ಅಂಬಾರಿ ಹತ್ತು ಬೆಂಗಳೂರು ಸುತ್ತು
ಮೈಸೂರು ದಸರಾ ಸಮಯದಲ್ಲಿ ನಗರ ಸಂಚಾರ ಮಾಡಿಸಿ ಜನರ ಮನಗೆದ್ದಿದ್ದ ಅಂಬಾರಿ ಓಪನ್ ಡೆಕ್ಕರ್ ಬಸ್ ಬೆಂಗಳೂರಿನಲ್ಲೂ ಸಂಚಾರ ಆರಂಭಿಸಿದೆ. ಬೆಂಗಳೂರು ನಗರ ಸುತ್ತಿಸಲಿರುವ ಡಬಲ್ ಡೆಕ್ಕರ್ ಓಪನ್ ಟಾಪ್ ಅಂಬಾರಿ ಬಸ್‌ಗಳ ಸಂಚಾರಕ್ಕೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಸಚಿವರಾದ ಎಚ್ ಕೆ ಪಾಟೀಲ್ ಅವರು ಅದ್ದೂರಿ ಚಾಲನೆ ನೀಡಿದರು.
ಮೈಸೂರು ದಸರಾ ಸಮಯದಲ್ಲಿ ನಗರ ಸಂಚಾರ ಮಾಡಿಸಿ ಜನರ ಮನಗೆದ್ದಿದ್ದ ಅಂಬಾರಿ ಓಪನ್ ಡೆಕ್ಕರ್ ಬಸ್ ಬೆಂಗಳೂರಿನಲ್ಲೂ ಸಂಚಾರ ಆರಂಭಿಸಿದೆ. ಬೆಂಗಳೂರು ನಗರ ಸುತ್ತಿಸಲಿರುವ ಡಬಲ್ ಡೆಕ್ಕರ್ ಓಪನ್ ಟಾಪ್ ಅಂಬಾರಿ ಬಸ್‌ಗಳ ಸಂಚಾರಕ್ಕೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಸಚಿವರಾದ ಎಚ್ ಕೆ ಪಾಟೀಲ್ ಅವರು ಜ.21ರಂದು ಅದ್ದೂರಿ ಚಾಲನೆ ನೀಡಿದರು. ನಗರದ ರವೀಂದ್ರ ಕಲಾ ಕ್ಷೇತ್ರದ ಆವರಣದಲ್ಲಿ ಅಂಬಾರಿ ನಗರ ಸಂಚಾರಕ್ಕೆ ಚಾಲನೆ ಸಿಕ್ಕಿದೆ.
ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಎಚ್ ಕೆ ಪಾಟೀಲ್, ನಮ್ಮ ರಾಜ್ಯದಲ್ಲಿನ ಸಾಕಷ್ಟು ಪ್ರವಾಸಿ ತಾಣಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಇದರಿಂದ ರಾಜ್ಯಕ್ಕೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಬಾರಿ ನಡೆಯಲಿರುವ ಬೆಂಗಳೂರು ಹಬ್ಬಕ್ಕೂ ಸಾಕಷ್ಟು ಜನರು ದೇಶ-ವಿದೇಶಗಳಿಂದ ಬರುತ್ತರೆ. ಇದರಿಂದ ಇಲ್ಲಿನ ಕಲೆ, ಸಂಸ್ಕೃತಿ, ಬೆಂಗಳೂರಿನ ವೈಭವ ಅವರಿಗೆ ಪರಿಚಯವಾಗುತ್ತದೆ. ಈ ವೇಳೆ ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡಲು ಮೈಸೂರಿನಲ್ಲಿ ನಾವು ಆರಂಭಿಸಿದ್ದ ಡಬಲ್ ಡೆಕ್ಕರ್‌ನ ಮೂರು ಅಂಬಾರಿ ಬಸ್‌ಗಳ ಓಡಾಟವನ್ನು ಬೆಂಗಳೂರಿಗೆ ತಂದಿದ್ದೇವೆ. ಒಟ್ಟು ಮೂರು ಅಂಬಾರಿ ಬಸ್‌ಗಳ ಸಂಚಾರಕ್ಕೆ ಚಾಲನೆ ದೊರೆತಿದ್ದು, ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಿದಂತೆ ಬಸ್‌ಗಳ ಸಂಖ್ಯೆಯನ್ನೂ ಹೆಚ್ಚಿಸಲು ಸಧ್ಯ ಯೋಜನೆ ಸಿದ್ಧವಾಗಿದೆ ಎಂದು ಮಾಹಿತಿ ನೀಡಿದರು.

ಹೇಗಿದೆ ಗೊತ್ತಾ ಬಸ್ ವಿನ್ಯಾಸ?
