Friday, February 20, 2026
Friday, February 20, 2026

ಪಾಸ್ ಪೋರ್ಟ್ ನವೀಕರಣ ಅತಿ ಸುಲಭ

ಮೊದಲೆಲ್ಲ ಪಾಸ್​ಪೋರ್ಟ್ ನವೀಕರಿಸೋದು ಎಂದರೆ ದೊಡ್ಡ ಚಾಲೆಂಜ್ ಆಗಿತ್ತು. ಆದರೆ, ಈಗ ಆನ್​ಲೈನ್ ಮೂಲಕ ನೀವು ಹೊಸ ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸಬಹುದು. ಕೆಲವೊಮ್ಮೆ ಇದಕ್ಕೆ ಪೊಲೀಸ್ ವೆರಿಫಿಕೇಷನ್ ಕೂಡ ಬೇಕಾಗುತ್ತದೆ. ಹಾಗಾದರೆ ಪಾಸ್​ಪೋರ್ಟ್ ನವೀಕರಣಕ್ಕೆ ಏನು ಮಾಡಬೇಕು? ಯಾವೆಲ್ಲ ದಾಖಲೆ ಬೇಕು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

- ಸುಗಮ್ ಅರಸೀಕೆರೆ

ಒಂದು ದೇಶದಿಂದ ಮತ್ತೊಂದು ದೇಶಕ್ಕೆ ತೆರಳಬೇಕು ಎಂದರೆ ಪಾಸ್​ಪೋರ್ಟ್ ಬಹುಮುಖ್ಯ. ಹಾಗಂತ ಈ ಪಾಸ್​ಪೋರ್ಟ್​ಗಳಿಗೆ ವೋಟಿಂಗ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ರೀತಿ ಜೀವನ ಪರ್ಯಂತ ವ್ಯಾಲಿಡಿಟಿ ಇರೋದಿಲ್ಲ. 10 ವರ್ಷಗಳಿಗೆ ಪಾಸ್​ಪೋರ್ಟ್ ಎಕ್ಸ್​ಪೈರಿ ಆಗಿ ಬಿಡುತ್ತವೆ. ಆಗ ನೀವು ಬೇರೆ ಪಾಸ್​ಪೋರ್ಟ್ ತೆಗೆದುಕೊಳ್ಳಲೇಬೇಕು. ಇಷ್ಟೇ ಅಲ್ಲ, ಪಾಸ್​ಪೋರ್ಟ್ ಪೇಜ್​ಗಳು ಖಾಲಿ ಆದರೂ ನೀವು ಹೊಸ ಪಾಸ್​ಪೋರ್ಟ್ ಪಡೆಯಬೇಕು.

ಮೊದಲೆಲ್ಲ ಪಾಸ್​ಪೋರ್ಟ್ ನವೀಕರಿಸೋದು ಎಂದರೆ ದೊಡ್ಡ ಚಾಲೆಂಜ್ ಆಗಿತ್ತು. ಆದರೆ, ಈಗ ಆನ್​ಲೈನ್ ಮೂಲಕ ನೀವು ಹೊಸ ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸಬಹುದು. ಕೆಲವೊಮ್ಮೆ ಇದಕ್ಕೆ ಪೊಲೀಸ್ ವೆರಿಫಿಕೇಷನ್ ಕೂಡ ಬೇಕಾಗುತ್ತದೆ. ಹಾಗಾದರೆ ಪಾಸ್​ಪೋರ್ಟ್ ನವೀಕರಣಕ್ಕೆ ಏನು ಮಾಡಬೇಕು? ಯಾವೆಲ್ಲ ದಾಖಲೆ ಬೇಕು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಪಾಸ್​ಪೋರ್ಟ್ ರಿನೀವಲ್​ಗೆ ಈ ಕೆಳಕಂಡ ಮಾರ್ಗ ಅನುಸರಿಸಿ.

