ನಮಗಿರುವುದು ಕೆಲವು ದಿನಗಳ ಬಿಡುವು, ಇರುವ ಅಷ್ಟು ಸಮಯವನ್ನಾದರೂ ನಾವು ಈ ನೆಲ-ಜಲ ನೋಡಲು ಮತ್ತು ನುಡಿಗಳನ್ನು ಅರಿಯಲು, ಆದಷ್ಟು ತಿಳಿಯಲು ವಿನಿಯೋಗಿಸಬೇಕು. ಲೋಕೋ ಭಿನ್ನ ರುಚಿ ಎನ್ನುತ್ತಾರೆ, ನಾನದನ್ನು ತಿಂದು ತಿರುಗಿಯೇ ನೋಡಬೇಕು ಎನ್ನುವವರಿಗೆ ಕೆಎಸ್‌ಟಿಡಿಸಿ ಸುಂದರ ಅವಕಾಶ ಮಾಡಿಕೊಟ್ಟಿದೆ. ಜವಾಬ್ದಾರಿಯುತ ಪ್ರವಾಸೋದ್ಯಮದ ಜಾಡಿನಲ್ಲಿ ನಿಮ್ಮನ್ನು ಕೈ ಹಿಡಿದು ನಡೆಸಲು ಹಾತೊರೆಯುತ್ತಿದೆ. ನಿಮ್ಮ ಆಯವ್ಯಯದ ಭಾರ ಕಡಿಮೆ ಮಾಡುವ ಮತ್ತು ಕೈಗೆಟುಕುವ ದರದ ಪ್ಯಾಕೇಜ್‌ಗಳನ್ನು ನೀಡಿದೆ. ಪ್ರಬುದ್ಧ ಪಯಣಿಗನಾಗಿ ನೀವು ತಿರುಗಲು, ತಿಳಿಯಲು, ಅನುಭವಗಳನ್ನು ಕಲೆಹಾಕಲು ಕೆಎಸ್‌ಟಿಡಿಸಿ ನಿಮ್ಮ ಸಂಗಾತಿಯಾಗಿರಲಿ. ಬಾವಿಯೊಳಗಿನ ಕಪ್ಪೆಯಾಗದೆ, ಬಾಂದಳದ ಹಕ್ಕಿಯಂತೆ ಸ್ವತಂತ್ರವಾಗಿ ಓಡಾಡಿ. ಸಾಕಷ್ಟು ಸುತ್ತಾಡಿ, ನಗರ ಜೀವನ ನಿಮ್ಮ ಮನಸನ್ನು ಒತ್ತಡಕ್ಕೆ ದೂಡಿರುತ್ತದೆ. ವಿಶ್ರಾಂತಿಗೆ ವಿಹಾರ ಅಗತ್ಯ. ತಿಲ್ಲಾನ ಹಾಡುವ ನದಿ, ತಂಪೆರೆಯುವ ಮಲೆನಾಡು, ಜೋಶ್‌ ನೀಡುವ ಜಲಪಾತಗಳು, ಕಾನನದ ನಡುವೆ ತುಸುದೂರ ನಡೆದಾಡಿ ಒಂದೆರಡು ದಿನ ಕಳೆದು ಬನ್ನಿ. ಮನಸಿನ ಆಯಾಸ ಮರೆಸುವ ಇಂಥ ಪ್ರವಾಸಕ್ಕೆ, ಮನಮೋಹಿಸುವ ತಾಣಗಳನ್ನು ಹುಡುಕಿ ಸುತ್ತಾಡಿಸಿ, ಸುವ್ಯಸ್ಥಿತ ವಾಸ್ತವ್ಯ ನೀಡುವ ಮೂಲಕ ಕೆಎಸ್‌ಟಿಡಿಸಿ ಈಗಾಗಲೇ ಜನಮನಗಳನ್ನು ಗೆದ್ದಿದ್ದು, ಇದು ನಮ್ಮದೇ ರಾಜ್ಯದ ಪ್ರವಾಸೋದ್ಯಮ ಇಲಾಖೆಗೆ ಗರಿ ತಂದುಕೊಟ್ಟಿದೆ. ರಾಜ್ಯದಲ್ಲಿನ ಎಲ್ಲ ಪ್ರವಾಸಿ ತಾಣಗಳನ್ನು ಬಲ್ಲ ಹಿರಿಯಣ್ಣ, ಪ್ರವಾಸದ ನಕ್ಷೆ ನೀಡಿದ್ದಾನೆ ಎಂದರೆ ಕೇಳಬೇಕೆ. ಆ ತಾಣದ ತನ್ಮಯತೆಯನ್ನು ನಿಮಗೆ ಕಟ್ಟಿಕೊಡುತ್ತದೆ. ಇದರಿಂದ ನೀವು ಅಲ್ಲಿನ ಜನಮನ, ಇತಿಹಾಸ, ಆಚರಣೆ, ಊಟೋಪಚಾರ, ತಾಣದ ವಿಶೇಷಗಳನ್ನು ಸುಲಭವಾಗಿ ಅರಿವಿಗೆ ತಂದುಕೊಳ್ಳಬಹುದು. ʼತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿʼ ಈ ಮಾತುಗಳನ್ನು ಕರ್ನಾಟಕದ ಪ್ರತಿಯೊಬ್ಬರೂ ಕೇಳಿರುತ್ತಾರೆ. ತಲಕಾಡಿಗೆ ತನ್ನದೇ ಆದ ಮಹತ್ವವಿದೆ. ಅದು ಐತಿಹಾಸಿಕ ತಾಣ. ಧಾರ್ಮಿಕ ತಾಣವಾಗಿಯೂ ಖ್ಯಾತಿಪಡೆದಿದೆ. ತಲಕಾಡಿನಲ್ಲಿ ಹತ್ತು ಹಲವು ಪುರಾಣ ಪ್ರಸಿದ್ಧ ದೇವಾಲಯಗಳಿವೆ. ತಲಕಾಡು ಎಂದೊಡನೆ ಎಂಥವರಿಗೂ ಅಲ್ಲಿಗೆ ಒಮ್ಮೆ ಹೋಗಿ ಬರಬೇಕು ಅನಿಸುತ್ತದೆ. ಒಂದು ದಿನದ ಪಿಕ್ನಿಕ್‌ಗೆ ಬೆಂಗಳೂರು ಮತ್ತು ಮೈಸೂರಿನಿಂದ ತಲಕಾಡು ಬೆಸ್ಟ್ ಜಾಗ. ಹಾಗಾಗಿ ಕೆಎಸ್‌ಟಿಡಿಸಿ ವಿಶೇಷ ಪ್ಯಾಕೇಜ್ ಘೋಷಿಸಿದೆ. ತಲಕಾಡು, ಸೋಮನಾಥಪುರ, ಮುಡುಕುತೊರೆ, ಶಿವನಸಮುದ್ರ ಹೀಗೆ ಕರ್ನಾಟಕದ ಅತ್ಯಂತ ಮಹತ್ವದ ಮತ್ತು ಪ್ರಖ್ಯಾತ ಸ್ಥಳಗಳಿಗೆ ಪ್ರವಾಸಿಗರು ಕೆಎಸ್‌ಟಿಡಿಸಿ ಮೂಲಕ ಹೋಗಬಹುದು.

