Wednesday, July 15, 2026
Wednesday, July 15, 2026

ಕೋಡಕ್‌ ಕ್ಯಾಮೆರಾ ಹುಟ್ಟಿನ ಕಥೆ

1871ರಲ್ಲಿ ಡಾ. ರಿಚರ್ಡ್ ಲೀಚ್‌ ಮಾಡಾಕ್ಸ್‌ ಜಿಲೆಟಿನ್‌ ನೆಗೆಟೀವ್‌ ಡ್ರೈ ಪ್ಲೇಟಿನ ಸಂಶೋಧನೆಯಲ್ಲಿ ಪ್ರಾರಂಭಿಕ ಯಶಸ್ಸನ್ನು ಗಳಿಸಿರುತ್ತಾನೆ. ಇದಕ್ಕಾಗಿ ಪೇಟೆಂಟ್‌ ಪಡೆಯದೆ ಉಚಿತವಾಗಿ ಛಾಯಾಚಿತ್ರ ಸಂಸ್ಥೆಗಳಿಗೆ ತನ್ನ ಸಂಶೋಧನೆಯ ವಿವರಗಳನ್ನು ನೀಡುತ್ತಾನೆ. ನಂತರದ ವರ್ಷಗಳಲ್ಲಿ ಚಾರ್ಲ್ಸ್‌ ಹಾರ್ಪರ್‌ ಬೆನೆಟ್‌, ಪ್ರಯೋಗವನ್ನು ಮುಂದುವರಿಸಿ ಉತ್ಕೃಷ್ಟ ಗುಣಮಟ್ಟದ ಹಾಗೂ ಕಡಿಮೆ ಸಮಯದಲ್ಲಿ ಚಿತ್ರವನ್ನು ಪಡೆಯುವ ಡ್ರೈ ಪ್ಲೇಟ್‌ಗಳನ್ನು ತಯಾರಿಸುತ್ತಾನೆ. ಇವರೆಲ್ಲರೂ ಪ್ರಯೋಗದಲ್ಲಿ ನಿರತರಾಗಿದ್ದರೆ ಪಕ್ಕ ವಾಣಿಜ್ಯೋದ್ಯಮಿಯಾಗಿದ್ದ ಈಸ್ಟ್‌ಮನ್‌, ಹೊಸ ಡ್ರೈ ಪ್ಲೇಟಿನ ಲೇಪನದ ಯಂತ್ರಕ್ಕೆ ಪೇಟೆಂಟ್‌ ಪಡೆದು, ನ್ಯೂಯಾರ್ಕಿನ ರೋಚೆಸ್

  • ಅನಂತ್‌ ಹರಿತ್ಸ

1870ರ ದಶಕ, ಬ್ಯಾಂಕ್‌ ಒಂದರಲ್ಲಿ ಕಾರಕೂನನಾಗಿದ್ದ ನ್ಯೂಯಾರ್ಕ್‌ನ ವಾಟರ್‌ವಿಲ್ಲೆಯ ಜಾರ್ಜ್‌ ಈಸ್ಟ್‌ಮನ್‌ಗೆ 24 ವಯಸ್ಸು. ಆತ ಸಂತಾ ದೊಮೆನಿಕಾಗೆ ಪ್ರವಾಸ ಕೈಗೊಳ್ಳಲು ತೀರ್ಮಾನಿಸುತ್ತಾನೆ. ಈ ವೇಳೆ ಆತನ ಸಹದ್ಯೋಗಿ ಪ್ರವಾಸಕ್ಕೆ ಹೋಗಿದ್ದನ್ನು ದಾಖಲಿಸುವಂತೆ ಕೇಳಿಕೊಳ್ಳುತ್ತಾನೆ. ಅದರಂತೆ ಈಸ್ಟ್‌ಮನ್‌ ಮೈಕ್ರೋ ಓವನ್‌ ಗಾತ್ರದ ವೆಟ್‌ ಪ್ಲೇಟ್‌ ಛಾಯಾಚಿತ್ರ ಕ್ಯಾಮೆರಾವೊಂದನ್ನು ತೆಗೆದುಕೊಳ್ಳುತ್ತಾನೆ. ಛಾಯಾಚಿತ್ರವನ್ನು ತೆಗೆದು, ಅದನ್ನು ಸಂಸ್ಕರಿಸಲು ಬೇಕಾದ ರಾಸಾಯನಿಕ ದ್ರಾವಣವನ್ನು ಹೊಂದಿಸಿಕೊಳ್ಳುವುದು ಅತ್ಯಂತ ಕಠಿಣ ಕೆಲಸವೆಂದೆನಿಸುತ್ತದೆ. ಹಾಗಾಗಿ ಅವನು ಪ್ರವಾಸವನ್ನೇ ರದ್ದುಮಾಡಿ, ವೆಟ್‌ ಪ್ಲೇಟ್‌ಗಳ ಹೊರತಾದ ಯಾವುದಾದರೊಂದು ಸಾಧನವನ್ನು ರೂಪಿಸಲು ಪ್ರಯತ್ನಿಸುತ್ತಾನೆ. ಆಗಿನ ಕಾಲದಲ್ಲಿ ಲಂಡನ್‌ ಛಾಯಾಗ್ರಹಣಕ್ಕೆ ಸಂಬಂಧಿಸಿದಂತೆ ಮುಂಚೂಣಿಯಲ್ಲಿತ್ತು.

