Saturday, October 17, 2026
Saturday, October 17, 2026

ಬೆಟ್ಟದ ಮೇಲಿನ ಎರಡು ಮಲ್ಲೇಶ್ವರ ದೇಗುಲಗಳು

ಹಾಸನ ಜಿಲ್ಲೆಯ ಬೆಟ್ಟಗುಡ್ಡಗಳ ನಡುವೆ ನೆಲೆಗೊಂಡಿರುವ ಮಲ್ಲೇಶ್ವರ ದೇಗುಲಗಳು ಪ್ರಕೃತಿ ಸೌಂದರ್ಯ ಮತ್ತು ಧಾರ್ಮಿಕ ನಂಬಿಕೆಗಳ ಅಪೂರ್ವ ಸಂಗಮ. ಸುತ್ತಲೂ ಕಾಣುವ ಗಾಳಿಯಂತ್ರಗಳು, ಪ್ರಶಾಂತ ಪರಿಸರ ಹಾಗೂ ಪುರಾತನ ಐತಿಹ್ಯಗಳು ಈ ತಾಣಗಳ ವಿಶೇಷತೆ. ಮಾವನೂರು ಮಲ್ಲೇಶ್ವರ ಮತ್ತು ಸೀಗೆಗುಡ್ಡದ ಮಳೆಮಲ್ಲೇಶ್ವರ ದೇಗುಲಗಳ ಪ್ರವಾಸದ ಅನುಭವ ಇಲ್ಲಿದೆ.

ಮಾವನೂರು ಮಲ್ಲೇಶ್ವರ ದೇಗುಲ

ಮಾವನೂರು ಮಲ್ಲೇಶ್ವರ ದೇವಾಲಯವು (ಇದನ್ನು ವಿಂಡ್‌ಮಿಲ್ ದೇವಾಲಯ ಎಂದೂ ಹೇಳುತ್ತಾರೆ) ಕರ್ನಾಟಕದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಬಿಜೆಮಾರನಹಳ್ಳಿ ಎಂಬ ಗ್ರಾಮದಲ್ಲಿದೆ. ಇದು ಮಾವನೂರು ಬೆಟ್ಟದ ಮೇಲೆ ನೆಲೆಗೊಂಡಿದ್ದು, ಸುತ್ತಲೂ ದೊಡ್ಡದಾದ ಗಾಳಿಯಂತ್ರಗಳನ್ಬು ನೋಡಬಹುದು. ಪ್ರಶಾಂತ ಪರಿಸರದಲ್ಲಿರುವ ಪುಟ್ಟ ದೇವಾಲಯವು ಶಿವನಿಗೆ ಸಮರ್ಪಿತವಾಗಿದ್ದು, ಪಾರ್ವತಿ, ಗಣೇಶ, ವೀರಭದ್ರೇಶ್ವರ ಮತ್ತು ನಾಗೇಶ್ವರ ದೇವತೆಗಳಿಗೆ ಸಣ್ಣ ದೇವಾಲಯಗಳನ್ನೂ ಹೊಂದಿದೆ. ದೇವಾಲಯದ ಗೋಪುರವು ಚಿನ್ನದ ಬಣ್ಣದಲ್ಲಿದ್ದು, ಸುಂದರವಾಗಿ ಕಾಣುತ್ತದೆ.

ಇದನ್ನೂ ಓದಿ: ಸ್ವಚ್ಛ, ಸುಸ್ಥಿರ ದೇಶೀಯ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡೋಣ

ದೇವಾಲಯದ ವೈಶಿಷ್ಟ್ಯಗಳು:

ದೇವಾಲಯದ ಸುತ್ತಲೂ ಮತ್ತು ಮಾರ್ಗದಲ್ಲಿ ಗಾಳಿಯಂತ್ರಗಳನ್ನು ನೋಡಬಹುದು. ವಾಹನ ನಿಲ್ಲಿಸಲು ವಿಶಾಲ ಜಾಗವಿದೆ. ಆದರೆ, ಶೌಚಾಲಯದ ವ್ಯವಸ್ಥೆ ಇಲ್ಲ.

ಮಾಹಿತಿ ಪೆಟ್ಟಿಗೆ

ಬೆಂಗಳೂರಿನಿಂದ ಸುಮಾರು 170 ಕಿಲೋಮೀಟರ್. ಹಾಸನದಿಂದ ಸರಿಸುಮಾರು 30 ಕಿಲೋಮೀಟರ್. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲ, ಆದ್ದರಿಂದ ಸ್ವಂತ ವಾಹನ ಅಥವಾ ಬಾಡಿಗೆ ವಾಹನದ ಮೂಲಕ ಹೋಗಬಹುದು.

