Saturday, August 30, 2025
Saturday, August 30, 2025

ಪೈಲಟ್‌ ಮತ್ತು ಪರಿಸ್ಥಿತಿ ಅರಿವು

ಉತ್ತಮ ಪೈಲಟ್‌ಗಳು ಹಾರಾಟದ ಸಮಯದಲ್ಲಿ ನಿರಂತರವಾಗಿ ಈ ಚಿತ್ರಣವನ್ನು ಮನಸ್ಸಿನಲ್ಲಿ ರೂಪಿಸಿಕೊಳ್ಳುತ್ತಾರೆ. ಇದು ಕೇವಲ ಮಾಹಿತಿಯನ್ನು ಸಂಗ್ರಹಿಸುವುದಲ್ಲ, ಬದಲಿಗೆ ಆ ಮಾಹಿತಿಯನ್ನು ಅರ್ಥೈಸಿಕೊಂಡು ಭವಿಷ್ಯದ ಬಗ್ಗೆ ಊಹಿಸುವ ಸಾಮರ್ಥ್ಯವಾಗಿದೆ. ಪರಿಸ್ಥಿತಿಯ ಅರಿವನ್ನು ಮೂರು ಮುಖ್ಯ ಹಂತಗಳಲ್ಲಿ ವಿಂಗಡಿಸಬಹುದು.

ವಿಮಾನದ ಪೈಲಟ್‌ಗಳ ಪರಿಸ್ಥಿತಿಯ ಅರಿವು (Situational Awareness) ಮತ್ತು ಚುರುಕಾಗಿ ನಿರ್ಧಾರ ತೆಗೆದುಕೊಳ್ಳುವ ಗುಣಗಳನ್ನೂ ಅತ್ಯಂತ ಉತ್ತಮ ಅರ್ಹತೆ ಎಂದು ಪರಿಗಣಿಸಲಾಗುತ್ತದೆ. ಕೆಲವು ಸಲ ವಿಮಾನ ಅಪಘಾತಗಳು ಯಾಂತ್ರಿಕ ವೈಫಲ್ಯಗಳಿಂದಲ್ಲ, ಬದಲಿಗೆ ಪೈಲಟ್ ನಿರ್ಧಾರದಿಂದ ಆಗುತ್ತವೆ.

ಪೈಲಟ್ ಪರಿಸ್ಥಿತಿಯ ಅರಿವನ್ನು ಕಳೆದುಕೊಳ್ಳುವುದರಿಂದ ಸಂಭವಿಸುತ್ತವೆ. ಹಾಗಾದರೆ ಪರಿಸ್ಥಿತಿಯ ಅರಿವು ಎಂದರೇನು? ಇದು ಆಕಾಶದಲ್ಲಿನ ಮಾನಸಿಕ ನಕ್ಷೆ ಇದ್ದಂತೆ. ಈಗ ನಿಖರವಾಗಿ ಎಲ್ಲಿದ್ದೇನೆ, ಈಗ ಏನಾಗುತ್ತಿದೆ ಮತ್ತು ಮುಂದೆ ಏನಾಗಲಿದೆ ಎಂಬುದನ್ನು ಪೈಲಟ್ ತಿಳಿದಿರುವುದು.

pilot (1)

ಉತ್ತಮ ಪೈಲಟ್‌ಗಳು ಹಾರಾಟದ ಸಮಯದಲ್ಲಿ ನಿರಂತರವಾಗಿ ಈ ಚಿತ್ರಣವನ್ನು ಮನಸ್ಸಿನಲ್ಲಿ ರೂಪಿಸಿಕೊಳ್ಳುತ್ತಾರೆ. ಇದು ಕೇವಲ ಮಾಹಿತಿಯನ್ನು ಸಂಗ್ರಹಿಸುವುದಲ್ಲ, ಬದಲಿಗೆ ಆ ಮಾಹಿತಿಯನ್ನು ಅರ್ಥೈಸಿಕೊಂಡು ಭವಿಷ್ಯದ ಬಗ್ಗೆ ಊಹಿಸುವ ಸಾಮರ್ಥ್ಯವಾಗಿದೆ. ಪರಿಸ್ಥಿತಿಯ ಅರಿವನ್ನು ಮೂರು ಮುಖ್ಯ ಹಂತಗಳಲ್ಲಿ ವಿಂಗಡಿಸಬಹುದು.

