ನಿಮಗೆ ಹೊಸದಾಗಿ ಪ್ರವಾಸದ ಬಗ್ಗೆ ಹೇಳುವ ಅಗತ್ಯವಿಲ್ಲ. ಪ್ರವಾಸವೆಂದರೆ ಪ್ರಯಾಸವನ್ನು ಕಳೆಯುವುದು ಎಂದು ನಿಮಗೂ ಗೊತ್ತಿದೆ. ಬದುಕಿನ ಎಲ್ಲ ಜಂಜಾಟಗಳನ್ನು ಪಕ್ಕಕ್ಕೆ ಒಗೆದು ಆರಾಮವಾಗಿ ಜೀವಿಸುವ, ನಗರದ ಗದ್ದಲಗಳನ್ನು ನೂಕಿ ನಗಿಸುವ, ಪ್ರತಿದಿನದ ಸಂಕಟಗಳನ್ನು ಮರೆಸುವ ಜೀವನಪ್ರೀತಿ ಮತ್ತು ಜೀವನೋತ್ಸಾಹ ಅರಳುವಂತೆ ಮಾಡುವ ಒಂದು ಸಾಧನವೆಂದರೆ ಅದು ಪ್ರವಾಸ ಎಂಬುದನ್ನು ನೀವು ಮರೆತಿಲ್ಲ ಅಲ್ಲವೇ? ಇಷ್ಟಬಂದಂತೆ ಓಡಾಡುವುದು ಪ್ರವಾಸವಲ್ಲ. ನಮ್ಮನ್ನು ಮಾನಸಿಕ ಮತ್ತು ಬೌದ್ಧಿಕ ಶ್ರೀಮಂತರನ್ನಾಗಿಸುವುದು ಪ್ರವಾಸ. ನಾವು ಏನನ್ನು ನೋಡುತ್ತೇವೆ, ಏನನ್ನು ಅಲ್ಲಿ ತಿಳಿಯುತ್ತೇವೆ ಮತ್ತು ಇನ್ನೇನನ್ನು ಮಾಡುತ್ತೇವೆ ಎಂಬುದು ಬಹಳ ಮುಖ್ಯ. ಬಂದ ಪುಟ್ಟ ಹೋದ ಪುಟ್ಟ ಎನ್ನುವಂತೆ ನೀವು ಪ್ರವಾಸ ಮಾಡಿದರೆ ಅದು ನಿಜವಾದ ಪ್ರವಾಸವಲ್ಲ. ಅದಕ್ಕೆ ಸ್ಥಳೀಯತೆಯ ಸ್ವಾದ ಬೇಕೇಬೇಕು. ನೋಟ ಅದೂ ಕೇವಲ ಕಲ್ಲು, ಮಣ್ಣು, ಪ್ರಾಣಿಗಳನ್ನು ನೋಡುವುದಲ್ಲ. ಅಲ್ಲಿನ ಇತಿಹಾಸ, ವನವಾಸ ಅಷ್ಟೇಕೆ ಜನಮನಗಳನ್ನೂ ನೋಡಬೇಕು.