ಅಂಬಾರಿ ಡಬಲ್ ಡೆಕ್ಕರ್ ಬಸ್ ನಗರ ಸಂಚಾರಕ್ಕೆ ನಿರ್ಮಾಣವಾದ ಬಸ್. ಲಂಡನ್‌ನ ಬಿಗ್ ಬಸ್ ಮಾದರಿಯ ವಿನ್ಯಾಸ ಹೊಂದಿದ್ದು. ಮೈಸೂರಿನ ಅಂಬಾರಿಯ ಹೆಸರನ್ನು ಇದಕ್ಕೆ ಇಡಲಾಗಿದೆ. 25 ಅಡಿ ಎತ್ತರವಿದ್ದು. ಮೇಲಿನ ಡೆಕ್ಕರ್‌ನಲ್ಲಿ 20 ಮತ್ತು ಕೆಳಗಿನ ಡೆಕ್ಕರ್‌ನಲ್ಲಿ 20 ಆಸನಗಳು ಇವೆ. ಒಟ್ಟು 40 ಪ್ರಯಾಣಿಕರು ಸಂಚಾರ ಮಾಡಬಹುದು. ಗುಲಾಬಿ ಬಣ್ಣದ ಬಸ್ ಇದಾಗಿದ್ದು, ಐಷಾರಾಮಿ ಲುಕ್ ನೀಡುತ್ತದೆ. ಮೇಲಿನ ಡೆಕ್ಕರ್ ಓಪನ್ ಟಾಪ್ ವ್ಯವಸ್ಥೆ ಹೊಂದಿದೆ. ಕಿಟಿಕಿ ಮುಕ್ತ ಸಂಚಾರವನ್ನು ಆನಂದಿಸಬಹುದು.
ಅಂಬಾರಿ ಓಡಾಟಕ್ಕೆ ತಾತ್ಕಾಲಿಕ ರೂಟ್ ಹೀಗಿದೆ

ರವೀಂದ್ರ ಕಲಾಕ್ಷೇತ್ರದಿಂದ ಪ್ರಾರಂಭವಾಗಿ, ಕಾರ್ಪೊರೇಷನ್ ಸರ್ಕಲ್ ಮತ್ತು ಹಡ್ಸನ್ ಸರ್ಕಲ್ ಮೂಲಕ ಕಸ್ತೂರಬಾ ರಸ್ತೆಯಲ್ಲಿ ಸಾಗಿ ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯವನ್ನು ತಲುಪುತ್ತದೆ. ಅಲ್ಲಿಂದ ಚಿನ್ನಸ್ವಾಮಿ ಕ್ರೀಡಾಂಗಣ ಮತ್ತು ಜನರಲ್ ಪೋಸ್ಟ್ ಆಫೀಸ್ (GPO)ಗೆ ಹೊರಡುತ್ತದೆ. ಹೈಕೋರ್ಟ್ ಮತ್ತು ವಿಧಾನಸೌಧವನ್ನೂ ಸಂಚಾರದಲ್ಲಿ ನೋಡಬಹುದು.
ಕೆಎಸ್‌ಟಿಡಿಸಿ ವೆಬ್‌ಸೈಟ್ ಮೂಲಕ ಆನ್‌ಲೈನ್ ಬುಕಿಂಗ್ ಮಾಡಬಹುದಾಗಿದ್ದು, ಬಸ್‌ನಲ್ಲಿಯೂ ನೇರ ಟಿಕೆಟ್ ಕೊಳ್ಳಬಹುದು.
ಕೆಎಸ್‌ಟಿಡಿಸಿ ವೆಬ್‌ಸೈಟ್ ಲಿಂಕ್ : https://kstdc.co/
ʻಹಲವು ಹೊರರಾಜ್ಯಗಳ ಮೆಟ್ರೋಪಾಲಿಟನ್ ನಗರಗಳಲ್ಲಿ ಹಾಪ್-ಆನ್ ಹಾಪ್-ಆಫ್ ಪ್ರವಾಸ ಅನ್ನುವ ಕಾನ್ಸೆಪ್ಟ್ ಇದೆ. ಅದರಂತೆ ನಮ್ಮಲ್ಲೂ ಪ್ರಯತ್ನಗಳು ಆಗಬೇಕು ಎಂದು ಸಚಿವರು ನಿರ್ದೇಶನ ನೀಡಿದ್ದರಿಂದ ನಗರ ಸಂಚಾರಕ್ಕೆ ಅಂಬಾರಿ ಹೆಸರಿನ ಸುಂದರ ಡಬಲ್ ಡೆಕ್ಕರ್ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ನಗರದ ಹಲವು ತಾಣಗಳನ್ನು ನೋಡಿಕೊಂಡು ಬರಲು ಈ ಸೇವೆ ಸಹಕಾರಿಯಾಗಲಿದೆʼ.
- ಪ್ರಶಾಂತ್ ಕುಮಾರ್ ಮಿಶ್ರಾ, ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕರು, ಐಎಎಸ್