Thursday, June 12, 2025
Thursday, June 12, 2025

ಏಷ್ಯಾದ 10 ದೊಡ್ಡ ನಗರಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾ..?

ಭಾರತದ ರಾಜಧಾನಿಯಾಗಿರುವ ದೆಹಲಿಯು ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದುತ್ತಲಿದ್ದು, ಇಲ್ಲಿನ ಜನಸಂಖ್ಯೆಯ ಮಟ್ಟ ಏರಿಕೆಯಾಗುತ್ತಲೇ ಇದೆ. 2030 ರ ವೇಳೆಗೆ ದೆಹಲಿಯು ಟೋಕಿಯೊವನ್ನು ಮೀರಿಸಿ ವಿಶ್ವದ ಅತಿದೊಡ್ಡ ನಗರವಾಗಿ ಹೊರಹೊಮ್ಮಲಿದೆ ಎಂದು ಅಂದಾಜಿಸಲಾಗಿದೆ.

ಭೂಮಿಯ ಮೇಲೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಖಂಡವೆಂದು ಏಷ್ಯಾವನ್ನು ಗುರುತಿಸಲಾಗಿದೆ. 4.7 ಶತಕೋಟಿಗೂ ಹೆಚ್ಚು ಜನರಿಗೆ ನೆಲೆಯಾಗಿರುವ ಏಷ್ಯಾ ಖಂಡದಲ್ಲಿ ವಿಶ್ವದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ ಎಂದರೆ ನಂಬಲೇಬೇಕು. ಏಷ್ಯಾದ ಅತಿದೊಡ್ಡ ನಗರಗಳ ಪಟ್ಟಿಯಲ್ಲಿ ಟೋಕಿಯೊ 37.2 ಮಿಲಿಯನ್, ದೆಹಲಿ 33 ಮಿಲಿಯನ್ ಮತ್ತು ಶಾಂಘೈ 29 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವುದು ಗಮನಿಸಬೇಕಿರುವ ಅಂಶ.

ಟೋಕಿಯೊ - 37.2 ಮಿಲಿಯನ್

ಏಷ್ಯಾದಲ್ಲಿ ಮಾತ್ರವಲ್ಲದೆ ವಿಶ್ವದಲ್ಲೇ ಅತಿದೊಡ್ಡ ನಗರ ಟೋಕಿಯೊ. ಆದರೆ ಗಮನಿಸಬೇಕಿರುವ ಅಂಶವೆಂದರೆ 37.2 ಮಿಲಿಯನ್ ಜನಸಂಖ್ಯೆಯಿರುವ ಅತಿ ದೊಡ್ಡ ನಗರವಾದರೂ ಟೋಕಿಯೊ ಬಲು ಸ್ವಚ್ಛ, ಸುರಕ್ಷಿತ ನಗರಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಬಹುಬೇಡಿಯ ತಾಣವೆಂದು ಕರೆಸಿಕೊಂಡಿದೆ. ಜಪಾನ್ ದೇಶದ ಆರ್ಥಿಕ ಮತ್ತು ಸಾಂಸ್ಕೃತಿಕ ರಾಜಧಾನಿಯಾಗಿರುವ ಟೋಕಿಯೊ ನಗರಕ್ಕೆ ಉದ್ಯೋಗಗಳ ಅವಕಾಶಗಳು, ಗುಣಮಟ್ಟದ ಜೀವನಶೈಲಿಯನ್ನು ಅರಸುತ್ತ ಲಕ್ಷಾಂತರ ಜಪಾನಿಗರು ವಲಸೆ ಬಂದಿದ್ದಾರೆ.

Tokyo

ದೆಹಲಿ - 33 ಮಿಲಿಯನ್

ಭಾರತದ ರಾಜಧಾನಿಯಾಗಿರುವ ದೆಹಲಿಯು ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದುತ್ತಲಿದ್ದು, ಇಲ್ಲಿನ ಜನಸಂಖ್ಯೆಯ ಮಟ್ಟ ಏರಿಕೆಯಾಗುತ್ತಲೇ ಇದೆ. ದೆಹಲಿಯು ವ್ಯಾಪಾರ ಮತ್ತು ಸಾರಿಗೆಯ ನಿರ್ಣಾಯಕ ಕೇಂದ್ರವಾಗಿದ್ದು, ಭಾರತದ ಹಲವೆಡೆಯಿಂದ ಉದ್ಯೋಗ ಅವಕಾಶಗಳಿಗಾಗಿ ಇಲ್ಲಿಗೆ ಬಂದು ನೆಲೆಸಿರುವ ಮಂದಿ ದೆಹಲಿಯನ್ನೇ ಸೂರು ಕಟ್ಟಿಕೊಂಡುಬಿಟ್ಟಿದ್ದಾರೆ.

