Wednesday, April 8, 2026
Wednesday, April 8, 2026

ಸಾಗರದ ಸ್ವರ್ಗಕ್ಕೆ ಸ್ವಾಗತ

ರಹಸ್ಯಗಳನ್ನು ನೋಡುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ವಸ್ತುಸ್ಥಿತಿಗಿಂತ ಊಹೆಯನ್ನೇ ಜನರು ಹೆಚ್ಚಾಗಿ ಬಯಸುತ್ತಾರೆ. ಭೂಮಿಯ ಮೇಲಿರುವುದು, ಆಕಾಶದಲ್ಲಿರುವುದನ್ನು ಸದಾ ನೋಡುವವರಿಗೆ, ನೀರಿನೊಳಗಿನ ಅದರಲ್ಲೂ ಪಾತಾಳದಷ್ಟು ಆಳವಿರುವ ಸಮುದ್ರದೊಳಗಿನ ಲೋಕವನ್ನು ನೋಡುವುದು ಹಲವರ ಕುತೂಹಲದ ವಿಷಯವಾಗಿರುತ್ತದೆ. ಅಂಥವರಿಗೆ ಬೆಂಗಳೂರಿನಲ್ಲಿನ ಅಕ್ವೇರಿಯಂ ಪ್ಯಾರಡೈಸ್‌ ಒಂದು ಅಕ್ಷಯ ಪಾತ್ರೆ ಎನ್ನಬಹುದು. ನೋಡಬೇಕೆಂದುಕೊಂಡ ಎಲ್ಲಾ ಸಮುದ್ರ ಜೀವಿಗಳನ್ನು ಅಡಿ ದೂರದಲ್ಲೇ ನಿಂತು ನೋಡಬಹುದು.

ರಹಸ್ಯಗಳನ್ನು ನೋಡುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ವಸ್ತುಸ್ಥಿತಿಗಿಂತ ಊಹೆಯನ್ನೇ ಜನರು ಹೆಚ್ಚಾಗಿ ಬಯಸುತ್ತಾರೆ. ಭೂಮಿಯ ಮೇಲಿರುವುದು, ಆಕಾಶದಲ್ಲಿರುವುದನ್ನು ಸದಾ ನೋಡುವವರಿಗೆ, ನೀರಿನೊಳಗಿನ ಅದರಲ್ಲೂ ಪಾತಾಳದಷ್ಟು ಆಳವಿರುವ ಸಮುದ್ರದೊಳಗಿನ ಲೋಕವನ್ನು ನೋಡುವುದು ಹಲವರ ಕುತೂಹಲದ ವಿಷಯವಾಗಿರುತ್ತದೆ. ಅಂಥವರಿಗೆ ಬೆಂಗಳೂರಿನಲ್ಲಿನ ಅಕ್ವೇರಿಯಂ ಪ್ಯಾರಡೈಸ್‌ ಒಂದು ಅಕ್ಷಯ ಪಾತ್ರೆ ಎನ್ನಬಹುದು. ನೋಡಬೇಕೆಂದುಕೊಂಡ ಎಲ್ಲಾ ಸಮುದ್ರ ಜೀವಿಗಳನ್ನು ಅಡಿ ದೂರದಲ್ಲೇ ನಿಂತು ನೋಡಬಹುದು.

