ಉತ್ತರ ಕನ್ನಡವೆಂದರೆ ಜಲಪಾತವಷ್ಟೇ ಅಲ್ಲ...
ಶಿರಸಿ ನಗರವು ಹಚ್ಚ ಹಸುರಿನ ಕಾಡುಗಳಿಂದ ತುಂಬಿದ ರಮಣೀಯ ಮನಮೋಹಕ ತಾಣಗಳಿಂದ ಕಣ್ಮನ ಸೆಳೆಯುವಂತಿದೆ.ಇದೊಂದು ವಾಣಿಜ್ಯ ಕೇಂದ್ರವಾಗಿದೆ. ಅಡಿಕೆ,ತೆಂಗು ,ಬತ್ತ, ವೆನಿಲಾ, ಕಾಳುಮೆಣಸು ಇಲ್ಲಿ ಬೆಳೆಯುತ್ತಾರೆ. ಅಡಿಕೆ ತೋಟ, ಕಾಡು ಜಲಪಾತ, ಅಡಿಕೆ ಮಾರಾಟ ಇವುಗಳಿಗೆ ಈ ನಗರ ಹೆಸರು ಪಡೆದಿದೆ.
- ರಾಜೇಶ್ವರಿ
ಮಲೆನಾಡು ಸೀಮೆ ಗಂಡು ಮೆಟ್ಟಿದ ನಾಡು ಎಂಬ ಖ್ಯಾತಿ ಗಳಿಸಿದ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಭಾಗಗಳು ವಿಶೇಷ ಪ್ರದೇಶವೆಂದೇ ಹೇಳಬಹುದಾಗಿದೆ. ನಾರ್ಥ್ ಕೆನರಾ ಎಂದು ಕರೆಯಲ್ಪಡುವ ಉತ್ತರ ಕನ್ನಡ ಜಿಲ್ಲೆಯು ಕರ್ನಾಟಕ ರಾಜ್ಯದ ವಾಯುವ್ಯ ದಿಕ್ಕಿನಲ್ಲಿದೆ. ಈ ಕೊಂಕಣ ಜಿಲ್ಲೆಯ ಉತ್ತರಕ್ಕೆ ಗೋವಾ ರಾಜ್ಯ ಮತ್ತು ಬೆಳಗಾವಿ ಜಿಲ್ಲೆಗಳು ಇರುತ್ತದೆ. ಪೂರ್ವಕ್ಕೆ ಧಾರವಾಡ ಮತ್ತು ಹಾವೇರಿ ಜಿಲ್ಲೆಗಳು, ದಕ್ಷಿಣ ದಿಕ್ಕಿಗೆ ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳನ್ನು ಹೊಂದಿದೆ. ಪಶ್ಚಿಮಕ್ಕೆ ಅರಬ್ಬಿ ಸಮುದ್ರ ಆವೃತವಾಗಿದೆ. ಜಿಲ್ಲಾ ಕೇಂದ್ರ ಕಾರವಾರವಿದ್ದು ಪ್ರವಾಸೋದ್ಯಮಕ್ಕೆ ಹೆಚ್ಚಿನ ಮಹತ್ವ ಪಡೆದಿದೆ. ಈ ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ಭವ್ಯಯುತ ಪರ್ವತಸಿರಿ ನೆಲೆಸಿದೆ.
ಹಲವಾರು ಗಮ್ಯ ವೈಭವೋಪೇತ ಆಕರ್ಷಣೀಯ ಪ್ರವಾಸಿ ತಾಣಗಳು ಈ ಜಿಲ್ಲೆಯಲ್ಲಿ ನೋಡುಗರ ಕಣ್ಮನ ಸೆಳೆಯಲು ಹೆಡೆಯೆತ್ತಿ ನಿಂತಿದೆ. ವೀಕ್ಷಣೆಗೆ ಹೋಗಿ ಬರಲು ಪ್ರವಾಸಿಗರನ್ನು ಕೈಬೀಸಿ ಕರೆಯುವಂಥ ಸಮರ್ಪಕ ರಸ್ತೆಗಳು ರೈಲು ಮಾರ್ಗಗಳು ಉತ್ತಮವಾಗಿ ನಿರ್ಮಾಣ ಗೊಂಡಿದೆ.
