ಅತಿ ಹೆಚ್ಚು ಜನರಿದ್ದ ವಿಮಾನ
ಒಂದು ಬೋಯಿಂಗ್ 747 ವಿಮಾನವು ಸುಮಾರು 400-500 ಪ್ರಯಾಣಿ ಕರನ್ನು ಹೊತ್ತೊಯ್ಯಬಲ್ಲದು. ಆದರೆ, ಈ ತುರ್ತು ಕಾರ್ಯಾಚರಣೆಯಲ್ಲಿ ಸಾಧ್ಯವಾದಷ್ಟು ಹೆಚ್ಚು ಜನರನ್ನು ಕರೆತರಲು ವಿಮಾನ ದೊಳಗಿನ ಎಲ್ಲ ಆಸನಗಳನ್ನು ತೆಗೆದು ಹಾಕಲಾಯಿತು. ಅಧಿಕೃತ ವಾಗಿ ವಿಮಾನ ಹತ್ತುವಾಗ 1086 ಪ್ರಯಾಣಿಕರಿದ್ದರು. ಆದರೆ, ಪ್ರಯಾಣದ ಸಮಯದಲ್ಲಿ ವಿಮಾನದಲ್ಲಿಯೇ ಮಗುವೊಂದು ಜನಿಸಿದ್ದ ರಿಂದ, ವಿಮಾನವು ಇಸ್ರೇಲ್ ನಲ್ಲಿ ಇಳಿದಾಗ ಒಟ್ಟು ಪ್ರಯಾಣಿಕರ ಸಂಖ್ಯೆ 1087 ಆಗಿತ್ತು.
ಒಂದು ಕಮರ್ಷಿಯಲ್ ವಿಮಾನದಲ್ಲಿ ಹೆಚ್ಚೆಂದರೆ ಎಷ್ಟು ಜನ ಪ್ರಯಾಣಿಸಬಹುದು? ಬೋಯಿಂಗ್ 777-300ER ಅಥವಾ ಏರ್‌ಬಸ್ G-340-600 ವಿಮಾನದಲ್ಲಿ 475 ರಿಂದ 550 ಮಂದಿ ಪ್ರಯಾಣಿಸಬಹುದು. ಎ-380 ವಿಮಾನದಲ್ಲಿ ಎಲ್ಲ ಇಕಾನಮಿ ಕ್ಲಾಸ್ ಆಗಿ ಪರಿವರ್ತಿಸಿದರೆ ಹೆಚ್ಚೆಂದರೆ 853 ಮಂದಿ ಪ್ರಯಾಣಿಸಬಹುದು.
ಆದರೆ ಇಸ್ರೇಲ್‌ಗೆ ಸೇರಿದ ‘ಎಲ್ ಅಲ್ ಏರ್‌ಲೈ’ ಬೋಯಿಂಗ್ 747 ವಿಮಾನ 1088 ಮಂದಿ ಪ್ರಯಾಣಿಕರನ್ನು ಹೇರಿಕೊಂಡು ಇಥಿಯೋಪಿಯಾದ ಅಡಿಸ್ ಅಬಾಬದಿಂದ ಇಸ್ರೇಲಿನ ಟೆಲ್ ಅವಿವ್‌ಗೆ ಪ್ರಯಾಣಿಸಿದ್ದು ಗಿನ್ನೆಸ್ ದಾಖಲೆ. ಇದು ಕೇವಲ ಒಂದು ವಾಯುಯಾನದ ದಾಖಲೆಯಲ್ಲ, ಅದೊಂದು ಮಾನವೀಯತೆ, ಧೈರ್ಯ ಮತ್ತು ಸಂಕಲ್ಪದ ಅದ್ಭುತ ಗಾಥೆಯೂ ಹೌದು.
1991ರಲ್ಲಿ ಇಥಿಯೋಪಿಯಾ ತೀವ್ರ ರಾಜಕೀಯ ಅಸ್ಥಿರತೆಯಲ್ಲಿತ್ತು. ಅಲ್ಲಿನ ಮಾರ್ಕ್ಸ್‌ವಾದಿ ಸರ್ವಾ ಧಿಕಾರಿ ಮೆಂಗಿಸ್ಟು ಹೈಲೆ ಮರಿಯಮ್ ಅವರ ಆಡಳಿತವು ಅಂತರ್ಯುದ್ಧದಿಂದಾಗಿ ಪತನದ ಅಂಚಿನಲ್ಲಿತ್ತು. ಬಂಡುಕೋರರ ಸೈನ್ಯವು ರಾಜಧಾನಿ ಅಡಿಸ್ ಅಬಾಬದತ್ತ ಮುನ್ನುಗ್ಗುತ್ತಿತ್ತು. ಈ ಸಂಘರ್ಷದ ನಡುವೆ ಸಿಲುಕಿದ್ದ ಸಾವಿರಾರು ಬೀಟಾ ಇಸ್ರೇಲ್ ಸಮುದಾಯದವರ ಜೀವಕ್ಕೆ ಅಪಾಯವಿತ್ತು.
ಇದನ್ನೂ ಓದಿ: ಸ್ವತಂತ್ರ ವಿದ್ಯುತ್ ವ್ಯವಸ್ಥೆ
ಇವರು ಸಾವಿರಾರು ವರ್ಷಗಳಿಂದ ಇಥಿಯೋಪಿಯಾದಲ್ಲಿ ವಾಸಿಸುತ್ತಿದ್ದ ಪ್ರಾಚೀನ ಯಹೂದಿ ಸಮುದಾಯದವರು. ತಮ್ಮನ್ನು ಜೆರುಸಲೇಮ್‌ನ ರಾಜ ಸಾಲಮನ್ ಮತ್ತು ಶೇಬಾದ ರಾಣಿಯ ವಂಶಸ್ಥರೆಂದು ಇವರು ನಂಬುತ್ತಾರೆ. ಈ ಸಂದರ್ಭದಲ್ಲಿ ಇಸ್ರೇಲ್ ಸರಕಾರವು ಅವರನ್ನು ರಕ್ಷಿಸಿ, ತಮ್ಮ ದೇಶಕ್ಕೆ ಕರೆತರಲು ಈ ರಹಸ್ಯ ಕಾರ್ಯಾಚರಣೆಯನ್ನು ರೂಪಿಸಿತು. ಅಂದು ಮೇ 24-25, 1991. ಕೇವಲ 36 ಗಂಟೆಗಳಲ್ಲಿ ಈ ಇಡೀ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲಾಯಿತು.

ಇಸ್ರೇಲಿ ರಕ್ಷಣಾ ಪಡೆ (IDF) ಮತ್ತು ಇಸ್ರೇಲ್‌ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಎಲ್ ಅಲ್ ಕಾರ್ಯಾಚರಣೆಯ ನೇತೃತ್ವ ವಹಿಸಿದವು. ಈ ಕಾರ್ಯಾಚರಣೆಯಲ್ಲಿ, ಸುಮಾರು 35 ಇಸ್ರೇಲಿ ವಿಮಾನಗಳು ನಿರಂತರವಾಗಿ ಹಾರಾಟ ನಡೆಸಿ 14325 ಇಥಿಯೋಪಿಯನ್ ಯಹೂದಿಗಳನ್ನು ಇಸ್ರೇಲ್‌ಗೆ ಸುರಕ್ಷಿತವಾಗಿ ಕರೆತಂದವು.
ಸಾಮಾನ್ಯವಾಗಿ, ಒಂದು ಬೋಯಿಂಗ್ 747 ವಿಮಾನವು ಸುಮಾರು 400-500 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲದು. ಆದರೆ, ಈ ತುರ್ತು ಕಾರ್ಯಾಚರಣೆಯಲ್ಲಿ ಸಾಧ್ಯವಾದಷ್ಟು ಹೆಚ್ಚು ಜನರನ್ನು ಕರೆತರಲು ವಿಮಾನದೊಳಗಿನ ಎಲ್ಲ ಆಸನಗಳನ್ನು ತೆಗೆದು ಹಾಕಲಾಯಿತು. ಅಧಿಕೃತವಾಗಿ ವಿಮಾನ ಹತ್ತುವಾಗ 1086 ಪ್ರಯಾಣಿಕರಿದ್ದರು. ಆದರೆ, ಪ್ರಯಾಣದ ಸಮಯದಲ್ಲಿ ವಿಮಾನದಲ್ಲಿಯೇ ಮಗುವೊಂದು ಜನಿಸಿದ್ದರಿಂದ, ವಿಮಾನವು ಇಸ್ರೇಲ್ ನಲ್ಲಿ ಇಳಿದಾಗ ಒಟ್ಟು ಪ್ರಯಾಣಿಕರ ಸಂಖ್ಯೆ 1087 ಆಗಿತ್ತು.