ಆದರೆ 2030 ರ ವೇಳೆಗೆ ದೆಹಲಿಯು ಟೋಕಿಯೊವನ್ನು ಮೀರಿಸಿ ವಿಶ್ವದ ಅತಿದೊಡ್ಡ ನಗರವಾಗಿ ಹೊರಹೊಮ್ಮಲಿದ್ದು, ಸುಮಾರು 39 ಮಿಲಿಯನ್ ಜನಸಂಖ್ಯೆಯನ್ನು ಹೊಂದಲಿದೆ ಎಂದು ಅಂದಾಜಿಸಲಾಗಿದೆ.

ಶಾಂಘೈ - 29 ಮಿಲಿಯನ್

ಚೀನಾ ದೇಶದ ಅತಿಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿರುವ ಶಾಂಘೈ, ವಿಶ್ವ ಮಟ್ಟದಲ್ಲೂ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿ ರೂಪುಗೊಂಡಿದೆ. 20ನೇ ಶತಮಾನದ ಅಂತ್ಯದಿಂದ ಶಾಂಘೈ ತ್ವರಿತ ಪರಿವರ್ತನೆಗೆ ಒಳಗಾಗಿದೆ. 1980 ರಲ್ಲಿ 5.9 ಮಿಲಿಯನ್‌ ಇದ್ದ ಜನಸಂಖ್ಯೆಯು ಇಂದು 28 ಮಿಲಿಯನ್ ಜನರಿಗೆ ಆಶ್ರಯ ತಾಣವಾಗಿದೆ.

ಢಾಕಾ - 23.2 ಮಿಲಿಯನ್

ಬಾಂಗ್ಲಾದೇಶದ ಅತಿದೊಡ್ಡ ನಗರ ಢಾಕಾ, ಅತಿ ವೇಗದಲ್ಲಿ ಅಭಿವೃದ್ಧಿ ಕಾಣುತ್ತಿರುವ ನಗರವಾಗಿದೆ. ಲಕ್ಷಾಂತರ ಬಂಗಾಳಿಗಳು ಉದ್ಯೋಗವನ್ನು ಅರಸಿ ಇಲ್ಲಿಗೆ ವಲಸೆ ಬಂದಿದ್ದು, ಕಳೆದ ದಶಕದಲ್ಲಿ ಈ ಒಳಹರಿವಿನಿಂದ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ನಗರದ ಮೂಲಸೌಕರ್ಯ ಮತ್ತು ಸಾಮಾಜಿಕ ಸೇವೆಗಳ ಮೇಲೆ ಬಹಳಷ್ಟು ಒತ್ತಡವನ್ನುಂಟು ಮಾಡಿದೆ. ಈ ನ್ಯೂನತೆಗಳ ಹೊರತಾಗಿಯೂ, ಢಾಕಾದ ಜನಸಂಖ್ಯೆಯು ಭವಿಷ್ಯದಲ್ಲಿ ನಿರೀಕ್ಷೆಗೂ ಮೀರಿ ವೇಗವಾಗಿ ಬೆಳೆಯುವ ಸಾಧ್ಯತೆಯಿದೆ.

ಬೀಜಿಂಗ್ - 21.8 ಮಿಲಿಯನ್

ಚೀನಾದ ರಾಜಧಾನಿ ಬೀಜಿಂಗ್ ಸಾವಿರಾರು ವರ್ಷಗಳಷ್ಟು ಹಳೆಯದಾದ ಪ್ರಾಚೀನ ಇತಿಹಾಸವನ್ನು ಹೊಂದಿದೆ. ಚೀನಾದ ಅನೇಕ ನಗರಗಳಂತೆ, 1970 ಮತ್ತು 1980ರ ದಶಕಗಳಲ್ಲಿ ಗ್ರಾಮೀಣ ಹಳ್ಳಿಗಳು ಮತ್ತು ಪಟ್ಟಣಗಳಿಂದ ಲಕ್ಷಾಂತರ ಜನರು ನಗರಕ್ಕೆ ವಲಸೆ ಬಂದ ಕಾರಣ ಬೀಜಿಂಗ್ ಗಣನೀಯ ಬೆಳವಣಿಗೆಯನ್ನು ಕಂಡಿತು. ಇಂದು ಬೀಜಿಂಗ್ ಚೀನಾದ ಆರ್ಥಿಕತೆಯ ಹೃದಯಭಾಗವಾಗಿದ್ದು, ಹೆಚ್ಚಿನ ಸಂಬಳ ನೀಡುವ ಪ್ರತಿಷ್ಠಿತ ಉದ್ಯೋಗಗಳನ್ನು ನೀಡುತ್ತದೆ. ವ್ಯಾಪಾರ ಕೇಂದ್ರವಾದ ನಗರದ ಬಂದರು ವಿಶ್ವದ ಅತ್ಯಂತ ಜನನಿಬಿಡ ಸ್ಥಳಗಳಲ್ಲಿ ಒಂದಾಗಿದೆ.