ನೀರಿನೊಳಗಿನ ಲೋಕ

ಅಕ್ವೇರಿಯಂ ಪ್ಯಾರಡೈಸ್‌ನಲ್ಲಿ ಸಮುದ್ರದೊಳಗಿನ ಲೋಕವನ್ನು ಮರುಸೃಷ್ಟಿಸಲಾಗಿದೆ. ಇಲ್ಲಿ ವೈವಿಧ್ಯಮಯ ಸಮುದ್ರ ಜೀವಿಗಳನ್ನು ನೀವು ಕಣ್ತುಂಬಿಕೊಳ್ಳಬಹುದು. ಸ್ಟಿಂಗ್ರೇಗಳಿಗೆ ಆಹಾರ ನೀಡಬಹುದು. ನಕ್ಷತ್ರ ಮೀನುಗಳನ್ನು ಮುಟ್ಟಲೂಬಹುದು. ವಾಕ್‌ ಥ್ರೂ ಅಕ್ವೇರಿಯಂ ನೋಡಲು ಹೊರಟರೆ, ವೈವಿಧ್ಯಮಯ ಸಿಹಿನೀರಿನ ಮೀನುಗಳ ಸಂಕುಲ ಮತ್ತು ಪ್ರಪಂಚದಾದ್ಯಂತ ಇರುವ ಸಮುದ್ರ ಜೀವಿಗಳನ್ನು ನೋಡಬಹುದು. ಜೆಲ್ಲಿ ಮೀನುಗಳಿಂದ ಹಿಡಿದು ಶಾರ್ಕ್‌ಗಳವರೆಗೆ ಎಲ್ಲಾ ಥರದ ಮೀನುಗಳು ಇಲ್ಲಿವೆ. ಥೇಟ್‌ ಸಮುದ್ರ ಜಗತ್ತಿಗೆ ನಿಮ್ಮನ್ನು ನೀವು ತೆರೆದುಕೊಂಡಂಥ ಅನುಭವ ನಿಮ್ಮಲ್ಲಿರುತ್ತದೆ. ಕಾಣದ ಕಡಲೊಳಗಿನ ಜಗತ್ತನ್ನು ನೋಡಬಯಸುವ ನಿಮ್ಮ ಕಣ್ಣುಗಳಿಗೆ ಈ ಅಕ್ವೇರಿಯಂ ಪ್ಯಾರಡೈಸ್‌ ತೋರಿಸಿ. ಅವು ಮತ್ತೆ ಚೇತನ ತುಂಬಿಕೊಳ್ಳುತ್ತವೆ.

New Project (90)

ಭಾರತದ ಅತಿದೊಡ್ಡ ನೀರಿನೊಳಗಿನ ಟನಲ್‌

ಬೆಂಗಳೂರಿನಲ್ಲಿ ನೆಲೆಯಾಗಿರುವ ಈ ಅಕ್ವೇರಿಯಂ ಟನಲ್‌ ಭಾರತದಲ್ಲೇ ಅತಿ ಉದ್ದದ ನೀರಿನೊಳಗಿನ ಟನಲ್‌ ಆಗಿದೆ. ಹಾಗಾಗಿ ಭಾರತ ಇಡೀ ಓಡಾಡಿದರೂ ಇಂಥದ್ದು ಮತ್ತೊಂದು ಟನಲ್‌ ನೋಡಲು ಸಿಗದು ಎನ್ನಬಹುದು. ಸಿಂಗಾಪುರದಂಥ ದೇಶಕ್ಕೆ ಅಂಡರ್‌ ವಾಟರ್‌ ಟನಲ್‌ ನೋಡಲು ಹೋಗುವ ಹಲವರಿದ್ದಾರೆ. ಲಕ್ಷಾಂತರ ರುಪಾಯಿ ಖರ್ಚು ಮಾಡಿ ಸಿಂಗಾಪುರಕ್ಕೆ ಹೋಗಿ ಅಲ್ಲಿನ ಟನಲ್‌ ನೋಡುವ ಬದಲು ನಮ್ಮೂರಿನಲ್ಲೇ ಅಂಥ ಅವಕಾಶಗಳಿರುವಾಗ ಮಿಸ್‌ ಮಾಡುವುದು ಯಾಕೆ?

New Project (87)

ಸಮುದ್ರ ಸುಂದರಿಯರು

ಸಮುದ್ರ ಸುಂದರಿ, ಅದೇ ಮರಮೇಡ್‌ಗಳನ್ನೂ ಈ ಅಕ್ವೇರಿಯಮ್‌ ಪ್ಯಾರಡೈಸ್‌ನಲ್ಲಿ ನೋಡಬಹುದು, ನಿಜವಾದ ಮರ್‌ಮೇಡ್‌ಗಳಲ್ಲ. ಅವು ಟ್ರೇನ್ಡ್‌ ತರುಣಿಯರು. ನೀರಿನೊಳಗೇ ಥೇಟ್‌ ಜಲಕನ್ಯೆಯರ ಉಡುಪುತೊಟ್ಟು, ಇತ್ತಿಂದತ್ತ ಅತ್ತಿಂದಿತ್ತ ಈಜುತ್ತಾ ನಿಮ್ಮ ಕಣ್ಣಿಗೆ ಕಾಣಿಸಿಕೊಳ್ಳುತ್ತಾರೆ. ನೀರಿನೊಳಗೆ ಸಾಕಷ್ಟು ಹೊತ್ತು ಈಜಲು, ನಿಮ್ಮನ್ನು ರಂಜಿಸಲೂ ಅವರು ಬಲ್ಲರು. ನೀವು ಬೇಕಾದರೆ ಅವರೊಟ್ಟಿಗೆ ರೀಲ್ಸ್‌ ಮಾಡಿಕೊಳ್ಳಬಹುದು. ಸೋಶಿಯಲ್‌ ಮೀಡಿಯಾಗಳಲ್ಲೂ ಹರಿಬಿಡಬಹುದು. ಈ ಜಲಕನ್ಯೆಯರು ಹೀಗೆ ಈಜುತ್ತಿರುವಾಗ ಹಿನ್ನೆಲೆಯಲ್ಲಿನ ಕಲಾಕೃತಿಗಳಿಂದಾಗಿ ಥೇಟ್‌ ಇಂಗ್ಲಿಷ್‌ ಮೂವಿಗಳ ಫೀಲ್‌ ನೀಡುತ್ತದೆ.