ಇದನ್ನೂ ಓದಿ: ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ…

ನಮ್ಮ ನಾಡೇ ನಮಗೆ ಈ ಎಲ್ಲ ಅವಕಾಶಗಳನ್ನು ನೀಡುತ್ತದೆ. ಇಲ್ಲಿ ವೈವಿಧ್ಯ ಜನಾಂಗಗಳಿವೆ, ವೈವಿಧ್ಯ ಭೌಗೋಳಿಕ ವಾತಾವರಣಗಳಿವೆ. ಕರ್ನಾಟಕದ ಆಚೆಗೂ ನಮ್ಮನ್ನು ಚೈತನ್ಯ ರೂಪಿಯಾಗಿಸಬಲ್ಲ ತಾಣಗಳಿವೆ. ಓಕೆ ಸರ್,‌ ಅಂಥ ತಾಣಗಳಿಗೆ ನಮ್ಮನ್ನು ಕೈಗೆಟುಕುವ ಹಣದಲ್ಲಿ ಕರೆದೊಯ್ಯುವವರು ಯಾರು? ಎಂದು ಕೇಳಿದ್ರಾ? ನಮ್ಮಂಥವರಿಗಾಗಿಯೇ ಕೆಎಸ್‌ಟಿಡಿಸಿ ಇದೆ. ನಾಡು, ಹೊರನಾಡು ಎಲ್ಲ ಕಡೆಗೂ ನಮ್ಮನ್ನು ಕರೆದೊಯ್ಯುತ್ತದೆ. ಸರ್ವವನ್ನೂ ಅರಿತ ಸರ್ವಜ್ಞನಂತೆ ಕೆಎಸ್‌ಟಿಡಿಸಿ ನಿಮ್ಮನ್ನು ಮುನ್ನಡೆಸುತ್ತದೆ. ಪ್ರವಾಸದಲ್ಲಿ ನೀವು ಕಂಡು, ಕೇಳಿ, ಅನುಭವಿಸಿ ಅರಿತು ಅಳವಡಿಸಿಕೊಳ್ಳಬಹುದಾದ ಹಲವು ವಿಷಯಗಳನ್ನು ಮರಳಿ ಬರುವಾಗ ಹೊತ್ತು ತರುತ್ತೀರಿ. ಅಷ್ಟರಮಟ್ಟಿಗೆ ಪ್ರವಾಸಿ ತಾಣವೊಂದರ ಪ್ರಸ್ತುತ ಮತ್ತು ಪುರಾತನ ಸ್ಥಿತಿಗತಿಗಳನ್ನು ಕೆಎಸ್‌ಟಿಡಿಸಿ ಬಲ್ಲದು. ನುರಿತ ಟೂರ್ ಗೈಡ್‌ಗಳು ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಇಂಥ ಪ್ರವಾಸಕ್ಕೆ ಸಹಕರಿಸುವ ಹಲವು ಇತಿಹಾಸ, ವನವಾಸ, ಊಟೋಪಚಾರ, ಆಚರಣೆ, ಸಂಸ್ಕೃತಿ, ಉಡುಗೆ-ತೊಡುಗೆ, ಸ್ಥಳ ಪುರಾಣಗಳನ್ನು ಪರಿಚಯಿಸುತ್ತಾ ನಿಮ್ಮನ್ನು ಸುತ್ತಿಸುತ್ತಾರೆ. ಆಯಾಸ ಮರೆಸಲು ಮನಮೋಹಿಸುವ ತಾಣಗಳಲ್ಲಿ ಉಳಿದುಕೊಳ್ಳಲು ವಾಸ್ತವ್ಯಗಳನ್ನು ಕಲ್ಪಿಸಿ ಕೆಎಸ್‌ಟಿಡಿಸಿ ಈಗಾಗಲೇ ಜನಮನಗಳನ್ನು ಗೆದ್ದಿದೆ.

Untitled design (29)