ಪ್ರವಾಸಿಗರು ತಮ್ಮ ಪ್ರವಾಸವನ್ನು ಕಡಲ ತೀರ ಕಾರವಾರದಿಂದ ಪ್ರಾರಂಭಿಸಿದರೆ ಉತ್ತಮ ಎನ್ನಬಹುದು. ಕಾರವಾರ ಜಿಲ್ಲೆಯಲ್ಲಿ ಧಾರ್ಮಿಕ ಪುಣ್ಯ ಕ್ಷೇತ್ರಗಳು ಪ್ರೇಕ್ಷಣೀಯ ಸ್ಥಳಗಳು, ಪ್ರಸಿದ್ಧ ಸಮುದ್ರ ತೀರಗಳು ಕಣ್ಮನ ಸೆಳೆಯುವ ಐತಿಹಾಸಿಕ ಸ್ಮಾರಕ ಸ್ಥಳಗಳು, ಕೈ ಬೀಸಿ ಪ್ರೇಕ್ಷಕರನ್ನು ಕರೆಯುತ್ತಿದೆ. ಪ್ರಸ್ತುತ ಲೇಖನದಲ್ಲಿ ಕೇವಲ ಐತಿಹಾಸಿಕ ಮತ್ತು ಧಾರ್ಮಿಕ ಮೌಲ್ಯವಿರುವ ಆಯ್ದ ಜಾಗಗಳನ್ನು ಪರಿಚಯಿಸುತ್ತಿದ್ದೇವೆ. ಮುಂದಿನ ಲೇಖನದಲ್ಲಿ ಪ್ರಕೃತಿಸೌಂದರ್ಯದ ತಾಣಗಳನ್ನು ನೋಡಬಹುದು.

ಶಿರಸಿ ತಾಲೂಕು ಬನವಾಸಿ
ಬನವಾಸಿ ಪಟ್ಟಣವು ಉತ್ತರ ಕನ್ನಡ ಜಿಲ್ಲೆಯ ವರದಾ ನದಿಯ ಎಡದಂಡೆಯ ಶಿರಸಿ ಮತ್ತು ಸೊರಬ ಹೋಗುವ ದಾರಿಯಲ್ಲಿದೆ. ಶಿರಸಿ ಪೇಟೆಯಿಂದ ಕೇವಲ ಇಪ್ಪತ್ನಾಲ್ಕು ಕಿ.ಮಿ. ದೂರದಲ್ಲಿದೆ. ಕದಂಬರ ಕಾಲದಲ್ಲಿ ವೈಜಯಂತಿಪುರ ಹೆಸರಿನ ವೈಭವೋಪೇತ ರಾಜಧಾನಿ ಎನಿಸಿಕೊಂಡಿತ್ತು. ಪ್ರತಿ ವರ್ಷ ಇಲ್ಲಿ ಕದಂಬೋತ್ಸವ ಜಾತ್ರೆಯಾಗಿ ನಡೆಯುತ್ತದೆ. ಸಂಗೀತ ನೃತ್ಯ ನಾಟಕ ಸಾಂಸ್ಕೃತಿಕ ಕಾರ್ಯಕ್ರಮಗಳು ಸದಾ ನಡೆಯುತ್ತಿರುತ್ತದೆ. ಪಂಪ ಪ್ರಶಸ್ತಿಯನ್ನು ಮೊದಲು ಹುಟ್ಟು ಹಾಕಿದ ಹೆಗ್ಗಳಿಕೆಗೂ ಈ ಸ್ಥಳ ಪ್ರಸಿದ್ಧಿ ಪಡೆದಿದೆ.ಇಲ್ಲಿ ಮಧುಕೇಶ್ವರ ದೇವಾಲಯವೂ ಇರುತ್ತದೆ.
ಶಿರಸಿ ನಗರ
ಶಿರಸಿ ನಗರವು ಹಚ್ಚ ಹಸುರಿನ ಕಾಡುಗಳಿಂದ ತುಂಬಿದ ರಮಣೀಯ ಮನಮೋಹಕ ತಾಣಗಳಿಂದ ಕಣ್ಮನ ಸೆಳೆಯುವಂತಿದೆ.ಇದೊಂದು ವಾಣಿಜ್ಯ ಕೇಂದ್ರವಾಗಿದೆ. ಅಡಿಕೆ,ತೆಂಗು ,ಬತ್ತ, ವೆನಿಲಾ, ಕಾಳುಮೆಣಸು ಇಲ್ಲಿ ಬೆಳೆಯುತ್ತಾರೆ. ಅಡಿಕೆ ತೋಟ, ಕಾಡು ಜಲಪಾತ, ಅಡಿಕೆ ಮಾರಾಟ ಇವುಗಳಿಗೆ ಈ ನಗರ ಹೆಸರು ಪಡೆದಿದೆ.
