Tuesday, July 29, 2025
Tuesday, July 29, 2025

ವಿಮಾನಯಾನ ಮತ್ತು ಮೋಡ

ತೀವ್ರ ಅಥವಾ ಪ್ರತಿಕೂಲ ಹವಾಮಾನದಿಂದ ತಪ್ಪಿಸಿಕೊಳ್ಳುವುದಷ್ಟೇ ಅಲ್ಲ, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದಲೂ ಮೋಡಗಳ ಅಧ್ಯಯನ ಮಹತ್ವದ್ದು. ವಿಮಾನದ ಲ್ಯಾಂಡಿಂಗ್ ಹಾಗೂ ಟೇಕಾಫ್ ಹಮಾಮಾನ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಈ ಹವಾಮಾನದ ಪ್ರಮುಖ ಅಂಶವೆಂದರೆ ಮೋಡಗಳು. ಮೋಡಗಳ ಅಧ್ಯಯನದಿಂದ ವಾಯುಮಂಡಲದ ಸ್ಥಿತಿಗತಿ, ತೇವಾಂಶದ ಪ್ರಮಾಣ, ಸ್ಥಿರತೆ ಅಥವಾ ಅಸ್ಥಿರತೆಯಂಥ ಬಹುಮಾನ್ಯ ಮಾಹಿತಿಯನ್ನು ಪೈಲಟ್‌ ಗಳು ತಿಳಿದುಕೊಳ್ಳುತ್ತಾರೆ.

ವಾಹನ ಚಾಲಕರಿಗೆ ರಸ್ತೆಯ ಬಗ್ಗೆ ಅರಿವಿರುವ ಹಾಗೆ, ವಿಮಾನ ಚಾಲಕರಿಗೆ ಮೋಡಗಳ ಬಗ್ಗೆ ಗೊತ್ತಿರಬೇಕು. ಮೋಡಗಳ ಬಗ್ಗೆ ತಿಳಿದುಕೊಳ್ಳುವುದೆಂದರೆ, ಹವಾಮಾನದ ಬಗ್ಗೆ ತಿಳಿದುಕೊಂಡಂತೆ. ವಿಮಾನಯಾನದಲ್ಲಿ ಮೋಡಗಳ ಜ್ಞಾನವು ಅತಿ ಅವಶ್ಯಕ. ಇವು ಹವಾಮಾನ ಬದಲಾವಣೆಗೆ ಮುನ್ಸೂಚನೆ ನೀಡುತ್ತವೆ. ಮೋಡಗಳ ವೈಶಿಷ್ಟ್ಯಗಳ ಆಧಾರದಲ್ಲಿ ವಿಮಾನ ಚಾಲಕರು ವಿಮಾನ ಹಾರಾಟದ ಸುರಕ್ಷಿತ ಮಾರ್ಗವನ್ನು ಕಂಡುಕೊಳ್ಳುತ್ತಾರೆ.

Aviation and the cloud 1

ತೀವ್ರ ಅಥವಾ ಪ್ರತಿಕೂಲ ಹವಾಮಾನದಿಂದ ತಪ್ಪಿಸಿಕೊಳ್ಳುವುದಷ್ಟೇ ಅಲ್ಲ, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದಲೂ ಮೋಡಗಳ ಅಧ್ಯಯನ ಮಹತ್ವದ್ದು. ವಿಮಾನದ ಲ್ಯಾಂಡಿಂಗ್ ಹಾಗೂ ಟೇಕಾಫ್ ಹಮಾಮಾನ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಈ ಹವಾಮಾನದ ಪ್ರಮುಖ ಅಂಶವೆಂದರೆ ಮೋಡಗಳು. ಮೋಡಗಳ ಅಧ್ಯಯನದಿಂದ ವಾಯು ಮಂಡಲದ ಸ್ಥಿತಿಗತಿ, ತೇವಾಂಶದ ಪ್ರಮಾಣ, ಸ್ಥಿರತೆ ಅಥವಾ ಅಸ್ಥಿರತೆಯಂಥ ಬಹುಮಾನ್ಯ ಮಾಹಿತಿಯನ್ನು ಪೈಲಟ್‌ ಗಳು ತಿಳಿದುಕೊಳ್ಳುತ್ತಾರೆ.

ಇದನ್ನೂ ಓದಿ: ವಿಮಾನದ ಎಂಜಿನ್‌ಗಳು ಫೇಲಾದ್ರೆ ?

ಮೋ‌ಡಗಳು ಹಗುರವಾದ ಹವಾಮಾನ ಬದಲಾವಣೆಗಳಿಂದ ಹಿಡಿದು ಭೀಕರ ತೊಂದರೆಗಳನ್ನು ಉಂಟುಮಾಡಬಲ್ಲವು. ಉದಾಹರಣೆಗೆ, ಟರ್ಬುಲೆನ್ಸ್, ಮಿಂಚು, ಬಿರುಗಾಳಿ, ಚಂಡಮಾರುತ, ಆಲಿಕಲ್ಲು ಮತ್ತು ಕಡಿಮೆ ದೃಶ್ಯ ಗೋಚರತೆ (Low Visibility) ಇತ್ಯಾದಿ. ಈ ಕಾರಣದಿಂದ ಮೋಡಗಳ ಅರಿವು ವಿಮಾನಯಾನದಲ್ಲಿ ಅತ್ಯಂತ ಪ್ರಮುಖ. ಮೋಡಗಳ ನಿರ್ಮಾಣ ಹೇಗೆ ಆಗುತ್ತದೆ? ವಾತಾವರಣದಲ್ಲಿರುವ ನೀರಿನ ಬಾಷ್ಪ (Water vapor) ತಂಪಾದ ಪರಿಸ್ಥಿತಿಗಳಲ್ಲಿ ಸಂಚರಿಸಿ, ಚಿಕ್ಕ ಹಿಮಕಣ ಅಥವಾ ನೀರಿನ ಹನಿಗಳಾಗಿ ರೂಪುಗೊಳ್ಳುತ್ತದೆ. ಈ ಕಣಗಳು ಸೇರಿ ಮೋಡಗಳನ್ನು ರೂಪಿಸುತ್ತವೆ. ತಾಪಮಾನ, ಗಾಳಿಯ ಒತ್ತಡ, ತೇವಾಂಶದ ಪ್ರಮಾಣ ಮತ್ತು ಗಾಳಿಯ ಚಲನೆಯ ಮಾದರಿಯ ಆಧಾರದ ಮೇಲೆ ಮೋಡಗಳ ಆಕಾರ ಮತ್ತು ಎತ್ತರವನ್ನು ನಿರ್ಧರಿಸಲಾಗುತ್ತದೆ. ಮೋಡಗಳನ್ನು ಎರಡು ಪ್ರಮುಖ ಅಂಶಗಳ ಆಧಾರದಲ್ಲಿ ವರ್ಗೀಕರಿಸಲಾಗುತ್ತದೆ. ಮೊದಲನೆಯದು ಎತ್ತರ (Altitude) ಮತ್ತು ಎರಡನೆಯದು, ಆಕಾರ (Shape or Structure).

ಎತ್ತರದ ಆಧಾರದ ಮೇಲೆ ಮೋಡಗಳ ವರ್ಗೀಕರಣ ಮಾಡುತ್ತಾರೆ. ಉನ್ನತ ಮಟ್ಟದ ಮೋಡಗಳು ( High-Level Clouds) ಇಪ್ಪತ್ತು ಸಾವಿರ ಅಡಿ (6 ಕಿ.ಮೀ.) ಅಥವಾ ಅದಕ್ಕಿಂತ ಮೇಲೆ ಕಟ್ಟಿರುತ್ತವೆ. ಅವು ಬಹುಶಃ ಹಿಮಕಣಗಳಿಂದ ನಿರ್ಮಿತವಾಗಿರುತ್ತವೆ. ಈ ಮೋಡಗಳು ಹಗುರ ವಾಗಿರುತ್ತವೆ. ಆದರೆ ಮಳೆಯಾಗಿ ಬೀಳುವುದಿಲ್ಲ. ಆದರೆ ಮುಂದಿನ ಹವಾಮಾನ ಬದಲಾವಣೆಗಳ ಸೂಚನೆ ನೀಡುತ್ತವೆ. ಆರೂವರೆ ಸಾವಿರ ಅಡಿ ಯಿಂದ ಇಪ್ಪತ್ತು ಸಾವಿರ ಅಡಿಗಳ ಎತ್ತರದಲ್ಲಿ ಮಧ್ಯಮ ಮಟ್ಟದ ಮೋಡಗಳು (Mid-Level Clouds ) ದಟ್ಟೈಸುತ್ತವೆ. ಈ ಮೋಡಗಳು ಬೆಳಕನ್ನು ಕಡಿಮೆ ಮಾಡುವ ಶಕ್ತಿ ಹೊಂದಿರುತ್ತವೆ. ಇವು ಮಳೆಯ ಮುನ್ಸೂಚನೆಯನ್ನೂ ನೀಡಬಹುದು. ಭೂಮಿಯಿಂದ 6500 ಅಡಿ ಒಳಗೆ ತಳಮಟ್ಟದ ಮೋಡಗಳು (Low-Level Clouds) ಆವರಿಸಿರುತ್ತವೆ.

