Thursday, June 12, 2025
Thursday, June 12, 2025

ಇಂಥ ಕ್ಯಾಪ್ಸುಲ್ ಗಳನ್ನು ನೋಡಿದ್ದೀರಾ?

ಈ ಕ್ಯಾಪ್ಸುಲ್ ಗಳೆಲ್ಲ ಎಷ್ಟೊಂದು ಸಿಂಪಲ್ ವಿಚಾರ. ಆದರೆ ಮನುಷ್ಯನ ಕ್ರಿಯೇಟಿವಿಟಿಗೆ ಸಿಕ್ಕಿ ಅನೇಕ ರೀತಿಯ ಕ್ಯಾಪ್ಸುಲ್ ಗಳು ಇಂದು ಭೂಮಿ ಮೇಲಿವೆ. ದೊಡ್ಡ ದೊಡ್ಡ ರೂಮ್ ಗಳಲ್ಲಿ ಮನೆಗಳಲ್ಲಿ ಮಲಗಿ ಅಭ್ಯಾಸವಿರುವ ನಮಗೆ ಕ್ಯಾಪ್ಸುಲ್ ನಲ್ಲಿನ ಕೆಲವು ಸಮಯ; ಹೊಸತೆನಿಸಬಹುದು.

ಎಲ್ಲರ ಊರಲ್ಲೂ ಕೆಲವು ಲಾಡ್ಜ್(Lodge) ಗಳು ಇರುತ್ತವೆ. ಅದು ಊರಿಗೆಲ್ಲ ಫೇಮಸ್ ಆಗಿದ್ದರೂ ಅದರೊಳಗೆ ಯಾರೂ ಹೋಗಿರುವುದಿಲ್ಲ. ಅಥವಾ ಅಲ್ಲಿನ ರೂಮುಗಳು ಹೇಗಿರುತ್ತೆ ಎಂಬ ಸಣ್ಣ ಐಡಿಯಾ ಸಹ ಇರುವುದಿಲ್ಲ. ಒಮ್ಮೆ ಮನಸ್ಸು ಮಾಡಿ ಏನಿದೆ? ಹೇಗಿದೆ? ಅಂತ ಊರಲ್ಲಿನ ವರ್ಲ್ಡ್ ಫೇಮಸ್ ಲಾಡ್ಜ್ ನ ರೂಮ್ ಒಳಗೆ ಹೋದರೆ, ತಡೆಯಲಾಗದ ವಾಸನೆಗೆ ಎರಡೇ ನಿಮಿಷಕ್ಕೆ ಹೊರಬಂದಿದ್ದುಂಟು. ಹೀಗೆ ಗೊತ್ತಿಲ್ಲದೆ ಯಾವುದೋ ಊರಿನ ಯಾವುದೋ ಲಾಡ್ಜ್ ಗೆ ಉಳಿಯಲು ಹೋದಾಗಲೂ ನಿಮ್ಮ ಆಯ್ಕೆಯ ಬಗ್ಗೆ ನಿಮಗೇ ಬೇಜಾರಾಗುವುದೂ ಉಂಟು.

ಇನ್ನೂ ದೊಡ್ಡದೊಡ್ಡ ಊರಲ್ಲಿ ಲಾಡ್ಜ್ ಗಳದ್ದೇ ದರ್ಬಾರು. ಬೆಂಗಳೂರಿ(Bengaluru)ಗೆ ಮೊದಲ ಬಾರಿ ಬಂದಾಗ ನೀವು ಉಳಿದಿದ್ದ ಲಾಡ್ಜ್ ಎಷ್ಟೋ ವರ್ಷವಾದರೂ ನೆನಪಿರುತ್ತೆ. ಆ ಲಾಡ್ಜ್ ನ ಸಮೀಪದ ದಾರಿಯಲ್ಲಿ ಹೊರಟಾಗ ಲಾಡ್ಜ್ ನ ಒಂದು ಸಣ್ಣ ನೆನಪು ಬಂದು ಹೋಗುವುದು ಕಾಮನ್. ಇನ್ನೂ ಎಲ್ಲ ಹೊಟೇಲ್ ರೂಮ್ (Hotel Room) ಅಥವಾ ಲಾಡ್ಜ್ ಗಳಲ್ಲಿ ಎಲ್ಲರಿಗೂ ಒಂದೇ ರೀತಿಯ ಭಾವನೆಗಳು ಇರುತ್ತೆ ಎನ್ನುವುದೂ ಸುಳ್ಳು. ನಿಮಗೆ ಒಂದು ಲಾಡ್ಜ್ ಒಂದು ರೂಪದಲ್ಲಿ ನೆನಪಿದ್ದರೆ, oyo ಗಳಂತಹ ಲಾಡ್ಜ್ ಗಳು ಮತ್ತೊಂದು ಥರದಲ್ಲಿ ನೆನಪಿರುತ್ತದೆ. ಅದೆಲ್ಲ ಅವರವರ ಭಾವಕ್ಕೆ ಅವರವರ ಭಕುತಿಗೆ.