ಮಾರಿಕಾಂಬಾ ದೇವಾಲಯ ಈ ನಗರದಲ್ಲಿ ಇರುತ್ತದೆ. ಎರಡು ವರ್ಷಕ್ಕೊಮ್ಮೆ ದೇವಿ ಜಾತ್ರೆ ನಡೆಯುತ್ತದೆ. ಈ ಜಾತ್ರೆಯು ಎಂಟು ದಿವಸಗಳ ಕಾಲ ನಡೆಯುತ್ತದೆ. ಇದರ ಹತ್ತಿರಕ್ಕೆ ಯಾಣ, ಬನವಾಸಿ ಸೋಂದಾ ಸ್ವರ್ಣವಲ್ಲಿ ಮಠವಿದೆ. ಇದು ಮಾಧ್ವರ ಸ್ವಾದಿ ಮಠವಾಗಿದೆ. ವಾದಿರಾಜರ ಬೃಂದಾವನ ಜೈನ ಮಠವೂ ಇಲ್ಲಿರುವುದು.
ಹತ್ತಿರದಲ್ಲಿಯೇ 17 ಕಿ.ಮಿ ದೂರದಲ್ಲಿ ಪ್ರೇಕ್ಷಣೀಯ ಸೊಬಗನ್ನು ಹೊತ್ತ ದೇವಿಮನೆ ಘಟ್ಟವನ್ನು ನೋಡ ಬಹುದಾಗಿದೆ.ಇದು ಪ್ರಕೃತಿ ಸೌಂದರ್ಯ ವೀಕ್ಷಣೆಯ ಸುಂದರ ತಾಣವಾಗಿದೆ. ಶರಾವತಿ ನದಿ ದಾರಿಯಲ್ಲಿ ಕಾಡು ಪ್ರಾಣಿಗಳು ಅಲ್ಲಲ್ಲಿ ಉದ್ದುದ್ದವಾಗಿ ಹಾವಿನಂತೆ ಹರಿಯುವ ಝರಿ ಧಾರೆಗಳಿರುತ್ತದೆ. ಸುಂದರ ಮನಮೋಹಕ ದೃಶ್ಯಗಳನ್ನು ನೋಡಲು ಕಣ್ಣೆರಡು ಸಾಲದು. ಪ್ರವಾಸಿಗರ ಅನುಕೂಲಕ್ಕೆ ಬಸ್ಸುಗಳು ಸಾಕಷ್ಟು ಓಡಾಡುತ್ತದೆ.
ಶಿರಸಿ ಮಾರ್ಗವಾಗಿ ಕುಮಟಾ ತಾಲೂಕುಗಳಿಗೆ ಬಸ್ಸುಗಳ ಸಂಚಾರ ಮಾಡುವಾಗ ಮಂಜಗುಣಿ ಎಂಬ ಊರಿನ ಹೆಸರು ಕಂಡು ಬರುತ್ತದೆ. ಮಂಜಗುಣಿಯಲ್ಲಿ ವೆಂಕಟ್ರಮಣ ದೇವಾಲಯವಿರುತ್ತದೆ. ಅದು ಎರಡನೇ ತಿರುಪತಿ ತಿರುಮಲ ದೇವಸ್ಥಾನ ಎಂಬ ಖ್ಯಾತಿಯನ್ನು ಪಡೆದುಕೊಂಡ ಪವಿತ್ರ ಕ್ಷೇತ್ರವಾಗಿದೆ. ಮಕ್ಕಳ ವಿವಾಹ ನಿಧಾನವಾದರೆ ವಿವಾಹಕ್ಕೆ ವಿಘ್ನಗಳು ಮೇಲಿಂದ ಮೇಲೆ ಬಂದು ಸಂಬಂಧ ಪರಸ್ಪರ ಹೊಂದಾಣಿಕೆ ಆಗದಿರುವ ಸಂದರ್ಭದಲ್ಲಿ ಕಲ್ಯಾಣೋತ್ಸವ ಮಾಡಿಸಿದರೆ ಶೀಘ್ರ ವಿವಾಹ ನಡೆಯುತ್ತದೆ ಎಂಬ ಪ್ರತೀತಿ ಇರುವುದು. ಇದು ಶಿರಸಿ ನಗರದಿಂದ 25 ಕಿ .ಮಿ ದೂರದಲ್ಲಿದೆ. ಉತ್ತಮ ರಸ್ತೆ ಇರುತ್ತದೆ.