ನೀರಿನ ಹನಿಗಳಿಂದ ರೂಪುಗೊಳ್ಳುವ ಈ ಮೋಡಗಳು ಮಳೆಯ ಅಥವಾ ಮಂಜಿನ ಲಕ್ಷಣಗಳನ್ನು ತೋರಿಸುತ್ತವೆ. ಇವು ಗೋಚರತೆ ಪ್ರಮಾಣವನ್ನು ಕಡಿಮೆ ಮಾಡುವ ಸಂಭವ ಜಾಸ್ತಿ. ತಳಮಟ್ಟದಿಂದ ಆರಂಭವಾಗಿ ಉನ್ನತ ಮಟ್ಟದವರೆಗೂ ಹರಡಿರುವ ಎತ್ತರವನ್ನೆಲ್ಲ ವ್ಯಾಪಿಸುವ ಮೋಡಗಳು (Clouds with Vertical Development) ಗಾಳಿಯ ಚಲನೆ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿರುತ್ತವೆ.

ವಿಮಾನಗಳು ಬೆಟ್ಟದ ರೀತಿಯಲ್ಲಿ ಎತ್ತರವಿರುವ ಮೋಡಗಳ ಮೂಲಕ ಸಂಚರಿಸಿದಾಗ ತೀವ್ರ ಟರ್ಬುಲೆನ್ಸ್ ಉಂಟಾಗಬಹುದು. ಈ ಪರಿಸ್ಥಿತಿಯು ಪ್ರಯಾಣಿಕರಿಗೆ ಮತ್ತು ವಿಮಾನಚಾಲಕರಿಗೆ ಅಪಾಯಕಾರಿ ಎನಿಸುವಷ್ಟು ಭಯ ಹುಟ್ಟಿಸುತ್ತದೆ. ಮಧ್ಯಮ ಮಟ್ಟದ ಮತ್ತು ಉನ್ನತ ಮಟ್ಟದ ಮೋಡಗಳಲ್ಲಿ ವಿಮಾನಗಳು ಹಿಮಕಣಗಳನ್ನು ಸವರಿ ಹಾರುವಾಗ, ತೀವ್ರ ಐಸಿಂಗ್ ಸಂಭವಿಸ‌ಬಹುದು.

ಇದು ವಿಮಾನದ ಎಂಜಿನ್ ಕಾರ್ಯಕ್ಷಮತೆ ಮತ್ತು ಸ್ಥಿರತೆಯನ್ನು ಹದಗೆಡಿಸಬಹುದು. ಮಿಂಚು ಮತ್ತು ಗುಡುಗಿಗೆ ಕಪ್ಪು ದಟ್ಟ ಮೋಡಗಳು ಮೂಲ. ಮಿಂಚು ವಿಮಾನದಲ್ಲಿ ತಾಂತ್ರಿಕ ದೋಷ ಉಂಟುಮಾಡಬಹುದು. ಮೋಡಗಳು ನಿಗೂಢವಾಗಿ ಆವರಿಸುವ ಕಾರಣದಿಂದ, ಲ್ಯಾಂಡಿಂಗ್ ಅಥವಾ ಟೇಕಾಫ್ ಸಮಯದಲ್ಲಿ ಗೋಚರತೆ ಪ್ರಮಾಣ ಕಮ್ಮಿಯಾಗಬಹುದು. ಮೋಡಗಳ ಚಲನೆ, ಸಾಂದ್ರತೆ ಮೇಲೆ ಪೈಲಟ್ ನಿರಂತರ ಕಣ್ಣಿಟ್ಟಿರುತ್ತಾರೆ.

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?