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಈ ಕಾರ್ಯಕ್ಕೆ ಈಗಾಗಲೇ ಹಲವು ವರ್ಷಗಳ ಇತಿಹಾಸವಿದೆ. ಮುಖ್ಯ ವಿಷಯಕ್ಕೆ ಬರ್ತೀವಿ ಕೇಳಿ. ಕೆಎಸ್‌ಟಿಡಿಸಿ ಇದೀಗ ಒಂದು ವಿಶೇಷ ಟೂರ್‌ ಪ್ಯಾಕೇಜ್‌ ಘೋಷಿಸಿದೆ. ಎರಡು ದಿನದ ಧಾರ್ಮಿಕ ಪ್ರವಾಸವನ್ನು ಪರಿಚಯಿಸಿದೆ. ಅದು ರಿಲ್ಯಾಕ್ಸ್‌ ಟ್ರಿಪ್‌ ಕೂಡ ಹೌದು. ಮಲೆಮಹದೇಶ್ವರ ಬೆಟ್ಟ ಮತ್ತು ಬಿಆರ್‌ ಹಿಲ್ಸ್‌ ಕಡೆಗೆ ಪ್ರವಾಸಿಗರನ್ನು ಕೆಎಸ್‌ಟಿಡಿಸಿ ಕರೆದೊಯ್ಯುತ್ತಿದೆ. ನಿಮಗೂ ಗೊತ್ತಿರುವಂತೆ ಬಿ ಆರ್ ಹಿಲ್ಸ್ (B.R. Hills) ಅಂದರೆ ಎಲ್ಲರ ಹಾಟ್‌ ಫೇವರಿಟ್‌ ಸ್ಪಾಟ್‌. ಇದು ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿರುವ ಸುಂದರ ಮತ್ತು ಪ್ರಮುಖ ಬೆಟ್ಟ ಶ್ರೇಣಿ. ಪಶ್ಚಿಮ ಘಟ್ಟಗಳು ಮತ್ತು ಪೂರ್ವ ಘಟ್ಟಗಳು ಸಂಧಿಸುವ ವಿಶಿಷ್ಟ ತಾಣವಾದು. ಇಲ್ಲಿ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ ಮತ್ತು ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶವು ಸೆಂಟರ್‌ ಆಫ್‌ ದಿ ಅಟ್ರ್ಯಾಕ್ಷನ್. ಟ್ರೆಕ್ಕಿಂಗ್‌ ಪ್ರಿಯರಿಗೆ ಹೇಳಿ ಮಾಡಿಸಿದ ತಾಣವಿದು. ಇನ್ನು ಬೈಕ್‌ ರೈಡರ್ಸ್‌ಗಂತೂ ಹುಚ್ಚು ಹಿಡಿಸುವ ತಾಣ. ದಟ್ಟ ಕಾಡಿನ ಮಧ್ಯೆ ಬೈಕ್‌ ಮತ್ತು ಕಾರು ಡ್ರೈವ್‌ ಮಾಡಿಕೊಂಡು ಹೋಗುವುದೇ ಒಂದು ರೀತಿಯ ಕ್ರೇಜ್.‌ ಇನ್ನು ಮಲೆಮಹದೇಶ್ವರ ಬೆಟ್ಟ ಕೂಡ ಧಾರ್ಮಿಕ ಪ್ರವಾಸಿಗರ ಇಷ್ಟದ ಜಾಗ. ಚಾರಣಕ್ಕೂ ಎಂಎಂ ಹಿಲ್ಸ್‌ ದಿ ಬೆಸ್ಟ್‌. ದಕ್ಷಿಣ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಹೆಸರಾಂತ ಯಾತ್ರಾಸ್ಥಳವಿದು. 77 ಬೆಟ್ಟಗಳ ಸಾಲಿನಲ್ಲಿರುವ ದಟ್ಟ ಕಾಡಿನ ಮಧ್ಯೆ ಇರುವ ಈ ಪವಿತ್ರ ದೇವಸ್ಥಾನದಲ್ಲಿ ಶಿವನ ಅವತಾರವೆಂದು ನಂಬಲಾದ ಮಹದೇಶ್ವರ ನೆಲೆಸಿದ್ದಾನೆ. ಅಲ್ಲಿ ಸಫಾರಿಯೂ ಇದೆ. ತೀರಾ ವಿಶೇಷವೆಂದರೆ ಅಲ್ಲಿರುವ ನಾಗಮಲೆ ಬೆಟ್ಟ. ಎಪ್ಪತ್ತೇಳು ಬೆಟ್ಟಗಳಲ್ಲಿ ನಾಗಮಲೆ ಪ್ರಸಿದ್ಧ. ಟ್ರೆಕ್ಕಿಂಗ್‌ ಹೋಗುವವರು ಅತ್ತ ಕಡೆ ಹೋಗಿ ಚಿಲ್‌ ಆಗಿ ಬರಬಹುದು. ಎಂಎಂ ಹಿಲ್ಸ್‌ ಬೆಂಗಳೂರಿನಿಂದ 210 ಕಿ.ಮೀ ಮತ್ತು ಮೈಸೂರಿನಿಂದ 150 ಕಿಮೀ ದೂರದಲ್ಲಿದೆ. ಕೆಎಸ್‌ಟಿಡಿಸಿ ಇಂಥ ಅಪರೂಪದ ತಾಣಗಳಿಗೆ ಕರೆದೊಯ್ಯಲು ಸಜ್ಜಾಗಿದೆ. ಸಲಾಂ ಕೆಎಸ್‌ಟಿಡಿಸಿ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೆಎಸ್‌ಟಿಡಿಸಿ ಕ್ರಾಂತಿ ಮಾಡಲಿ.

