ಈ ವರ್ಷದ ದೀರ್ಘ ವೀಕೆಂಡ್ ಗಳ ಪ್ಲಾನ್ ಇಲ್ಲಿದೆ
ಈ ವರ್ಷದಲ್ಲಿ ಬರುವ ದೀರ್ಘ ರಜೆಗಳಲ್ಲಿ ಏನು ಮಾಡಬೇಕೆಂದು ಯೋಚಿಸುತ್ತಿದ್ದೀರ? ಟ್ರಿಪ್ ಗೆ ಹೋಗುವುದಿದ್ದರೆ, ಅದಕ್ಕೆಲ್ಲ ಪಟ್ಟಿ ಇಲ್ಲಿದೆ.
ಪ್ರತಿವರ್ಷದಂತೆ ಈ ವರ್ಷವೂ ಹಲವಾರು ದೀರ್ಘ ವೀಕೆಂಡ್ (Long Weekends) ಗಳು ಬಂದಿದೆ. ಆ ಸಮಯದಲ್ಲಿ ಮನೆಯಲ್ಲಿ ಕುಳಿತು ಏನು ಮಾಡುತ್ತಿರಾ? ಎಲ್ಲಿಗಾದರೂ ಪ್ರವಾಸಕ್ಕೆ ಹೋಗುವ ಪ್ಲಾನ್ ಇದ್ದರೆ ಈ ಪಟ್ಟಿ ನಿಮಗೆ ಖಂಡಿತ ಸಹಾಯಕವಾಗಿರುತ್ತೆ.
ಮೇ 10-12 : ವಾರಾಂತ್ಯದ ಜತೆ ಬುದ್ಧಪೂರ್ಣಿಮಾವನ್ನು ಸೇರಿಸಿದರೆ, ನೀವು ಮತ್ತು ನಿಮ್ಮ ಪ್ರೀತಿಪಾತ್ರರು 3 ದಿನಗಳ ಮಜವನ್ನು ಅನುಭವಿಸಬಹುದು.
ಎಲ್ಲಿಗೆ ಹೋಗಬೇಕು? ಸ್ಪಿತಿ ವ್ಯಾಲಿ (Spiti Valley)ಯ ಸ್ವಚ್ಛಂದ ಆಕಾಶವನ್ನು ಅನುಭವಿಸಬಹುದು. ಅಥವಾ ಗಾಂಗ್ಟೋಕ್ (Gangtok)ನಲ್ಲಿ ರೋಡೋಡೆಂಡ್ರಾನ್ ಅರುಳುವುದನ್ನು ಕಣ್ತುಂಬಿಕೊಳ್ಳಬಹುದು, ಅದು ಬೇಡವೇ? ನೀವು ಸಾಹಸ ಪ್ರೇಮಿಗಳಗಿದ್ದರೆ ಋಷಿಕೇಶ(Rishikesh)ಕ್ಕೆ ಹೋಗಿ ರಿವರ್ ರಾಫ್ಟಿಂಗ್ ಮಾಡಿ ಒಳ್ಳೆಯ ಆನಂದ ಸಿಗಬಹದು.

ಆಗಸ್ಟ್ 15 -17: ಶುಕ್ರವಾರ ಬರುವ ಸ್ವಾತಂತ್ರ್ಯೋತ್ಸವದಂದು ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಲು ಆಗದಿದ್ದರೆ, ಆರಾಮವಾಗಿ ಒಂದು ಸುತ್ತು ಸೂತ್ತೋಕೆ ಅಂತಾನೆ ಹೋಗಬಹುದು, ಇನ್ನೂ ಹಲವರಿಗೆ ಶನಿವಾರ ರಜೆಯಿರಲ್ಲ ಎಂದರೆ, ಆಗಸ್ಟ್ 16 ಕೃಷ್ಣ ಜನ್ಮಾಷ್ಟಮಿ ಇದೆ ಸಾಕಲ್ವ?
