ಕೋಟೆಯ ಆವರಣದಲ್ಲಿ ಬೆಳದಿಂಗಳ ಗುಮ್ಮಟ
ಮುಸ್ಸಂಜೆ `ಚಾಂದಿನಿ ಚಬೂತರಾ'ದಲ್ಲಿ ಕುಳಿತರೆ ಹುಣ್ಣಿಮೆಯ ಬೆಳದಿಂಗಳಲ್ಲಿ ಮಿಂದೆದ್ದ ಏಳೆಂಟು ಕಿಮೀ ದೂರದವರೆಗಿನ ಕಣಿವೆ ಪ್ರದೇಶ ಕಣ್ಮನ ತಣಿಸುತ್ತದೆ. ಚಂದಿರ ಉದಯಿಸಲು ಆರಂಭಿಸಿದಂತೆ ದೂರದ ಅಷ್ಟೂರಿನ ಚೌಖಂಡಿಯ ಹಿಂಭಾಗದ ಕೆರೆಯ ನೀರಿನ ಮೇಲೆ ಬೆಳಕು ಪ್ರತಿಫಲಿಸುತ್ತದೆ. ಕೆರೆಯಲ್ಲಿನ ನೀರು ಹಾಲು ತೊರೆಯಂತೆ ಕಾಣಿಸುತ್ತದೆ. ಇದರಿಂದ ಕೆರೆಯ ಸುತ್ತಮುತ್ತಲಿನ ಇಡೀ ಕಣಿವೆ ಪ್ರದೇಶ ಹುಣ್ಣಿಮೆಯ ಬೆಳದಿಂಗಳ ಸೊಬಗಿನ ತಾಣವಾಗಿ ಕಾಣುತ್ತದೆ.
- ಗುರುರಾಜ್ ಕುಲಕರ್ಣಿ
ಐತಿಹಾಸಿಕ ಮಹತ್ವ ಹೊಂದಿರುವ ಮತ್ತು ಅಭೇದ್ಯ ಬೀದರ್ ಕೋಟೆಯ ವಿಶಾಲ ಆವರಣದಲ್ಲಿರುವ `ಚಾಂದಿನಿ ಚಬೂತರಾ' (ಬೆಳದಿಂಗಳ ಗುಮ್ಮಟ) ಅದ್ಭುತ ಪ್ರೇಕ್ಷಣೀಯ ಸ್ಥಳ. ಇದು `ಹುಣ್ಣಿಮೆಯ ರಾತ್ರಿಯಲಿ' ಎಂಬ ಸ್ಯಾಂಡಲ್‌ವುಡ್ ಸಿನಿಮಾದ ಹೆಸರನ್ನು ಮತ್ತು `ಚಾಂದಿನಿ ರಾತ್ ಮೆ ಎಕ್ ಬಾರ್ ತುಜೆ ದೇಖಾ ಹೈ' ಎಂಬ ಬಾಲಿವುಡ್ ಸಿನಿಮಾದ ಹಾಡನ್ನು ಯಾರಿಗಾದರೂ ನೆನಪಿಗೆ ತರುತ್ತದೆ.
ಇದನ್ನೂ ಓದಿ: ಶ್ರೇಷ್ಠ 'ವರ್ಕ್‌ಕೇಷನ್' ತಾಣಗಳ ಪಟ್ಟಿಯಲ್ಲಿ ಮುಂಬೈ
`ಚಾಂದಿನಿ ಚಬೂತರಾ' ಬೆಳಕಿಗೆ ಬಾರದ ಮಾಣಿಕ್ಯವಾಗಿದೆ. ಹಿಂದುಳಿದ ಬೀದರ್ ಜಿಲ್ಲೆಯಲ್ಲಿನ ಈ ವೈಶಿಷ್ಠ್ಯವನ್ನು ಹೊಸ ಪೀಳಿಗೆಗೆ ಹಾಗೂ ನವ ಬೀದರ್‌ನವರಿಗೆ ಪರಿಚಯಿಸಲು ನನಗೆ ಹೆಮ್ಮೆ ಅನಿಸುತ್ತಿದೆ. ಬೀದರ್ ಕೋಟೆಯ ತಲಘಟ್ ದರ್ವಾಜಾ ಸಮೀಪವಿರುವ `ಚಾಂದಿನಿ ಚಬೂತರಾ' ಹುಣ್ಣಿಮೆಯ ಬೆಳದಿಂಗಳನ್ನು ಆಸ್ವಾದಿಸಲು ಪ್ರಶಸ್ತ ತಾಣವಾಗಿದೆ. ಮೋಡ ಕವಿದ ವಾತಾವರಣ ಇರಕೂಡದು. ನೇಸರ ತಿಳಿಯಾಗಿರಬೇಕು, ಸ್ವಚ್ಛವಾಗಿರಬೇಕು. ಅಂದಾಗ ಮಾತ್ರ `ಚಾಂದಿನಿ ಚಬೂತರಾ'ದಿಂದ ಪೂರ್ಣಿಮೆಯ ಬೆಳದಿಂಗಳನ್ನು ಕಣ್ಣುಗಳಲ್ಲಿ ತುಂಬಿಕೊಳ್ಳಲು ಸಾಧ್ಯ.