ಪ್ಯಾಕೇಜ್

ದಿನ-1

ಬೆಳಗ್ಗೆ 6.30 ಗಂಟೆ: ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್, ಬಿಎಂಟಿಸಿ ಬಸ್ ನಿಲ್ದಾಣ ಯಶವಂತಪುರದಿಂದ ಹೊರಡಲಾಗುತ್ತದೆ.

ಬೆಳಗ್ಗೆ 8.00 ಗಂಟೆ : ದಾರಿ ಮಧ್ಯೆ ಉಪಾಹಾರ.

ಬೆಳಗ್ಗೆ 11.30 ಗಂಟೆ : ಚಹಾ ಟೀ ಬ್ರೇಕ್

ಮಧ್ಯಾಹ್ನ 1.00- 3.30 ಗಂಟೆ : ಮಲೈ ಮಹದೇಶ್ವರ ದರ್ಶನ ಮತ್ತು ದೇವಸ್ಥಾನದಲ್ಲಿ ಊಟ.

ಸಂಜೆ 3.30-6.30 ಗಂಟೆ : ಬಿಆರ್ ಹಿಲ್ಸ್‌ ಕಡೆಗೆ, ಕೆಎಸ್‌ಟಿಡಿಸಿ ಮಯೂರ ಹೊಟೇಲ್‌ನಲ್ಲಿ ವಾಸ್ತವ್ಯ.

Untitled design (30)

ದಿನ-2

ಬೆಳಗ್ಗೆ 7.30 ಗಂಟೆ : ಉಪಾಹಾರ

ಬೆಳಗ್ಗೆ 7.30-10.00 ಗಂಟೆ: ಬಿಳಿಗಿರಿ ರಂಗನಾಥನ ದರ್ಶನ

ಮಧ್ಯಾಹ್ನ 1.30ಗಂಟೆ : ಕೆಎಸ್‌ಟಿಡಿಸಿ ಮಯೂರ ಹೊಟೇಲ್‌ನಲ್ಲಿ ಊಟ

ಮಧ್ಯಾಹ್ನ 2.00- ಸಂಜೆ 5.30 ಗಂಟೆ: ಗಗನ ಚುಕ್ಕಿ, ಬರಚುಕ್ಕಿ ಜಲಪಾತ, ಮಧ್ಯರಂಗ ದೇವಸ್ಥಾನಕ್ಕೆ ಭೇಟಿ.

ರಾತ್ರಿ 9.30 ಗಂಟೆ : ಬೆಂಗಳೂರಿಗೆ ಆಗಮನ

ಇಲ್ಲಿ ಗಮನಿಸಿ

ಕೆಎಸ್‌ಟಿಡಿಸಿ ಬುಕ್ ಮಾಡುವವರಿಗೆ ವಿಶೇಷ ಅವಕಾಶಗಳಿವೆ.

ಡಿಲಕ್ಸ್ ಎಸಿ ಬಸ್‌ನಲ್ಲಿ ಆರಾಮದಾಯಕ ಮತ್ತು ಸುಖಕರ ಪ್ರಯಾಣ.