Talakadu

ಪ್ಯಾಕೇಜ್

ಕೆಎಸ್‌ಟಿಡಿಸಿ ಬುಕ್ ಮಾಡುವವರಿಗೆ ವಿಶೇಷ ಅವಕಾಶಗಳಿವೆ.

ಡಿಲಕ್ಸ್ ಎಸಿ ಬಸ್‌ನಲ್ಲಿ ಆರಾಮದಾಯಕ ಸುಖ ಪ್ರಯಾಣ.

ಆಯ್ಕೆ ಮಾಡಿಕೊಂಡ ಪ್ಯಾಕೇಜ್ ಅನ್ವಯ ಪ್ರವಾಸ

ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯ

ಕೆಎಸ್‌ಟಿಡಿಸಿ ನಿಮ್ಮ ಆಯ್ಕೆಯಾಗಲಿ

ಕೆಎಸ್‌ಟಿಡಿಸಿ ಯ ಪ್ಯಾಕೇಜ್ ಬಜೆಟ್ ಸ್ನೇಹಿಯಾಗಿದ್ದು, ಬೇರೆಲ್ಲೂ ಸಿಗದ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜನೆಯ ಪ್ರವಾಸದ ಭರವಸೆಯನ್ನು ನೀಡುತ್ತದೆ.