ಎಲ್ಲೇ ಹೋಗಲಿ ನಾವೆಲ್ಲರೂ ಜಿಪುಣತೆಯಲ್ಲಿ ನಿಪುಣತೆ ಮೆರೆವವರು, ಎಷ್ಟೋ ಸಲ ಲಾಡ್ಜ್ ರೂಮುಗಳಿಗೆ ಪೂರ್ತಿ ಹಣ ನೀಡುವ ಬದಲು ಸಿಂಗಲ್ ಬೆಡ್ ಅಥವಾ ಬ್ಯಾಗ್ ಇಡಲು ಲಾಕರ್ ಅಷ್ಟೇ ತೆಗೆದುಗೊಂಡು ಫ್ರೆಷ್‌ ಅಪ್‌ ಆಗಿ ಹೋಗಿಬಿಡುತ್ತೇವೆ. ಅದು ಅವರವರಿಗೆ ಬಿಟ್ಟದ್ದು. ಆದರೆ, ಇಂಥ ಯೋಜನೆಯನ್ನೇ ಇಟ್ಟುಕೊಂಡು ಜಪಾನ್ (Japan)ನವರು 1979ರಲ್ಲೇ capsule hotel ಎನ್ನುವ ವಿಚಿತ್ರ ವಿಧದ ಲಾಡ್ಜ್ ಅಥವಾ ಹೊಟೇಲ್ ರೂಮುಗಳನ್ನು ಪ್ರಾರಂಭಿಸಿದರು. ಈ ಕ್ಯಾಪ್ಸುಲ್ ಹೊಟೇಲ್ ಗಳೆಂದರೆ, ಒಂದು ಬೆಡ್ ಹಿಡಿಸುವಷ್ಟೇ ಜಾಗದಲ್ಲಿರಲಿದೆ ನಿಮ್ಮ ಹೊಟೇಲ್ ರೂಮ್. ಅಂದರೆ ನಿಮ್ಮ ಇಡೀ ಹೊಟೇಲ್ ರೂಮ್ ನಲ್ಲಿ ಬರೀ ಬೆಡ್ ಅಷ್ಟೇ ಇರುತ್ತೆ. ಅಥವಾ ಬೆಡ್ ನ ಅಳತೆಯಷ್ಟೆ ರೂಮ್ ಇರುತ್ತೆ. ಮುಂದೆ ಈ ಕ್ಯಾಪ್ಸುಲ್ ರೂಮ್ ಗಳೆಲ್ಲ ಎಷ್ಟೊಂದು ಫೇಮಸ್ ಆದವು ಅಂದರೆ, ಈಗ ಅವು ಬರೀ ಹೊಟೇಲ್ ಗಳಿಗಷ್ಟೇ ಸೀಮಿತವಾಗಿರದೆ, ಕಾಡು, ಪರ್ವತಗಳ ಮೇಲೂ ಕ್ಯಾಪ್ಸುಲ್ ಹೊಟೇಲ್ ಗಳನ್ನು ಕಾಣಬಹುದು. ಹೀಗೆ ವಿಚಿತ್ರ ಮತ್ತು ವಿಧವಾದ ವಿಶ್ವದ 10 ಕ್ಯಾಪ್ಸುಲ್ ಹೊಟೇಲ್ ಗಳನ್ನು ನೋಡಿಕೊಂಡು ಬರೋಣ.

ಮಲಗೋಕೆ ಫ್ಯಾಕ್ಟರಿ

ಜಪಾನ್ ನ ಖ್ಯಾತ ಹೊಟೇಲ್ ಸಂಸ್ಥೆಯಾದ ಫುಕುಓಕ ದಿಂದ ಬಂದಿರುವ ಈ ಸ್ಲೀಪ್ ಫ್ಯಾಕ್ಟರಿ (Sleep Factory) ಅಥವಾ ನೈನ್ ಅವರ್ಸ್ (nine hours, 9 ಘಂಟೆ). ಒಂದು ಕ್ಯಾಪ್ಸುಲ್ ನಲ್ಲಿ ನಾವು 9 ಘಂಟೆಗಳ ಕಾಲ ಮಲಗಬೇಕು, ಆಗ ಆ ಕ್ಯಾಪ್ಸುಲ್ ನಲ್ಲಿರುವ ಸೆನ್ಸರ್ (Sensers) ಗಳು ನಾವು ಮಲಗಿದಾಗಿನ ಹಾರ್ಟ್ ಬೀಟ್, ಮುಖದ ಹಾವಭಾವಗಳು, ಉಸಿರಾಟದಿಂದ ಹಿಡಿದು ಹಾರ್ಟ್ ರೇಟ್ ಜೊತೆಗೆ ಗೊರಕೆ ಹಾಗೂ ಇನ್ನಿತರ ಡಾಟಾವನ್ನು ಪಡೆದು ನಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತದೆ.

