೆ ವಿಶೇಷ ಅವಕಾಶಗಳಿವೆ.
ಡಿಲಕ್ಸ್ ಎಸಿ ಬಸ್‌ನಲ್ಲಿ ಆರಾಮದಾಯಕ ಮತ್ತು ಸುಖಕರ ಪ್ರಯಾಣ.
ಆಯ್ಕೆ ಮಾಡಿಕೊಂಡ ಪ್ಯಾಕೇಜ್ ಅನ್ವಯ ಪ್ರವಾಸ
ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯ
ಕೆಎಸ್‌ಟಿಡಿಸಿ ನಿಮ್ಮ ಆಯ್ಕೆಯಾಗಲಿ
ಕೆಎಸ್‌ಟಿಡಿಸಿಯ ಪ್ಯಾಕೇಜ್ ಬಜೆಟ್ ಸ್ನೇಹಿಯಾಗಿದೆ.
ಪ್ರವಾಸಿಗರಿಗೆ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜಿತ ಪ್ರವಾಸದ ಭರವಸೆಯನ್ನು ನೀಡುತ್ತದೆ.
ಆರಾಮದಾಯಕ ಪ್ರಯಾಣ: ಆಧುನಿಕ ಬಸ್‌ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.
ವಿಶೇಷ ಗೈಡ್‌ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್‌ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.
ಸಮಗ್ರ ಯೋಜನೆ: ಪ್ಯಾಕೇಜ್‌ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನತಣಿಯುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್ ಕೂಡ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.
ಕೈಗೆಟುಕುವ ಬೆಲೆ: ಎಲ್ಲರಿಗೂ ಒಗ್ಗುವ, ಮಧ್ಯಮ ವರ್ಗದವರ ಕನಸು ನನಸು ಮಾಡುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ಮತ್ತೇನು ಯೋಚನೆ ಮಾಡ್ತಿದ್ದೀರಿ? ಕೆಎಸ್‌ಟಿಡಿಸಿ ನಿಮ್ಮ ಪ್ರವಾಸ ಸಂಗಾತಿ. ಈಗಲೇ ಬುಕ್ ಮಾಡಿ. ಹೊರಡಿ. ಜಗತ್ತು ಕೈ ಬೀಸಿ ಕರೆಯುತ್ತಿದೆ.
ಹೊಟೇಲ್ ಮಯೂರ ವಿಜಯನಗರದಲ್ಲಿ ಆತಿಥ್ಯ
ಆತಿಥ್ಯಕ್ಕೆ ಮಯೂರ ಕನ್ನಡದ ಮಯೂರನಷ್ಟೇ ಹೆಸರುವಾಸಿಯಾಗಿದೆ. ಆತಿಥ್ಯದ ಆದಿತ್ಯ ಎನ್ನುವಂತೆ ದೇಶ-ವಿದೇಶಗಳಿಂದ ಕರ್ನಾಟಕ ಪ್ರವಾಸಕ್ಕೆ ಬರುವ ಜನರಲ್ಲೂ ಹೊಟೇಲ್ ಮಯೂರ ಗುರುತಿಸಿಕೊಂಡಿದೆ. ಕಾರಣ ಅಲ್ಲಿ ಇರಬಹುದಾದ ಶುಚಿತ್ವ ಮತ್ತು ರುಚಿಯಾದ ಊಟ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಊಟೋಪಚಾರದ ಜತೆಗೆ ಆಟೋಪಾಟ ಚಟುವಟಿಕೆಗಳು, ಮನರಂಜಿಸುವ ಸುತ್ತಮುತ್ತಲಿನ ಸುಂದರ ವಾತಾವರಣ ನಿಮಗೆ ಅಲ್ಲಿ ಮನಸೆಳೆಯುತ್ತವೆ. ರಾಜ್ಯದ ಮೂಲೆ ಮೂಲೆಯಲ್ಲೂ ಹೊಟೇಲ್ ಮಯೂರ ಮನೆಮಾಡಿದೆ. ಹತ್ತಾರು ವರ್ಷಗಳಿಂದ ಹೊಟೇಲ್ ಇಂಡಸ್ಟ್ರಿಯ ರಾಜನಂತೆ ಕಾರ್ಯ ನಿರ್ವಹಿಸುತ್ತಿದ್ದು, ಅಷ್ಟು ಜಾಗಗಳ, ಅಷ್ಟು ವರ್ಷಗಳ ಅನುಭವದ ಬುತ್ತಿಯೊಂದಿಗೆ ಮಯೂರ ತನ್ನಲ್ಲಿಗೆ ಬರುವ ಪ್ರವಾಸಿಯನ್ನು ಉಪಚರಿಸುತ್ತದೆ. ಹೀಗಾಗಿಯೇ ಇಷ್ಟು ಆತಿಥ್ಯ ಕ್ಷೇತ್ರದಲ್ಲಿ ಎಷ್ಟೋ ಸಂಸ್ಥೆಗಳು ಅವಿರತ ಶ್ರಮಿಸುತ್ತಿದ್ದರೂ ಅವುಗಳಿಗಿಂತ ಉತ್ಕೃಷ್ಟತೆಯನ್ನು ಖಾತರಿಪಡಿಸುತ್ತದೆ. ಇಲ್ಲಿ ವಾಸ್ತವ್ಯಕ್ಕಂತೂ ಹೇಳಿ ಮಾಡಿಸಿದ ವಾತಾವರಣ ಇದ್ದೇ ಇದೆ. ಪ್ರತಿ ಪ್ರವಾಸಿ ತಾಣದಲ್ಲೂ ತಾನಾಗಿ ನಿಂತಿರುವ ಹೊಟೇಲ್ ಮಯೂರ ಪ್ರತಿದಿನ ಸಾವಿರಾರು ಪ್ರವಾಸಿಗರ ಆಸೆ ಮತ್ತು ಬಯಕೆಗಳನ್ನು ಈಡೇರಿಸಿ ಅವರನ್ನು ಸಂತೃಪ್ತಿಗೊಳಿಸುತ್ತಿದೆ. ಆತಿಥ್ಯವೆಂದರೆ ಮಯೂರ ಎನ್ನುವಷ್ಟು ಪ್ರಸಿದ್ಧಿಯನ್ನು ಅದು ಈಗಾಗಲೇ ಗಳಿಸಿದೆ. ಅಲ್ಲಿನ ಸಿಬ್ಬಂದಿ, ಹಿತವಾದ ವಾತಾವರಣ, ವಿಶೇಷ ಸೌಲಭ್ಯ ಮತ್ತು ಸೌಕರ್ಯಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಕೆಎಸ್‌ಟಿಡಿಸಿ ಪ್ಯಾಕೇಜ್‌ನಡಿ ಪ್ರವಾಸಕ್ಕೆ ಹೊರಡುವ ಎಲ್ಲ ಪ್ರವಾಸಿಗರಿಗೂ ಹೊಟೇಲ್ ಮಯೂರ ತನ್ನೆಲ್ಲಾ ಅನುಭವಗಳಿಂದಲೇ ಉಪಚರಿಸುತ್ತದೆ. ಪ್ರತಿ ಜಿಲ್ಲೆಯಲ್ಲೂ ಮಯೂರ ಹೊಟೇಲ್‌ನ ಶಾಖೆಗಳಿವೆ. ಪ್ರವಾಸಿಗನಿಗೆ ಮನೆಯ ವಾತಾವರಣವನ್ನು ಮಯೂರ ಹೊಟೇಲ್ ನಿರ್ಮಿಸಿಕೊಡುತ್ತದೆ. ಹೊಟೇಲ್‌ನ ಪ್ರತಿ ಸಿಬ್ಬಂದಿಯೂ ಆಪ್ತವಾಗಿ ಮಾತಿಗಿಳಿಯುತ್ತಾ ವಾಸ್ತವ್ಯ ಹೂಟುವ ಅಷ್ಟು ಘಳಿಗೆಯೂ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇವುಗಳ ಜತೆಗೆ ಯುನೆಸ್ಕೋ ಪಾರಂಪರಿಕ ಪಟ್ಟಿಯ ತಾಣದ ಸಾಂಗತ್ಯ ಸಿಕ್ಕರೆ ಹೇಗಿರುತ್ತದೆ? ಇದರ ಉಪಸ್ಥಿತಿಯನ್ನು ನೀಡುವ ಮಯೂರ ಹೊಟೇಲ್‌ನ ಶಾಖೆಗಳಲ್ಲಿ ಹಂಪಿಯ ಬಳಿ ಇರುವ ಹೊಟೇಲ್ ಮಯೂರ ವಿಜಯನಗರವೂ ಒಂದು.
