Thursday, June 12, 2025
Thursday, June 12, 2025

ವಿಶ್ವದ ಅತ್ಯಂತ ಸ್ವಚ್ಛವಾದ 5 ನಗರಗಳಿವು..

ಮರುಬಳಕೆಯ ವಸ್ತುಗಳನ್ನೇ ಬಳಿಸುವಂತೆ ಕಾನೂನು ಜಾರಿ ಮಾಡಿರುವ ಟೋಕಿಯೊ ಸರ್ಕಾರ, ಚೂಯಿಂಗ್ ಗಮ್ ನಿಷೇಧಿಸಿರುವ ಸಿಂಗಾಪುರ ಗವರ್ನಮೆಂಟ್‌ ಇಂತಹ ಅನೇಕ ಶಿಸ್ತಿನ ಕ್ರಮಗಳಿಂದಾಗಿ ವಿಶ್ವದ ಈ ಪ್ರಮುಖ ದೇಶಗಳು ಇಂದಿಗೂ ʻಅತ್ಯಂತ ಸ್ವಚ್ಛ ನಗರಿʼ ಎಂಬ ಹಿರಿಮೆಗೆ ಪಾತ್ರವಾಗಿದೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯ ಕಾರಣದಿಂದಾಗಿ ನಗರಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಬಹು ಕಷ್ಟಕರ ಕೆಲಸವೆನ್ನಿಸಿಕೊಂಡಿದೆ. ಅತಿಯಾದ ಪ್ಲಾಸ್ಟಿಕ್‌ ಬಳಕೆಯಂತಹ ಅನೇಕ ಕಾರಣಗಳಿಂದಾಗಿ ನಗರಗಳು ಮಾಲಿನ್ಯಗಳ ಆಗರವಾಗಿಬಿಡುತ್ತವೆ. ಆದರೆ ದೇಶಗಳ ಗಡಿ ದಾಡಿ ವಿಶ್ವದಲ್ಲಿ ಅತ್ಯಂತ ಸ್ವಚ್ಛವಾಗಿರುವ ನಗರಗಳಿವೆ. ಇಲ್ಲಿ ಪ್ಲಾಸ್ಟಿಕ್‌ ಮಾತ್ರವೇ ಅಲ್ಲದೆ ತುಂಡು ಪೇಪರ್‌ ಸಹ ರಸ್ತೆಯಲ್ಲಿ ಅಲ್ಲೆಂದರಲ್ಲಿ ಬಿದ್ದುಕೊಂಡಿರುವುದು ಕಾಣುವುದಕ್ಕೂ ಸಿಗಲಾರದು. ಅಂದವಾದ ಹೊರಾಂಗಣ ಪ್ರದೇಶಗಳು, ಸ್ವಚ್ಛವಾದ ಬೀದಿಗಳು ಸ್ಥಳೀಯರ ಶಿಸ್ತಿನ ಜೀವನಕ್ಕೆ ಹಿಡಿದ ಕೈಗನ್ನಡಿಯಂತಿದ್ದು, ಪ್ರವಾಸಿಗರನ್ನೂ ಆಕರ್ಷಿಸುತ್ತಿದೆ.

ವಿಯೆನ್ನಾ, ಆಸ್ಟ್ರಿಯಾ

ಸಂಗೀತ ನಗರಿ ಎಂದು ಖ್ಯಾತವಾಗಿರುವ ಆಸ್ಟ್ರಿಯಾ ದೇಶದ ರಾಜಧಾನಿ ವಿಯೆನ್ನಾ ಸಿಂಫೋನಿಕ್ ಸಂಗೀತ ಮತ್ತು ಹಾಡುಗಳಿಂದ ಸಂದರ್ಶಕರನ್ನು ಆಕರ್ಷಿಸುತ್ತದೆ. ಆದರೆ ಅದಕ್ಕೂ ಹೆಚ್ಚಿಗೆ ಪ್ರವಾಸಿಗರನ್ನು ಸೆಳೆಯುವುದು ಸ್ಫಟಿಕ ಸ್ಪಷ್ಟ ಬೀದಿಗಳನ್ನು ಹೊಂದಿರುವ ಕಾರಣಕ್ಕಾಗಿ. 1.7 ದಶಲಕ್ಷ ಜನಸಂಖ್ಯೆ ಹೊಂದಿರುವ ಈ ನಗರಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದರೆ ಸ್ವಚ್ಛತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ, ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿರುವ ಕಾರಣದಿಂದಾಗಿ ವಿಯೆನ್ನಾ ಸ್ವಚ್ಛ ನಗರಿ ಎಂಬ ಬಿರುದು ಗಳಿಸಿದೆ.

