ಎಟಿಸಿ ಅಧಿಕಾರಿಯೇ ನಿದ್ರಿಸಿದರೆ...
ವಿಮಾನವು ಅಜ್ಯಾಕ್ಸಿಯ ಮೇಲೆ ಇಳಿಯುತ್ತಿರುವಾಗ, ಮಧ್ಯರಾತ್ರಿ ಸಮಯದಲ್ಲಿ (ಸುಮಾರು 12 ಗಂಟೆ), ಪೈಲಟ್‌ಗಳು ಎಟಿಸಿ (ATC)ಗೆ ರೇಡಿಯೋ ಕರೆಗಳ ಮೂಲಕ ಸಂಪರ್ಕಿಸಿದರು. ಆದರೆ, ಏರ್ ರ್ಪೋರ್ಟ್‌ನ ಕಂಟ್ರೋಲ್ ಟವರ್‌ನಿಂದ ಯಾವುದೇ ಉತ್ತರ ಬರಲಿಲ್ಲ. ಹೆಚ್ಚಿನ ಕಳವಳಕ್ಕೆ, ನೆಪೋಲಿಯನ್ ಬೊನಾ ಪಾರ್ಟ್ ಏರ್‌ಪೋರ್ಟ್ ರನ್ ವೇ ಲೈಟ್‌ಗಳು ಆನ್ ಆಗಿರಲಿಲ್ಲ, ಇದು ರಾತ್ರಿ ಲ್ಯಾಂಡಿಂಗ್‌ಗೆ ಅತ್ಯಂತ ಅಪಾಯಕಾರಿಯಾಗಿತ್ತು. ಪೈಲಟ್‌ಗಳು ಲ್ಯಾಂಡಿಂಗ್ ಕ್ಲಿಯರೆ ಕೋರಿದರೂ, ಸಂಪರ್ಕ ಕಡಿತಗೊಂಡಿತು.
ಸೆಪ್ಟೆಂಬರ್ 15, 2025ರ ಮಧ್ಯರಾತ್ರಿ. ಏರ್ ಕಾರ್ಸಿಕಾ ಏರ್‌ಲೈನ್‌ನ ವಿಮಾನ, ಪ್ಯಾರಿಸ್ ಒರ್ಲಿ (ORLY) ಏರ್‌ಪೋರ್ಟ್‌ನಿಂದ ಕಾರ್ಸಿಕಾ ದ್ವೀಪದ ಅಜ್ಯಾಕ್ಸಿಯ ನೆಪೋಲಿಯನ್ ಬೊನಾಪಾರ್ಟೆ ಏರ್‌ಪೋರ್ಟ್ (AJA )ಗೆ ಹೊರಟಿತು. ಏರ್‌ಬಸ್ A320 ನಿಯೋ ಮಾದರಿಯದ್ದಾಗಿದ್ದ ವಿಮಾನವು, ಸುಮಾರು ಒಂದು ಗಂಟೆ ಐವತ್ತು ನಿಮಿಷ ಆಕಾಶದಲ್ಲಿ ಹಾರಾಟ ನಡೆಸಿತ್ತು.
ವಿಮಾನವು ಒರ್ಲಿಯಿಂದ 27 ನಿಮಿಷ ತಡವಾಗಿ ಅಂದರೆ ರಾತ್ರಿ 10:47ಕ್ಕೆ ತೆರಳಿತು. ರಾತ್ರಿ 11:27ಕ್ಕೆ ಆಗಮೀಸಬೇಕಿತ್ತು. ಆದರೆ ಅಜ್ಯಾಕ್ಸಿಯಲ್ಲಿ ಲ್ಯಾಂಡ್ ಆಗಿದ್ದು ಮಧ್ಯರಾತ್ರಿ 12:35ಕ್ಕೆ, ಅಂದರೆ 1 ಗಂಟೆ 18 ನಿಮಿಷಗಳ ತಡವಾಗಿ. ಹಾರಾಟದ ಕಡೆಯ 75 ನಿಮಿಷಗಳಲ್ಲಿ, ವಿಮಾನವು ಹದಿನೈದು ಸಾವಿರ ಅಡಿ ಎತ್ತರದಲ್ಲಿ ಅಜ್ಯಾಕ್ಸಿ ಗಲ ಮೇಲೆ ಹೋಲ್ಡಿಂಗ್ ಪ್ಯಾಟರ್ನ್‌ನಲ್ಲಿ (ನಿರ್ದಿಷ್ಟ ಮಾರ್ಗದಲ್ಲಿ ತಿರುಗುವುದು) ವಿಮಾನವು ಮೆಡಿಟೆರೇನಿಯನ್ ಸಮುದ್ರದ ಮೇಲೆ ಸುತ್ತು ಹಾಕುತ್ತಿರಬೇಕಾಯಿತು.