ಇದನ್ನೂ ಓದಿ: ವಿಮಾನವನ್ನು ಪಾರ್ಕ್‌ ಮಾಡುವುದು

ಮೊದಲನೆಯದು, ಗ್ರಹಿಕೆ (Perception). ಇದು ಸುತ್ತಮುತ್ತಲಿನ ಪರಿಸರದಿಂದ ಮಾಹಿತಿಯನ್ನು ಸಂಗ್ರಹಿಸುವ ಹಂತ. ಪೈಲಟ್‌ಗಳು ವಿಮಾನದ ಉಪಕರಣಗಳಿಂದ (ಆಲ್ಟಿ ಮೀಟರ್, ಏರ್‌ಸ್ಪೀಡ್ ಇಂಡಿಕೇಟರ್, ಹೆಡಿಂಗ್ ಇಂಡಿಕೇಟರ್ ಇತ್ಯಾದಿ), ಹೊರಗಿನ ದೃಶ್ಯಗಳು (ಹವಾಮಾನ, ಭೂಪ್ರದೇಶ, ಇತರ ವಿಮಾನಗಳು), ರೇಡಿಯೋ ಸಂವಹನಗಳು ಮತ್ತು ಸಿಬ್ಬಂದಿಯಿಂದ (ಸಹ-ಪೈಲಟ್, ಏರ್ ಟ್ರಾಫಿಕ್ ಕಂಟ್ರೋಲ್) ಮಾಹಿತಿಯನ್ನು ಪಡೆಯುತ್ತಾರೆ.

ಇಲ್ಲಿ ಪ್ರತಿಯೊಂದು ಸಣ್ಣ ವಿವರವೂ ಮುಖ್ಯವಾಗುತ್ತದೆ. ಉದಾಹರಣೆಗೆ, ಹೊರಗಿನ ಮೋಡಗಳ ವಿಧ, ದೂರದಲ್ಲಿರುವ ವಿಮಾನದ ದೀಪಗಳು, ಇಂಧನ ಮಟ್ಟದ ಸೂಚಕ- ಇವೆಲ್ಲವೂ ಗ್ರಹಿಕೆಯ ಭಾಗವೇ. ಎರಡನೆಯದು, ಅರ್ಥೈಸುವಿಕೆ (Comprehension. ಸಂಗ್ರಹಿಸಿದ ಮಾಹಿತಿಯನ್ನು ಏನೆಂದು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಗ್ರಹಿಸಿದ ಪ್ರತಿಯೊಂದು ಮಾಹಿತಿಗೂ ಒಂದು ಅರ್ಥವನ್ನು ನೀಡುವುದು ಈ ಹಂತದಲ್ಲಿಯೇ.

ಉದಾಹರಣೆಗೆ, ಉಪಕರಣವು ಕಡಿಮೆ ಇಂಧನ ಮಟ್ಟವನ್ನು ತೋರಿಸಿದರೆ, ಅದನ್ನು ‘ಇಂಧನ ಕಡಿಮೆಯಾಗಿದೆ’ ಎಂದು ಅರ್ಥೈಸುವುದು. ಅದೇ ರೀತಿ, ಮೋಡಗಳು ದಟ್ಟವಾಗಿದ್ದರೆ, ಅದು ಮುಂದೆ ಬಿರುಗಾಳಿಯ ಸಂಕೇತವಾಗಿರಬಹುದು ಎಂದು ಅರ್ಥ ಮಾಡಿಕೊಳ್ಳುವುದು. ಈ ಹಂತದಲ್ಲಿ, ಪೈಲಟ್ ವಿವಿಧ ಮಾಹಿತಿಗಳ ನಡುವೆ ಸಂಬಂಧಗಳನ್ನು ಗುರುತಿಸುತ್ತಾರೆ ಮತ್ತು ಅವು ಒಟ್ಟಾಗಿ ಯಾವ ಚಿತ್ರಣವನ್ನು ನೀಡುತ್ತವೆ ಎಂಬುದನ್ನು ಗ್ರಹಿಸುತ್ತಾರೆ.

