ಕುಂದಾಪುರ ಎಜುಕೇಷನ್ ಸೊಸೈಟಿಗೆ ಬಂಗಾರದ ಸಿಂಗಾರ
ಕಳೆದ 5 ದಶಕಗಳಿಂದ ಕುಂದಾಪುರ ಮತ್ತು ಬೈಂದೂರು ಅಷ್ಟೇ ಅಲ್ಲದೇ, ಸುತ್ತಮುತ್ತಲಿನ ಮೂರು ಜಿಲ್ಲೆಯ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಸಂಸ್ಥೆ ಈಗ ತನ್ನ ಸುವರ್ಣ ಮಹೋತ್ಸವವನ್ನು ಮಾಡಿಕೊಳ್ಳುತ್ತಿದೆ. ಕುಂದಾಪುರದ ಕುಂದೇಶ್ವರ ದೇವಸ್ಥಾನದಲ್ಲಿ ಶುರುವಾಗಿದ್ದ ಈ ಸಂಸ್ಥೆ, ಈಗ ತನ್ನದೇ ಸ್ವಂತ ಸುಸಜ್ಜಿತ ಕಟ್ಟಡದಲ್ಲಿ ಶಿಕ್ಷಣ ನೀಡುತ್ತಿದೆ. ಈ ಶಾಲೆ ಮತ್ತು ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಎಂಎನ್‌ಸಿಗಳ ಅಧಿಕಾರಿಗಳಾಗಿ, ಹಲವಾರು ಜನರಿಗೆ ಉದ್ಯಮ ನೀಡುವ ಉದ್ಯಮಿಗಳಾಗಿ, ಸಮಾಜ ಸೇವಕರಾಗಿ, ಪ್ರಖ್ಯಾತ ವೈದ್ಯರಾಗಿ, ಸರಕಾರಿ ಅಧಿಕಾರಿಗಳಾಗಿ ಮತ್ತು ರಾಜಕಾರಣಿಗಳಾಗಿ ಹೊರಹೊಮ್ಮಿದ್ದಾರೆ.
ಒಂದು ಶಾಲೆ, ಕಾಲೇಜು ಒಂದು ಊರಿನ ಸ್ಥಿತಿಯನ್ನು ಬದಲಿಸುತ್ತದೆ. ಒಂದು ಊರಿನ ಮಕ್ಕಳು ಬೇರೊಂದು ಊರಿನ ಶಾಲೆಗ ಹೋಗಿ ಕಲಿಯಬೇಕು. ಅದು ಕೇವಲ ಶಿಕ್ಷಣ ಮಾತ್ರವಲ್ಲದೇ ಬದುಕನ್ನೇ ಕಲಿಸಿಕೊಡುತ್ತದೆ. ಮನೆಯಿಂದ ಶಾಲೆಗೆ ದೂರವಿದೆ ಎಂದು ಶಾಲೆಯನ್ನೇ ತೊರೆದ ಉದಾಹರಣೆ ನಾವು ಕಂಡಿದ್ದೇವೆ. ಅದೇ ರೀತಿ ಹತ್ತಿರದ ಶಾಲೆಯಲ್ಲಿದ್ದರೆ ಮಗು ಅಭಿವೃದ್ಧಿ ಹೊಂದುವುದಿಲ್ಲ ಎಂದು ದೂರದ ಶಾಲೆಗೆ ಸೇರಿಸುವುದನ್ನೂ ನೋಡಿದ್ದೇವೆ. ಮುಖ್ಯವಾಗಿ ಶಾಲೆ ಎಂಬುದು ತನ್ನ ಗುಣಮಟ್ಟದಿಂದ ಪೋಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಆಕರ್ಷಿಸಬೇಕು. ಆಗಲೇ ಆ ಶಾಲೆ ನೂರಾರು ವರ್ಷ ಬಾಳುವಷ್ಟು ಪ್ರಖ್ಯಾತವಾಗುತ್ತದೆ.