ಆರಾಮದಾಯಕ ಪ್ರಯಾಣ: ಆಧುನಿಕ ಬಸ್‌ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.

ವಿಶೇಷ ಗೈಡ್‌ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್‌ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.

ಸಮಗ್ರ ಯೋಜನೆ: ಪ್ಯಾಕೇಜ್‌ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನಸ್ಸಿಗೆ ಸಮಾಧಾನ ಆಗುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್ ಕೂಡ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.

ಕೈಗೆಟುಕುವ ಬೆಲೆ: ಎಲ್ಲರಿಗೂ ಒಗ್ಗುವ, ಮಧ್ಯಮ ವರ್ಗದವರ ಕನಸು ನನಸು ಮಾಡುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ಮತ್ತೇನು ಯೋಚನೆ ಮಾಡ್ತಿದ್ದೀರಿ? ಕೆಎಸ್‌ಟಿಡಿಸಿ ನಿಮ್ಮ ಸಂಗಾತಿ. ಈಗಲೇ ಬುಕ್ ಮಾಡಿ. ಹೊರಡಿ. ಜಗತ್ತು ಕೈ ಬೀಸಿ ಕರೆಯುತ್ತಿದೆ.

Temples in Talakadu

ಒಂದೇ ಸೂರು ಪ್ರವಾಸ ಹತ್ತಾರು

ಕೆಎಸ್‌ಟಿಡಿಸಿ ಎಂದಮೇಲೆ ಅಲ್ಲಿ ಹತ್ತಾರು ರೀತಿಯ ಪ್ರವಾಸಗಳಿರುತ್ತವೆ. ವಿಶೇಷ ಪ್ಯಾಕೇಜ್‌ನ ಅಡಿ ಪ್ರವಾಸಿಗರನ್ನು ಟೂರ್‌ಗೆ ಕರೆದುಕೊಂಡು ಹೋಗುವ ಕೆಲಸವನ್ನು ಕೆಎಸ್‌ಟಿಡಿಸಿ ಮಾಡಿಕೊಂಡು ಬರುತ್ತಿದೆ. ಕರ್ನಾಟಕದ ಪ್ರಸಿದ್ದ ಪ್ರವಾಸಿ ತಾಣಗಳತ್ತ ಪ್ರವಾಸಿಗರನ್ನು ಕರೆದೊಯ್ದು ಹೊಸ ಮೆರುಗನ್ನು ನೀಡುತ್ತಿದೆ. ಆ ಪೈಕಿ ಒಂದು ದಿನದ ಪ್ರವಾಸದ ಎರಡು ರೀತಿಯ ಟೂರ್ ಪ್ಯಾಕೇಜ್ ಅನ್ನು ಕೆಎಸ್‌ಟಿಡಿಸಿ ಪರಿಚಯಿಸಿದೆ. ಶಿವನಸಮುದ್ರ ಮತ್ತು ಐತಿಹಾಸಿಕ, ಧಾರ್ಮಿಕವಾಗಿ ಪ್ರಸಿದ್ಧವಾಗಿರುವ ತಲಕಾಡಿಗೆ ಕೆಎಸ್‌ಟಿಡಿಸಿ ಕರೆದೊಯ್ಯಲಿದೆ. ರಾಜಧಾನಿ ಬೆಂಗಳೂರಿನಿಂದ ಈ ಪ್ರವಾಸ ಶುರುವಾಗುತ್ತದೆ. ಇತ್ತ ಕಡೆ ಸಾಂಸ್ಕೃತಿಕ ನಗರಿ ಮೈಸೂರಿನಿಂದ ವಿಶೇಷ ಪ್ರವಾಸ ಶುರುವಾಗಿದೆ. ಮೈಸೂರಿನಿಂದ ಹೊರಡುವ ಕೆಎಸ್‌ಟಿಡಿಸಿ ಬಸ್ ಸೋಮನಾಥಪುರದ ಮೂಲಕ ಹಾದು ಹೋಗಿ ಅಲ್ಲಿಂದ ಶಿವನಸಮುದ್ರ,ತಲಕಾಡು ಮತ್ತು ಮುಡುಕುತೊರೆಗೆ ತೆರಳುತ್ತದೆ. ಇದು ಒಂದು ದಿನದ ಪ್ರವಾಸವಾದರೂ ಪ್ರವಾಸಿಗರಿಗೆ ಅದ್ಭುತ ಅನುಭವವನ್ನು ನೀಡುತ್ತದೆ. ನಿಮ್ಮ ವೀಕೆಂಡ್ ಅನ್ನು ಕೆಎಸ್‌ಟಿಡಿಸಿ ಜತೆಗೆ ಕಳೆಯಿರಿ.