ಆಯ್ಕೆ ಮಾಡಿಕೊಂಡ ಪ್ಯಾಕೇಜ್​ ಅನ್ವಯ ಪ್ರವಾಸ

ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯ

ಕೆಎಸ್‌ಟಿಡಿಸಿ ನಿಮ್ಮ ಆಯ್ಕೆಯಾಗಲಿ

ಕೆಎಸ್‌ಟಿಡಿಸಿಯ ಪ್ಯಾಕೇಜ್ ಬಜೆಟ್ ಸ್ನೇಹಿಯಾಗಿದೆ.

ಪ್ರವಾಸಿಗರಿಗೆ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜಿತ ಪ್ರವಾಸದ ಭರವಸೆಯನ್ನು ನೀಡುತ್ತದೆ.

ಆರಾಮದಾಯಕ ಪ್ರಯಾಣ: ಆಧುನಿಕ ಬಸ್‌ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.

ವಿಶೇಷ ಗೈಡ್‌ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್​ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.

ಸಮಗ್ರ ಯೋಜನೆ: ಪ್ಯಾಕೇಜ್‌ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನತಣಿಯುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್ ಕೂಡ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.

ಕೈಗೆಟುಕುವ ಬೆಲೆ: ಎಲ್ಲರಿಗೂ ಒಗ್ಗುವ, ಮಧ್ಯಮ ವರ್ಗದವರ ಕನಸು ನನಸು ಮಾಡುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ಮತ್ತೇನು ಯೋಚನೆ ಮಾಡ್ತಿದ್ದೀರಿ? ಕೆಎಸ್‌ಟಿಡಿಸಿ ನಿಮ್ಮ ಪ್ರವಾಸ ಸಂಗಾತಿ. ಈಗಲೇ ಬುಕ್ ಮಾಡಿ. ಹೊರಡಿ. ಜಗತ್ತು ಕೈ ಬೀಸಿ ಕರೆಯುತ್ತಿದೆ.

Untitled design (28)

ಬಿಳಿಗಿರಿಯಲ್ಲಿ ಮಯೂರ ಆತಿಥ್ಯ

ಆತಿಥ್ಯಕ್ಕೆ ಮಯೂರ ಹೆಸರುವಾಸಿಯಾಗಿದೆ.​ ಆತಿಥ್ಯ ಮತ್ತು ವಾಸ್ತವ್ಯ ಎಂದರೆ ಮಯೂರ ಎಂಬಷ್ಟರಮಟ್ಟಿಗೆ ಅದು ಬ್ರಾಂಡ್‌ ಶಆಗಿದೆ. ದೇಶ-ವಿದೇಶದಿಂದ ಬರುವ ಪ್ರವಾಸಿಗರು ಮಯೂರವನ್ನು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ. ಶುಚಿ ಮತ್ತು ರುಚಿಯಾದ ಊಟದ ಜತೆಗೆ ಗುಣಮಟ್ಟದ ಆತಿಥ್ಯ ನೀಡುತ್ತಾ ಪ್ರವಾಸಿಗನ ಎಲ್ಲ ಬೇಕು ಬೇಡಗಳನ್ನು ಮಯೂರ ಈಡೇರಿಸುತ್ತಾ ಬಂದಿದೆ. ಊಟೋಪಚಾರದ ಜತೆಗೆ ಆಟೋಪಾಟ ಚಟುವಟಿಕೆಗಳು, ಮನೋರಂಜಿಸುವ ಸುತ್ತಮುತ್ತಲಿನ ಹಿತವಾದ ವಾತಾವರಣ ಪ್ರತಿ ಪ್ರವಾಸಿಗನ ಮನಸೆಳೆಯುತ್ತವೆ.