Untitled design (74)

ಸೀಗೆಗುಡ್ಡದ ಮಳೆ ಮಲ್ಲೇಶ್ವರ ದೇಗುಲಕ್ಕೆ (ಹಾಸನದಿಂದ 15ಕಿಮೀ.) ಹೋಗಲು ಹಾಸನದಿಂದ ಹಳೇಬೀಡಿಗೆ ಹೋಗುವ ರಸ್ತೆಯಲ್ಲಿ ಸುಮಾರು 9 ಕಿಮೀ. ಸಾಗಿದಾಗ ಸೀಗೆ ಊರಲ್ಲಿ ದೇವಾಲಯಕ್ಕೆ ಹೋಗುವ ದಾರಿಯಲ್ಲಿ ಎಡಕ್ಕೆ ಕಮಾನು ಅಲ್ಲಿಂದ ಸುಮಾರು 6 ಕಿಮೀ. ಸಾಗಿದರೆ ಮಳೆಮಲ್ಲೇಶ್ವರ ತಲಪುತ್ತೇವೆ. ಗೂಗಲ್‌ಗೆ ಈ ದಾರಿ ಗೊತ್ತು! ದಾರಿಯ ಬಲಬದಿಗೆ ದೊಡ್ಡದಾದ ಸೀಗೆಕೆರೆ ಇದೆ. ಗುಡ್ಡದಲ್ಲಿ ಸ್ಥಾಪಿಸಿದ ಗಾಳಿಯಂತ್ರ ನೋಡುತ್ತ ಪಟ ಕ್ಲಿಕ್ಕಿಸುತ್ತ ಸಾಗಿ ಮಳೆಮಲ್ಲೇಶ್ವರ ತಲಪಿದೆವು. ಸುಮಾರು 50 ಮೆಟ್ಟಲು ಹತ್ತಿದರೆ ಮಳೆಮಲ್ಲೇಶ್ವರ ಬಯಲು ದೇಗುಲ ಕಾಣುತ್ತದೆ. ಸುಂದರ ಪ್ರಕೃತಿ ತಾಣದಲ್ಲಿ ಗುಡ್ಡದಲ್ಲಿ ಶಿವನ ಬೃಹತ್ ಪ್ರತಿಮೆ, ಅದರ ಕೆಳಗೆ ಶಿವಲಿಂಗ. ಮಳೆ ಇಲ್ಲದೆ ಬರಗಾಲದ ಸಂದರ್ಭದಲ್ಲಿ ಇಲ್ಲಿ ಬಂದು ಪೂಜೆ ಸಲ್ಲಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಇದೆಯಂತೆ. ಹಾಗಾಗಿ ಮಳೆಮಲ್ಲೇಶ್ವರ ಎಂಬ ಹೆಸರು ಬಂತು ಎಂದೂ ಹೇಳುತ್ತಾರೆ. ಸುತ್ತ ಮುತ್ತ ಸುಂದರವಾದ ಪ್ರಕೃತಿಯ ಮಧ್ಯೆ ಇರುವ ಈ ಸ್ಥಳದಲ್ಲಿ ನಾವು ಅರ್ಧ ಗಂಟೆ ಕೂತಿದ್ದೆವು.

ಈ ದೇಗಲದ ಐತಿಹ್ಯ

ಇದು ತ್ರೇತಾಯುಗದಲ್ಲೇ ಇದ್ದ ಪುರಾತನ ದೇಗುಲ ಎಂದರು ಅರ್ಚಕರು.
ರಾಮ ಲಕ್ಷ್ಮಣ ಸೀತೆ ವನವಾಸದ ಸಂದರ್ಭದಲ್ಲಿ ಇಲ್ಲಿ ತಂಗಿದ್ದರು ಎಂದೂ ಪ್ರತೀತಿ.
ಪಾಂಡವರು 12 ವರ್ಷ ವನವಾಸದ ಸಮಯದಲ್ಲಿ ಈ ಗುಡ್ಡದಲ್ಲಿ ಸ್ವಲ್ಪ ಕಾಲ ಇದ್ದರು. ಆಗ ಕುಡಿಯಲು ನೀರಿಗಾಗಿ ಅರ್ಜುನ ಬಂಡೆಗೆ ಬಾಣ ಹೂಡಿದಾಗ ನೀರು ಉಕ್ಕಿತು ಎಂದು ಪ್ರತೀತಿ. ಅರ್ಜುನ ಬಾಣ ಹೂಡುವ ಪ್ರತಿಮೆ ಇದೆ! ಗುಹೆಯಲ್ಲಿ ಸದಾ ಕಾಲ ನೀರಿರುತ್ತದೆಯಂತೆ. ಮಳೆಗಾಲದಲ್ಲಿ ನೀರು ಹರಿಯುತ್ತದೆಯಂತೆ. ಬೇಸಗೆಕಾಲದಲ್ಲಿ ನೀರು ಬತ್ತುವುದಿಲ್ಲವಂತೆ. ಅಲ್ಲಿ ಗಾಳಿಗುಡ್ಡಕ್ಕೆ ಚಾರಣ ಮಾಡಬಹುದು. ದೇವಾಲಯದ ವತಿಯಿಂದ ಮಠದಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆ ಇದೆ. ಅಲ್ಲಿ ಊಟ ಮಾಡಿದೆವು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