ಕಳೆದ ವರ್ಷ ತಾಜ್ ಮಹಲ್ (Taj Mahal) ಗಳಿಸಿದ ಹಣವೆಷ್ಟು ಗೊತ್ತಾ?

98,55,27,533 ರೂಪಾಯಿ; ಬರೋಬ್ಬರಿ 98 ಕೋಟಿ ರೂಪಾಯಿ. ಇದು ಪುರಾತತ್ವ ಇಲಾಖೆ ಅಡಿ (Archeological Survey of India) ಯಲ್ಲಿ ಬರುವ ಎಲ್ಲ ಸ್ಮಾರಕಗಳಿಗಿಂತ ತಾಜ್ ಮಹಲ್ ಮಾಡಿರುವ ಕಮಾಯಿಯೇ ಜಾಸ್ತಿ.

ಮೊಘಲರ ಕಾಲದಲ್ಲಿ ಶಹಜಹಾನ್ ನ ಹೆಂಡತಿ ಮುಮ್ತಾಜ್ ನೆನಪಲ್ಲಿ ಕಟ್ಟಿದ ಈ ಘೋರಿ ಕಳೆದ 5 ವರ್ಷದಲ್ಲಿ 297 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ. ಆರ್ಥಿಕ ವರ್ಷ 24ರಲ್ಲಿ ಟಿಕೆಟ್ ಮಾರಿ 98.5 ಕೋಟಿ ರೂಪಾಯಿ ಆದಾಯ ಮಾಡಿದೆ ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ (Gajendra Singh Shekhavat) ಅವರು ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಕಳೆದ 5 ವರ್ಷದಿಂದ ಸ್ಮಾರಕಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವ ತಾಜ್ ಮಹಲ್ ಗೆ 68 ಲಕ್ಷ ಜನ ಭೇಟಿ ನೀಡಿದ್ದಾರೆ. ಹಾಗೆ 2020ರಲ್ಲೂ 97 ಕೋಟಿ ಆದಾಯವನ್ನು ಗಳಿಸಿ, ಅತಿ ಹೆಚ್ಚು ಆದಾಯ ಗಳಿಸಿದ ವರ್ಷವಾಗಿತ್ತು. ಆದರೆ, ಪ್ರಸ್ತುತವಾಗಿ ಆ ದಾಖಲೆಯನ್ನು ಮುರಿದಿದೆ.

ಆರ್ಥಿಕ ವರ್ಷ 2020 ರಲ್ಲಿ ಆಗ್ರಾ ಕೋಟೆ ಮತ್ತು ದೆಹಲಿಯ ಕುತುಬ್ ಮಿನಾರ್ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದ್ದವು. ಹಾಗೆ ಆರ್ಥಿಕ ವರ್ಷ 2021 ರಲ್ಲಿ ತಮಿಳುನಾಡಿನ ಮಮಲ್ಲಾಪುರಂ ಸ್ಮಾರಕಗಳ ಸಂಕೀರ್ಣ ಮತ್ತು ಕೊನಾರ್ಕ್ ನ ಸೂರ್ಯ ದೇವಾಲಯ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದ್ದವು.

ಅತಿ ಹೆಚ್ಚು ಆದಾಯ ಗಳಿಸಿದ ಟಾಪ್ ಟೆನ್ ಸ್ಮಾರಕಗಳು

  • ತಾಜ್ ಮಹಲ್ – 98.5 ಕೋಟಿ
  • ಕುತುಬ್ ಮಿನಾರ್- 23.8 ಕೋಟಿ
  • ಕೆಂಪು ಕೋಟೆ – 18 ಕೋಟಿ
  • ಆಗ್ರಾ ಕೋಟೆ - 15.3 ಕೋಟಿ
  • ಸೂರ್ಯ ದೇವಾಲಯ, ಕೊನಾರ್ಕ್- 12.7 ಕೋಟಿ
  • ಹುಮಾಯೂನನ ಸಮಾಧಿ- 10 ಕೋಟಿ
  • ಮಮಲ್ಲಾಪುರಂ- 7.4 ಕೋಟಿ
  • ಎಲ್ಲೋರಾ ಗುಹೆಗಳು – 7.1 ಕೋಟಿ
  • ಫತೆಹ್ಪುರ ಸಿಕ್ರಿ – 6.7
  • ಚಿತ್ತೋರಗಢ – 4.3