ರಾಜ್ಯದ ಮೂಲೆ ಮೂಲೆಯಲ್ಲೂ ಹೊಟೇಲ್‌ ಮಯೂರ ಮನೆ ಮಾತಾಗಿದೆ. ಮಯೂರವೆಂದರೆ ಅದು ಬಜೆಟ್‌ ಫ್ರೆಂಡ್ಲಿ ಹೊಟೇಲ್‌. ಕೆಎಸ್‌ಟಿಡಿಸಿ ಮೂಲಕ ಪ್ರವಾಸ ಕೈಗೊಳ್ಳುವ ಪ್ರತಿ ಪ್ರವಾಸಿಗನೂ ಮಯೂರ ಆತಿಥ್ಯವನ್ನು ಸ್ವೀಕರಿಸಬಹುದು. ಹತ್ತಾರು ವರ್ಷಗಳಿಂದ ಮಯೂರ ಉದ್ಯಮ ಕ್ಷೇತ್ರದ ಬಿಗ್‌ಬಾಸ್‌ನಂತೆ ಕಾರ್ಯ ನಿರ್ವಹಿಸುತ್ತಿದ್ದು, ಸುದೀರ್ಘ ವರ್ಷಗಳ ಅನುಭವದ ಬುತ್ತಿಯೊಂದಿಗೆ ಮಯೂರ ತನ್ನಲ್ಲಿಗೆ ಬರುವ ಪ್ರವಾಸಿಯನ್ನು ಉಪಚರಿಸುತ್ತದೆ. ಹೀಗಾಗಿಯೇ ಆತಿಥ್ಯ ಕ್ಷೇತ್ರದಲ್ಲಿ ಎಷ್ಟೋ ಹೊಟೇಲ್‌ ಮತ್ತು ಉದ್ಯಮ ಸಂಸ್ಥೆಗಳು ಅವಿರತ ಶ್ರಮಿಸುತ್ತಿದ್ದರೂ ಅವುಗಳಿಗಿಂತ ಕೊಂಚ ಭಿನ್ನ ಮತ್ತು ವಿಭಿನ್ನವಾಗಿ ಮಯೂರ ತಲೆಯೆತ್ತಿ ನಿಂತಿದೆ. ಇಲ್ಲಿ ವಾಸ್ತವ್ಯಕ್ಕಂತೂ ಹೇಳಿ ಮಾಡಿಸಿದ ಅದ್ಭುತ ವಾತಾವರಣವಿದೆ.​ ಅಲ್ಲಿನ ಸಿಬ್ಬಂದಿ ಮನೆಯ ನೆಂಟರಂತೆ ಮಾತಿಗಿಳಿದು ಸತ್ಕರಿಸುತ್ತಾರೆ.

