ಇದು ಸೆಲ್ಫ್ ಮಾರ್ಕೆಟಿಂಗ್ ಜಮಾನ
ವಾಸೋದ್ಯಮ ಎಂಬುದು ನೇರವಾಗಿ ಜನರಿಗೆ ಸಂಬಂಧಿಸಿದ ವಿಭಾಗ. ಇದರ ಬಗ್ಗೆ ಸಾರ್ವಜನಿಕರಿಗೆ ಅಪ್ ಡೇಟ್ ಬೇಕೇಬೇಕು. ಕೆ ಎಸ್ ಟಿ ಡಿ ಸಿ ಹೊಸತೊಂದು ಟೂರ್ ಆಫರ್ ಅಥವಾ ಪ್ಯಾಕೇಜ್ ಕೊಟ್ಟಿದೆ ಅಂದರೆ ಆ ಸುದ್ದಿ, ಜನಸಾಮಾನ್ಯನಿಗೆ ಮೇನ್ ಸ್ಟ್ರೀಮ್ ನ್ಯೂಸ್ ಆಗಿಯೇ ಸಿಗಬೇಕು. ಸೇಲ್ಸ್ ಮಾರ್ಕೆಟಿಂಗ್ ಮತ್ತು ಪಿ ಆರ್ ಟೀಮ್ ಇದನ್ನು ಸೋಷಿಯಲ್ ಮೀಡಿಯದಲ್ಲಿ ಅದ್ಭುತವಾಗಿ ಪ್ರಚಾರ ಮಾಡಬೇಕು.
ಕರ್ನಾಟಕದಲ್ಲಿ ಪ್ರವಾಸಿಗಳು ಸುದ್ದಿ ಮಾಡುತ್ತಿದ್ದಾರೆ. ಪ್ರವಾಸಗಳು ಸುದ್ದಿಯಾಗುತ್ತಿವೆ. ಆದರೆ ಪ್ರವಾಸೋದ್ಯಮ ಸುದ್ದಿಯಾಗುತ್ತಿದೆಯಾ ಅಂತ ಕೇಳಿದರೆ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ ಎಂದೇ ಹೇಳಬೇಕು. ಜನಸಾಮಾನ್ಯರ ಅಕೌಂಟೆಬಿಲಿಟಿಗೆ ಸುಲಭವಾಗಿ ಸಿಗದ ಕ್ಷೇತ್ರವಿದು. ಹಾಗಂತ ಜನಸಾಮಾನ್ಯರಿಗೆ ಪ್ರವಾಸೋದ್ಯಮ ಇಲಾಖೆಯ ಪ್ರತಿದಿನದ ವಹಿವಾಟು, ಲಾಭ ನಷ್ಟಗಳ ರಿಪೋರ್ಟ್ ಬೇಕು ಅಂತ ಅಲ್ಲ. ಪ್ರವಾಸೋದ್ಯಮ ಇಲಾಖೆ ಜಾಗೃತವಾಗಿದೆ. ಅಲ್ಲಿ ಚಟುವಟಿಕೆಗಳು ನಡೆಯುತ್ತಿದೆ ಎಂಬುದಾದರೂ ಪ್ರಜೆಗಳಿಗೆ ಗೊತ್ತಾಗುತ್ತಿರಬೇಕು. ಹೀಗಾಗಬೇಕೆಂದರೆ ಇಂದಿನ ದಿನಮಾನದಲ್ಲಿ ಪ್ರವಾಸೋದ್ಯಮ ಇಲಾಖೆಯ ಪಿ ಆರ್ ಟೀಮ್ ಬಲವಾಗಿರಬೇಕು.