ವಿಮಾನವು ಅಜ್ಯಾಕ್ಸಿಯ ಮೇಲೆ ಇಳಿಯುತ್ತಿರುವಾಗ, ಮಧ್ಯರಾತ್ರಿ ಸಮಯದಲ್ಲಿ (ಸುಮಾರು 12 ಗಂಟೆ), ಪೈಲಟ್‌ಗಳು ಎಟಿಸಿ (ATC)ಗೆ ರೇಡಿಯೋ ಕರೆಗಳ ಮೂಲಕ ಸಂಪರ್ಕಿಸಿದರು. ಆದರೆ, ಏರ್ ರ್ಪೋರ್ಟ್‌ನ ಕಂಟ್ರೋಲ್ ಟವರ್‌ನಿಂದ ಯಾವುದೇ ಉತ್ತರ ಬರಲಿಲ್ಲ. ಹೆಚ್ಚಿನ ಕಳವಳಕ್ಕೆ, ನೆಪೋಲಿಯನ್ ಬೊನಾಪಾರ್ಟ್ ಏರ್‌ಪೋರ್ಟ್ ರನ್ ವೇ ಲೈಟ್‌ಗಳು ಆನ್ ಆಗಿರಲಿಲ್ಲ, ಇದು ರಾತ್ರಿ ಲ್ಯಾಂಡಿಂಗ್‌ಗೆ ಅತ್ಯಂತ ಅಪಾಯಕಾರಿಯಾಗಿತ್ತು. ಪೈಲಟ್‌ಗಳು ಲ್ಯಾಂಡಿಂಗ್ ಕ್ಲಿಯರೆ ಕೋರಿದರೂ, ಸಂಪರ್ಕ ಕಡಿತಗೊಂಡಿತು. ಈ ಸಮಯದಲ್ಲಿ, ಅಜ್ಯಾಕ್ಸಿ ಏರ್‌ಪೋರ್ಟ್‌ನಲ್ಲಿ ಏಕೈಕ ATC ಅಧಿಕಾರಿ ಕಾರ್ಯನಿರ್ವಹಿಸುತ್ತಿದ್ದ. ಪೈಲಟ್ ಅವನನ್ನು ಸಂಪರ್ಕಿಸಲು ಎಷ್ಟೇ ಪ್ರಯತ್ನಿಸಿದರೂ ಆತ ಉತ್ತರಿಸಲೇ ಇಲ್ಲ.
ಇದನ್ನೂ ಓದಿ: ಕಿಸ್ಸರ್ ಲ್ಯಾಂಡಿಂಗ್ ಇದು ರನ್‌ವೇ ರೊಮ್ಯಾನ್ಸ್!
ರೀಜನಲ್ ಎಟಿಸಿಗಳು (ಇತರ ಏರ್‌ಪೋರ್ಟ್‌ನಲ್ಲಿರುವವರು) ಈ ಸಮಸ್ಯೆಯನ್ನು ಗಮನಿಸಿ, ತಕ್ಷಣ ಕಾರ್ಯಪ್ರವೃತ್ತರಾದರು. ಅವರು ಅಜ್ಯಾಕ್ಸಿ ಏರ್‌ಪೋರ್ಟ್‌ನ ಫಾರ್ ಡಿಪಾರ್ಟ್‌ಮೆಂಟ್ ಮತ್ತು ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದರು. ಅವರು ಸುರಕ್ಷಾ ಲಾಕ್‌ಗಳನ್ನು ಒಡೆದು ಕಂಟ್ರೋಲ್ ಟವರ್‌ಗೆ ಪ್ರವೇಶಿಸಿದರು. ಅಲ್ಲಿ ಹೋಗಿ ನೋಡಿದರೆ ಆತ ನಿದ್ದೆಗೆ ಜಾರಿದ್ದ. ತಕ್ಷಣ ಅವರು ಆತನನ್ನು ಎಬ್ಬಿಸಿದರು.
ತಕ್ಷಣ ಎದ್ದುಬಿದ್ದವರಂತೆ ಗಲಿಬಿಲಿಯಾದ ಎಟಿಸಿ ಅಧಿಕಾರಿ ಸಾವರಿಸಿಕೊಂಡು, ರನ್ ವೇ ಲೈಟ್ ಗಳನ್ನು ಆನ್ ಮಾಡಿ, ವಿಮಾನಕ್ಕೆ ಲ್ಯಾಂಡಿಂಗ್ ಅನುಮತಿ ನೀಡಿದ. ಪೈಲಟ್‌ಗಳು ಹತ್ತಿರದ ಬೇರೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುವ ಯೋಜನೆಯನ್ನು ರೂಪಿಸುತ್ತಿದ್ದರು. ಆದರೆ ಅದೂ ಸಾಧ್ಯವಾಗಲಿಲ್ಲ. ಕಾರಣ ಅದಕ್ಕೂ ಈ ಎಟಿಸಿ ಸಹಾಯ ಬೇಕಿತ್ತು. ಅಂತಿಮವಾಗಿ, ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಯಿತು ಮತ್ತು ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಲಿಲ್ಲ.