ಎಲ್ಲಿಗೆ ಹೋಗಬೇಕು? ಉದಯಪುರ (Udayapura)ದ ಪಿಂಚೋಲ (Pinchola)ಸರೋವರದಲ್ಲಿ ಒಳ್ಳೆಯ glid ಮಾಡಬಹುದು. ಅಥವಾ ಗೋವೆಯ ಚೋರಲಾ ಘಾಟ್ (Chorola Ghat)ನಲ್ಲಿ ಬಯೋಲ್ಯೂಮಿನೆಸೆಂಟ್ ನಿಂದ ಹೊಳೆಯುವ ಸೆಳೆಯುವ-ಕಾಡನ್ನೂ ನೋಡಬಹುದು. ದೇಶವನ್ನು ಬಿಟ್ಟುಹೋಗುವ ಮನಸ್ಸಿದ್ದರೆ ಅಮಾಲ್ಫಿ (Amalfi) ಕರಾವಳಿಯಲ್ಲಿ ಮಿಂಡೆದ್ದು ಬರಬಹುದು.

ಸೆಪ್ಟೆಂಬರ್ 5-7 : ಈದ್ ಮಿಲಾದ್ ಮತ್ತು ಓಣಂ ಸಂಭ್ರಮಗಳ ಮಧ್ಯೆ ಸೆಪ್ಟೆಂಬರ್ ತಿಂಗಳ ಮೊದಲ ವಾರಾಂತ್ಯವನ್ನು ಸವಿಯಬಹುದು.
ಎಲ್ಲಿಗೆ ಹೋಗಬೇಕು? ನಿಮಗೆ ಆಧಾತ್ಮದತ್ತ ಒಲವು ಇತ್ತೆಂದರೆ ಸೀದಾ ಪುರಿ (Puri)ಯಲ್ಲಿನ ಜಗನ್ನಾಥ ದೇವಸ್ಥಾನಕ್ಕೆ ಹೋಗಬಹದು. ಅಥವಾ ಕೊಡೈಕನಾಲ್ (kodaikanal) ಅಥವಾ ನಮ್ಮದೇ ರಾಜ್ಯದ ಚಿಕ್ಕಮಗಳೂರಿನ (Chikmagalur) ಕಾಫಿಯ ಘಮವನ್ನು ಸೆಳೆದು ಪ್ರಕೃತಿಯ ಮಡಿಲಲ್ಲಿ ಕೆಲಸಮಯ ಕಳೆಯಬಹದು. ವಿದೇಶಕ್ಕೆ ಹೋಗುವ ಮನಸ್ಸಿದ್ದರೆ, ಅಬುದಾಬಿಯಲ್ಲಿ ಸೂಕ್ (Souk) ಅಥವಾ ಒಮಾನ್ನ ಪ್ರಕೃತಿ ಮಾಡಿಲಲ್ಲಿನ ಸ್ವಿಮ್ಮಿಂಗ್ ಪೂಲಲ್ಲಿ ಒಳ್ಳೆಯ ದಿನಗಳನ್ನು ಕಳೆಯಬಹುದು.

ಅಕ್ಟೋಬರ್ 17 ರಿಂದ 27: ಇದು ವರ್ಷದಲ್ಲೇ ಬರುವ ಅತ್ಯಂತ ಭರ್ಜರಿ ಮತ್ತು ಅತಿ ದೊಡ್ಡ ವೀಕೆಂಡ್ ಸಹ ಹೌದು, ನಿಮಗೇನಾದರೂ ದೀಪಾವಳಿ ಆಚರಿಸಲು ಇಷ್ಟವಿಲ್ಲದಿದ್ದಾರೆ, ಇಲ್ಲಿ ನೋಡಿ 17 ಶನಿವಾರ, ಅಂದರೆ 16 ನೇ ತಾರೀಖಿ ನಂದೆ ಊರು ಬಿಟ್ಟರೆ 10 ದಿನಗಳವರೆಗೂ ವಾಪಸ್ ಬರಬೇಡಿ, ವರ್ಷದ ಅತಿದೊಡ್ಡ ಟ್ರಿಪ್ ಮಾಡಿಕೊಂಡು ಬನ್ನಿ
ಎಲ್ಲಿಗೆ ಹೋಗಬೇಕು?: ಅಕ್ಟೋಬರ್ ನ ಹವಾಮಾನ ಕಾಡಿನ ಪ್ರಾಣಿಗಳಿಗೆ ತುಂಬಾ ಹಿಡಿಸಿರುತ್ತದೆ, ಹಾಗೆ ಕಾಜೀರಂಗ ನೇಷನಲ್ ಪಾರ್ಕ್ (kaziranga national park)ಗೆ ಹೋಗಿ ಪ್ರಾಣಿಗಳ ವೀಕ್ಷಣೆ ಮಾಡಬಹುದು. ಅಥವಾ ಮುನ್ನಾರ್ ಹೋಗಿ ಚಹಾ ಕುಡಿಯಬಹುದು. ಅದೂ ಬೇಡ ಅಂದರೆ ಸೀದಾ ಹಂಪಿಗೆ ಹೋಗಿ ವಿಜಯನಗರದ ಗತ ವೈಭವನನ್ನು ಕಣ್ತುಂಬಿಕೊಳ್ಳಬಹುದು. ಅದು ಬೇಡ ಅಂದರೆ ವಿಮಾನ ಹತ್ತಿ ನ್ಯೂ ಯಾರ್ಕ್ (New York) ಗೆ ಹೋಗಿ ಎಲೆ ಉದುರುವುದನ್ನಾದರೂ ನೋಡಬಹುದು. ನಿಮಗೆ ಎಫ್ 1 ನೋಡುವ ಯೋಜನೆಯಿದ್ದರೆ, ಸಿಂಗಪುರದಲ್ಲಿನ ಫಾರ್ಮುಲಾ 1 ಗ್ರಾಂಡ್ ಪಿಕ್ಸ್ ಅನ್ನು ನೋಡಬಹುದು

ಡಿಸೆಂಬರ್ 25-28: ಈ ಬಾರಿ ಕ್ರಿಸ್ಮಸ್ ಗುರುವಾರ ಬಂದಿದೆ, ನಿಮಗೆ ಶುಕ್ರವಾರ ರಜೆ ಸಿಕ್ಕರೆ ಒಳ್ಳೆಯದು, ಇನ್ನೂ ತಲೆಯೋಡಿಸಿ ಮುಂದೆ ಬರುವ ಸೋಮವಾರ ಮತ್ತು ಮಂಗಳವಾರ ರಜೆ ತೆಗೆದುಕೊಂಡರೆ ಮರುವರ್ಷವೇ ಕೆಲಸಕ್ಕೆ ಹೋಗಬಹದು.
ವರ್ಷವನ್ನು ಗೋವಾದ ಬೀಚ್ ಗಳಲ್ಲಿ ಕಳೆದು , ಅಥವಾ ವಯನಾಡ್ ನ ಸರೋವರಗಳನ್ನು ಸಹ ಕಣ್ತುಂಬಿಕೊಳ್ಳಬಹುದು . ಅಥವಾ ಶಿಲ್ಲಾಂಗ್ ನಲ್ಲಿ ಚೆರ್ರಿ ಹೂವುಗಳು ಅರಳುವ ಸಮಯವನ್ನು ರೊಮ್ಯಾಂಟಿಕ್ ಆಗಿ ಕಳೆಯಬಹುದು. ವರ್ಕಳವೂ ನಿಮಗೆ ಒಳ್ಳೆಯ ಅನುಭೂತಿಯನ್ನು ನೀಡುತ್ತದೆ. ಏನೂ ಬೇಡ ವಿದೇಶಕ್ಕೆ ಹೋಗುವ ಮನಸ್ಸಿದ್ದರೆ ಲಂಡನ್, ಸ್ವಿಟ್ಜರ್ಲ್ಯಾಂಡ್ , ಮಾಲ್ಡೀವ್ಸ್ ನಲ್ಲಿ ನಲಿಯಬಹುದು.