9 hours sleep factory

ಆಕಾಶಕ್ಕೆ ಏಣಿ

ನಾವು ರಾತ್ರಿ ಮಲಗಿದಾಗ ಪರ್ವತದ ಕೆಳಗೆ, ಎದ್ದಾಗ ಪರ್ವತದ ಮೇಲಿದ್ದರೆ ಹೇಗಾದೀತು? ಅಂದರೆ ಪೆರುವಿನಲ್ಲಿ ಒಂದು ಸ್ಕೈಲಾಡ್ಜ್ ಅಡ್ವೆಂಚರ್ ಸೂಟ್ ಅನ್ನುವ ಈ ಕ್ಯಾಪ್ಸುಲ್ ಗಳು, ನೀವು ಪೆರುವಿನ ಉರುಂಬಬ ವ್ಯಾಲಿ (Urumbaba Valley) ಯಲ್ಲಿ ರಾತ್ರಿ ಈ ಕ್ಯಾಪ್ಸುಲ್ ಗಳಲ್ಲಿ ಮಲಗಿದರೆ ಬೆಳಿಗ್ಗೆಯ ಹೊತ್ತಿಗೆ 400 ಮೀಟರ್ ಎತ್ತರದ ಪರ್ವತದ ತುದಿಗೆ ನಿಮ್ಮನ್ನು ತಲುಪಿಸುತ್ತದೆ. ನಿದ್ದೆಗೆ ಯಾವುದೇ ಭಂಗ ಬರದಂತೆ ಈಕಡೆ ಲಿಫ್ಟ್ ಅಲ್ಲ, ಇನ್ನೊಂದು ಕಡೆ ರೂಮೂ ಅಲ್ಲ ಅನ್ನುವ ಈ 300 ಡಿಗ್ರಿ ಗಾಜಿನಿಂದ ಆವೃತ್ತವಾಗಿ ಸುತ್ತಮುತ್ತಲಿನ ಪ್ರದೇಶವನ್ನು ನೋಡಬಹುದಾದ ಈ ಅನುಭವ ಎಲ್ಲರಿಗೂ ಸಿಗಲ್ಲ ಬಿಡಿ.

sky lodgs

ಮರುಭೂಮಿಯ ವರ

ಕೊಲಂಬಿಯದ ತಟಕೋವಾ ಮರುಭೂಮಿ (tatacoa desert) ಯಲ್ಲಿರುವ ಈ ಹೊಟೇಲ್ ಆ ಮರಭೂಮಿಗೆ ವರ ಎಂದೂ ಕರೆಯಬಹುದು. ಮರಭೂಮಿಯ ಬಿಸಿಲಲ್ಲಿ ಸುತ್ತಾಡಿ ನೀರೇ ಕಾಣದೆ ಬಂದವರಿಗೆ ಇಲ್ಲಿ ಮೊದಲು ಸ್ವಿಮ್ಮಿಂಗ್ ಪೂಲ್ ಸಿಗುತ್ತದೆ. 37 ಕ್ಯಾಪ್ಸುಲ್ ಗಳಿರುವ ಟೂರ್ಬೋ ಹೊಟೇಲ್‌ ನ ವಿಶೇಷತೆ ಏನೆಂದರೆ ಆ ಎಲ್ಲ ಕ್ಯಾಪ್ಸುಲ್ ಗಳು ಹೊಸತನವನ್ನು ತುಂಬಿದ ಕ್ಯಾಪ್ಸುಲ್ ಗಳೇ. ಮರಭೂಮಿ ಸಾವಿರಾರು ಎಕರೆಗಳಷ್ಟಿದ್ದರೂ ಇಲ್ಲಿ ಸಿಗುವುದು ಡಬಲ್ ಬೆಡ್ ಅಳತೆ ಹೊಂದಿರುವ ಕ್ಯಾಪ್ಸುಲ್ಗಳೇ.