ಇದನ್ನೂ ಓದಿ: ಕ್ಯಾಮೆರಾದ ಮೂಲ ವಿಧಗಳ ಬಗ್ಗೆ ಗೊತ್ತಾ?

1871ರಲ್ಲಿ ಡಾ. ರಿಚರ್ಡ್ ಲೀಚ್‌ ಮಾಡಾಕ್ಸ್‌ ಎನ್ನುವ ಲಂಡನ್ನಿನ ಛಾಯಾಗ್ರಾಹಕ ಹಾಗೂ ವೈದ್ಯ ಅದಾಗಲೇ ಜಿಲೆಟಿನ್‌ ನೆಗೆಟೀವ್‌ ಡ್ರೈ ಪ್ಲೇಟಿನ ಸಂಶೋಧನೆಯಲ್ಲಿ ಪ್ರಾರಂಭಿಕ ಯಶಸ್ಸನ್ನು ಗಳಿಸಿರುತ್ತಾನೆ. ಅಲ್ಲದೆ ಆತ ಇದಕ್ಕಾಗಿ ಪೇಟೆಂಟ್‌ ಪಡೆಯದೆ ಉಚಿತವಾಗಿ ಛಾಯಾಚಿತ್ರ ಸಂಸ್ಥೆಗಳಿಗೆ ತನ್ನ ಸಂಶೋಧನೆಯ ವಿವರಗಳನ್ನು ನೀಡುತ್ತಾನೆ. ನಂತರದ ವರ್ಷಗಳಲ್ಲಿ ಚಾರ್ಲ್ಸ್‌ ಹಾರ್ಪರ್‌ ಬೆನೆಟ್‌, ಪ್ರಯೋಗವನ್ನು ಮುಂದುವರಿಸಿ ಉತ್ಕೃಷ್ಟ ಗುಣಮಟ್ಟದ ಹಾಗೂ ಕಡಿಮೆ ಸಮಯದಲ್ಲಿ ಚಿತ್ರವನ್ನು ಪಡೆಯುವ ಡ್ರೈ ಪ್ಲೇಟ್‌ಗಳನ್ನು ತಯಾರಿಸುತ್ತಾನೆ. ಈಸ್ಟ್‌ಮನ್‌ 1878ರಲ್ಲಿ ಲಂಡನ್‌ಗೆ ತೆರಳುತ್ತಾನೆ. ಇವರೆಲ್ಲರೂ ಪ್ರಯೋಗದಲ್ಲಿ ನಿರತರಾಗಿದ್ದರೆ ಪಕ್ಕ ವಾಣಿಜ್ಯೋದ್ಯಮಿಯಾಗಿದ್ದ ಈಸ್ಟ್‌ಮನ್‌ ಹೊಸ ಡ್ರೈ ಪ್ಲೇಟಿನ ಲೇಪನದ ಯಂತ್ರಕ್ಕೆ ಪೇಟೆಂಟ್‌ ಪಡೆಯುತ್ತಾನೆ. ಅತ್ಯಂತ ಬೇಡಿಕೆ ಇದ್ದ ಡ್ರೈ ಪ್ಲೇಟ್‌ಗಳನ್ನು ಉತ್ಪಾದಿಸುವವರು ಇಲ್ಲದ 1880ರ ಕಾಲದಲ್ಲಿ ಈಸ್ಟ್‌ಮನ್‌ ವಾಣಿಜ್ಯ ಉತ್ಪಾದನೆಯಾಗಿ ನ್ಯೂಯಾರ್ಕಿನ ರೋಚೆಸ್ಟರ್‌ನಲ್ಲಿ ಡ್ರೈ ಪ್ಲೇಟ್‌ಗಳನ್ನು ತಯಾರಿಸಲು ಶುರುಮಾಡುತ್ತಾನೆ. 1881ರಲ್ಲಿ ಬ್ಯಾಂಕಿನ ತನ್ನ ಕಾರಕೂನ ವೃತ್ತಿಗೆ ವಿದಾಯ ಹೇಳಿ, ಹೆನ್ರಿ ಸ್ಟ್ರಾಂಗ್‌ ಎಂಬುವವನೊಂದಿಗಿನ ಪಾಲುದಾರಿಕೆಯಲ್ಲಿ ‘ಈಸ್ಟ್‌ಮನ್‌ ಡ್ರೈ ಪ್ಲೇಟ್‌ ಕಂಪೆನಿʼ ಹೆಸರಿನಲ್ಲಿ ಪೂರ್ಣ ಪ್ರಮಾಣದ ಉತ್ಪಾದನೆಯಲ್ಲಿ ತೊಡಗಿಕೊಳ್ಳುತ್ತಾನೆ.

