ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ವತಿಯಿಂದ ಬೇಸಗೆ ಶಿಬಿರವನ್ನು ಆಯೋಜಿಸಲಾಗಿದೆ. ಮಕ್ಕಳಲ್ಲಿ ವನ್ಯಜೀವಿ ಸಂರಕ್ಷಣೆ, ಜೀವವೈವಿಧ್ಯ, ಮೃಗಾಲಯದ ವನ್ಯಜೀವಿಗಳ ನಿರ್ವಹಣೆ ಮುಂತಾದ ವಿಷಯಗಳ ಕುರಿತು ಅರಿವು ಮೂಡಿಸಲು ಈ ಶಿಬಿರವನ್ನು ಆಯೋಜಿಸಲಾಗಿದೆ. ಇದಲ್ಲದೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಹಾಗೂ ಶೈಕ್ಷಣಿಕ ಅನುಭವ ಒದಗಿಸುವ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

12 ರಿಂದ 18 ವರ್ಷದ ವಿದ್ಯಾರ್ಥಿಗಳಿಗಾಗಿ ಈ ಶಿಬಿರ ಆಯೋಜಿಸಲಾಗಿದ್ದು, ಏಪ್ರಿಲ್ 13 ರಿಂದ ಏಪ್ರಿಲ್ 22ರವರೆಗೆ ಮೊದಲ ಬ್ಯಾಚ್ ಶಿಬಿರ ನಡೆಯಲಿದೆ. ಮತ್ತು ಮೇ 11 ರಿಂದ ಮೇ 20ವರೆಗೆ ಎರಡನೇ ಬ್ಯಾಚ್ ಶಿಬಿರ ಜರುಗಲಿದೆ. ಆಸಕ್ತಿಯುಳ್ಳವರು ಮಾರ್ಚ್ 05, 2026 ರಿಂದ ಮಾರ್ಚ್ 10ರವರೆಗೆ ಮೃಗಾಲಯದ ಕಛೇರಿಯಿಂದ ಅರ್ಜಿಯನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಮೃಗಾಲಯದ ವೆಬ್‌ಸೈಟ್‌ www.mysuruzoo.info ಗೆ ಭೇಟಿ ನೀಡಿ.