ಮೊದಲೇ ಹೇಳಿದಂತೆ ಕೆಎಸ್‌ಟಿಡಿಸಿ ಪ್ಯಾಕೇಜ್‌ನಡಿ ಪ್ರವಾಸಕ್ಕೆ ಹೊರಡುವ ಎಲ್ಲ ಪ್ರವಾಸಿಗನಿಗೂ ಹೊಟೇಲ್ ಮಯೂರದಲ್ಲಿ ರಾಜಾತಿಥ್ಯವಿದೆ. ಪ್ರತಿ ಜಿಲ್ಲೆಯಲ್ಲೂ ಮಯೂರ ಹೊಟೇಲ್​ನ ಶಾಖೆಗಳಿವೆ. ನಮ್ಮ ಬಿಆರ್‌ ಹಿಲ್ಸ್‌ ನಲ್ಲೂ ಮಯೂರವಿದೆ. ಬಿಡುವಿಲ್ಲದ ಕೆಲಸಗಳ ಮಧ್ಯೆ ಒಂದು ದಿನವಾದರೂ ವಿರಾಮ ತೆಗೆದುಕೊಂಡು ನೀವು ಬಿ ಆರ್‌ ಹಿಲ್ಸ್‌ನ ಮಯೂರ ಹೊಟೇಲ್‌ನಲ್ಲಿ ಉಳಿಯಬೇಕು. ಬಿಆರ್ ಹಿಲ್ಸ್‌ ಎಂದು ಕರೆಯಲ್ಪಡುವ ಬಿಳಿಗಿರಿ ರಂಗನ ಬೆಟ್ಟದ ಪ್ರಶಾಂತ ವಾತಾವರಣ ಮನಸಿಗೆ ಮುದ ನೀಡುತ್ತದೆ. ಆಗ್ನೇಯ ಕರ್ನಾಟಕದಲ್ಲಿ, ದಕ್ಷಿಣ ಭಾರತದ ತಮಿಳುನಾಡಿನ (ಈರೋಡ್ ಜಿಲ್ಲೆ) ಗಡಿಯಲ್ಲಿರುವ ಬಿಆರ್‌ ಹಿಲ್ಸ್‌ ಹುಲಿ ಮೀಸಲು ಪ್ರದೇಶವಾಗಿದೆ. ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ, ವನ್ಯಜೀವಿ ಅಭಯಾರಣ್ಯವೂ ಅಲ್ಲಿನ ಪ್ರಮುಖ ಆಕರ್ಷಣೆ. ಪೂರ್ವ ಘಟ್ಟಗಳು ಮತ್ತು ಪಶ್ಚಿಮ ಘಟ್ಟಗಳೆರಡರ ಅದ್ಭುತ ನೋಡವನ್ನು ಈ ಅಭಯಾರಣ್ಯದಲ್ಲಿ ನೋಡಬಹುದು. ಎರಡೂ ಪರ್ವತ ಶ್ರೇಣಿಗಳ ಪರಿಸರ ಪ್ರವಾಸಿಗರ ಮನಸೆಳೆಯುತ್ತದೆ. ಸಾಲು ಬೆಟ್ಟಗಳ ಮಧ್ಯೆ ನೆಲೆಗೊಂಡಿರುವ ಕೆಎಸ್‌ಟಿಡಿಸಿ ಮಯೂರ ಬಿಳಿಗಿರಿ ಹೊಟೇಲ್ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನದಿಂದ ಕೇವಲ 500 ಮೀಟರ್ ದೂರದಲ್ಲಿದೆ.

Untitled design (27)

ಹೊಟೇಲ್‌ನಲ್ಲಿ ಫ್ರೆಂಡ್ಲಿ ವಾತಾವರಣವಿದ್ದು, ಆರಾಮದಾಯಕ ಕೊಠಡಿಗಳಿವೆ. ಹಸಿರು ಉದ್ಯಾನಗಳಲ್ಲಿ ರಿಲ್ಯಾಕ್ಸ್‌ ಮೂಡ್‌ನಲ್ಲಿ ಓಡಾಡಬಹುದು . ಅತಿಥಿಗಳಿಗಾಗಿ ಅರಣ್ಯ ಸಫಾರಿ, ಒಳಾಂಗಣ ಮತ್ತು ಹೊರಾಂಗಣ ಆಟಗಳು, ಪಕ್ಷಿ ವೀಕ್ಷಣೆ ಮತ್ತು ಬುಡಕಟ್ಟು ನೃತ್ಯದಂಥ ವಿವಿಧ ಮನೋರಂಜನಾ ಚಟುವಟಿಕೆಗಳಿವೆ. ನಿಮ್ಮ ಮುಂದಿನ ವೀಕೆಂಡ್‌ ಅನ್ನು ಮಯೂರ ಬಿಳಿಗಿರಿ ಹೊಟೇಲ್‌ನಲ್ಲಿ ಉಳಿಯುವುದನ್ನು ಮರೆಯಬೇಡಿ.

ಸಂಪರ್ಕ:
Yogesh. MK

Manager (Tours)

Mob No: +91 960 6987 822 | Email ID: tour.manager@kstdc.co

Karnataka State Tourism Development Corporation Ltd. (KSTDC)

Corporate Office: 5th Floor | Indhana Bhavan|Race Course Road | Opposite to Renaissance Hotel,

Bangalore- 560009 | Karnataka | India

Office: 080-43344334 | Fax: 080-43344376

Email: feedback@kstdc.co | info@kstdc.co | website: www.kstdc.co | www.goldenchariot.org