Saturday, June 13, 2026
Saturday, June 13, 2026

ಪ್ರವಾಸದಲ್ಲಿʻರಿಸರ್ವೇಶನ್ʼ!

ಪ್ರವಾಸಿ ಅಂದರೆ ಆತ ಜಾತಿ ಧರ್ಮ ಇವೆಲ್ಲವನ್ನೂ ಮೀರಿದವನು. ಜಗತ್ತು ಆತನನ್ನು ಪ್ರವಾಸಿ ಎಂದು ನೋಡುತ್ತದೆಯೇ ಹೊರತು ಆತನ ಜಾತಿಧರ್ಮವನ್ನಲ್ಲ. ವಿಜಯ್ ಘೆಮೈರ್ ಎವರೆಸ್ಟ್ ನ ತುದಿ ಮುಟ್ಟಲು ಆತನಿಗೆ ದಲಿತ ಟ್ಯಾಗ್ ಬೇಕಿರಲಿಲ್ಲ. ಆತ ತಾನು ದಲಿತನೆನ್ನುವ ಕಾರಣಕ್ಕೆ ಎವರೆಸ್ಟ್ ನ ಬೇಸ್ ಕ್ಯಾಂಪ್ ತಲುಪಿದರೆ ತುತ್ತತುದಿ ತಲುಪಿದಂತೆ ಎಂದು ಭಾವಿಸಿರಲಿಲ್ಲ

ಗುಂಟೂರ್ ಮಸಾಲಾ

ಇತ್ತೀಚೆಗೆ ವಿಜಯ್ ಘಿಮೈರ್ ಎಂಬ ಯುವಕನೊಬ್ಬ ಮೌಂಟ್ ಎವರೆಸ್ಟ್ ಪರ್ವತಾರೋಹಣದ ವೇಳೆ ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಿದ್ದಾನೆ. ಈ ಸುದ್ದಿಯನ್ನು ಬಿತ್ತರಿಸಿದ ಕೆಲವು ಮಾಧ್ಯಮಗಳು ಎವರೆಸ್ಟ್ ಏರುತ್ತಿದ್ದ ದಲಿತ ವ್ಯಕ್ತಿಯ ಸಾವು, ಎವರೆಸ್ಟ್ ಏರುತ್ತಿದ್ದ ಪ್ರಥಮ ದಲಿತ ವ್ಯಕ್ತಿಯ ಮರಣ... ಹೀಗೆ ಆತನ ಜಾತಿಯನ್ನು ಎಳೆತಂದಿವೆ. ಇಷ್ಟಕ್ಕೂ, ಇವರ ಬಳಿ, ಈವರೆಗೆ ಎವರೆಸ್ಟ್ ಹತ್ತಲು ಹೋದವರೆಲ್ಲರ ಜಾತಿಯ ವಿವರಗಳಿವೆಯಾ? ಎವರೆಸ್ಟ್ ಹತ್ತಲು ಹೋಗಿ ಸತ್ತ ದಲಿತರಲ್ಲಿ ಈತನೇ ಮೊದಲಿಗನಾ? ಏನಿವರ ಬರಹದ ಅರ್ಥ? ದಲಿತಾಗಿರೋದ್ರಿಂದಲೇ ಮೌಂಟ್ ಎವರೆಸ್ಟ್ ಸಂಚುರೂಪಿಸಿ ಸಾಯಿಸಿಬಿಟ್ಟಿತು ಅಂತಾನಾ? ದಲಿತನೊಬ್ಬ ಮೌಂಟ್ ಎವರೆಸ್ಟ್ ಏರಬಾರದೆಂದು ಯಾರೋ ಸಾಯಿಸಿಬಿಟ್ಟರು ಅಂತಾನಾ? ಯಾಕೆ ಜಾತಿಯ ಪ್ರಸ್ತಾಪ ಬೇಕಿತ್ತು? ಯಾವ ಸುದ್ದಿ ಬಂದರೂ ಅದಕ್ಕೆ ಮೊದಲು ಜಾತಿ-ಧರ್ಮ-ಪಕ್ಷದ ಟ್ಯಾಗ್ ಅಂಟಿಸಿ ಆಮೇಲೆ ಘಟನೆಯ ಬಗ್ಗೆ ವಿವರಿಸುವ ದುರ್ಬುದ್ಧಿ ಯಾಕೆ? ಯಾರಾದ್ರೂ ಬಸ್ಸು ಮಿಸ್ ಮಾಡಿಕೊಂಡರೆ — ದಲಿತ ಯುವಕನಿಗೆ ಮಿಸ್ ಆದ ಬಸ್ ದಾರಿಯಲ್ಲಿ ಜಾರಿ ಬಿದ್ದರೆ — ಅಲ್ಪಸಂಖ್ಯಾತನಿಗೆ ರಸ್ತೆಯಿಂದ ಅನ್ಯಾಯ, ಬೈಕ್ ಓಡಿಸುವಾಗ ಸಿಗ್ನಲ್ ರೆಡ್ ಆದರೆ, ದಲಿತ ರಸ್ತೆ ದಾಟುವಾಗಲೇ ರೆಡ್ ಆದ ಟ್ರಾಫಿಕ್ ಲೈಟ್, ಹೀಗೆ ಪ್ರತಿ ಸುದ್ದಿಗೂ ಕಾಸ್ಟ್ ಟ್ಯಾಗ್ ಮಾಡುವ ಮಟ್ಟಿಗೆ ಮಾಧ್ಯಮ ಇಳಿದಿದೆ.

ಪ್ರವಾಸಿ ಅಂದರೆ ಆತ ಜಾತಿ ಧರ್ಮ ಇವೆಲ್ಲವನ್ನೂ ಮೀರಿದವನು. ಜಗತ್ತು ಆತನನ್ನು ಪ್ರವಾಸಿ ಎಂದು ನೋಡುತ್ತದೆಯೇ ಹೊರತು ಆತನ ಜಾತಿಧರ್ಮವನ್ನಲ್ಲ. ವಿಜಯ್ ಘೆಮೈರ್ ಎವರೆಸ್ಟ್ ನ ತುದಿ ಮುಟ್ಟಲು ಆತನಿಗೆ ದಲಿತ ಟ್ಯಾಗ್ ಬೇಕಿರಲಿಲ್ಲ. ಆತ ತಾನು ದಲಿತನೆನ್ನುವ ಕಾರಣಕ್ಕೆ ಎವರೆಸ್ಟ್ ನ ಬೇಸ್ ಕ್ಯಾಂಪ್ ತಲುಪಿದರೆ ತುತ್ತತುದಿ ತಲುಪಿದಂತೆ ಎಂದು ಭಾವಿಸಿರಲಿಲ್ಲ. ಅವರಲ್ಲಿಲ್ಲದ ಮನೋಭಾವ ಮಾಧ್ಯಮಗಳಿಗೇಕೆ?

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?