Thursday, June 12, 2025
Thursday, June 12, 2025

ಕೀನ್ಯಾದ ಉಮೋಜಾ ಗ್ರಾಮದಲ್ಲಿ ಪುರುಷರಿಗಿಲ್ಲ ಎಂಟ್ರಿ !

ಕೀನ್ಯಾದ ಉಮೋಜಾ ಗ್ರಾಮವು ಮಾತೃಪ್ರಧಾನ ಸಮಾಜವನ್ನು ಹೊಂದಿದ್ದು, ಹೆಣ್ಣು ಮಕ್ಕಳೇ ಇಲ್ಲಿ ಸ್ರ್ಟಾಂಗು ಗುರು..ಪುರುಷರಿಗಿಲ್ಲ ಇಲ್ಲಿಗೆ ಎಂಟ್ರಿ. ಇದು ಹೇಗೆ ಸಾಧ್ಯ ಅಂತೀರಾ..?

ದೇಶದೆಲ್ಲೆಡೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆಯೇ ದಿನವೂ ಕೇಳಿ ಬೇಸರವಾಗಿದೆಯಾ? ಇಂತಹ ಸಂದರ್ಭದಲ್ಲೂ ರಾತ್ರಿ ಹಗಲೆನ್ನದೆ ಯಾವುದೇ ವೇಳೆಯಲ್ಲೂ, ಭಯವೇ ಇಲ್ಲದೆ ಮಹಿಳೆಯರು ಮನೆ ಬಿಟ್ಟು ಹೊರಗಿರಲು ಸಾಧ್ಯವಾಗುತ್ತಿದ್ದರೆ ? ಯಾರ ಆತಂಕವಿಲ್ಲದೆ ತಲೆ ಎತ್ತಿ ಓದಾಡುವಂತಹ ಪರಿಸ್ಥಿತಿ ಹೆಣ್ಣು ಮಕ್ಕಳಿಗಿದ್ದರೆ ಎಷ್ಟು ಚೆನ್ನಾಗಿರುತ್ತೆ ಅಂತ ಯೋಚಿಸುತ್ತಿದ್ದೀರಾ? ಅಂತಹ ಒಂದು ಗ್ರಾಮವಿದೆ ಅಂದರೆ ನೀವು ನಂಬಲೇ ಬೇಕು. ಹೌದು, ಈ ಗ್ರಾಮದಲ್ಲಿ ಪುರುಷರಿಗೆ ಪ್ರವೇಶವಿಲ್ಲ. ನಿಜ ಹೇಳಬೇಕು ಅಂದ್ರೆ, ಇಡೀ ಹಳ್ಳಿಯಲ್ಲಿ ಎಲ್ಲಿನೋಡಿದರೂ ಬರೀ ಮಹಿಳೆಯರು ಮಾತ್ರ ಕಾಣಸಿಗುತ್ತಾರೆ. ಒಬ್ಬನೇ ಒಬ್ಬ ಪುರುಷ ಜೀವಿಯೂ ಇಲ್ಲಿ ವಾಸವಾಗಿಲ್ಲ ಅಂದರೆ ನೀವು ಅಚ್ಚರಿಪಡಬೇಕಿಲ್ಲ.

ಅಂತಹ ಈ ಗ್ರಾಮದ ಹೆಸರು ಉಮೋಜಾ(Umoja village). 'ಉಮೋಜಾ' ಎಂಬ ಹಳ್ಳಿಯ ಹೆಸರು ಸ್ವಾಹಿಲಿ ಪದವಾಗಿದ್ದು, ಇದರರ್ಥ 'ಏಕತೆ' (Unity) ಎಂಬುದಾಗಿದೆ. ಉತ್ತರ ಕೀನ್ಯಾದ ಸಂಬುರು ಪ್ರದೇಶದಲ್ಲಿರುವ ಉಮೋಜಾಗೆ ಭೇಟಿ ಕೊಟ್ಟರೆ ಎಲ್ಲಿ ನೋಡಿದರೂ ಮಹಿಳೆಯರು ಮಾತ್ರ ಕಾಣಸಿಗುತ್ತಾರೆ. ವಿಶೇಷವೆಂದರೆ, ಮಹಿಳೆಯರ ಗಂಡು ಮಕ್ಕಳಿಗೆ 18 ವರ್ಷದವರೆಗೆ ಗ್ರಾಮದಲ್ಲಿ ಉಳಿಯಲು ಅವಕಾಶವಿದ್ದು, ನಂತರ ಅವರು ಗ್ರಾಮವನ್ನು ಬಿಟ್ಟು ಹೋಗಬೇಕಾಗುತ್ತದೆ.