ಮೊದಲು ಅರ್ಜಿ ಸಲ್ಲಿಸಿ

New Project - 2026-02-20T183241.556

ಅಧಿಕೃತ ಪಾಸ್​ಪೋರ್ಟ್ ಸೇವಾ ಕೇಂದ್ರಕ್ಕೆ ಆನ್‌ಲೈನ್ ನಲ್ಲೇ ಭೇಟಿ ನೀಡಿ. ಒಂದೊಮ್ಮೆ ನೀವು ಹೊಸ ಬಳಕೆದಾರರಾಗಿದ್ದರೆ New User Registration ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಖಾತೆಯನ್ನು ಕ್ರಿಯೇಟ್ ಮಾಡಿಕೊಳ್ಳಬೇಕು. ಈಗಾಗಲೇ ನೀವು ಖಾತೆ ಹೊಂದಿದ್ದರೆ ಅದರ ಮೂಲಕ ಲಾಗಿನ್ ಆಗಬೇಕು.

ಪಾಸ್​ಪೋರ್ಟ್ ರಿನೀವಲ್ ಅಪ್ಲಿಕೇಷನ್ ವಿಭಾಗಕ್ಕೆ ತೆರಳಿ ‘ರೀ ಇಶ್ಯೂ ಆಫ್ ಪಾಸ್​ಪೋರ್ಟ್’ ಪೇಜ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಪಾಸ್​ಪೋರ್ಟ್ ರಿನೀವಲ್​ಗೆ ಕಾರಣ ನೀಡಬೇಕು. ಪಾಸ್​ಪೋರ್ಟ್ ದಿನಾಂಕ ಮುಗಿದಿದೆ, ಪೇಜ್ ಖಾಲಿ ಆಗಿದೆ ಅಥವಾ ನಿಮ್ಮ ಮಾಹಿತಿ ಬದಲಾಯಿಸುವ ಉದ್ದೇಶದಿಂದ ಹೊಸ ಪಾಸ್​ಪೋರ್ಟ್ ಪಡೆಯಬಹುದು. ಅಪ್ಲಿಕೇಶನ್ ಸಲ್ಲಿಕೆ ಮಾಡುವ ಮೊದಲು ನಿಮ್ಮ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ.

ನವೀಕರಣ ಶುಲ್ಕವಿದೆ!

ನೀವು ಪಾಸ್​ಪೋರ್ಟ್ ರಿನೀವಲ್​ಗೆ ಹಣವನ್ನು ಕೂಡ ಪಾವತಿಸಬೇಕು. ನೆಟ್ ಬ್ಯಾಂಕಿಂಗ್, ಕಾರ್ಡ್, ಯುಪಿಐ ಮೂಲಕ ಹಣ ಪಾವತಿಸಬಹುದಾಗಿದೆ. ಆ ಬಳಿಕ ನಿಮ್ಮ ಅಪಾಯಿಂಟ್​ಮೆಂಟ್ ಫಿಕ್ಸ್ ಮಾಡಿಕೊಳ್ಳಿ. ನಿಮಗೆ ಹೊಂದಿಕೆ ಆಗುವ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಿ. ಆ ನಂತರ ನಿಮ್ಮ ಅಪಾಯಿಂಟ್​ಮೆಂಟ್​ ಲೆಟರ್ ಅನ್ನು ಡೌನ್​ಲೋಡ್ ಮಾಡಿಟ್ಟುಕೊಳ್ಳಿ.

ನಂತರ ನಿಮ್ಮ ಪಾಸ್​ಪೋರ್ಟ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ. ಈ ವೇಳೆ ನಿಮ್ಮ ಒರಿಜಿನಲ್ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು. ಅಲ್ಲಿ ನಿಮ್ಮ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.