ಶಿವನಸಮುದ್ರ - ತಲಕಾಡು

ದಿನ-1

ಬೆಳಗ್ಗೆ 6.30 ಗಂಟೆ- ಯಶವಂತಪುರದ ಬಿಎಂಟಿಸಿ ಬಸ್ ನಿಲ್ದಾಣದ ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್‌ನಿಂದ ಹೊರಡಲಾಗುತ್ತದೆ

ಬೆಳಗ್ಗೆ 9.00 - 9.30 ಗಂಟೆ- ದಾರಿ ಮಧ್ಯೆ ಉಪಾಹಾರ

ಬೆಳಗ್ಗೆ 9.30 ಗಂಟೆ- ಕಾಮತ್ ಹೊಟೇಲ್ ಚನ್ನಪಟ್ಟಣದಿಂದ ಹೊರಡುವುದು

ಬೆಳಗ್ಗೆ 11.00 - 12.00 ಗಂಟೆ - ಗಗನಚುಕ್ಕಿ ಜಲಪಾತಕ್ಕೆ ಭೇಟಿ

ಮಧ್ಯಾಹ್ನ 12.00 ಗಂಟೆ- ಗಗನಚುಕ್ಕಿಯಿಂದ ಹೊರಡುವುದು

ಮಧ್ಯಾಹ್ನ 12.30 - 1.00 ಗಂಟೆ- ಮದ್ಯರಂಗ ದೇವಸ್ಥಾನ ಭರಚುಕ್ಕಿ ಭೇಟಿ

ಮಧ್ಯಾಹ್ನ 1.15 – 2.00 ಗಂಟೆ- ಭರಚುಕ್ಕಿಯ ಹೊಟೇಲ್‌ ಮಯೂರದಲ್ಲಿ ಊಟ

ಮಧ್ಯಾಹ್ನ 2.00 – 3.30 ಗಂಟೆ- ಭರಚುಕ್ಕಿ ಜಲಪಾತಕ್ಕೆ ಭೇಟಿ

ಮಧ್ಯಾಹ್ನ 3.30 ಗಂಟೆ- ಭರಚುಕ್ಕಿಯಿಂದ ಹೊರಡುವುದು

ಸಂಜೆ 4.00- 6.00 ಗಂಟೆ- ತಲಕಾಡು ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಭೇಟಿ

ಸಂಜೆ 6.00 ಗಂಟೆ- ತಲಕಾಡಿನಿಂದ ಹೊರಡುವುದು

ರಾತ್ರಿ 9.00 ಗಂಟೆ- ಬೆಂಗಳೂರಿಗೆ ತಲುಪುವುದು

ಸೋಮನಾಥಪುರ- ಶಿವನಸಮುದ್ರ- ತಲಕಾಡು- ಮುಡುಕುತೊರೆ

ದಿನ-1

ಬೆಳಗ್ಗೆ 7.30 ಗಂಟೆ- ಹೊಟೇಲ್ ಮಯೂರ ಹೊಯ್ಸಳ, ಮೈಸೂರಿನಿಂದ ಹೊರಡಲಾಗುತ್ತದೆ.

ಬೆಳಗ್ಗೆ 8.30 - 9.00 ಗಂಟೆ- ದಾರಿ ಮಧ್ಯೆ ಉಪಾಹಾರ

ಬೆಳಗ್ಗೆ 9.30 - 10.15 ಗಂಟೆ- ಸೋಮನಾಥಪುರದ ಕೇಶವ ದೇವಸ್ಥಾನಕ್ಕೆ ಭೇಟಿ

ಬೆಳಗ್ಗೆ 11.00 -1.30 ಗಂಟೆ- ಮುಡುಕುತೊರೆ ಮತ್ತು ತಲಕಾಡು, ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಭೇಟಿ. ಊಟ

ಮಧ್ಯಾಹ್ನ 3.00 - 5.30 ಗಂಟೆ- ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತ, ಶಿವನಸಮುದ್ರಕ್ಕೆ ಭೇಟಿ

ಸಂಜೆ 6.00 - 6.30 ಗಂಟೆ- ಮಳವಳ್ಳಿಯಲ್ಲಿ ಟೀ ಬ್ರೇಕ್

ರಾತ್ರಿ 9.00 ಗಂಟೆ- ಮೈಸೂರಿಗೆ ತಲುಪುವುದು.