ಸ್ವರ್ಣವಲ್ಲಿ ಮಠ
ಇಲ್ಲಿಯೇ ಇರುವ ಸೋಂದಾ ಸ್ವರ್ಣವಲ್ಲಿ ಮಠದ ಶ್ರೀಗಳು ಲೋಕ ಕಲ್ಯಾಣಕ್ಕಾಗಿ ಪ್ರತಿ ವರ್ಷ ಭಗವದ್ಗೀತೆ ಪಠಣದ ಅಭಿಯಾನ ಕಾರ್ಯವನ್ನು ಶಾಲಾ ಕಾಲೇಜುಗಳಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ದಶಕಗಳಿಂದ ಕೈಗೆತ್ತಿಕೊಂಡು ಕರ್ನಾಟಕ ರಾಜ್ಯದ ಎಲ್ಲಾ 34 ಜಿಲ್ಲೆಗಳಲ್ಲೂ ಶೈಕ್ಷಣಿಕ ಜಿಲ್ಲೆಗಳು ಸೇರಿದಂತೆ ಭಕ್ತಿ ಮಾರ್ಗದ ದಾರಿಯನ್ನು ಪ್ರಚಾರಪಡಿಸಿದ್ದಾರೆ. ಭಗವದ್ಗೀತೆ ಅಭಿಯಾನದಲ್ಲಿ ಅಧ್ಯಾಯ ಪಠಣಗಳ ಪ್ರಾರಂಭ ಮತ್ತು ಜಿಲ್ಲಾ ಕೇಂದ್ರ ಸ್ಥಳಗಳಲ್ಲಿ ಸಮಾಪ್ತಿ ಮಾಡುವ ರಾಜ್ಯ ಮಟ್ಟದ ಅಧ್ಯಾತ್ಮಿಕ ಕಾರ್ಯಕ್ರಮ ನಡೆಸುತ್ತಾ ಬಂದಿದ್ದಾರೆ. ಭಗವದ್ಗೀತೆ ಶ್ಲೋಕ ಪಠಣ ಕುರಿತು ತರಬೇತುದಾರರನ್ನು ಅಣಿಗೊಳಿಸಿದ್ದಾರೆ .ಇಂಥ ಸ್ವಾಮಿ ಸಂತರು ಸ್ವರ್ಣವಲ್ಲಿ ಶ್ರೀಗಳಾಗಿ ಇರುವುದು ಮಲೆನಾಡು ಸೀಮೆ ಕರಾವಳಿ ಪ್ರದೇಶದವವರ ಪುಣ್ಯವಾಗಿದೆ.

ಭಟ್ಕಳ ತಾಲೂಕು ಮುರ್ಡೇಶ್ವರ
ಭಟ್ಕಳ ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಕೇಂದ್ರ ಬಿಂದುವಾಗಿದೆ.ಮಂಗಳೂರು ಮತ್ತು ಮುಂಬೈ ಮಧ್ಯದಲ್ಲಿ ಚಲಿಸುವ ಕೊಂಕಣ ರೈಲ್ವೆ ಪ್ರಮುಖ ನಿಲ್ದಾಣವಾಗಿದೆ. ಇದು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುತ್ತದೆ. ಜೈನರ ನೆಲೆಬೀಡು ಇದಾಗಿದೆ. ವಿಶ್ವದಲ್ಲೇ ಎರಡನೇ ಹೆಸರು ಪಡೆದ ಶಿವನ ಮೂರ್ತಿ ಮುರ್ಡೇಶ್ವರದಲ್ಲಿದೆ. ಇದು ಪಂಚ ಕ್ಷೇತ್ರಗಳಲ್ಲಿ ಒಂದಾದ ಶಿವನ ಮೂರ್ತಿಯಾಗಿದೆ. ಪ್ರವಾಸಿಗರನ್ನು ಹಾಗೂ ಪ್ರಕೃತಿ ಪ್ರಿಯರನ್ನು ಆಕರ್ಷಿಸುವ ಪವಿತ್ರ ಸುಂದರ ಸ್ಥಳ ಇದಾಗಿದೆ. ಈ ಪವಿತ್ರ ಕ್ಷೇತ್ರವನ್ನು ಆರ್.ಎನ್.ಶೆಟ್ಟಿಯವರು ನಿರ್ಮಾಣ ಮಾಡಿದ್ದರು. ಇಲ್ಲಿ 24 ತೀರ್ಥಂಕರರ ವಿಗ್ರಹಗಳು ಸುಂದರವಾದ ಪದ್ಮಾವತಿ ದೇವಾಲಯ ಚಂದ್ರಗಿರಿಯ ಬೆಟ್ಟ ಇರುವುದು. ಮುರ್ಡೇಶ್ವರದ ಪ್ರೇಕ್ಷಣೀಯ ಸ್ಥಳಗಳಲ್ಲಿ 30ಕ್ಕಿಂತ ಹೆಚ್ಚಿನ ಜೈನ ಬಸದಿಗಳು ಇರುತ್ತವೆ. ಇಲ್ಲಿಯ ಅಣೆಕಟ್ಟು ಜನಗಳ ಗಮನ ಸೆಳೆಯುವಂತಿದೆ.