ಸಾರ್ವಜನಿಕ ಸಂಪರ್ಕ ವ್ಯವಸ್ಥೆ ಚುರುಕುತನದಿಂದ ಕೂಡಿದ್ದು, ಪ್ರಸ್ತುತ ಸೋಷಿಯಲ್ ಮೀಡಿಯಾ ಯುಗಕ್ಕೆ ಅಪ್ಡೇಟ್ ಆಗಿರಬೇಕು. ಇಲ್ಲವಾದಲ್ಲಿ ಇಲಾಖೆಯಿಂದ ಹತ್ತು ಹಲವು ಕೆಲಸಗಳು ಆಗಿದ್ದರೂ ಗೊತ್ತಾಗುವುದಿಲ್ಲ, ಯೋಜನೆಗಳು, ಘೋಷಣೆಗಳು, ಆಫರ್ ಗಳು ಹೊರಬಂದರೂ ಜನಕ್ಕೆ ತಿಳಿಯುವುದಿಲ್ಲ. ಪ್ರವಾಸೋದ್ಯಮ ಎಂಬುದು ನೇರವಾಗಿ ಜನರಿಗೆ ಸಂಬಂಧಿಸಿದ ವಿಭಾಗ. ಇದರ ಬಗ್ಗೆ ಸಾರ್ವಜನಿಕರಿಗೆ ಅಪ್ ಡೇಟ್ ಬೇಕೇಬೇಕು. ಕೆ ಎಸ್ ಟಿ ಡಿ ಸಿ ಹೊಸತೊಂದು ಟೂರ್ ಆಫರ್ ಅಥವಾ ಪ್ಯಾಕೇಜ್ ಕೊಟ್ಟಿದೆ ಅಂದರೆ ಆ ಸುದ್ದಿ, ಜನಸಾಮಾನ್ಯನಿಗೆ ಮೇನ್ ಸ್ಟ್ರೀಮ್ ನ್ಯೂಸ್ ಆಗಿಯೇ ಸಿಗಬೇಕು. ಸೇಲ್ಸ್ ಮಾರ್ಕೆಟಿಂಗ್ ಮತ್ತು ಪಿ ಆರ್ ಟೀಮ್ ಇದನ್ನು ಸೋಷಿಯಲ್ ಮೀಡಿಯದಲ್ಲಿ ಅದ್ಭುತವಾಗಿ ಪ್ರಚಾರ ಮಾಡಬೇಕು. ಯಾರೂ ತಾವಾಗಿಯೇ ಇಂದು ಪ್ರವಾಸೋದ್ಯಮ ಇಲಾಖೆ ಏನು ಆಫರ್ ಕೊಟ್ಟಿದೆ ಎಂದು ನೋಡಲು ವೆಬ್ ಸೈಟ್ ಗೆ ಹೋಗುವುದಿಲ್ಲ ಅಥವಾ ಇಲಾಖೆಯ ಕಸ್ಟಮರ್ ಕೇರ್ ಗೆ ಕರೆ ಮಾಡುವುದಿಲ್ಲ. ಇದು ಸೆಲ್ಫ್ ಮಾರ್ಕೆಟಿಂಗ್ ಜಮಾನ. ಇಲ್ಲಿ ಪ್ರತಿಯೊಬ್ಬರೂ ತಮ್ಮ ಬ್ಯಾಂಡ್ ತಾವೇ ಬಜಾಯಿಸಿಕೊಳ್ಳಬೇಕು, ಜಾಣ್ಮೆಯಿಂದ ಇತರರೂ ತಮ್ಮನ್ನು ಪ್ರೊಮೋಟ್ ಮಾಡುವ ವಾತಾವರಣ ಸೃಷ್ಟಿಸಬೇಕು.
ಉದಾಹರಣೆಗೆ ಎರಡು ವಾರಗಳ ಹಿಂದೆ ಕರ್ನಾಟಕ ಲಂಡನ್ ನಲ್ಲಿ ನಡೆದ ಡಬ್ಲು ಟಿ ಎಂ ಸಮ್ಮೇಳನದಲ್ಲಿ ಭಾಗವಹಿಸಿತು. ವರ್ಲ್ಡ್ ಟ್ರಾವೆಲ್ ಮಾರ್ಕೆಟ್ ನಲ್ಲಿ ರಾಜ್ಯಪ್ರವಾಸೋದ್ಯಮ ಇಲಾಖೆಯ ಆಯುಕ್ತ ಅಕ್ರಮ್ ಪಾಷಾ, ಕೆ ಎಸ್ ಟಿ ಡಿ ಸಿ ಚೇರ್ ಮನ್ ಶ್ರೀನಿವಾಸ್, ಪ್ರವಾಸೋದ್ಯಮ ಅಧಿಕಾರಿಗಳು, ಜಂಗಲ್ ಲಾಡ್ಜ್ ರೆಸಾರ್ಟ್ ಗಳ ಪ್ರತಿನಿಧಿಗಳು ಎಲ್ಲರೂ ರಾಜ್ಯವನ್ನು ಪ್ರತಿನಿಧಿಸಿದ್ದರು. ಬಿ ಟು ಬಿ ಸಭೆಗಳು, ಕರ್ನಾಟಕದ ಪ್ರವಾಸೋದ್ಯಮವನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವ ಕಾರ್ಯಕ್ರಮಗಳು ಎಲ್ಲವೂ ಜರುಗಿದವು. ಇಂಥ ಚಟುವಟಿಕೆಗಳನ್ನು, ಅಲ್ಲಿನ ಅಪ್ ಡೇಟ್ ಗಳನ್ನು ದೊಡ್ಡ ಮಟ್ಟದಲ್ಲಿ ಪಿ ಆರ್ ಟೀಮ್ ಸುದ್ದಿಯಾಗಿಸಬೇಕಾಗಿತ್ತದೆ.