Mayura Bharachukki

ಭರಚುಕ್ಕಿಯಲ್ಲಿ ಮಯೂರ

ಕನ್ನಡದ ಕಲಿಪುರುಷನ ಹೆಸರನ್ನೇ ತಾನು ಇಟ್ಟುಕೊಂಡು, ಆತಿಥ್ಯ ಕ್ಷೇತ್ರದ ಹೆಗ್ಗುರುತಾಗಿ ಮಯೂರ ಹೊಟೇಲ್‌ಗಳು ಗುರುತಿಸಿಕೊಂಡಿವೆ.ಇವುಗಳನ್ನು ಕರ್ನಾಟಕದ ರಾಜ್ಯದಾದ್ಯಂತ ಕಾಣಬಹುದು. ಈ ಹೊಟೇಲ್‌ಗಳು ಆತಿಥ್ಯ ಮತ್ತು ಊಟೋಪಚಾರಕ್ಕೆ ದೇಶ ವಿದೇಶಗಳಲ್ಲೂ ಹೆಸರು ಮಾಡಿವೆ. ರಾಜ್ಯದ ಸುಂದರ ಅರಣ್ಯಧಾಮಗಳು, ಐತಿಹಾಸಿಕ ಪುಣ್ಯ ಸ್ಥಳಗಳು, ಪ್ರವಾಸಿ ತಾಣಗಳು, ವಿಶ್ವ ಪರಂಪರೆಯ ತಾಣಗಳಲ್ಲೂ ಈ ಮಯೂರ ನೆಲೆಸಿದೆ. ಅಲ್ಲೆಲ್ಲ ಅತಿಥಿಯಾಗಿ ಬರುವ ಜನರು ಮಯೂರವನ್ನು ಮೆಚ್ಚಿಕೊಂಡಿದ್ದಾರೆ.

ತಲಕಾಡಿನ ಗಮ್ಮತ್ತು ಹಲವರಿಗೆ ಗೊತ್ತೇ ಇದೆ. ತಲಕಾಡು ಕುತೂಹಲದ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಪುರಾತನ ದೇವಾಲಯ, ಶಿಲ್ಪಕಲೆ ಮತ್ತು ಕೆತ್ತನೆಗಳಿಗೂ ಹೆಸರುವಾಸಿಯಾಗಿದೆ. ಸೋಮನಾಥಪುರವನ್ನು ದೇವಾಲಯಗಳ ಊರು ಎಂದು ಕರೆದರೂ ತಪ್ಪಿಲ್ಲ. ಇನ್ನು ಪ್ರವಾಸಿಗರು ತಲಕಾಡು, ಶಿವನಸಮುದ್ರ ಮತ್ತು ಭರಚುಕ್ಕಿ ಜಲಪಾತಗಳನ್ನು ವೀಕ್ಷಿಸಿದ ನಂತರ ಭರಚುಕ್ಕಿಯ ಮಯೂರ ಹೊಟೇಲ್‌ನಲ್ಲಿ ಉಳಿದುಕೊಳ್ಳಬಹದು. ಹೊಟೇಲ್‌ ಭರಚುಕ್ಕಿ ಮಯೂರ ಕುಟುಂಬ ವಿಹಾರಕ್ಕೆ ಸೂಕ್ತ ಸ್ಥಳವಾಗಿದೆ. ಅತ್ತ ಪ್ರವಾಸ ಹೋದಾಗ ಉಳಿದುಕೊಳ್ಳಲು ಈ ಹೊಟೇಲ್‌ ಸೂಕ್ತವಾಗಿದೆ. ಹೋಟೆಲ್‌ನಲ್ಲಿರುವ ಕೊಠಡಿಗಳು ಆರಾಮದಾಯಕ ಮತ್ತು ಕೈಗೆಟುಕುವ ದರದಲ್ಲಿವೆ. ವಿಶೇಷವೆಂದರೆ ಹೊಟೇಲ್ ಭರಚುಕ್ಕಿ ಮಯೂರದಲ್ಲಿ 4 ಎ/ಸಿ ಡಬಲ್ ರೂಮ್‌ಗಳು, 1 ಸೂಟ್ ರೂಮ್‌, 3 ಎಸಿ ಡಿಲಕ್ಸ್ ಎಕ್ಸಿಕ್ಯೂಟಿವ್ ಜತೆಗೆ ಬಾಲ್ಕನಿ ಇದೆ. ಜನದಟ್ಟಣೆಯಿಂದ ದೂರವಿರುವ ಭರಚುಕ್ಕಿ ಮಯೂರದಲ್ಲಿ ಹಾಯಾಗಿ ಕಾಲ ಕಳೆಯಬಹುದು. ಅತಿಥಿಗಳು ವಿವಿಧ ರೀತಿಯ ಅಡುಗೆಗಳನ್ನು ಇಲ್ಲಿ ಆಸ್ವಾದಿಸಬಹುದು. ಅದನ್ನು ರುಚಿಕಟ್ಟಾಗಿ ಮಾಡಿ ನೀಡಲು ಇಲ್ಲಿ ಸುಸಜ್ಜಿತ ಮತ್ತು ಸ್ವಚ್ಛ ರೆಸ್ಟೋರೆಂಟ್‌ ಸದಾ ನಿಮ್ಮ ಸೇವೆಗೆ ಸಿದ್ಧವಾಗಿರುತ್ತದೆ. ಆತಿಥ್ಯದಲ್ಲಿ ಮಯೂರ ಪ್ರವಾಸ ಪ್ರಿಯರಿಗೆ ಚಿರಪರಿಚಿತವಾಗಿದ್ದು, ಆತ್ಮೀಯ ಮತ್ತು ಸ್ನೇಹಪರ ಸಿಬ್ಬಂದಿಗಳು ನಗುಮೊಗದಲ್ಲೆ ನಿಮ್ಮನ್ನು ಸತ್ಕರಿಸುತ್ತಾರೆ. ಮರಳಿ ಬರುವಾಗ ಅವರನ್ನು ನೀವು ಮರೆಯುವುದೇ ಕಷ್ಟವಾದೀತು. ಅಷ್ಟು ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಾರೆ. ಆ ಸಮಯದಲ್ಲಿ ನಿಮಗೆ ಮನೆಯ ಅನುಭವವಾಗುವುದಂತೂ ಖಾಯಂ. ಪ್ರವಾಸಿಗರ ಬಯಕೆಗಳನ್ನು ಈಡೇರಿಸಿ ಅವರನ್ನು ಸಂತೃಪ್ತಿಗೊಳಿಸಲು ಪ್ರತಿ ಪ್ರವಾಸಿ ತಾಣದಲ್ಲೂ ಮಯೂರ ಹೊಟೇಲ್‌ ಇದ್ದೇ ಇದೆ. ಆತಿಥ್ಯ ಕ್ಷೇತ್ರ ಎಂದ ಕೂಡಲೇ ಮಯೂರ ಹೆಸರು ನೆನಪಾಗಿಯೇ ಆಗುತ್ತದೆ. ಅಷ್ಟರಮಟ್ಟಿಗೆ ಅದು ಪ್ರಸಿದ್ಧಿಗಳಿಸಿದೆ. ಊರಿನ ಗುರುತು ಪರಿಚಯವಿಲ್ಲದ ಪ್ರವಾಸಿಗರ ಆಯ್ಕೆಯೂ ಮಯೂರವೇ ಆಗಿರುತ್ತದೆ. ಕೆಎಸ್‌ಟಿಡಿಸಿ ಪ್ಯಾಕೇಜ್‌ನಡಿ ಪ್ರವಾಸಕ್ಕೆ ಹೊರಡುವ ಎಲ್ಲ ಪ್ರವಾಸಿಗರಿಗೂ ಮಯೂರ ಆಯ್ಕೆಯಾಗಲಿ.

ಸಂಪರ್ಕ:

ಶ್ರೀ ಗುರುಪ್ರಸಾದ್ ಪಿಬಿ

Phone: 8970650053

ಕೊಳ್ಳೇಗಾಲ ತಾಲೂಕು, ಚಾಮರಾಜ ನಗರ ಜಿಲ್ಲೆ- 571 440

bharachukki@karnatakaholidays.net