images

ಮುಂಬೈ - 21.3 ಮಿಲಿಯನ್

ಭಾರತದ ಮತ್ತೊಂದು ಐಕಾನಿಕ್ ನಗರವೆಂದರೆ ಮುಂಬೈ. ಇದು ದೇಶದ ಪಶ್ಚಿಮದಲ್ಲಿ ಕರಾವಳಿಯಲ್ಲಿದ್ದು, ಇದನ್ನು ಹಡಗು ಕೇಂದ್ರವನ್ನಾಗಿ ಮಾಡಿಲಾಗಿದೆ. ಮತ್ತು ಭಾರತದ ರಾಷ್ಟ್ರೀಯ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡಿರುವುದು ಮುಂಬಯ ನಗರ. ಕಿರಿದಾದ ಪರ್ಯಾಯ ದ್ವೀಪದಲ್ಲಿ ನೆಲೆಗೊಂಡಿರುವುದರಿಂದ, ಮುಂಬೈ ವಾಸ್ತವವಾಗಿ ವಿಶ್ವದ ಅತಿ ಹೆಚ್ಚು ಜನಸಂಖ್ಯಾ ಸಾಂದ್ರತೆಯನ್ನು ಹೊಂದಿದ್ದು ಪ್ರತಿ ಕಿ.ಮೀ.ಗೆ 21,000 ಜನರಿದ್ದಾರೆ..

ಒಸಾಕಾ - 19 ಮಿಲಿಯನ್

ಜಪಾನ್‌ನ ಎರಡನೇ ಅತಿದೊಡ್ಡ ನಗರ ಒಸಾಕಾ, ಜಪಾನಿನ ಆರ್ಥಿಕ ಕೇಂದ್ರವೂ ಆಗಿದೆ. ದೇಶದ ದಕ್ಷಿಣದಲ್ಲಿ ನೆಲೆಗೊಂಡಿರುವ ಒಸಾಕಾ, ಟೋಕಿಯೊದ ಹೊರಗೆ ಹೊಸ ತಾಣವನ್ನು ಹುಡುಕುತ್ತಿರುವ ಅನೇಕ ಅಂತರರಾಷ್ಟ್ರೀಯ ಪ್ರವಾಸಿಗರ ಗಮನ ಸೆಳೆಯುತ್ತಿದೆ.

ಚೋಂಗ್ಕಿಂಗ್ - 17.3 ಮಿಲಿಯನ್

ಚೀನಾದ ಅತಿದೊಡ್ಡ ನಗರಗಳಲ್ಲಿ ಚೋಂಗ್ಕಿಂಗ್ ಒಂದಾಗಿದ್ದು, ದೇಶದ ಕೈಗಾರಿಕಾ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಚೀನಾದ ಆಟೋಮೊಬೈಲ್ ವಲಯ, ಹಾಗೆಯೇ ಯಂತ್ರೋಪಕರಣಗಳು ಮತ್ತು ಎಲೆಕ್ಟ್ರಾನಿಕ್ಸ್ ಉದ್ಯಮಗಳು ಚಾಂಗ್ಕಿಂಗ್‌ನಲ್ಲಿ ನೆಲೆಕಂಡುಕೊಂಡಿವೆ. ಪ್ರವಾಸಿ ಕ್ಷೇತ್ರ ಅಷ್ಟಾಗಿ ಅಭಿವೃದ್ಧಿ ಹೊಂದಿಲ್ಲದ ಕಾರಣ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆ.