ಆಳ್ವೆಕೋಡಿಯಲ್ಲಿ ಶಕ್ತಿ ದೇವತೆಯ ವಾಸವಿರುವುದು. 64 ಅಂತಸ್ತಿನ ಗೋಪುರ ಇಲ್ಲಿದೆ. ದುರ್ಗಾ ಪರಮೇಶ್ವರಿ ದೇವಸ್ಥಾನ ಕೂಡಾ ಇಲ್ಲಿಯೇ ಸಮೀಪವಿದ್ದು ಆ ತಾಯಿ ಮಾತೆ ಎಲ್ಲರನ್ನೂ ಕಾಪಾಡುತ್ತಾಳೆ.
ಚೆನ್ನ ಭೈರಾದೇವಿ
ಚೆನ್ನ ಭೈರಾದೇವಿಯು ದಿನಾಂಕ 01.01.1536 ರಲ್ಲಿ ಭಟ್ಕಳದಲ್ಲಿ ಹುಟ್ಟಿದ್ದಳು. ಇವಳು ಸಾಳುವ ರಾಜ ವಂಶಸ್ಥೆ ಆಗಿದ್ದಳು. 16 ನೇ ಶತಮಾನದಲ್ಲಿ ಒಬ್ಬ ರಾಣಿಯಾಗಿ ಇಲ್ಲಿ ಆಳ್ವಿಕೆ ನಡೆಸಿದವಳು ಆಗಿದ್ದಳು. ಸುದೀರ್ಘ 54 ವರ್ಷಗಳ ಕಾಲ ರಾಜ್ಯಭಾರ ನಡೆಸಿದ ಕೀರ್ತಿಗೆ ಪಾತ್ರಳಾದಳು. 1552ರಿಂದ 1606ರವರೆಗೆ ಈ ರಾಣಿಯ ರಾಜ್ಯಭಾರ ಭಟ್ಕಳ ಪ್ರಾಂತ್ಯಗಳಲ್ಲಿ ನಡೆಯಿತು. 1559 ರಿಂದ 1570 ರಲ್ಲಿ ಪೋರ್ಚುಗೀಸರ ವಿರುದ್ಧ ಯುದ್ಧವನ್ನು ಮಾಡಿ ಗೆದ್ದು ಹೆಸರುವಾಸಿಯಾದಳು. ಈ ಕಾರಣದಿಂದಾಗಿ ವಾಣಿಜ್ಯ ವ್ಯಾಪಾರ ಸಂಬಂಧಗಳು ಹೆಚ್ಚು ಹೆಚ್ಚಾಗಿ ಮುಂದುವರಿದವು. ಭಟ್ಕಳ ಮತ್ತು ಹೊನ್ನಾವರ ಬಂದರುಗಳ ಮೂಲಕ ಯುರೋಪ್ ಮತ್ತು ಅರಬ್ ಪ್ರದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಮೆಣಸು ಮತ್ತು ಮಸಾಲೆ ಪದಾರ್ಥಗಳು ರಪ್ತು ಆಗುತ್ತಿದ್ದವು. ವ್ಯಾಪಾರ ನಿಯಂತ್ರಣಕ್ಕಾಗಿ ಅಘನಾಶಿನಿ ನದಿ ದಡದಲ್ಲಿ ಮಿರ್ಜಾನ್ ಕೋಟೆಯನ್ನು ನಿರ್ಮಿಸಿದಳು. ಆ ಕಾರಣ ಇವರಿಗೆ ಮಹಾಮಂಡಲೇಶ್ವರ ಮೆಣಸಿನ ರಾಣಿ ಎಂಬ ಬಿರುದು ನಾಮಾಂಕಿತ ಗೊಳಿಸಿತು.ಈ ರಾಣಿಯ ಕಂಚಿನ ಪ್ರತಿಮೆ ಅಲ್ಲಿ ಅನಾವರಣಗೊಂಡು ರಾರಾಜಿಸುವುದು ನೋಡಲು ತುಂಬಾ ಹೆಮ್ಮೆ ಅನಿಸುವುದು.