ಕೆರೆಯ ನೀರು : ಹಾಲು ತೊರೆ
ಮುಸ್ಸಂಜೆ `ಚಾಂದಿನಿ ಚಬೂತರಾ'ದಲ್ಲಿ ಕುಳಿತರೆ ಹುಣ್ಣಿಮೆಯ ಬೆಳದಿಂಗಳಲ್ಲಿ ಮಿಂದೆದ್ದ ಏಳೆಂಟು ಕಿಮೀ ದೂರದವರೆಗಿನ ಕಣಿವೆ ಪ್ರದೇಶ ಕಣ್ಮನ ತಣಿಸುತ್ತದೆ. ಚಂದಿರ ಉದಯಿಸಲು ಆರಂಭಿಸಿದಂತೆ ದೂರದ ಅಷ್ಟೂರಿನ ಚೌಖಂಡಿಯ ಹಿಂಭಾಗದ ಕೆರೆಯ ನೀರಿನ ಮೇಲೆ ಬೆಳಕು ಪ್ರತಿಫಲಿಸುತ್ತದೆ. ಕೆರೆಯಲ್ಲಿನ ನೀರು ಹಾಲು ತೊರೆಯಂತೆ ಕಾಣಿಸುತ್ತದೆ. ಇದರಿಂದ ಕೆರೆಯ ಸುತ್ತಮುತ್ತಲಿನ ಇಡೀ ಕಣಿವೆ ಪ್ರದೇಶ ಹುಣ್ಣಿಮೆಯ ಬೆಳದಿಂಗಳ ಸೊಬಗಿನ ತಾಣವಾಗಿ ಕಾಣುತ್ತದೆ.
ಚಾಂದಿನಿ ಚಬೂತರಾ ಇತಿಹಾಸ
1691ರಲ್ಲಿ ಚಾಂದಿನಿ ಚಬೂತರಾ ನಿರ್ಮಾಣವಾಯಿತು. ಅದು ಔರಂಗಜೇಬನ ಕಾಲ. ಬಹಮನಿ ಹಾಗೂ ಬರೀದ್ ಷಾಹಿ ಆಳ್ವಿಕೆಯ ಬಳಿಕ ಬೀದರ್ ನಗರವನ್ನು ಔರಂಗ್‌ಜೇಬ್ 1656ರಲ್ಲಿ ವಶಪಡಿಸಿಕೊಂಡ. ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳಲು ಹಮ್ಸ್-ಉದ್ದೀನ್-ಖಾನ್ ಎಂಬಾತನನ್ನು ರಾಜ್ಯಪಾಲನನ್ನಾಗಿ ನೇಮಕ ಮಾಡಿದ್ದ. ಸಂಗೀತದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಖಾನ್ ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ಮತ್ತು ರಾಜಾಶ್ರಯ ನೀಡಿದ್ದ ಎನ್ನಲಾಗಿದೆ.

`ಚಾಂದಿನಿ ಚಬೂತರಾ' ಪ್ರಚಾರದ ಕೊರತೆಯಿಂದ ಬಳಲುತ್ತಲಿದೆ. ಪ್ರವಾಸೋದ್ಯಮ ಇಲಾಖೆ ಮತ್ತು ಬೀದರ್ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ. ಇಲ್ಲವಾದಲ್ಲಿ `ಕುಛ್ ಜನ್ನತೇ ಜಮೀನ್ ಪರ್ ಭೀ ಹೈ. ಜಹಾ ಜಾನಾ ಸಬ್ ಕಾ ನಸೀಬ್ ನಹೀ ಎನ್ನುವಂತಾಗುತ್ತದೆ.