ಮೂರನೆಯದು, ಅಂದಾಜು/ಮುನ್ಸೂಚನೆ (Projection). ಅರ್ಥೈಸಿಕೊಂಡ ಮಾಹಿತಿಯ ಆಧಾರದ ಮೇಲೆ ಭವಿಷ್ಯದಲ್ಲಿ ಏನಾಗಬಹುದು ಎಂದು ಊಹಿಸುವುದು ಸಹ ಅಷ್ಟೇ ಮುಖ್ಯ. ಇದು ಪರಿಸ್ಥಿತಿಯ ಅರಿವಿನ ಅತ್ಯಂತ ಪ್ರಮುಖ ಹಂತ. ‘ಈಗಿರುವ ಪರಿಸ್ಥಿತಿ ಮುಂದುವರಿದರೆ ಮುಂದೆ ಏನಾಗಬಹುದು?’ ಎಂದು ಪ್ರಶ್ನಿಸುವುದು.

pilot 2 (1)

ಉದಾಹರಣೆಗೆ, ‘ಇಂಧನ ಕಡಿಮೆಯಾಗುತ್ತಿದೆ ಮತ್ತು ಗಾಳಿ ಎದುರಾಗಿದೆ, ಮುಂದಿನ 30 ನಿಮಿಷಗಳಲ್ಲಿ ನಾವು ಸುರಕ್ಷಿತವಾಗಿ ಇಳಿಯುವ ವಿಮಾನ ನಿಲ್ದಾಣವನ್ನು ತಲುಪಲು ಸಾಕಷ್ಟು ಇಂಧನವಿದೆಯೇ?’ ಎಂದು ಊಹಿಸಿ, ಕ್ರಮ ಕೈಗೊಳ್ಳುವುದು. ಈ ಹಂತವು ಪೈಲಟ್‌ಗೆ ಅಪಾಯಗಳನ್ನು ಮೊದಲೇ ಗುರುತಿಸಲು ಮತ್ತು ಅವು ದೊಡ್ಡ ಸಮಸ್ಯೆಯಾಗುವ ಮೊದಲು ಪರಿಹಾರಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತವೆ.

ಸಂಗ್ರಹಿಸಿದ ಡೇಟಾವನ್ನು ವಿಮಾನದ ಕಾರ್ಯಕ್ಷಮತೆ, ಹಾರಾಟದ ಯೋಜನೆ ಮತ್ತು ಸುರಕ್ಷತಾ ನಿಯಮಗಳಿಗೆ ಸಂಬಂಧಿಸಿ ವಿಶ್ಲೇಷಿಸುವುದು ಸಹ ಮುಖ್ಯ. ಉದಾಹರಣೆಗೆ, ದುರುಗಾಳಿ ಹೆಚ್ಚಾದರೆ, ಇಂಧನ ಬಳಕೆ ಹೆಚ್ಚಾಗುತ್ತದೆ ಮತ್ತು ಗಮ್ಯಸ್ಥಾನವನ್ನು ತಲುಪಲು ಹೆಚ್ಚು ಸಮಯ ಬೇಕಾಗುತ್ತದೆ ಎಂದು ಅರ್ಥಮಾಡಿಕೊಳ್ಳುವುದು.

ಪರಿಸ್ಥಿತಿಯ ಅರಿವಿರುವ ಪೈಲಟ್ ವಿಮಾನಕ್ಕಿಂತ ಮಾನಸಿಕವಾಗಿ ಮುಂದೆ ಇರುತ್ತಾನೆ. ಆತ ಎಂದೂ ತಡವಾಗಿ ಪ್ರತಿಕ್ರಿಯಿಸುವುದಿಲ್ಲ. ಇದರರ್ಥ ಯಾವಾಗಲೂ ವಿಮಾನದ ಮುಂದಿನ ಹಂತಗಳ ಬಗ್ಗೆ ಯೋಚಿಸುವುದು. ‘ಮುಂದಿನ ಐದು ನಿಮಿಷಗಳಲ್ಲಿ ನಾವು ಏನನ್ನು ನಿರೀಕ್ಷಿಸಬಹುದು?’ ಎಂದು ಪ್ರಶ್ನಿಸಿಕೊಳ್ಳುವುದು.

ಒಂದು ಸಮಸ್ಯೆ ಸಂಭವಿಸಿದಾಗ ಪ್ರತಿಕ್ರಿಯಿಸುವುದಕ್ಕಿಂತ, ಅದು ಸಂಭವಿಸುವುದನ್ನು ಮೊದಲೇ ಊಹಿಸಿ ಸಿದ್ಧರಾಗಿರುವುದು ಉತ್ತಮ. ಇವು ಉತ್ತಮ ಪೈಲಟ್ ಲಕ್ಷಣಗಳು.

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?