ಜಾರ್ಜ್_ ಈಸ್ಟ್_ಮನ್_ (2)

ಡ್ರೈ ಪ್ಲೇಟ್‌ಗಳನ್ನು ಇನ್ನೂ ಸರಳಗೊಳಿಸಲು ಅನೇಕರು ಪ್ರಯತ್ನಿಸಿದರು. ನ್ಯೂಯಾರ್ಕ್‌ನ ಹನ್ನಬಲ್‌ ಗುಡ್ವಿನ್‌, ಸೆಲ್ಯುಲಾಯ್ಡ್‌ ಫಿಲಂ ರೋಲನ್ನು ಆವಿಷ್ಕರಿಸಿದ. ಇತ್ತ ಈಸ್ಟ್‌ಮನ್‌, ತನ್ನ ಕಂಪೆನಿಯಲ್ಲಿ ರಾಸಾಯನಿಕ ತಜ್ಞನಾದ ಹೆನ್ರಿ ರೈಚೆನ್ಸಬ್ಯಾಚ್‌ನನ್ನು ಮುಂದಿನ ಪ್ರಯೋಗಗಳಿಗೆ ನೇಮಿಸಿಕೊಂಡ. ಆತನೂ ಇಂಥದ್ದೇ ಫಿಲಂ ರೋಲನ್ನು ತಯಾರಿಸುವಲ್ಲಿ ಯಶಸ್ವಿಯಾಗುತ್ತಾನೆ. 1887ರಲ್ಲಿ ಹನ್ನಬಲ್‌ ಗುಡ್ವಿನ್‌ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿದ್ದರೂ ಸಿಗುವುದಿಲ್ಲ. 1989ರಲ್ಲಿ ತ್ವರಿತವಾಗಿ, ಈಸ್ಟ್‌ಮನ್‌ ಸೆಲ್ಯುಲಾಯ್ಡ್‌ ಫಿಲಂ ರೋಲ್‌ಗಾಗಿ ಪೇಟೆಂಟ್‌ ಪಡೆಯಲು ಯಶಸ್ವಿಯಾಗುತ್ತಾನೆ. ಅಲ್ಲದೆ ಉತ್ಪಾದನೆಯನ್ನು ಸಹ ಶುರುಮಾಡುತ್ತಾನೆ. ಇವರಿಬ್ಬರ ಪೇಟೆಂಟ್‌ಗೆ ಸಂಬಂಧಿಸಿದ ಕಾನೂನು ಹೋರಾಟದಲ್ಲಿ ಗುಡ್ವಿನ್‌ಗೆ ಜಯ ಸಿಕ್ಕರೂ ಆತ ಅಷ್ಟೊತ್ತಿಗೆ ತೀರಿಕೊಂಡಿರುತ್ತಾನೆ. ಈಸ್ಟ್‌ಮನ್‌ನ ಕಂಪೆನಿ (ಕೋಡಕ್) ಬೃಹತ್‌ ಮೊತ್ತದ ಹಣವನ್ನು ಪಾವತಿಸಬೇಕಾಯಿತು.

