Friday, September 26, 2025
Friday, September 26, 2025

ರಸ್ತೆಯ ಬಿರುಕುಗಳಲ್ಲಿ ಅರಳಿದ ಹೂ

ಮಳೆ ನೀರನ್ನು ಹೀರಿಕೊಳ್ಳಲು ಸಹಾಯ ಮಾಡುತ್ತವೆ, ಮತ್ತು ಅತ್ಯಂತ ಕಿರಿದಾದ ಅಂತರದಲ್ಲೂ ಜೀವನವು ತನ್ನ ದಾರಿಯನ್ನು ಕಂಡುಕೊಳ್ಳುತ್ತದೆ ಎಂದು ದಾರಿಹೋಕರಿಗೆ ನೆನಪಿಸುತ್ತವೆ. ಇದನ್ನು ‘ಕ್ರ್ಯಾಕ್ ಗಾರ್ಡನಿಂಗ್’ ಎಂದು ಕರೆಯುತ್ತಾರೆ. ಇದು ಕಡಿಮೆ ವೆಚ್ಚದಲ್ಲಿ, ಹೆಚ್ಚು ಪರಿಣಾಮಕಾರಿಯಾಗಿ ಸಾರ್ವಜನಿಕ ಸ್ಥಳಗಳನ್ನು ಹಸಿರುಗೊಳಿಸಲು ಇತರ ನಗರಗಳಿಗೂ ಹರಡುತ್ತಿದೆ.

ಪಟ್ಟಣ ಮತ್ತು ನಗರಗಳಲ್ಲಿನ ಪಾದಚಾರಿ ರಸ್ತೆ ಅಥವಾ ಕಾಲುದಾರಿಗಳಲ್ಲಿ ಬಿರುಕು ಬಿಡುವುದು ಹೊಸ ಸಂಗತಿಯೇನಲ್ಲ. ಹಾಗೆ ಬಿಟ್ಟ ಬಿರುಕುಗಳನ್ನು ಸರಿಪಡಿಸುವ ಗೋಜಿಗೆ ಯಾರೂ ಹೋಗುವು ದಿಲ್ಲ. ಹಾಗಾದಾಗ, ಅದು ನಗರ ಸೌಂದರ್ಯಕ್ಕೆ ಕಪ್ಪುಚುಕ್ಕೆಯಾಗುವುದರಲ್ಲಿ ಎರಡು ಮಾತಿಲ್ಲ. ಆದರೆ ನಾನು ಟೋಕಿಯೋ ಮತ್ತು ಕ್ಯೋಟೋ ನಗರಗಳಲ್ಲಿ ಓಡಾಡುವಾಗ ಒಂದು ಸಂಗತಿಯನ್ನು ಗಮನಿಸಿದೆ. ಪ್ರತಿ ಬಿರುಕನ್ನು ಮುಚ್ಚುವ ಬದಲು, ನಗರ ಯೋಜಕರು ಮತ್ತು ಪರಿಸರ-ಕಲಾವಿದರು ಅವುಗಳಲ್ಲಿ ಉದ್ದೇಶಪೂರ್ವಕವಾಗಿ ಪಾಚಿ (moss), ಹೂವಿನ ಬೀಜಗಳನ್ನು ನೆಟ್ಟು ಸಣ್ಣ ಸಸ್ಯಗಳನ್ನು ಬೆಳೆಸಿದ್ದಾರೆ.

ಈ ತೋಟಗಳು ಬೂದುಬಣ್ಣದ ರಸ್ತೆಗಳನ್ನು ಸುಂದರಗೊಳಿಸುವುದಲ್ಲದೇ, ನಿರ್ಲಕ್ಷಿತ ಸ್ಥಳಗಳಲ್ಲಿಯೂ ಸಣ್ಣ ಹೂದೋಟವನ್ನು ಬೆಳೆಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಈ ಕಲ್ಪನೆ ಒಂಥರಾ ಕಾವ್ಯಾತ್ಮಕವಾಗಿ ಕಂಡರೂ, ಪ್ರಾಯೋಗಿಕವೂ ಆಗಿದೆ. ಪಾಚಿಯು ಪರಿಸರ ಮಾಲಿನ್ಯ ಕಾರಕಗಳನ್ನು ಹೀರಿಕೊಳ್ಳುತ್ತದೆ, ನೆಲವನ್ನು ತಂಪಾಗಿರಿಸುತ್ತದೆ ಮತ್ತು ನಗರದ ದಾರಿಗಳಿಗೆ ಹಸಿರು, ಶಾಂತಿಯುತ ನೋಟವನ್ನು ನೀಡುತ್ತದೆ.

A flower blooming in the cracks of the road3

ಡೈಸಿಗಳು ಅಥವಾ ಕ್ರೀಪಿಂಗ್ ಥೈಮ್‌ನಂಥ ಹೂವುಗಳು ಋತುಮಾನಕ್ಕೆ ಅನುಗುಣವಾಗಿ ಬಿರುಕುಗಳಿಂದ ಹೊರಬಂದು, ಸಾಮಾನ್ಯ ರಸ್ತೆಗಳನ್ನು ಜೀವಂತ ಕಲಾಕೃತಿಗಳಾಗಿ ಪರಿವರ್ತಿಸುತ್ತವೆ. ಕೆಲವು ಪ್ರದೇಶಗಳಲ್ಲಿ, ಮಳೆ ಬಂದ ನಂತರ ಸ್ವಯಂಸೇವಕರು ಮತ್ತು ಮಕ್ಕಳು ಬೀಜಗಳನ್ನು ನೆಡಲು ಸಹಾಯ ಮಾಡುತ್ತಾರೆ. ಪ್ರತಿ ಬಿರುಕನ್ನು ಒಂದು ಹೂವು ಅರಳುವ ಸ್ಥಳವಾಗಿ ಪರಿಗಣಿಸುತ್ತಾರೆ.

ಇದನ್ನೂ ಓದಿ:ದುರಂತಕ್ಕೆ ಸ್ಪಂದಿಸುವ ರೀತಿ

ಕೇವಲ ಸೌಂದರ್ಯಕ್ಕಾಗಿ ಮಾತ್ರವಲ್ಲದೆ, ಈ ತೋಟಗಳು ಅತಿಯಾದ ಅಭಿವೃದ್ಧಿ ಮತ್ತು ಪರಿಸರ ನಿರ್ಲಕ್ಷ್ಯದ ವಿರುದ್ಧದ ಒಂದು ಮೌನ ಪ್ರತಿಭಟನೆಯಾಗಿದೆ ಎಂದು ಹೇಳಬಹುದು. ದಟ್ಟವಾದ ನಗರಗಳಲ್ಲಿ ಜೇನುನೊಣಗಳು ಮತ್ತು ಚಿಟ್ಟೆಗಳಂಥ ಪರಾಗಸ್ಪರ್ಶಕ ಜೀವಿಗಳಿಗೆ ಸೂಕ್ಷ್ಮ- ಆವಾಸ ಸ್ಥಾನಗಳನ್ನು ಒದಗಿಸುತ್ತವೆ,

ಮಳೆ ನೀರನ್ನು ಹೀರಿಕೊಳ್ಳಲು ಸಹಾಯ ಮಾಡುತ್ತವೆ, ಮತ್ತು ಅತ್ಯಂತ ಕಿರಿದಾದ ಅಂತರದಲ್ಲೂ ಜೀವನವು ತನ್ನ ದಾರಿಯನ್ನು ಕಂಡುಕೊಳ್ಳುತ್ತದೆ ಎಂದು ದಾರಿಹೋಕರಿಗೆ ನೆನಪಿಸುತ್ತವೆ. ಇದನ್ನು ‘ಕ್ರ್ಯಾಕ್ ಗಾರ್ಡನಿಂಗ್’ ಎಂದು ಕರೆಯುತ್ತಾರೆ. ಇದು ಕಡಿಮೆ ವೆಚ್ಚದಲ್ಲಿ, ಹೆಚ್ಚು ಪರಿಣಾಮಕಾರಿಯಾಗಿ ಸಾರ್ವಜನಿಕ ಸ್ಥಳಗಳನ್ನು ಹಸಿರುಗೊಳಿಸಲು ಇತರ ನಗರಗಳಿಗೂ ಹರಡುತ್ತಿದೆ.

maxresdefault (1)

ಜಪಾನ್‌ನಲ್ಲಿ, ರಸ್ತೆಯ ಒಂದು ಬಿರುಕು ಕೂಡ ಗಮನಕ್ಕೆ ಬಾರದೇ ಹೋಗುವುದಿಲ್ಲ- ಅದು ಪ್ರಕೃತಿ, ಸ್ಥಿತಿಸ್ಥಾಪಕತ್ವ ಮತ್ತು ಒಂದು ಮೌನಕ್ರಾಂತಿಯ ಕ್ಯಾನ್ವಾಸ್‌ನಂತೆ ಗೋಚರಿಸುತ್ತದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಬಿರುಕುಗಳಲ್ಲಿ ಗಿಡಗಳನ್ನು ಬೆಳೆಸುವ ಈ ಕಲ್ಪನೆಯು ಜಪಾನ್‌ನ ಸಾಂಪ್ರದಾಯಿಕ ತೋಟಗಾರಿಕೆಯ ತತ್ವಗಳಿಂದ ಪ್ರೇರಿತವಾಗಿದೆ. ಅಲ್ಲಿನ ‘ಜೆನ್ ಗಾರ್ಡನ್’ಗಳಲ್ಲಿ (Zen Gardens) ಪಾಚಿಯನ್ನು ಸೌಂದರ್ಯ ಮತ್ತು ಶಾಂತಿಯ ಸಂಕೇತವಾಗಿ ಬಳಸಲಾಗುತ್ತದೆ.

ಅಲ್ಲಿ ಕಲ್ಲಿನ ಮೇಲೆ ಬೆಳೆಯುವ ಪಾಚಿ ಮತ್ತು ಹೂವುಗಳನ್ನು ನಿಸರ್ಗದ ಚೇತರಿಕೆಯ ಪ್ರತೀಕವಾಗಿ ಕಾಣಲಾಗುತ್ತದೆ. ರಸ್ತೆಯ ಬಿರುಕುಗಳಲ್ಲಿನ ಸಣ್ಣ ಸಸ್ಯಗಳು ಈ ತತ್ವವನ್ನು ನಗರದ ಪರಿಸರಕ್ಕೂ ವಿಸ್ತರಿಸುತ್ತವೆ. ಜಪಾನ್‌ನಲ್ಲಿ ನಡೆಯುತ್ತಿರುವ ಈ ಕಾರ್ಯವು ‘ಗೆರಿ ಗಾರ್ಡನಿಂಗ್’ ಎಂಬ ಜಾಗತಿಕ ಚಳವಳಿಯ ಭಾಗವಾಗಿದೆ. ಈ ಚಳವಳಿಯ ಮುಖ್ಯ ಉದ್ದೇಶ, ಯಾರ ಅನುಮತಿ ಇಲ್ಲದೇ ನಿರ್ಲಕ್ಷಿತ ಅಥವಾ ಬಳಸದೇ ಇರುವ ಸಾರ್ವಜನಿಕ ಸ್ಥಳಗಳಲ್ಲಿ ಸಸ್ಯಗಳನ್ನು ನೆಡುವುದು.

A flower blooming in the cracks of the road

ಇದು ನಗರ ಪ್ರದೇಶಗಳಲ್ಲಿ ಹಸಿರು ವಲಯಗಳನ್ನು ಹೆಚ್ಚಿಸುವ ಒಂದು ಬಂಡಾಯದ ಮಾರ್ಗ ವಾಗಿದೆ. ಈ ಸಸ್ಯಗಳಿಗೆ ಹೆಚ್ಚಿನ ನಿರ್ವಹಣೆಯ ಅಗತ್ಯವಿರುವುದಿಲ್ಲ. ಅವು ಮಳೆ ನೀರು ಮತ್ತು ಸಣ್ಣ ಪ್ರಮಾಣದ ಮಣ್ಣನ್ನು ಬಳಸಿಕೊಂಡು ಸ್ವತಃ ಬೆಳೆಯುತ್ತವೆ. ಇದಕ್ಕಾಗಿ ಯಾರೂ ಕಾಳಜಿ ವಹಿಸಬೇಕಿಲ್ಲ.

ಮೊದಮೊದಲು ಇಂಥ ಚಟುವಟಿಕೆಗಳನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತಿತ್ತು. ಆದರೆ ಜಪಾನ್‌ನಲ್ಲಿ ಈ ಸುಂದರ ಉಪಕ್ರಮದ ಪರಿಣಾಮಗಳನ್ನು ಗಮನಿಸಿ, ಅನೇಕ ದೇಶಗಳು ಇದನ್ನು ಪ್ರೋತ್ಸಾಹಿಸುತ್ತಿವೆ. ಕೆಲವು ದೇಶಗಳಲ್ಲಿ, ನಗರಸಭೆಗಳೇ ಈ ಯೋಜನೆಗಳಿಗೆ ಹಣಕಾಸು ಮತ್ತು ಬೆಂಬಲ ನೀಡಿ, ಸಾರ್ವಜನಿಕರನ್ನು ಇದರಲ್ಲಿ ಭಾಗವಹಿಸಲು ಉತ್ತೇಜಿಸುತ್ತಿವೆ. ಪಾದಚಾರಿ ರಸ್ತೆಯ ಒಂದು ಬಿರುಕು ಸಹ ಬೆಳವಣಿಗೆಯ ಸಂಕೇತವಾಗಿ ಬದಲಾಗಬಹುದು ಎಂಬುದನ್ನು ಜಪಾನ್ ತೋರಿಸಿಕೊಟ್ಟಿದೆ.

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?