ಕರಾಚಿ - 17.2 ಮಿಲಿಯನ್

ಪಾಕಿಸ್ತಾನದ ಅತಿದೊಡ್ಡ ನಗರವಾದ ಕರಾಚಿ, ಭೂಮಿಯ ಮೇಲಿನ ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದು. ಪ್ರತಿ ಚದರ ಕಿಲೋಮೀಟರಿಗೆ ಸರಿಸುಮಾರು 24,000 ಜನರಿದ್ದಾರೆ. ಕರಾಚಿ ಪಾಕಿಸ್ತಾನದ ಆರ್ಥಿಕ ಮತ್ತು ವಾಣಿಜ್ಯ ರಾಜಧಾನಿಯಾಗಿದ್ದು, 1940 ರ ದಶಕದ ಮಧ್ಯಭಾಗದಲ್ಲಿ ಪಾಕಿಸ್ತಾನ ರಚನೆಯಾದಾಗಿನಿಂದ ಹಾಗೆಯೇ ಕಾರ್ಯನಿರ್ವಹಿಸುತ್ತಿದೆ.

karachi

ಕೋಲ್ಕತಾ - 15.5 ಮಿಲಿಯನ್

ಬ್ರಿಟಿಷ್ ಆಳ್ವಿಕೆಯ ಕಾಲದಿಂದಲೂ ಕಲ್ಕತ್ತಾ ಎಂದು ಕರೆಯಲ್ಪಡುತ್ತಿದ್ದ ಕೋಲ್ಕತಾ, ಬಾಂಗ್ಲಾದೇಶದ ಗಡಿಯ ಬಳಿ ಪೂರ್ವ ಭಾರತದಲ್ಲಿ ಕಂಡುಬರುತ್ತದೆ. ಕೋಲ್ಕತ್ತಾವನ್ನು ಅನೇಕರು ಭಾರತದ ಸಾಂಸ್ಕೃತಿಕ ರಾಜಧಾನಿ ಎಂದು ಪರಿಗಣಿಸುತ್ತಾರೆ ಮತ್ತು ವಿವಿಧ ಐತಿಹಾಸಿಕ ಹೆಗ್ಗುರುತುಗಳಿಗೆ ಇದು ನೆಲೆಯಾಗಿದೆ. ಕಳೆದ ಕೆಲವು ದಶಕಗಳಲ್ಲಿ ಕೋಲ್ಕತಾದ ಜನಸಂಖ್ಯೆಯು ಏರಿಕೆಯಾಗುತ್ತಲೇ ಇದ್ದು, ಉದ್ಯೋಗ ಹಾಗೂ ಜೀವನ ಶೈಲಿಯನ್ನು ಅರಸಿ ಇಲ್ಲಿಗೆ ಬರುವ ವಲಸಿಗರೂ ಇದಕ್ಕೆ ಮುಖ್ಯ ಕಾರಣವೆನ್ನಬುದು.

ಒಟ್ಟಿನಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಲೇ ಹೋದಂತೆ ಏಷ್ಯಾದ ಈ ಪ್ರಮುಖ ನಗರಗಳ ಜನಸಂಖ್ಯೆಯಲ್ಲೂ ಏರಿಕೆ ಕಾಣುತ್ತಲೇ ಇದೆ. ಅಲ್ಲದೆ ಮೂಲ ಸೌಕರ್ಯಗಳು ಸೇರಿ ಅನೇಕ ಸಮಸ್ಯೆಗಳ ಆಗರವಾಗುತ್ತಿರುವ ನಡುವೆಯೇ ಏಷ್ಯಾದ ಬಹು ದೊಡ್ಡ ನಗರಗಳು ಎಂದೂ ಜನಪ್ರಿಯವಾಗುತ್ತಲಿವೆ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಅಮೆರಿಕದ ಸಾರ್ವಜನಿಕ ಗ್ರಂಥಾಲಯದಲ್ಲಿ ಒಂದು ದಿನ

Read Previous

ಅಮೆರಿಕದ ಸಾರ್ವಜನಿಕ ಗ್ರಂಥಾಲಯದಲ್ಲಿ ಒಂದು ದಿನ

ಬಾಲಿಯಲ್ಲಿ ಪ್ರವಾಸಿಗರು ಮಾಡುವ ಈ ತಪ್ಪುಗಳಿಂದ ಸ್ಥಳೀಯರು  ಪ್ರತಿ ಬಾರಿಯೂ ಬೇಸರಗೊಳ್ಳುತ್ತಾರೆ..!

Read Next

ಬಾಲಿಯಲ್ಲಿ ಪ್ರವಾಸಿಗರು ಮಾಡುವ ಈ ತಪ್ಪುಗಳಿಂದ ಸ್ಥಳೀಯರು ಪ್ರತಿ ಬಾರಿಯೂ ಬೇಸರಗೊಳ್ಳುತ್ತಾರೆ..!