turbo hotel tatacoa

ನಿಸರ್ಗದಲ್ಲಿ ಸೆರೆ

ಪಕ್ಷಿಗಳೆಲ್ಲ ಗೂಡುಗಳಲ್ಲಿ ವಾಸಿಸುತ್ತವೆ. ಮನುಷ್ಯ ಎಂದಾದರೂ ಗೂಡುಗಳಲ್ಲಿ ವಾಸಿಸುವುದನ್ನು ಕಂಡಿದ್ದೀರಾ? ನೀವು ಒಂದು ಸಲ ಇಂಥದ್ದೇ ಗೂಡಲ್ಲಿ, ಅದೂ ಕಾಡಿನ ಮಧ್ಯೆ ಇದ್ದರೆ ಹೇಗೆ ಹೇಳಿ? ಇದು ಇರೋದು ಕೆನಡಾದ ವ್ಯಾಂಕೂವರ್ ದ್ವೀಪ (Vancouver Island) ದಲ್ಲಿ, ಫ್ರೀ ಸ್ಪಿರಿಟ್ ಸ್ಫಿಯರ್ (Free Spirit Spheres) ಎಂಬ ಹೆಸರಿನ ಸಂಸ್ಥೆಯವರಿಂದ ನಿರ್ಮಿಸಲ್ಪಟ್ಟ ಈ ಗೂಡುಗಳಲ್ಲಿ ನೀವು ದಿನಗಟ್ಟಲೆ ಉಳಿಯಬಹುದು. 25 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಈ ವಿಭಿನ್ನ ಕ್ಯಾಪ್ಸುಲ್ಗಳಲ್ಲಿ ನೀವೂ ಒಮ್ಮೆ ಇದ್ದು ಬನ್ನಿ.

free spirit spheres

ಚಿಕ್ಕದಾದರೂ ಚೆಂದ

2021ರಲ್ಲಿ ಸಿಂಗಾಪುರದ ಚೀನಾಟೌನ್ ನಲ್ಲಿ ಕಿನ್ ಕ್ಯಾಪ್ಸುಲ್ (Kinn Capsule) ಎಂಬ ಸಂಸ್ಥೆಯವರಿಂದ 2021ರಲ್ಲಿ ನಿರ್ಮಿಸಲ್ಪಟ್ಟ ಇದು; ಕಟ್ಟಿಗೆಯಲ್ಲಿ ಕಟ್ಟಿದ ರೂಂ ಅಂತ ಹೇಳೋಕೆ ಆಗಲ್ಲ, ಅದನ್ನು ಶವಪೆಟ್ಟಿಗೆ ಅಂತಾದರೂ ಕರೆಯಬಹುದು. ಹೆದರಿಕೊಳ್ಳಬೇಡಿ; ಇದು ನಾವು ಸ್ಲೀಪಿಂಗ್ ಕೋಚ್‌ ಬಸ್ಸಿನಲ್ಲಿ ಹೋಗಬೇಕಾದರೆ ಮಲಗಿಕೊಂಡು ಹೋಗಿರತೀವಲ್ಲ ಅಂಥದ್ದೇ ರೂಮ್ ಗಳು. ಆದರೆ ಅವುಗಳೆಲ್ಲ ಕಟ್ಟಿಗೆಯಿಂದ ಮಾಡಿದ್ದು. ಆ ಕ್ಯಾಪ್ಸುಲ್ ಗಳ ಒಳಗಡೆ ಸುಗಂಧದ ವಾಸನೆಯೂ ಬರುತ್ತದೆ.

kinn singapure

ಈ ಕ್ಯಾಪ್ಸುಲ್ ಗಳೆಲ್ಲ ನೋಡಲು ಎಷ್ಟೊಂದು ಸಿಂಪಲ್ ವಿಚಾರವೆನ್ನಿಸಬಹುದು. ಆದರೆ ಮನುಷ್ಯನ ಕ್ರಿಯೇಟಿವಿಟಿಗೆ ಸಿಕ್ಕಿ ಇಂಥದ್ದೆಲ್ಲ ಸಾವಿರಾರು ಥರದ ಕ್ಯಾಪ್ಸುಲ್ ಗಳು ಇಂದು ಭೂಮಿ ಮೇಲಿವೆ. ದೊಡ್ಡ ದೊಡ್ಡ ರೂಮ್ ಗಳಲ್ಲಿ, ಮನೆಗಳಲ್ಲಿ ಮಲಗಿ ಅಭ್ಯಾಸವಿರುವ ನಮಗೆ ಕ್ಯಾಪ್ಸುಲ್ ನಲ್ಲಿನ ಕೆಲವು ಸಮಯ; ಹೊಸತೆನಿಸಬಹುದು.

Vinay Khan

Vinay Khan

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಗಡಿನಾಡು ಕಾಸರಗೋಡಿನ ನಯನಮನೋಹರ ಪ್ರವಾಸಿ ತಾಣಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ...

Read Next

ಗಡಿನಾಡು ಕಾಸರಗೋಡಿನ ನಯನಮನೋಹರ ಪ್ರವಾಸಿ ತಾಣಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ...