Wednesday, July 16, 2025
Wednesday, July 16, 2025

ವಿಮಾನದ ಟಾಯ್ಲೆಟ್‌ ಕತೆ

ವಿಮಾನದಲ್ಲಿರುವ ಶೌಚಾಲಯವು, ನಮ್ಮ ಮನೆಗಳಲ್ಲಿರುವ ಶೌಚಾಲಯಕ್ಕಿಂತ ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಮನೆಯಲ್ಲಿರುವ ಟಾಯ್ಲೆಟ್ಟಿನಲ್ಲಿ ನಾವು ನೀರನ್ನು ಬಳಸಿದರೆ, ವಿಮಾನದಲ್ಲಿ ತ್ಯಾಜ್ಯವನ್ನು ತೆಗೆದು ಹಾಕಲು ನಿರ್ವಾತ ಹೀರಿಕೊಳ್ಳುವ (ವ್ಯಾಕ್ಯೂಮ್ ಸಕ್ಷನ್) ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಪ್ರತಿ ಫ್ಲಶ್‌ಗೆ ಕೇವಲ ಅರ್ಧ ಗ್ಯಾಲನ್ ದ್ರವವನ್ನು (ಸುಮಾರು 2 ಲೀಟರ್‌ಗಿಂತ ಕಡಿಮೆ) ಬಳಸುವ ಈ ವಿಧಾನ ನಂಬಲಾಗದಷ್ಟು ಪರಿಣಾಮಕಾರಿಯಾಗಿದೆ.

ಏರ್‌ಬಸ್ ಎ-380ಯಂಥ ವಿಮಾನ ಸುಮಾರು ಐನೂರು ಪ್ರಯಾಣಿಕರನ್ನು ಹೇರಿಕೊಂಡು ಸುಮಾರು 17-18 ಗಂಟೆ ಹಾರುತ್ತದೆ. ಈ ಅವಧಿಯಲ್ಲಿ ಬಹುತೇಕ ಎಲ್ಲ ಪ್ರಯಾಣಿಕರು ಒಂದು ಅಥವಾ ಎರಡು ಸಲ ಟಾಯ್ಲೆಟ್‌ಗಳನ್ನೂ ಬಳಸುತ್ತಾರಷ್ಟೇ. ಭೂಮಿಯಿಂದ 36-38 ಸಾವಿರ ಅಡಿಎತ್ತರದಲ್ಲಿ ಹಾರುವ ವಿಮಾನದ ಟಾಯ್ಲೆಟ್ ಮೇಲೆ ಯಾವ ರೀತಿಯ ಒತ್ತಡ ಬೀಳಬಹುದು ಮತ್ತು ಅದು ಹೇಗೆ ಕಾರ್ಯನಿರ್ವಹಿಸಬಹುದು ಎಂದು ಎಂದಾದರೂ ಯೋಚಿಸಿದ್ದೀರಾ? ವಿಮಾನದ ಶೌಚಾಲಯಗಳು ಸಣ್ಣದಾದರೂ, ಅವುಗಳ ವಿಜ್ಞಾನ ಮಾತ್ರ ಅದ್ಭುತ ಮತ್ತು ಅತ್ಯುನ್ನತ.

flight toilet 2

ವಿಮಾನದಲ್ಲಿರುವ ಶೌಚಾಲಯವು, ನಮ್ಮ ಮನೆಗಳಲ್ಲಿರುವ ಶೌಚಾಲಯಕ್ಕಿಂತ ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಮನೆಯಲ್ಲಿರುವ ಟಾಯ್ಲೆಟ್ಟಿನಲ್ಲಿ ನಾವು ನೀರನ್ನು ಬಳಸಿದರೆ, ವಿಮಾನದಲ್ಲಿ ತ್ಯಾಜ್ಯವನ್ನು ತೆಗೆದು ಹಾಕಲು ನಿರ್ವಾತ ಹೀರಿಕೊಳ್ಳುವ (ವ್ಯಾಕ್ಯೂಮ್ ಸಕ್ಷನ್) ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಪ್ರತಿ ಫ್ಲಶ್‌ಗೆ ಕೇವಲ ಅರ್ಧ ಗ್ಯಾಲನ್ ದ್ರವವನ್ನು (ಸುಮಾರು 2 ಲೀಟರ್‌ಗಿಂತ ಕಡಿಮೆ) ಬಳಸುವ ಈ ವಿಧಾನ ನಂಬಲಾಗದಷ್ಟು ಪರಿಣಾಮಕಾರಿಯಾಗಿದೆ. ಇದು ಪ್ರತಿ ವಿಮಾನ ಪ್ರಯಾಣದಲ್ಲಿ ನೂರಾರು ಗ್ಯಾಲನ್‌ಗಳಷ್ಟು ನೀರನ್ನು ಉಳಿಸುತ್ತದೆ. ಅಷ್ಟಕ್ಕೂ ನಿರ್ವಾತ ಶೌಚಾಲಯಗಳು ಹೇಗೆ ಕಾರ್ಯನಿರ್ವಹಿಸುತ್ತವೆ? ಇದು ನಿಜಕ್ಕೂ ಕುತೂಹಲಕಾರಿ. ನೀವು ಫ್ಲಶ್ ಬಟನ್ ಒತ್ತುತ್ತಿದ್ದಂತೆ, ಪ್ರಬಲವಾದ ನಿರ್ವಾತವು ತ್ಯಾಜ್ಯವನ್ನು ಮುಚ್ಚಿದ ಸಂಗ್ರಹ ಟ್ಯಾಂಕ್‌ಗೆ ತಕ್ಷಣ ಹೀರಿಕೊಳ್ಳುತ್ತದೆ.

ಇದನ್ನೂ ಓದಿ: ಪೈಲಟ್‌ ಮತ್ತು ಪರಿಸ್ಥಿತಿ ಅರಿವು

ಈ ವ್ಯವಸ್ಥೆಯು ಗುರುತ್ವಾಕರ್ಷಣ ಶಕ್ತಿಯ ಮೇಲೆ ಅವಲಂಬಿತವಾಗಿಲ್ಲ, ಇದು ಎತ್ತರದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಸೂಕ್ತವಾಗಿದೆ. ಇದು ಪೈಪ್‌ಗಳಲ್ಲಿ ತ್ಯಾಜ್ಯವಸ್ತು ನಿಲ್ಲುವುದನ್ನು ತಡೆಯುತ್ತದೆ, ಇದರಿಂದಾಗಿ ಕ್ಯಾಬಿನ್ ವಾಸನೆಮುಕ್ತವಾಗಿರುತ್ತದೆ ಮತ್ತು ನೈರ್ಮಲ್ಯದಿಂದ ಕೂಡಿರುತ್ತದೆ. ಪ್ರಯಾಣಿಕರು ಫ್ಲಶ್ ಬಟನ್ ಒತ್ತಿದಾಗ, ಅದು ಇಲೆಕ್ಟ್ರಾನಿಕ್ ಸಂಕೇತವನ್ನು ಕಳುಹಿಸುತ್ತದೆ.

ಈ ಸಂಕೇತವು ಶೌಚಾಲಯದ ಬೌಲ್‌ನ ಕೆಳಭಾಗದಲ್ಲಿರುವ ಒಂದು ವಾಲ್ವ್ (ಫ್ಲಶ್ ವಾಲ್ವ್) ತೆರೆಯುವಂತೆ ಮಾಡುತ್ತದೆ. ಅದೇ ಸಮಯದಲ್ಲಿ, ಶೌಚಾಲಯ ವ್ಯವಸ್ಥೆಯು ಸಂಗ್ರಹ ಟ್ಯಾಂಕ್‌ಗೆ ಸಂಪರ್ಕಗೊಂಡಿರುತ್ತದೆ. ಈ ಟ್ಯಾಂಕ್‌ನಲ್ಲಿ ಸಾಮಾನ್ಯವಾಗಿ ವಿಮಾನದ ಹೊರಗಿನ ಅಥವಾ ಒಳಗಿನ ವಾತಾವರಣದ ಕಡಿಮೆ ಒತ್ತಡವನ್ನು ಬಳಸಿಕೊಂಡು ಕಡಿಮೆ ನಿರ್ವಾತವನ್ನು ನಿರ್ವಹಿಸಲಾಗುತ್ತದೆ.

ವಿಮಾನವು 35 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿರುವಾಗ, ಕ್ಯಾಬಿನ್ ಒಳಗಿನ ಒತ್ತಡವು ಹೊರಗಿನ ಒತ್ತಡಕ್ಕಿಂತ ಹೆಚ್ಚಾಗಿರುತ್ತದೆ. ಈ ಒತ್ತಡದ ವ್ಯತ್ಯಾಸವನ್ನೇ ನಿರ್ವಾತ ಸೃಷ್ಟಿಗೆ ಬಳಸಿಕೊಳ್ಳ‌ಲಾಗುತ್ತದೆ. ಫ್ಲಶ್ ವಾಲ್ವ್ ತೆರೆದ ತಕ್ಷಣ, ಕ್ಯಾಬಿನ್‌ನ ಹೆಚ್ಚಿನ ಒತ್ತಡವು ಬೌಲ್‌ನಿಂದ ಸಂಗ್ರಹ ಟ್ಯಾಂಕ್‌ನ ಕಡಿಮೆ ಒತ್ತಡದ ಕಡೆಗೆ ತ್ಯಾಜ್ಯವನ್ನು ತಳ್ಳುತ್ತದೆ. ಇದು ಅತ್ಯಂತ ವೇಗವಾಗಿ ಮತ್ತು ಪ್ರಬಲವಾಗಿ ನಡೆಯುತ್ತದೆ. ಹೀಗಾಗಿ ಜೋರಾದ, ಗಾಬರಿ ಹುಟ್ಟಿಸುವ ’ವೂಶ್’ ಎಂಬ ಶಬ್ದ ಕೇಳಿಸುತ್ತದೆ.

ತ್ಯಾಜ್ಯವು ಕಡಿಮೆ ನೀರಿನೊಂದಿಗೆ (ಕೆಲವೊಮ್ಮೆ ನೀರುರಹಿತ ಶುಚಿಕಾರಕ ದ್ರವ) ವೇಗವಾಗಿ ಪೈಪ್‌ಗಳ ಮೂಲಕ ಹಾದುಹೋಗುತ್ತದೆ ಮತ್ತು ನೇರವಾಗಿ ಮುಚ್ಚಿದ ಸಂಗ್ರಹ ಟ್ಯಾಂಕ್‌ಗೆ ಸೇರುತ್ತದೆ. ಫ್ಲಶ್ ಪ್ರಕ್ರಿಯೆ ಮುಗಿದ ತಕ್ಷಣ, ವಾಲ್ವ್ ಮುಚ್ಚುತ್ತದೆ. ಸಿಸ್ಟಮ್ ಅನ್ನು ಮತ್ತೆ ಸೀಲ್ ಮಾಡುತ್ತದೆ ಮತ್ತು ಕ್ಯಾಬಿನ್ ನೊಳಗೆ ಯಾವುದೇ ದುರ್ವಾಸನೆ ಹರಡುವುದನ್ನು ತಡೆಯುತ್ತದೆ.

flight toilet 1

ಹೆಚ್ಚಿನ ವ್ಯವಸ್ಥೆಗಳು ಬೌಲ್ ಅನ್ನು ಸ್ವಚ್ಛಗೊಳಿಸಲು ಕಡಿಮೆ ಪ್ರಮಾಣದ ನೀರು ಅಥವಾ ನೀರು ರಹಿತ ಶುಚೀಕರಣ ದ್ರವವನ್ನು ಸಿಂಪಡಿಸುತ್ತವೆ. ಇದು ಟಾಯ್ಲೆಟ್ ಸಂಪೂರ್ಣವಾಗಿ ಸ್ವಚ್ಛವಾಗಿದೆ ಯೆ ಎಂದು ಖಚಿತಪಡಿಸುತ್ತದೆ. 1980ರ ದಶಕದಲ್ಲಿ ನಿರ್ವಾತ ಶೌಚಾಲಯಗಳನ್ನು ಅಭಿವೃದ್ಧಿಪಡಿಸಲಾಯಿತು.

ಈ ಆವಿಷ್ಕಾರವು ವಿಮಾನ ಪ್ರಯಾಣದಲ್ಲಿ ಕ್ರಾಂತಿಯನ್ನುಂಟು‌ ಮಾಡಿತು. ಇದರ ಮೊದಲು, ವಿಮಾನದ ಶೌಚಾಲಯಗಳು ಸಂಪೂರ್ಣವಾಗಿ ಭಿನ್ನವಾಗಿದ್ದವು ಮತ್ತು ಅದರಲ್ಲಿ ಅನೇಕ ಅಡಚಣೆಗಳಿದ್ದವು. 1980ಕ್ಕಿಂತ ಮೊದಲು, ವಿಮಾನಗಳ ಟಾಯ್ಲೆಟ್‌ಗಳು ಭೂಮಿಯ ಮೇಲಿನ ಶೌಚಾಲಯಗಳಂತೆಯೇ ಹೆಚ್ಚು ನೀರನ್ನು ಅವಲಂಬಿಸಿದ್ದವು.

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?