a0139b19-a47b-4df5-80ea-eed02c8c5983-2060x1236

ಉಮೋಜಾ- ಮಹಿಳೆಯರಿಗೆ ಸುರಕ್ಷಿತ ತಾಣ

ಉಮೋಜವು ಉತ್ತರ ಕೀನ್ಯಾದ ಸಾಂಬುರು ನಿವಾಸಿಗಳು 500 ವರ್ಷಗಳಿಗೂ ಹೆಚ್ಚು ಕಾಲ ಕಟ್ಟುನಿಟ್ಟಾದ ಪಿತೃಪ್ರಧಾನ ಪ್ರದೇಶವಾಗಿತ್ತು. 30 ವರ್ಷಗಳ ಹಿಂದೆ ರೆಬೆಕ್ಕಾ ಲೋಲೋಸೋಲಿ ಉಮೋಜ ಗ್ರಾಮವನ್ನು ಸ್ಥಾಪಿಸುವವರೆಗೆ ಇದೇ ಪರಿಸ್ತೀತಿಯಿತ್ತು. 1990 ರಲ್ಲಿ ಬ್ರಿಟಿಷ್ ಸೈನಿಕರಿಂದ ಅತ್ಯಾಚಾರ, ಲೈಂಗಿಕ ದೌರ್ಜನ್ಯದಿಂದ ಬದುಕುಳಿದ 15 ಮಹಿಳೆಯರಿಗೆ ಸುರಕ್ಷಿತ ವಾಸಸ್ಥಾನವಾಗಿ ಈ ಗ್ರಾಮವನ್ನು ಹುಟ್ಟುಹಾಕಿದರು. ಆದರೆ ಇಂದು ಈ ಗ್ರಾಮವು ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಗೃಹ ಹಿಂಸೆ, ಬಾಲ್ಯ ವಿವಾಹದಂತಹ ಸಾಮಾಝಿಕ ಪಿಡುಗುಗಳನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಯಾವುದೇ ಮಹಿಳೆಗೂ ಆಶ್ರಯ ನೀಡುವಷ್ಟು ಬೆಳೆದಿದೆ.

ಈ ಹಳ್ಳಿಯಲ್ಲಿ, ಎಲ್ಲಾ ನಿರ್ಧಾರಗಳನ್ನು ಮಹಿಳೆಯರು ತೆಗೆದುಕೊಳ್ಳುತ್ತಾರೆ. ಅವರು ಹುಡುಗಿಯರ ಹಕ್ಕುಗಳಿಗೆ ಸಂಬಂಧಿಸಿದ ಪ್ರತಿಯೊಂದು ನಿರ್ಧಾರವನ್ನು ಪುರುಷರ ಅನುಮತಿಯಿಲ್ಲದೆ ತೆಗೆದುಕೊಳ್ಳುತ್ತಾರೆ. ತಮಗೆ ಇಷ್ಟ ಬಂದಂತೆ ಜೀವಿಸುವ ಹಕ್ಕನ್ನು ಸಹ ಈ ಜನ ಹೊಂದಿದ್ದಾರೆ.

f53e8146-133e-47ef-9bbd-53753f731b38-2060x1236

ಪುರುಷರಿಲ್ಲದ ಗ್ರಾಮದಲ್ಲಿ ಜೀವನೋಪಾಯಕ್ಕೆ ದಾರಿಯೇನು ?

ಉಮೋಜಾದ ಬಲಿಷ್ಠ, ಸ್ವತಂತ್ರ ಮಹಿಳೆಯರು ಸಫಾರಿ ಪ್ರವಾಸಿಗರಿಗಾಗಿ ಒಂದು ಶಿಬಿರವನ್ನು ನಡೆಸುತ್ತಾರೆ. ಈ ಗ್ರಾಮಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಅವರು ಪ್ರವೇಶ ಶುಲ್ಕವನ್ನು ವಿಧಿಸುತ್ತಾರೆ. ಇಲ್ಲಿನ ಮಹಿಳೆಯರು ವರ್ಣರಂಜಿತ ಬಳೆಗಳು, ಕಾಲುಂಗುರಗಳು, ಮಣಿಗಳಿಂದ ಮಾಡಿದ ಹಾರಗಳು ಮತ್ತು ಇತರ ಆಭರಣಗಳನ್ನು ಕರಕುಶಲ ಕೇಂದ್ರದಲ್ಲಿ ತಯಾರಿಸುತ್ತಾರೆ. ಇವುಗಳನ್ನು ಮಾರಾಟಕ್ಕೆ ಇಡಲಾಗುತ್ತದೆ. ಈ ಹಳ್ಳಿಯಲ್ಲಿ, ಮಹಿಳೆಯರು ಕೃಷಿ, ವ್ಯಾಪಾರ ಮತ್ತು ಹೊಲಿಗೆಯ ಕೆಲಸ ಮಾಡುವ ಮೂಲಕ ತಮ್ಮ ಜೀವನೋಪಾಯವನ್ನು ಗಳಿಸುತ್ತಾರೆ. ಉಮೋಜಾದ ಹಿರಿಯ ಮಹಿಳೆಯರು ಯುವತಿಯರಿಗೆ ಬಲವಂತದ ಗರ್ಭಪಾತ ಮುಂತಾದ ಸಾಮಾಜಿಕ ರೂಢಿಗಳ ಬಗ್ಗೆ ಶಿಕ್ಷಣ ನೀಡುತ್ತಾರೆ.

ಈ ಹಳ್ಳಿಯಲ್ಲಿ, ಪುರುಷರಿಗೆ ತಮ್ಮ ಕುಟುಂಬಗಳನ್ನು ಭೇಟಿ ಮಾಡಲು ಅವಕಾಶವಿದೆ. ಆದರೆ ಅವರು ದಿನದ ಅಂತ್ಯದ ವೇಳೆಗೆ ಗ್ರಾಮವನ್ನು ತೊರೆಯಬೇಕು. ಒಟ್ಟಿನಲ್ಲಿ ಉಮೋಜಾ ಗ್ರಾಮವು ಅನೇಕ ವರ್ಷಗಳಿಂದ ಪುರುಷರನ್ನು ಹೊರಗಿಟ್ಟು ತಮ್ಮದೇ ಆದ ಮಾತೃಪ್ರಧಾನ ಸಮಾಜವನ್ನು ಪ್ರಾರಂಭಿಸಲು ಪ್ರೋತ್ಸಾಹಿಸಿದೆ ಮತ್ತು ಪ್ರೇರೇಪಿಸುತ್ತಿರುವುದು ದೇಶ ವಿದೇಶಿಗರ ಮೆಚ್ಚುಗೆಗೆ ಪಾತ್ರವಾಗಿದೆ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