ನೀವು ಹಂಪಿ ಪ್ರವಾಸಕ್ಕೆ ಹೊರಟರೆ ತಪ್ಪದೇ ಮಯೂರ ವಿಜಯನಗರ ಹಂಪಿಯಲ್ಲಿ ಉಳಿದುಕೊಳ್ಳಿ. ಅತ್ತಕಡೆ ನೀವು ನಿಮ್ಮ ಕುಟುಂಬ ಅಥವಾ ಗೆಳೆಯರೊಂದಿಗೆ ಹೋಗಿದ್ದರೂ ಇಲ್ಲಿ ವಾಸ್ತವ್ಯ ಹೂಡಲೇಬೇಕು. ಒಂಟಿಯಾಗಿ ಹೋಗಿದ್ದರೆ ಮನೆಯಂತೆ, ಗುಂಪಿನಲ್ಲಿ ಹೋಗಿದ್ದರೆ ಹಬ್ಬದಂತೆ ಹೊಟೇಲ್ ನಿಮಗಲ್ಲಿ ಭಾಸವಾಗುತ್ತದೆ. ಹೊಟೇಲ್ ಮಯೂರ ವಿಜಯನಗರವು ತುಂಗಭದ್ರಾ ಡ್ಯಾಮ್‌ನ ಪಕ್ಕದಲ್ಲಿದ್ದು, ಪ್ರವಾಸಿಗರಿಗೆ ಪ್ರಶಾಂತವಾದ ಹಸಿರು ವಾತಾವರಣ ಮತ್ತು ನೀಲತೀರದ ಅನುಭೂತಿ ದೊರೆಯುತ್ತದೆ. ಈ ಹೊಟೇಲ್‌ನಲ್ಲಿ ಒಟ್ಟು 21 ರೂಮ್‌ಗಳಿದ್ದು, 17 ಎಸಿ ಡಬಲ್ ರೂಮ್‌ಗಳು, 2 ಎಸಿ ಡಿಲಕ್ಸ್ 4 ಬೆಡ್ ರೂಮ್‌ಗಳು ಮತ್ತು 2 ಎಸಿ ಸಿಂಗಲ್ ರೂಮ್‌ಗಳಿವೆ. ರೆಸ್ಟೋರೆಂಟ್ ಮತ್ತು ಬಿಯರ್ ಪಾರ್ಲರ್ ಸಹ ಇವೆ. ಹಂಪಿಯ ಗತ ವೈಭವಕ್ಕೆ ಸಾಕ್ಷಿಯಾಗುತ್ತಾ, ಇಂಥ ಅದ್ಭುತ ಮಯೂರ ಹೊಟೇಲ್‌ಗಳಲ್ಲಿ ವಾಸ್ತವ್ಯ ಹೂಡುವುದರಲ್ಲೂ ಒಂದು ಅವರ್ಣನೀಯ ಅನುಭೂತಿ ಅಡಗಿದೆ. ಅತ್ತಕಡೆ ಹೋದಾಗ ಇದನ್ನು ಟ್ರೈ ಮಾಡಿ.

ಸಮೀಪವಿರುವ ಪ್ರೇಕ್ಷಣೀಯ ಸ್ಥಳಗಳು
ವಿಜಯ ವಿಠಲ ದೇವಸ್ಥಾನ
ತುಂಗಭದ್ರ ಗಾರ್ಡನ್ಸ್ & ಡ್ಯಾಮ್
ಹಜಾರ ರಾಮ ದೇವಾಲಯ
ಹಂಪಿ
ಹೇಮಕೂಟ ಬೆಟ್ಟ
ಸಂಪರ್ಕ:
Yogesh. MK
Manager (Tours)
Mob No: +91 960 6987 822 | Email ID: tour.manager@kstdc.co
Karnataka State Tourism Development Corporation Ltd. (KSTDC)
Corporate Office: 5th Floor | Indhana Bhavan|Race Cource Road | Opposite to Renaissance Hotel,
Bangalore- 560009 | Karnataka | India
Office: 080-43344334 | Fax: 080-43344376
Email: feedback@kstdc.co | info@kstdc.co | website: www.kstdc.co | www.goldenchariot.org