ವಿಯೆನ್ನಾ, ಆಸ್ಟ್ರಿಯಾ

ಮಿನ್ಸ್ಕ್, ಬೆಲಾರುಸ್

ಪೂರ್ವ ಏಷ್ಯಾದ ಬೆಲಾರುಸ್‌ ದೇಶದ ರಾಜಧಾನಿ ಮಿನ್ಸ್ಕ್. ಇದು ಸ್ವಚ್ಛ ನಗರಗಳ ಪಟ್ಟಿಯನ್ನು ಸೇರಿಕೊಂಡಿದೆ. ಈ ನಗರವು ಸೋವಿಯತ್ ನಗರಗಳ ಪರಿಕಲ್ಪನೆಯ ಹಲವು ಅಂಶಗಳನ್ನು ಒಳಗೊಂಡಿದೆ. ಉದಾಹರಣೆಗೆ ಸ್ವಚ್ಛತೆ ಮತ್ತು ತೆರೆದ ಸ್ಥಳಗಳ ಶುಚಿತ್ವವನ್ನು ಕಾಪಾಡುವುದಾಗಿದೆ.. ನಗರದ ಮೆಟ್ರೋಗಳಾಗಲಿ, ಅಥವಾ ಯಾವುದೇ ಪ್ರವಾಸಿ ತಾಣಗಳೇ ಆಗಲಿ ಸ್ವಚ್ಛತೆಯಿಂದ ಕೂಡಿದ್ದು, ಎಲ್ಲರನ್ನೂ ತನ್ನತ್ತ ಸೆಳೆಯುತ್ತವೆ.

ಮಿನ್ಸ್ಕ್, ಬೆಲಾರುಸ್

ಸಿಂಗಾಪುರ, ಏಷ್ಯಾ

ಸಿಂಗಾಪುರದಲ್ಲಿ ಕೆಲವು ಕಟ್ಟುನಿಟ್ಟಾದ ಕಾನೂನುಗಳು ಜಾರಿಯಲ್ಲಿರುವುದರಿಂದಲೂ, ಪ್ರವಾಸಿಗರಿಗೆ ಸಿಂಗಾಪುರ್ ಸುರಕ್ಷಿತ ಸ್ಥಳ ಎಂದು ಭಾಸವಾಗುತ್ತದೆ. ಭಾರತೀಯರು ಹೆಚ್ಚಾಗಿ ವಿದೇಶ ಪ್ರವಾಸಕ್ಕೆ ಆಯ್ಕೆ ಮಾಡಿಕೊಳ್ಳುವುದು ಸಿಂಗಾಪುರ್.ಈ ಪ್ರಖ್ಯಾತ ತಾಣಕ್ಕೆ ಪ್ರಯಾಣಿಕರು ನಿರಂತರವಾಗಿ ಭೇಟಿ ನೀಡುವುದಕ್ಕೆ ಪ್ರಮುಖ ಕಾರಣ ಸ್ವಚ್ಛತೆ. ಸಿಂಗಾಪುರ್‌ ನಲ್ಲಿರುವಷ್ಟು ಶಿಸ್ತು ನೀವು ಬೇರೆಡೆ ನೋಡಲು ಸಾಧ್ಯವಿಲ್ಲ. ವಾಸ್ತವವಾಗಿ, ನಗರದ ಸ್ವಚ್ಛತೆ ನೋಡಿ ಪ್ರವಾಸಿಗರೇ ಬೆರಗಾಗಿದ್ದಾರೆ. ಅಂದಹಾಗೆ ಚೂಯಿಂಗ್ ಗಮ್ ಜಗಿಯುವುದು ಸಿಂಗಾಪುರ್ ನಲ್ಲಿ ಕಾನೂನು ಬಾಹಿರವಾಗಿದೆ. ಚೂಯಿಂಗ್ ಗಮ್ ಅನ್ನು ದೇಶಕ್ಕೆ ಆಮದು ಮಾಡಿಕೊಳ್ಳುವುದನ್ನೇ ನಿಷೇಧ ಮಾಡಲಾಗಿದೆ. ಆದ್ದರಿಂದ ನಿಮಗೆ ಸಿಂಗಾಪುರ್ ನಲ್ಲಿ ಚೂಯಿಂಗ್ ಗಮ್ ಅಗಿಯಲು ಅವಕಾಶವಿಲ್ಲ. ಸಿಂಗಾಪುರದ ಕಾನೂನಿನ ಪ್ರಕಾರ, ನೀವು ಒಂದು ವೇಳೆ ಚ್ಯೂಯಿಂಗ್ ಗಮ್ ಜಗಿದು ಬೀದಿಗಳಲ್ಲಿ ಉಗುಳಿದರೆ ಶಿಕ್ಷೆ ಗ್ಯಾರಂಟಿ