ಭಟ್ಕಳ ತಾಲೂಕಿನಲ್ಲಿ ಇರುವ ಹಾಡವಳ್ಳಿ( ಸಂಗೀತಪುರ) ಮತ್ತು ಗೇರುಸೊಪ್ಪ ಊರುಗಳನ್ನು ಈ ರಾಣಿಯು ಆಳುತ್ತಿದ್ದಳು. ಆ ಪ್ರಯುಕ್ತ ಈ ರಾಣಿಯನ್ನು ಗೇರುಸೊಪ್ಪೆ ರಾಣಿ ಎಂದು ಕರೆಯಲು ಜನರುಗಳು ಪ್ರಾರಂಭ ಮಾಡಿದರು. ಭಾರತ ದೇಶದ ಇತಿಹಾಸದಲ್ಲಿ ಸುದೀರ್ಘ ಆಡಳಿತ ನಡೆಸಿದ ರಾಣಿ ಎಂಬ ಹೆಗ್ಗಳಿಕೆ ಪಡೆದ ಏಕೈಕ ರಾಣಿ ಎಂದರೆ ಚೆನ್ನಭೈರಾದೇವಿ ಎನ್ನಬಹುದಾಗಿದೆ. ಈ ರಾಣಿಯು ಎಲ್ಲ ಕಡೆಗಳಲ್ಲೂ ದೇವಾಲಯ ನಿರ್ಮಿತ ಕಾರ್ಯಗಳನ್ನು ಮಾಡುವ ಮೂಲಕ ಪ್ರಸಿದ್ಧಿ ಆದಳು. 70 ವರುಷಗಳ ಕಾಲ ಬದುಕಿ ಉತ್ತಮೋತ್ತಮ ಕಾರ್ಯ ನಿರ್ವಹಿಸಿ 1 ಜೂನ್ 1606ರಲ್ಲಿ ಇಹ ಲೋಕ ಯಾತ್ರೆಗೆ ವಿರಾಮ ನೀಡಿದಳು.
ಗೋಕರ್ಣ ಕ್ಷೇತ್ರ
ಗೋಕರ್ಣ ಕ್ಷೇತ್ರವು ಭಾರತ ದೇಶದ ಪ್ರಮುಖ ಪವಿತ್ರ ಕ್ಷೇತ್ರವಾಗಿದೆ. ಈ ಪವಿತ್ರ ಕ್ಷೇತ್ರದಲ್ಲಿ ಮಹಾಬಲೇಶ್ವರನ ದೇವಾಲಯವಿದೆ. ಪಂಚ ಕ್ಷೇತ್ರಗಳಲ್ಲಿ ಗೋಕಣೇಶ್ವರ ದೇವಾಲಯವು ಒಂದಾಗಿದೆ. ಜಗದೊಡೆಯ ಪರಶಿವನು ಆತ್ಮಲಿಂಗ ರೂಪದಲ್ಲಿ ಇಲ್ಲಿ ನೆಲಸಿರುವನೆಂಬ ನಂಬಿಕೆ ಇದೆ. ಅರಬ್ಬಿ ಸಮುದ್ರದ ತಟದಲ್ಲಿ ಗೋಕರ್ಣ ಮಹಾಬಲೇಶ್ವರ ದೇವಾಲಯವಿದೆ.ಈ ದೇವನನ್ನು ಸಾರ್ವಭೌಮ ಎಂದು ಕರೆಯಲಾಗುತ್ತದೆ