ಅಂಥದ್ದೊಂದು ಶೈಕ್ಷಣಿಕ ಸಂಸ್ಥೆಗಳ ಸಮೂಹ ಇದೀಗ ಸುವರ್ಣ ಸಂಭ್ರಮದಲ್ಲಿದೆ. ಊರಿನ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಬಡವರಿಗೆ ಮಧ್ಯಮ ವರ್ಗದವರಿಗೆ, ಹಿಂದುಳಿದವರಿಗೆ ಶಿಕ್ಷಣ ದೊರೆಯಬೇಕು ಎಂಬ ಕಾರಣಕ್ಕಾಗಿ ಶುರುವಾಗಿ, ಸಮಾಜದ ಕಟ್ಟಕಡೆಯ ಮಗು ವಿದ್ಯಾವಂತನಾದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂಬ ಧ್ಯೇಯವನ್ನು ಇಟ್ಟುಕೊಂಡು ಅರ್ಧ ಶತಮಾನದ ಹಿಂದೆ ಶುರುವಾದ ಈ ವಿದ್ಯಾ ಸಂಸ್ಥೆ ಇಂದು ಇಡೀ ಊರು ಮತ್ತು ಸುತ್ತಮುತ್ತಲಿನ ಚಹರೆಯನ್ನೇ ಬದಲಿಸಿದೆ. ಹೌದು, ಇಂಥದ್ದೊಂದು ಕಂಡಿರುವುದು ಕುಂದಾಪುರದಲ್ಲಿ. ಕುಂದಾಪುರ ಎಜುಕೇಷನ್ ಸೊಸೈಟಿ ಐವತ್ತು ಸಾರ್ಥಕ ವರ್ಷಗಳನ್ನು ಪೂರೈಸಿ ಇಂದು ಹೆಮ್ಮೆಯಿಂದ ಸ್ವರ್ಣಮಹೋತ್ಸವ ಆಚರಿಸುತ್ತಿದೆ.

1975ರಲ್ಲಿ ಕುಂದಾಪುರದಲ್ಲಿ ಇಂಗ್ಲಿಷ್ ಶಾಲೆ ಇರದ ಸಮಯ. ಆಗ ಜಿ.ಕೆ. ಮೇಲಿನಮನೆ ಮತ್ತು ಕುಸುಮ ಮೇಲಿನಮನೆ ದಂಪತಿಗಳು ಕುಂದಾಪುರದ ಮಕ್ಕಳಿಗೆ ಇಂಗ್ಲಿಷ್ ಕಲಿಸುವ ಯೋಚನೆಯನ್ನು ಮಾಡಿದರು. ಅದಕ್ಕಾಗಿಯೇ ಊರಿನ ಹಲವಾರು ಜನರನ್ನು ಸೇರಿಸಿಕೊಂಡು ಕುಂದಾಪುರ ಶಿಕ್ಷಣ ಸಂಸ್ಥೆ ಎಂಬ ಒಂದು ಸಂಸ್ಥೆಯನ್ನು ಹುಟ್ಟುಹಾಕಿದರು. ಒಂದೊಂದೇ ಹೆಜ್ಜೆ ಎನ್ನುವ ರೀತಿಯಲ್ಲಿ ನರ್ಸರಿಯಿಂದ ಶುರುವಾಗಿದ್ದ ಶಾಲೆ ಈಗ 5000ಕ್ಕೂ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಾ, ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಜೀವನವನ್ನು ಹಸನು ಮಾಡಿಕೊಟ್ಟಿದೆ.
ಕಳೆದ 5 ದಶಕಗಳಿಂದ ಕುಂದಾಪುರ ಮತ್ತು ಬೈಂದೂರು ಅಷ್ಟೇ ಅಲ್ಲದೇ, ಸುತ್ತಮುತ್ತಲಿನ ಮೂರು ಜಿಲ್ಲೆಯ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಸಂಸ್ಥೆ ಈಗ ತನ್ನ ಸುವರ್ಣ ಮಹೋತ್ಸವವನ್ನು ಮಾಡಿಕೊಳ್ಳುತ್ತಿದೆ. ಕುಂದಾಪುರದ ಕುಂದೇಶ್ವರ ದೇವಸ್ಥಾನದಲ್ಲಿ ಶುರುವಾಗಿದ್ದ ಈ ಸಂಸ್ಥೆ, ಈಗ ತನ್ನದೇ ಸ್ವಂತ ಸುಸಜ್ಜಿತ ಕಟ್ಟಡದಲ್ಲಿ ಶಿಕ್ಷಣ ನೀಡುತ್ತಿದೆ. ಈ ಶಾಲೆ ಮತ್ತು ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಎಂಎನ್‌ಸಿಗಳ ಅಧಿಕಾರಿಗಳಾಗಿ, ಹಲವಾರು ಜನರಿಗೆ ಉದ್ಯಮ ನೀಡುವ ಉದ್ಯಮಿಗಳಾಗಿ, ಸಮಾಜ ಸೇವಕರಾಗಿ, ಪ್ರಖ್ಯಾತ ವೈದ್ಯರಾಗಿ, ಸರಕಾರಿ ಅಧಿಕಾರಿಗಳಾಗಿ ಮತ್ತು ರಾಜಕಾರಣಿಗಳಾಗಿ ಹೊರಹೊಮ್ಮಿದ್ದಾರೆ.
ಕಳೆದ ಐದು ದಶಕಗಳ ಅವಧಿಯಲ್ಲಿ ಸಾಮಾಜಿಕ ಬದ್ಧತೆಯೊಂದಿಗೆ ನಾಲ್ಕು ಶಿಕ್ಷಣ ಸಂಸ್ಥೆಗಳ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕನ್ನು ಈ ಸಂಸ್ಥೆ ರೂಪಿಸಿದೆ. ಪ್ರಸ್ತುತ ಈ ನಾಲ್ಕು ಶಿಕ್ಷಣ ಸಂಸ್ಥೆಗಳಲ್ಲಿ ಸರಿ ಸುಮಾರು ಐದು ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಣದೊಂದಿಗೆ ಕಲಿಕೆ, ಸಾಹಿತ್ಯ, ಕಲೆ, ಕ್ರೀಡೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ವಿಫುಲ ಅವಕಾಶಗಳಿದ್ದು, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಈ ಶಿಕ್ಷಣ ಸಂಸ್ಥೆಗಳು ಗುರುತಿಸಿಕೊಂಡು ಎಲ್ಲರ ಗಮನ ಸೆಳೆದಿದೆ.
ಸ್ಥಾಪಕ ಅಧ್ಯಕ್ಷರಾದ ಹಾಜಿ ಎ.ಎನ್. ಅಹಮದ್ ಕುಟ್ಟಿ ನಂತರದ ಅಧ್ಯಕ್ಷರುಗಳಾದ ಎನ್.ಎಸ್ ಪರಮೇಶ್ವರಯ್ಯ, ಬಿ. ಅರುಣ್ ಕುಮಾರ್ ಶೆಟ್ಟಿ, ಕೆ. ಸರ್ವೋತ್ತಮ ಶೆಟ್ಟಿ ಮತ್ತು ಅತ್ಯಂತ ಧೀರ್ಘ ಅವಧಿಯ ಅಧ್ಯಕ್ಷರಾದ ಕೆ. ಶಿವರಾಮ ಶೆಟ್ಟಿ ನಂತರ ಸೋಲೊಮನ್ ಸೋನ್ಸ್ ಮತ್ತು ಹಾಲಿ ಅಧ್ಯಕ್ಷರಾದ ಬಿ.ಎಂ. ಸುಕುಮಾರ ಶೆಟ್ಟಿಯವರ ದಕ್ಷ ಹಾಗೂ ಯಶಸ್ಸಿ ಆಡಳಿತದೊಂದಿಗೆ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ.

ಸುಕುಮಾರ್ ಶೆಟ್ಟಿರವರ ನಾಯಕತ್ವ
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಶೈಕ್ಷಣಿಕ, ಧಾರ್ಮಿಕ, ಔದ್ಯಮಿಕ, ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಮಹತ್ವಪೂರ್ಣ ಕೆಲಸಗಳನ್ನು ಮಾಡಿ ಜನರ ಮನಸಿಲ್ಲಿರುವವರು ಬಿ.ಎಂ. ಸುಕುಮಾರ ಶೆಟ್ಟಿ. ಸಮಾಜದ ಕಟ್ಟಕಡೆಯ ಮಗು ವಿದ್ಯಾವಂತನಾದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂಬ ಧ್ಯೇಯವನ್ನು ಇಟ್ಟುಕೊಂಡು ತಾಲೂಕಿನ ಶಿಕ್ಷಣ ಸಂಸ್ಥೆಗಳ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಶಿಕ್ಷಣದ ಬಗ್ಗೆ ಅಪಾರ ಕಾಳಜಿ, ಕಳಕಳಿ ಹೊಂದಿರುವ ಇವರು ತಮ್ಮ ಯೋಚನೆ, ಯೋಜನೆಗಳನ್ನು ಕಾರ್ಯರೂಪಗೊಳಿಸಿ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕನ್ನು ರೂಪಿಸಿದ ಈ ಸಂಸ್ಥೆಗಳಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದರ ಜತೆಗೆ ಇಂದಿನ ಶೈಕ್ಷಣಿಕವಾಗಿ ಎಲ್ಲ ರೀತಿಯಲ್ಲಿ ಸ್ಪಂದಿಸುತ್ತಿರುವುದು ಇವರ ದಕ್ಷ ಆಡಳಿತಕ್ಕೆ ಹಿಡಿದ ಕೈಗನ್ನಡಿ. ಈ ಎಲ್ಲಾ ವಿದ್ಯಾ ಸಂಸ್ಥೆಗಳನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಾದರಿ ಸಂಸ್ಥೆಗಳನ್ನಾಗಿ ರೂಪಿಸಬೇಕೆಂಬ ಉತ್ಕಟ ಹಂಬಲವನ್ನು ಹೊಂದಿರುವವರು ಶಿಕ್ಷಣ ಪ್ರೇಮಿ ಬಿ.