ಸಿಂಗಾಪುರ, ಏಷ್ಯಾ

ದುಬೈ, ಯುನೈಟೆಡ್ ಅರಬ್ ಎಮಿರೇಟ್ಸ್

ಯುನೈಟೆಡ್ ಅರಬ್ ಎಮಿರೇಟ್ಸ್ ನ ಏಳು ಎಮಿರೇಟ್ಸ್‌ ಗಳಲ್ಲಿ ಒಂದಾಗಿರುವ ದುಬೈ ಗಗನಚುಂಬಿ ಕಟ್ಟಡಗಳು, ವಿಶೇಷವಾದ ಪ್ರವಾಸಿ ತಾಣಗಳ ಮೂಲಕ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತವೆ. ಅಲ್ಲದೆ ಸ್ವಚ್ಛತೆಯೇ ಮೂಲ ಮಥ್ರವಾಗಿರುವ ದುಬೈನ ಸುಂದರವಾದ ರಸ್ತೆ, ಬೀದಿಗಳಂತೂ ಪ್ರವಾಸಿಗರಿಗೆ ಅಚ್ಚುಮೆಚ್ಚು.

ದುಬೈ, ಯುನೈಟೆಡ್ ಅರಬ್ ಎಮಿರೇಟ್ಸ್

ಟೋಕಿಯೊ, ಜಪಾನ್

ವಿಶ್ವದ ಅತಿದೊಡ್ಡ ಮಹಾನಗರ ಪ್ರದೇಶವಾದರೂ ಟೋಕಿಯೊ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಲ್ಲಿ ಮೇಲುಗೈ ಸಾಧಿಸಿದೆ. ಇಲ್ಲಿ ಎಲ್ಲೆಂದರಲ್ಲಿ ಕಸದ ಡಬ್ಬಗಳು ಕಾಣಸಿಗುವುದಿಲ್ಲ. ರಸ್ತೆ, ಬೀದಿಗಳಲ್ಲಿ ಕಸ ಕಾಣಸಿಗುವುದೇ ಇಲ್ಲ. ಕಸ ಹಾಕಲೆಂದೇ ಸಾರ್ವಜನಿಕ ಸ್ಥಳಗಳಲ್ಲಿ ಕೆಲವು ಕಡೆ ಮಾತ್ರ ಕಸದ ಡಬ್ಬಿಗಳಿದ್ದು, ಅದರ ಸದ್ಬಳಕೆ ಮಾಡಿಕೊಲ್ಳಬೇಕಿದೆ. ಮರುಬಳಕೆ ಮಾಡಿಕೊಳ್ಳಬಹುದಾದ ವಸ್ತುಗಳನ್ನೇ ಇಲ್ಲಿ ಉಪಯೋಗಿಸುವುದರಿಂದ ಕಸದ ಸಮಸ್ಯೆಯೇ ತಲೆದೋರುವುದಿಲ್ಲ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಮಕ್ಕಳ ಜೊತೆ ಬೆಂಗಳೂರಿನ ಈ ಸ್ಥಳಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ, ನೀವೂ ಮಕ್ಕಳೇ ಆಗಿಬಿಡುತ್ತೀರಿ..

Read Next

ಮಕ್ಕಳ ಜೊತೆ ಬೆಂಗಳೂರಿನ ಈ ಸ್ಥಳಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ, ನೀವೂ ಮಕ್ಕಳೇ ಆಗಿಬಿಡುತ್ತೀರಿ..