1892ರಲ್ಲಿ ‘ಈಸ್ಟ್‌ಮನ್‌ ಕೋಡಕ್‌ ಕಂಪೆನಿ’ ಸ್ಥಾಪಿತವಾಯಿತು. ಡ್ರೈ ಪ್ಲೇಟ್‌ ಬಳಕೆಗೆ ಬದಲಾಗಿ ಸೆಲ್ಯುಲಾಯ್ಡ್‌ ಫಿಲಂ ರೋಲ್‌ ಬಳಕೆಗೆ ಬಂದಿತು. ಕೋಡಕ್‌ ಕ್ಯಾಮೆರಾಗಳು ಜನಪ್ರಿಯವಾದವು. ಆಗ ನೂರು ಚಿತ್ರಗಳನ್ನು ತೆಗೆಯಬಹುದಾದ ಒಂದು ಫಿಲಂ ರೋಲ್‌ ಹಾಕಲಾಗಿದ್ದ ಒಂದು ಕ್ಯಾಮೆರಾದ ಬೆಲೆ 25 ಡಾಲರ್‌ಗಳು. ಮರದ ಪೆಟ್ಟಿಗೆಯ ಕೋಡಕ್‌ ಕ್ಯಾಮೆರಾದಲ್ಲಿ ಮುಂದೆ ಒಂದು ಮಸೂರವನ್ನು ಅಳವಡಿಸಲಾಗಿತ್ತು. ಫಿಲಂ ರೋಲನ್ನು ಚಿತ್ರದ ಫ್ರೇಮಿಗೆ ಸರಿ ಹೊಂದಿಸಲು ಮೇಲೆ ಒಂದು ತಿರುಗಣಿ ಇತ್ತು. ಕ್ಯಾಮೆರಾದ ಒಳಗೆ ಬೆಳಕನ್ನು ಹರಿಸಲು ಚಿಕ್ಕ ಬಟನ್‌ ನೀಡಲಾಗಿತ್ತು. ಬಟನ್‌ ಒತ್ತಿದಾಗ ಕ್ಯಾಮೆರಾದೊಳಗೆ ಅಳವಡಿಸಲಾಗಿದ್ದ ಹಗ್ಗವು ಚಿಕ್ಕ ಯಾಂತ್ರಿಕ ವ್ಯವಸ್ಥೆಯಿಂದ ಬಿಗಿಯಾಗಿ ಕ್ಯಾಮೆರಾದ ಶಟರ್‌ ತೆರೆಯುತ್ತಿತ್ತು. ಆಗ ಫಿಲಂನ ಮೇಲೆ ಮಸೂರದ ಮೂಲಕ ಬೆಳಕು ಹರಿಯುತ್ತಿತ್ತು. ಮುಂದಿನ ಚಿತ್ರಕ್ಕಾಗಿ ತಿರುಗಣಿಯನ್ನು ತಿರುಗಿಸಿದಾಗ ಫಿಲಂ ರೋಲ್‌ ಮುಂದೆ ಚಲಿಸಿ ಇನ್ನೊಂದು ಚಿತ್ರಕ್ಕೆ ಅನುವು ಮಾಡಿಕೊಡುತ್ತಿತ್ತು. ಹೀಗೆ ನೂರು ಚಿತ್ರಗಳನ್ನು ತೆಗೆದ ನಂತರ ಕ್ಯಾಮೆರಾವನ್ನು ಹಾಗೆಯೇ ಕೋಡಕ್‌ ಕಂಪೆನಿಗೆ ಕಳುಹಿಸಬೇಕಿತ್ತು. ಹತ್ತು ಡಾಲರ್‌ಗಳ ವೆಚ್ಚದಲ್ಲಿ ಅದನ್ನು ಸಂಸ್ಕರಿಸಿ ಪಾಸಿಟೀವ್‌ ಫೊಟೋಗಳನ್ನು ತೆಗೆಯುತ್ತಿದ್ದರು. ನಂತರ ನೆಗೆಟೀವ್‌ ರೀಲ್‌, ಪಾಸಿಟೀವ್‌ ಫೊಟೋಗಳ ಸಹಿತ ಕ್ಯಾಮೆರಾಗೆ ಪುನಃ ಫಿಲಂ ರೋಲನ್ನು ಅಳವಡಿಸಿ ಮಾಲೀಕರಿಗೆ ಕಳಿಸುತ್ತಿದ್ದರು. ತೆಗೆಯಲಾದ ಚಿತ್ರಗಳು ವೃತ್ತಾಕಾರದಲ್ಲಿ ಇರುತ್ತಿದ್ದವು. ಹಾಗಾಗಿ ಈಸ್ಟ್‌ಮನ್‌ನ ಈ ‘You press the button We do the rest’ ವಾಕ್ಯ ಬಹಳ ಜನಪ್ರಿಯತೆಯನ್ನು ಪಡೆಯಿತು. ಕೋಡಕ್‌, ಛಾಯಾಗ್ರಹಣದ ಉಪಕರಣ ತಯಾರಿಕೆಯಲ್ಲಿ ಪ್ರಪಂಚಕ್ಕೆ ಅದ್ವಿತೀಯ ಕೊಡುಗೆಯನ್ನು ನೀಡಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?