Wednesday, February 4, 2026
Wednesday, February 4, 2026

ಗಣರಾಜ್ಯೋತ್ಸವಕ್ಕೆ ಕೆಎಸ್‌ಟಿಡಿಸಿ ನೂತನ ಟೂರ್‌ ಪ್ಯಾಕೇಜ್‌

ಪ್ರತಿದಿನದ ಕೆಲಸದ ಒತ್ತಡ ಮಧ್ಯೆ ಒಂದು ದಿನವಾದರೂ ಹೊರಗಡೆ ಸುತ್ತಾಡಲು ಹೋಗಬೇಕು, ಜತೆಗೆ ಮಕ್ಕಳೂ ಇದ್ದಾರೆ ಹಾಗಾ ಕುಟುಂಬ ಸಮೇತ ಒಂದು ದಿನ ಸಣ್ಣದಾಗಿ ಟೂರ್​​ ಮಾಡಬೇಕು ಎಂಬ ಯೋಚನೆಯಲ್ಲಿ ನೀವಿದ್ದರೆ, KSTDC ಹೊರತಂದಿರುವ ಒಂದು ದಿನದ ಈ ಟೂರ್‌ ಪ್ಯಾಕೇಜ್‌ ನಿಮಗೆ ಸೂಕ್ತವಾಗಿದೆ. ದೇವನಹಳ್ಳಿ ಕೋಟೆ, ಚಿಕ್ಕ ಮಧುರೈ, ಶನಿಮಹಾತ್ಮ ಸ್ವಾಮಿ ದೇವಸ್ಥಾನ, ಶಿವಗಂಗೆ, ಗಂಗಾಧರೇಶ್ವರ, ಹೊನ್ನಾದೇವಿ ದೇವಸ್ಥಾನಗಳನ್ನು ಸೇರಿ ಬೆಂಗಳೂರಿನ ಗ್ರಾಮೀಣ ಪ್ರದೇಶಗಳಿಗೆ ಒಂದು ದಿನದ ಪ್ರವಾಸ ಮಾಡಬಹುದು.

ಗಣರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಎಸ್‌ಟಿಡಿಸಿ) ಬೆಂಗಳೂರು ಸುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ಹೊಸ ಪ್ರವಾಸ ಪ್ಯಾಕೇಜ್ ಹೊರತಂದಿದೆ. ಬಜೆಟ್‌ಸ್ನೇಹಿ ಪ್ರವಾಸ ಇದಾಗಿದ್ದು, ಪ್ರತಿ ಪ್ರಯಾಣಿಕರು ಕೇವಲ 830ರುಪಾಯಿ ಪ್ಯಾಕೇಜ್‌ನೊಂದಿಗೆ ಒಂದು ದಿನ ಪ್ರವಾಸ ಮಾಡಬಹುದು. ದೇವನಹಳ್ಳಿ ಕೋಟೆ, ಘಾಟಿ ಸುಬ್ರಹ್ಮಣ್ಯ, ಶಿವಗಂಗೆ, ಚಿಕ್ಕ ಮಧುರೈ ಹೀಗೆ ಸಾಕಷ್ಟು ಸುಂದರ ತಾಣಗಳು ಈ ಪ್ಯಾಕೇಜ್‌ನಲ್ಲಿದ್ದು, ಎಲ್ಲವನ್ನು ನೋಡಿಕೊಂಡು ಬರಬಹುದು.

ಪ್ರತಿದಿನದ ಕೆಲಸದ ಒತ್ತಡ ಮಧ್ಯೆ ಒಂದು ದಿನವಾದರೂ ಹೊರಗಡೆ ಸುತ್ತಾಡಲು ಹೋಗಬೇಕು, ಜತೆಗೆ ಮಕ್ಕಳೂ ಇದ್ದಾರೆ ಹಾಗಾ ಕುಟುಂಬ ಸಮೇತ ಒಂದು ದಿನ ಸಣ್ಣದಾಗಿ ಟೂರ್​​ ಮಾಡಬೇಕು ಎಂಬ ಯೋಚನೆಯಲ್ಲಿ ನೀವಿದ್ದರೆ, KSTDC ಹೊರತಂದಿರುವ ಒಂದು ದಿನದ ಈ ಟೂರ್‌ ಪ್ಯಾಕೇಜ್‌ ನಿಮಗೆ ಸೂಕ್ತವಾಗಿದೆ. ದೇವನಹಳ್ಳಿ ಕೋಟೆ, ಚಿಕ್ಕ ಮಧುರೈ, ಶನಿಮಹಾತ್ಮ ಸ್ವಾಮಿ ದೇವಸ್ಥಾನ, ಶಿವಗಂಗೆ, ಗಂಗಾಧರೇಶ್ವರ, ಹೊನ್ನಾದೇವಿ ದೇವಸ್ಥಾನಗಳನ್ನು ಸೇರಿ ಬೆಂಗಳೂರಿನ ಗ್ರಾಮೀಣ ಪ್ರದೇಶಗಳಿಗೆ ಒಂದು ದಿನದ ಪ್ರವಾಸ ಮಾಡಬಹುದು.

ಈ ಮಾಹಿತಿ ನಿಮ್ಮೊಂದಿಗಿರಲಿ

ಬೆಳಗ್ಗೆ 7.00 ಗಂಟೆಗೆ ಯಶವಂತಪುರ ಕೆಎಸ್‌ಟಿಡಿಸಿ ಕಚೇರಿಯಿಂದ ಪ್ರವಾಸ ಆರಂಭವಾಗುತ್ತದೆ

ಬೆಳಗ್ಗೆ 8.30 – 9.15ರವರೆಗೆ ದೇವನಹಳ್ಳಿ ಕೋಟೆಗೆ ಭೇಟಿ ನೀಡಿ

ಬೆಳಗ್ಗೆ 10.00 – ಬೆಳಿಗ್ಗೆ 11.00 ಘಾಟಿ ಸುಬ್ರಮಣ್ಯ ದೇವಸ್ಥಾನ

ಬೆಳಿಗ್ಗೆ 11.45 – ಮಧ್ಯಾಹ್ನ 1.00ರವರೆಗೆ ಚಿಕ್ಕ ಮಧುರೈ, ಶನಿಮಹಾತ್ಮ ಸ್ವಾಮಿ ದೇವಸ್ಥಾನ ಭೇಟಿ

ಮಧ್ಯಾಹ್ನ 1.30 – 2.00ರವರೆಗೆ ಮಧ್ಯಾಹ್ನದ ಊಟ

ಮಧ್ಯಾಹ್ನ 2.30 – ಸಂಜೆ 4.30 ಶಿವಗಂಗೆ, ಗಂಗಾಧರೇಶ್ವರ, ಹೊನ್ನಾದೇವಿ ದೇವಸ್ಥಾನಗಳಿಗೆ ಭೇಟಿ

ಸಂಜೆ 6.00ಗಂಟೆಗೆ ಯಶವಂತಪುರ ಕೆಎಸ್‌ಟಿಡಿಸಿ ಕಚೇರಿಗೆ ತಲುಪಿ ಪ್ರವಾಸ ಕೊನೆಗೊಳ್ಳುತ್ತದೆ

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..