ಅದೇ ರೀತಿ, ಈಗ ಕರ್ನಾಟಕ ಪ್ರವಾಸೋದ್ಯಮಕ್ಕೆ ಪೂರಕವಾಗುವ ನಿಟ್ಟಿನಲ್ಲಿ H125 ಹೆಲಿಕಾಪ್ಟರ್ ಗಳ ಬಳಕೆಗೆ ಕರ್ನಾಟಕ ಮುಂದಾಗಿರುವ ಸುದ್ದಿ ಎಷ್ಟು ಮಂದಿಗೆ ಗೊತ್ತು? ಇಂಥ ವಿಷಯಗಳು ಚರ್ಚೆಗೆ ಬಂದಾಗಲೇ ಅಲ್ಲವೇ ಸಾಧಕಭಾಧಕಗಳು, ಇಂಪ್ರೂವ್ ಮೆಂಟ್ ಗಳು ಸಾಧ್ಯವಾಗುವುದು? ಇನ್ನು, ಕಳೆದ ಫೆಬ್ರವರಿಯಲ್ಲಿ ನಡೆದ ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಲ್ ಪೋ( ಕೈಟ್) ಒಂದು ಅದ್ಭುತ ಪ್ರವಾಸಿಮೇಳ. ಅದರಲ್ಲಿ ರಾಜ್ಯದ ಮುಖ್ಯಮಂತ್ರಿಗಳಿಂದ, ಪ್ರವಾಸೋದ್ಯಮ ಸಚಿವರಿಂದ ಹಲವು ಘೋಷಣೆಗಳು ಮತ್ತು ಆಶ್ವಾಸನಗಳು ಹೊರಬಂದಿದ್ದವು. ಅವು ಎಷ್ಟು ಜನರ ಕಿವಿಗಳಿಗೆ ತಲುಪಿವೆ? ಪ್ರವಾಸೋದ್ಯಮ ಸಚಿವರು ಕರಾವಳಿ ಟೂರಿಸಂ ಅಭಿವೃದ್ಧಿಗೊಳಿಸ ನಿಟ್ಟಿನಲ್ಲಿ ಸೀ ಪ್ಲೇನ್ ಗಳನ್ನು ಪರಿಚಯಿಸುವುದಾಗಿ ಹೇಳಿದ್ದರು. ಅದೊಂದು ಮಹತ್ವದ ಘೋಷಣೆಯಾಗಿತ್ತು. ಅದರ ಬಗ್ಗೆ ಎಷ್ಟು ಮಂದಿಗೆ ಗೊತ್ತು? ಜನಸಾಮಾನ್ಯರಿಗೆ ಸುದ್ದಿ ತಲುಪಿದಾಗ ಮಾತ್ರವೇ ಅದನ್ನು ಆಡಿಟ್ ಮಾಡಲ ಸಾಧ್ಯವಾಗುವುದು.ಅಂದಿನ ಆಶ್ವಾಸನೆ ಜಾರಿಯಾಗುವ ಯಾವ ಹಂತದಲ್ಲಿದೆ ಎಂದು ಪ್ರಶ್ನಿಸುವ ಸಲುವಾಗಿಯಾದರೂ ಮಾಹಿತಿ ತಲುಪಿರಬೇಕಲ್ಲವೇ?
ಪಿ ಆರ್ ಟೀಮ್ ಎಂಬುದು ಇರುವುದೇ ಇಲಾಖೆ ಮತ್ತು ಜನರ ಮಧ್ಯ ಸಂಬಂಧ ಗಟ್ಟಿಗೊಳಿಸುವುದಕ್ಕೆ. ಸಂಪರ್ಕದ ಮೂಲಕ ಇಲಾಖೆಯನ್ನು ಇನ್ನಷ್ಟು ಬಲವಾಗಿಸಿ ಪ್ರಚಲಿತಗೊಳಿಸುವುದು ಪಿ ಆರ್ ತಂಡದ ಮೂಲ ಕರ್ತವ್ಯ. ಅದರಲ್ಲಿ ಕರ್ನಾಟಕದ ಪ್ರವಾಸೋದ್ಯಮ ಇಲಾಖೆ, ನಿಗಮ ಮಂಡಳಿಗಳು ಹಿಂದೆಬಿದ್ದಿವೆ ಎಂದು ಹೇಳಲು ನಿಜಕ್ಕೂ ಬೇಸರವಾಗುತ್ತದೆ.