ಎಂ. ಸುಕುಮಾರ ಶೆಟ್ಟಿ. ಬರೀ ಕುಂದಾಪುರ ಎಜುಕೇಷನ್ ಸೊಸೈಟಿಯಷ್ಟೇ ಅಲ್ಲದೆ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಟ್ರಸ್ಟೀಯಾದಾಗಲೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶಾಲೆಯನ್ನು ತೆರೆದು ಮಕ್ಕಳಿಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ. ಹಾಗೇ, ಕುಂದಾಪುರದಿಂದ ದೂರದ ಊರುಗಳಲ್ಲಿನ ಮಕ್ಕಳಿಗೆ ಶಾಲಾ ಕಾಲೇಜಿಗೆ ಪ್ರತಿದಿನ ಬರಲು ತೊಂದರೆಯಾಗಿದ್ದನ್ನು ಅರಿತು, ಅವರಿಗೆ ತಮ್ಮ ಮನೆಯಲ್ಲೇ ನೆಲೆಕೊಟ್ಟು ಊಟ ವಸತಿಗಳನ್ನು ಯಾವುದೇ ಲಾಭವನ್ನು ಅಪೇಕ್ಷಿಸದೇ ನೀಡಿದ್ದಾರೆ. ಅವರು ಬೈಂದೂರಿನ ಶಾಸಕರಾಗಿದ್ದಾಗಲೂ ಅಷ್ಟೇ, ಇಲ್ಲಿನ ಜನರಿಗೆ ಅದರಲ್ಲೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂಥ ಹಲವು ಕಾರ್ಯಕ್ರಮಗಳನ್ನು ಮಾಡಿ, ಇಲ್ಲಿನ ಜನರ ಹೃದಯದಲ್ಲಿ ಖಾಯಂ ಆಗಿ ನೆಲೆಸಿದ್ದಾರೆ.
ಈ ಸಂಸ್ಥೆ ಫೀಸ್ ಹಿಂಡುವುದಿಲ್ಲ
ದುಡ್ಡಿದರೆ ಮಾತ್ರ ಶಿಕ್ಷಣ, ಬಡವರ ಮಕ್ಕಳಿಗೆ ಯಾವುದೇ ಸವಲತ್ತುಗಳಿಲ್ಲ, ಅನ್ನುವಂಥ ಕಾಲವಿದು. ಆದರೆ ಕುಂದಾಪುರ ಎಜುಕೇಷನ್ ಸೊಸೈಟಿಯಲ್ಲಿ ಮಾತ್ರ ಈ ಥರದ ಮಾತು ಇದುವರೆಗೂ ಕೇಳಿಬಂದಿಲ್ಲ. ಏಕೆಂದರೆ, ಈ ಸಂಸ್ಥೆಯಲ್ಲಿ ಲಕ್ಷಾಂತರ ರುಪಾಯಿ ಡೊನೇಷನ್ ಕೇಳಲ್ಲ, ಸಾಲ ಮಾಡಿ ಕಟ್ಟುವಷ್ಟು ಫೀಸ್ ಸಹ ಇಲ್ಲ. ಇಲ್ಲಿ ತೀರಾ ಬಡತನದ ಕುಟುಂಬದಿಂದ ಬಂದ ಹಲವಾರು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಬಡ ಮಕ್ಕಳಿಗೆ ಉಚಿತ ಊಟ. ಏಕಪೋಷಕ ಮತ್ತು ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಲಾಗುತ್ತಿದೆ. ಹಾಗೇ ಉಳಿದ ಮಕ್ಕಳಿಗೂ ಒಮ್ಮೆಲೇ ಫೀಸ್ ಕಟ್ಟುವ ಹಾಗೇನೂ ಇಲ್ಲ. ಹಲವಾರು ಕಂತುಗಳಲ್ಲಿ ಇಎಂಐ ಥರ ಸ್ವಲ್ಪ ಸ್ವಲ್ಪ ಹಣವನ್ನು ಕಟ್ಟುತ್ತ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬಹುದು.

ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು
ಈ ಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುವುದನ್ನೂ ಕೇಳಬಹುದು. 10ನೇ ಕ್ಲಾಸ್ ವಿದ್ಯಾರ್ಥಿಗಳು 625 ಕ್ಕೆ 625 ಮಾರ್ಕ್‌ಗಳನ್ನು ಪಡೆದಿರುವ ಹಲವು ಉದಾಹರಣೆಗಳಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪರೀಕ್ಷಾ ಪೇ ಚರ್ಚಾದಲ್ಲಿ ಭಾಗವಹಿಸಿದ್ದಾರೆ. ಪ್ರತಿಭಾ ಕಾರಂಜಿಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆಲ್ಲುತ್ತ, ಸಂಸ್ಥೆಗೆ ಮತ್ತು ಊರಿಗೆ ಕೀರ್ತಿಯನ್ನು ತಂದಿದ್ದಾರೆ. ವಿದ್ಯಾರ್ಥಿಗಳು ಚೆಸ್, ಕರಾಟೆ ಹಾಗೂ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ವಿಜೇತರಾಗಿ ಮಿಂಚುವ ಮೂಲಕ ಶಾಲೆ ಮತ್ತು ಕಾಲೇಜಿನ ಕೀರ್ತಿಯನ್ನು ಇಮ್ಮಡಿಗೊಳಿಸಿದ್ದಾರೆ. ಅದರ ಜತೆಯಲ್ಲಿ ಪಿಯು ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ರ್ಯಾಂಕ್ ಪಡೆಯುವುದರ ಮೂಲಕ, ನೀಟ್ ಮತ್ತು ಸಿಇಟಿಯಲ್ಲಿ ಒಳ್ಳೆಯ ರ್ಯಾಂಕ್‌ಗಳನ್ನು ಪಡೆದು ರಾಜ್ಯದ ಟಾಪ್ ಕಾಲೇಜಿಗೆ ಸೇರುವುದರ ಮೂಲಕ ಸಾಧನೆಯನ್ನು ಮಾಡಿದ್ದಾರೆ. ಡಿಗ್ರಿ ವಿದ್ಯಾರ್ಥಿಗಳಂತೂ ನೂರಕ್ಕೆ ನೂರರಷ್ಟು ಕ್ಯಾಂಪಸ್ ಸೆಲೆಕ್ಷನ್ ಆಗಿ, IITಗಳು ನಡೆಸುವ NPTEL–SWAYAM ಪರೀಕ್ಷೆಯಲ್ಲಿ ಪ್ರಥಮ ವರ್ಷದಲ್ಲೇ 326 ವಿದ್ಯಾರ್ಥಿಗಳು ತೇರ್ಗಡೆ. ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಪಡೆದು ತಮ್ಮ ಜೀವನವನ್ನು ಸುಮಾರ್ಗದಲ್ಲಿ ನಡೆಸುತ್ತಿದ್ದಾರೆ. ತಮ್ಮ ಎಲ್ಲ ಸಾಧನೆಗಳಿಗೆ ತಾವು ಕಲಿತ ಸಂಸ್ಥೆ ಮತ್ತು ಕಲಿಸಿದ ಶಿಕ್ಷಕರನ್ನು ಸದಾ ನೆನೆಯುತ್ತಾರೆ. ಇದರ ರೂವಾರಿಯಾದ ಸುಕುಮಾರ ಶೆಟ್ಟರನ್ನು ಸದಾ ಗೌರವಿಸುತ್ತಾರೆ.