New Project - 2026-02-20T183312.969

ಪೊಲೀಸ್ ವೆರಿಫಿಕೇಶನ್

ನೀವು ಪಾಸ್​ಪೋರ್ಟ್ ರಿನೀವಲ್ ಮಾಡಿಸುವಾಗ ಎಲ್ಲಾ ಸಮಯದಲ್ಲೂ ಪೊಲೀಸ್ ವೆರಿಫಿಕೇಶನ್ ಬೇಕಾಗುವುದಿಲ್ಲ. ಆದರೆ, ನಿಮ್ಮ ಪಾಸ್​ಪೋರ್ಟ್ ಅವಧಿ ಪೂರ್ಣಗೊಂಡು ಮೂರು ವರ್ಷಗಳ ಮೇಲಾಗಿದ್ದರೆ ಅಥವಾ ನಿಮ್ಮ ಈಗಿನ ವಿಳಾಸ ಬದಲಾಗಿದ್ದರೆ ಪೊಲೀಸ್ ವೆರಿಫಿಕೇಶನ್​ ಅಗತ್ಯ ಇರುತ್ತದೆ. ಆಗ ಅವರು ನಿಮ್ಮ ಮನೆಗೆ ಭೇಟಿ ನೀಡಿ ವೆರಿಫಿಕೇಶನ್ ಮಾಡುತ್ತಾರೆ. ಆ ಬಳಿಕ ನಿಮ್ಮ ವಿಳಾಸಕ್ಕೆ ಪಾಸ್​ಪೋರ್ಟ್ ಬರಲಿದೆ.

ಯಾವೆಲ್ಲ ದಾಖಲೆ ಬೇಕು?

ಹಳೆಯ ಪಾಸ್​ಪೋರ್ಟ್ ಕಡ್ಡಾಯವಾಗಿ ಬೇಕೇ ಬೇಕು. ಮೊದಲ ಮತ್ತು ಕೊನೆಯ ಎರಡು ಪುಟಗಳ ಸ್ವಯಂ-ದೃಢೀಕರಿಸಿದ ಪ್ರತಿಗಳು. ವಿಳಾಸಕ್ಕೆ (ಆಧಾರ್ ಕಾರ್ಡ್, ವೋಟಿಂಗ್ ಐಡಿ, ವಾಟರ್ ಬಿಲ್ ಅಥವಾ ಫೋನ್ ಬಿಲ್) ಒಂದು ದಾಖಲೆ ಬೇಕು.

ನಿಮ್ಮ ಜನ್ಮ ದಿನಾಂಕ ಖಚಿತಪಡಿಸಲು ಬರ್ತ್​ ಸರ್ಟಿಫಿಕೇಟ್, ಪ್ಯಾನ್ ಕಾರ್ಡ್ ಅಥವಾ ಆಧಾರ ಕಾರ್ಡ್ ಬೇಕು.

ಬೆಲೆ ಎಷ್ಟು?

ಪಾಸ್​ಪೋರ್ಟ್ ರಿನೀವಲ್​ಗೆ 36 ಪೇಜ್​ನ ಪಾಸ್​​ಬುಕ್​ಗೆ 1500 ರೂಪಾಯಿ, 60 ಪೇಜ್​ಗಳ ಪಾಸ್​​ಬುಕ್​ಗೆ 2000 ರೂಪಾಯಿ ಹಣ ಪಾವತಿಸಬೇಕು. ತತ್ಕಾಲ್​ ಅಡಿಯಲ್ಲಿ ಹೊಸ ಪಾಸ್​ಪೋರ್ಟ್ ಪಡೆಯಲು 36 ಪೇಜ್​ಗಳ ಪಾಸ್​ಬುಕ್​ಗೆ 3500 ರೂಪಾಯಿ, 60 ಪೇಜ್​ಗಳ ಪಾಸ್​ಪೋರ್ಟ್​ಗೆ 4 ಸಾವಿರ ರೂಪಾಯಿ ಬೇಕು.

ಈ ತಪ್ಪು ಮಾಡದಿರಿ

ನಿಮ್ಮ ಅಪ್ಲಿಕೇಶನ್​ನಲ್ಲಿ ಹೆಸರು, ದಿನಾಂಕ ಹಾಗೂ ಅಡ್ರೆಸ್ ಬರೆಯುವಾಗ ತಪ್ಪು ಮಾಡದಿರಿ. ಡಾಕ್ಯುಮೆಂಟ್ ಮಿಸ್ ಮಾಡಬೇಡಿ. ಎಲ್ಲಾ ದಾಖಲೆಗಳು ಜೆರಾಕ್ಸ್ ಕೂಡ ನಿಮ್ಮ ಕೈಯಲ್ಲಿ ಇರಲಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!