ಪ್ಯಾರಾಶೂಟ್‌ ಏರಿ ಅಟ್ಲಾಂಟಿಕಾ ಸಾಗರದ ಮೇಲೆ ಹಾರಿ

ಶಿಕ್ಷಣಕ್ಕೆ ಒತ್ತು

ಸಮುದ್ರದಾಳದ ಜೀವಿಗಳ ಕುರಿತು ಅದ್ಯಯನ ಮಾಡುವವರಿಗೆ ಈ ಅಕ್ವೇರಿಯಂ ಪ್ರಯೋಗಾಲಯ ಎನ್ನಬಹುದು. ಮಕ್ಕಳಿಗೂ ಅದರ ಜ್ಞಾನ ನೀಡಲಾಗುತ್ತದೆ. ವಿಶೇಷವೆಂದರೆ ಈ ವರ್ಗದ ಜನರಿಗಾಗಿಯೇ ಅಕ್ವೇರಿಯಂ ಪ್ಯಾರಡೈಸ್‌ ಪ್ಯಾಕೇಜ್‌ಗಳನ್ನು ಹೊರತಂದಿದೆ. ಸಾಗರದ ಜೀವಸಂಕುಲಗಳನ್ನು ಹತ್ತಿರದಿಂದ ಕಣ್ಣಾರೆ ಕಂಡು ಅವುಗಳ ಕುರಿತು ಅರಿತುಕೊಳ್ಳಬಹುದು.

New Project (89)

ಭಾರತದ ಮೊದಲ ಸಾಗರ ರೆಸ್ಟೋರೆಂಟ್

ಅಕ್ವೇರಿಯಂ ಪ್ಯಾರಡೈಸ್‌ನಲ್ಲಿ ಭಾರತದ ಮೊದಲ ಸಾಗರ ರೆಸ್ಟೋರೆಂಟ್‌ ಇದೆ. ಒಮ್ಮೆ ಆಲೋಚಿಸಿ ನೀವು ಊಟಕ್ಕೆ ಕುಳಿತ ಜಾಗದ ಸುತ್ತಲೂ ಸಾಗರ ಜೀವಿಗಳ ಚಲನವಲನ ನೀಲರಾಶಿ ಕಣ್ಣಿಗೆ ಬೀಳುತ್ತಿದ್ದು, ಅವುಗಳನ್ನು ಕಣ್ತುಂಬಿಕೊಳ್ಳುತ್ತಲೇ ನಿಮ್ಮಿಷ್ಟದ ಪಾಕಗಳನ್ನು ಹೊಟ್ಟೆಗೂ ತುಂಬಿಕೊಳ್ಳಬಹುದು ಎಂದಾದರೆ ಹೇಗಿರುತ್ತದೆ. ಅದರಲ್ಲೂ ಇಂಥ ಎಕ್ಸ್‌ಪೀರಿಯನ್ಸ್‌ ಸಿಗೋದು ಬೆಂಗಳೂರಿನ ಈ ಅಕ್ವೇರಿಯಮ್‌ನಲ್ಲಿ ಮಾತ್ರ. ಭಾರತದ ಬೇರೆಲ್ಲೂ ಇಂಥ ಅವಕಾಶವಿಲ್ಲ.

ದಾರಿ ಹೇಗೆ?

ಅರಮನೆ ಮೈದಾನ ಹತ್ತಿರ ಜಯಮಹಲ್‌ ಮುಖ್ಯ ರಸ್ತೆ, ಟಿವಿ ಟವರ್‌ ಎದುರು, ಜೆಸಿ ನಗರ, ಬೆಂಗಳೂರು -560006

ಹೆಚ್ಚಿನ ಮಾಹಿತಿಗಾಗಿ

ಇ-ಮೇಲ್‌ : info@theaquariumparadise.com

ದೂರವಾಣಿ : 9606311881

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..