ಸಂಸ್ಥೆಯಡಿಯಲ್ಲಿನ ಕಾಲೇಜುಗಳು
ಈ ಸಂಸ್ಥೆಯಲ್ಲಿ ನರ್ಸರಿಯಿಂದ ಹಿಡಿದು ಡಿಗ್ರಿಯವರೆಗೆ ಎಲ್ಲ ರೀತಿಯ ಅನುಕೂಲವಿದೆ. ಇನ್ನೂ ಕೆಲವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಇದೇ ಸಂಸ್ಥೆಯ ಶಾಲೆಯಲ್ಲಿ ಶುರುಮಾಡಿ, ಡಿಗ್ರಿಯವರೆಗೂ ಇಲ್ಲಿಯೇ ಕಲಿತ ಹಲವಾರು ಉದಾಹರಣೆಗಳಿವೆ. ಡಿಗ್ರೀ ಮುಗಿದು ಇದೇ ಶಾಲೆಯಲ್ಲಿ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸುತ್ತಿರುವವರೂ ಇದ್ದಾರೆ. ಈ ಸಂಸ್ಥೆಯಡಿಯಲ್ಲಿ ನಾಲ್ಕು ಶಾಲೆ ಕಾಲೇಜುಗಳಿವೆ. ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆ, ಆರ್.ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು.
ಕಾಲಕಾಲಕ್ಕೆ ಅಪ್‌ಡೇಟ್
ಈ ಸಂಸ್ಥೆಯಲ್ಲಿ ನಿರ್ವಹಿಸಲ್ಪಡುವ ಶಾಲೆ ಮತ್ತು ಕಾಲೇಜುಗಳು ಶಿಕ್ಷಣ ನೀಡುವುದರಲ್ಲಿ ಕಾಲಕಾಲಕ್ಕೆ ಅಪ್‌ಡೇಟ್ ಆಗುತ್ತಿದ್ದಾರೆ. ತಂತ್ರಜ್ಞಾನದ ಜತೆಯಲ್ಲೇ ಮಕ್ಕಳಿಗೆ ಬೋಧಿಸುವ ವ್ಯವಸ್ಥೆಯನ್ನು ಮಾಡಿದ್ದಾರೆ. ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಲ್ಯಾಬ್, ಉತ್ತಮ ಗ್ರಂಥಾಲಯಗಳು ಇವೆ. ಪಿಯು ಮಕ್ಕಳಿಗೆ ಪಠ್ಯದ ವಿಷಯದ ಜತೆಗೆ ಕೆ-ಸೆಟ್, ನೀಟ್ ಮತ್ತು ಜೆಇಇ ಪರೀಕ್ಷೆಗಳಿಗೆ ತಯಾರಿ ನೀಡುತ್ತಿದ್ದಾರೆ. ಕಾಮರ್ಸ್ ವಿದ್ಯಾರ್ಥಿಗಳಿಗೆ ಸಿಪಿಟಿ, ಬ್ಯಾಂಕಿಂಗ್‌ನಂಥ ಪರೀಕ್ಷೆಗಳಿಗೆ ಮಾರ್ಗದರ್ಶನ ಸಿಗುತ್ತಿದೆ. ಡಿಗ್ರೀಯಲ್ಲಿ B.Com. ನೊಂದಿಗೆ CA, CS, CMA, KAS, IAS ಮತ್ತು ಇನ್ನಿತರ UPSC ಪರೀಕ್ಷೆಗಳಿಗೆ ನುರಿತ ಪ್ರಾಧ್ಯಾಪಕರಿಂದ ನಿರಂತರ ತರಬೇತಿ ನೀಡಲಾಗುತ್ತಿದೆ. B.Com. ವಿದ್ಯಾರ್ಥಿಗಳಿಗೆ Data Science, Tally Prime, Staff Selection Commission ವಿಷಯವನ್ನು ಕೂಡ ಬೋಧಿಸಲಾಗುತ್ತಿದೆ. BBA ನೊಂದಿಗೆ Logistics and Supply Chain Management, PGCET, CAT, MAT ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತರಬೇತುಗೊಳಿಸಲಾಗುತ್ತಿದೆ. BCA ನೊಂದಿಗೆ Artificial Intelligence ಹಾಗೂ Cyber Security, Machine Learningನ್ನು ಕಲಿಸುತ್ತ, ಇಂದಿನ ಸ್ಪರ್ಧಾ ಪ್ರಪಂಚಕ್ಕೆ ವಿದ್ಯಾರ್ಥಿಗಳನ್ನು ಮೊದಲಿನಿಂದಲೇ ಸಜ್ಜು ಮಾಡುತ್ತಿದ್ದಾರೆ.