ಫ್ರೆಂಚ್ ಸಿವಿಲ್ ಏವಿಯೇಷನ್ ಅಥಾರಿಟಿಯು ತಕ್ಷಣ ಕಾರ್ಯಪ್ರವೃತ್ತವಾಯಿತು. ಎಟಿಸಿ ಅಧಿಕಾರಿಯನ್ನು ಡ್ರಗ್ಸ್ ಮತ್ತು ಅಲ್ಕೊಹಾಲ್ ಪರೀಕ್ಷೆಗೆ ಒಳಪಡಿಸಲಾಯಿತು. ಆದರೆ ಫಲಿತಾಂಶ ನೆಗೆಟಿವ್ ಬಂದಿತು. ಇದು ಆ ಅಧಿಕಾರಿಯ ಬೇಜವಾಬ್ದಾರಿ ನಡೆ. ವಿಮಾನದ ಕ್ಯಾಪ್ಟನ್, ನನ್ನ ಹಲವು ದಶಕಗಳ ವೃತ್ತಿಜೀವನದಲ್ಲಿ ಇಂಥ ಸನ್ನಿವೇಶವನ್ನು ನಾನು ಎಂದಿಗೂ ಎದುರಿಸಿಲ್ಲ’ ಎಂದು ಹೇಳಿದ.
ಈ ಘಟನೆಯು ವಿಮಾನಯಾನ ಸುರಕ್ಷತೆಯಲ್ಲಿ ಗಂಭೀರ ಚರ್ಚೆಯನ್ನು ಹುಟ್ಟು ಹಾಕಿದೆ. ಅಜ್ಯಾಕ್ಸಿ ನೆಪೋಲಿಯನ್ ಬೊನಾಪಾರ್ಟೆ ಏರ್‌ಪೋರ್ಟ್ ದಿನಕ್ಕೆ ಇವತ್ತಕ್ಕೂ ಹೆಚ್ಚು ಹಾರಾಟಗಳನ್ನು ನಿರ್ವಹಿಸುತ್ತದೆ. ಆದರೂ ರಾತ್ರಿ ಶಿಫ್ಟ್ ಗಳಲ್ಲಿ ಇಟಿಸಿಯಲ್ಲಿ ಏಕೈಕ ಅಧಿಕಾರಿ ಕಾರ್ಯ ನಿರ್ವಹಿಸುವುದು ಅಚ್ಚರಿಯೇ ಸರಿ.
ದೀರ್ಘ ಶಿಫ್ಟ್ ಗಳಲ್ಲಿ , ಒತ್ತಡ ಮತ್ತು ನಿರಂತರ ಕಾರ್ಯದಿಂದಾಗಿ, ಇಂಥ ತಪ್ಪುಗಳು ಸಂಭವಿಸಬಹುದು. ಆದರೂ ಇದು ತೀರಾ ಅಪರೂಪವೇ. ಪೈಲಟ್‌ಗಳ ಸಮಯಪ್ರಜ್ಞೆ ಮತ್ತು ರೀಜನಲ್ ಎಟಿಸಿ ಕ್ಷಿಪ್ರ ನಡೆಯಿಂದ ದೊಡ್ಡ ದುರಂತವೊಂದು ತಪ್ಪಿತು. ರಾತ್ರಿ ಶಿಫ್ಟ್ ಗಳಲ್ಲಿ ಕನಿಷ್ಠ ಇಬ್ಬರು ಅಧಿಕಾರಿಗಳನ್ನು ನೇಮಿಸುವುದು, ಶಿಫ್ಟ್ ಗಳ ನಡುವೆ ವಿರಾಮ ನೀಡುವುದು, ನಿದ್ರಾ ಮೇಲ್ವಿಚಾರಣೆ ಮತ್ತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಆಟೋಮ್ಯಾಟಿಕ್ ಅಲರ್ಟ್ ಸಿಸ್ಟಮ್‌ಗಳು ಮತ್ತು ಬ್ಯಾಕಪ್ ಕಮ್ಯುನಿಕೇಷನ್ ಟೂಲ್‌ಗಳ ಅಗತ್ಯವನ್ನು ಈ ಘಟನೆ ನೆನಪಿಸಿದೆ.