ಕೆಲವು ವರದಿಗಳು 100 ಎಂದೂ ಉಲ್ಲೇಖಿಸುತ್ತವೆ. ಏಕೆಂದರೆ ಇನ್ನೊಂದು ಮಗು ಕೂಡ ಜನಿಸಿತ್ತು ಎಂದು ಹೇಳಲಾಗುತ್ತದೆ. ಗಿನ್ನೆಸ್ ವಿಶ್ವ ದಾಖಲೆಯು ಒಂದು ವಿಮಾನದಲ್ಲಿ ಅತಿ ಹೆಚ್ಚು ಪ್ರಯಾಣಿಕರನ್ನು (1087) ಹೊತ್ತೊಯ್ದಿದ್ದಕ್ಕಾಗಿ ಈ ಹಾರಾಟವನ್ನು ಅಧಿಕೃತವಾಗಿ ಒಂದು ದಾಖಲೆ ಎಂದು ಗುರುತಿಸಿದೆ.
ಇಷ್ಟು ಜನರನ್ನು ಹೊತ್ತೊಯ್ಯಲು ಹೇಗೆ ಸಾಧ್ಯವಾಯಿತು? ವಿಮಾನದ ಒಳಗಿನ ಜಾಗವನ್ನು ಗರಿಷ್ಠವಾಗಿ ಬಳಸಿಕೊಳ್ಳಲು ಎಲ್ಲ ಸೀಟುಗಳನ್ನು ತೆಗೆಯಲಾಗಿತ್ತು. ಇಥಿಯೋಪಿಯಾದಲ್ಲಿದ್ದ ಬರ ಮತ್ತು ಬಡತನದಿಂದಾಗಿ, ಪ್ರಯಾಣಿಕರು ಅಪೌಷ್ಟಿಕತೆಯಿಂದ ಬಳಲುತ್ತಿದ್ದರು ಮತ್ತು ಅವರ ದೇಹದ ತೂಕ ತೀರಾ ಕಡಿಮೆಯಿತ್ತು. ತಮ್ಮ ಪ್ರಾಣ ಉಳಿಸಿಕೊಳ್ಳಲು ಓಡಿ ಬಂದಿದ್ದ ಅವರ ಬಳಿ ಯಾವುದೇ ಲಗೇಜ್ ಇರಲಿಲ್ಲ.
ಬಸ್ಸಿನೊಳಗೆ ಜನರನ್ನು ತುರುಕುವಂತೆ, ಆ ವಿಮಾನದಲ್ಲೂ ಜನರನ್ನು ತುಂಬಲಾಗಿತ್ತು. ಕೆಲವರು ಬೇರೆಯವರ ತೊಡೆಯ ಮೇಲೂ ಕುಳಿತುಕೊಂಡಿದ್ದರು. ಈ ಕಾರ್ಯಾಚರಣೆಯು ಕೇವಲ ಒಂದು ತಾಂತ್ರಿಕ ಸಾಧನೆಯಲ್ಲ, ಬದಲಾಗಿ ಸಂಕಷ್ಟದಲ್ಲಿದ್ದ ಒಂದು ಇಡೀ ಸಮುದಾಯವನ್ನು ರಕ್ಷಿಸಿದ ಮಾನವೀಯತೆಯ ಪ್ರತೀಕವೂ ಹೌದು. ಆ ಒಂದು ವಿಮಾನದ ಪ್ರಯಾಣವು ಇಂದಿಗೂ ವಾಯುಯಾನ ಇತಿಹಾಸದಲ್ಲಿ ಒಂದು ಅವಿಸ್ಮರಣೀಯ ಅಧ್ಯಾಯವಾಗಿ ಉಳಿದಿದೆ.