Thursday, June 12, 2025
Thursday, June 12, 2025

ಬರೀ ಬೀಚು, ಮಾಲ್ ಗಷ್ಟೇ ದುಬೈಗೆ ಹೋಗಬೇಕಿಲ್ಲ, ಇನ್ಮುಂದೆ ಇದೇ ಟ್ರೆಂಡಿಂಗ್...

ಕೋಲ್ಡ್‌ಪ್ಲೇ ಮುಂತಾದ ಜಾಗತಿಕ ಬ್ಯಾಂಡ್‌ಗಳು ಹಾಗೂ ಟೇಲರ್ ಸ್ವಿಫ್ಟ್‌ ಅಂತ ಅಂತಾರಾಷ್ಟ್ರೀಯ ಖ್ಯಾತ ಹಾಡುಗಾರ್ತಿಯವರ ಕಾನ್ಸರ್ಟ್ ಗಳಿಗೆಂದೇ ಹಲವಾರು ಅಭಿಮಾನಿಗಳು ದುಬೈ ಪ್ರವಾಸಮಾಡಿದ್ದರು.

ಯುಎಇ (UAE) ಈಗ ಬರೀ ಮಾಲ್‌ಗಳು (Mall) ಅಥವಾ ಬೀಚ್‌ಗಳಿಗೆ (Beach) ಹೆಸರುವಾಸಿಯಾದ ದೇಶವಲ್ಲ. ಬದಲಿಗೆ ಇತ್ತೀಚಿನ ಪ್ರವಾಸೋದ್ಯಮ ಬೆಳವಣಿಗೆಗಳಿಗೆ ಕಾರಣವಾಗುತ್ತಿರುವುದು – ಮ್ಯೂಸಿಕ್ ಕಾನ್ಸರ್ಟ್ ಗಳು (Music Concerts) ಹಾಗೂ ಜಾಗತಿಕ ಕ್ರೀಡಾ ಇವೆಂಟ್‌ಗಳು. (International Sports Events)

ಈ ಮಾಹಿತಿ ದುಬೈನಲ್ಲಿ (Dubai) ನಡೆಯುತ್ತಿರುವ ವಾರ್ಷಿಕ ಅರೇಬಿಯನ್ ಟ್ರಾವೆಲ್ ಮಾರ್ಕೆಟ್ ಕಾರ್ಯಕ್ರಮದಲ್ಲಿ ಬಹಿರಂಗವಾಯಿತು. ಡಿ‌ನಾಟಾ ಟ್ರಾವೆಲ್ ಗ್ರೂಪ್‌ನ ಸಿಇಒ ಜಾನ್ ಬೆವನ್ ಅವರ ಪ್ರಕಾರ, ಸಂಗೀತ ಕಾರ್ಯಕ್ರಮಗಳು ಇತ್ತೀಚಿನ ದಿನಗಳಲ್ಲಿ ಪ್ರವಾಸಕ್ಕೆ ಪ್ರಮುಖ ಕಾರಣವಾಗುತ್ತಿವೆ.

ಈ ಪ್ರದೇಶಕ್ಕೆ ಕೋಲ್ಡ್‌ಪ್ಲೇ ಮುಂತಾದ ಜಾಗತಿಕ ಬ್ಯಾಂಡ್‌ಗಳು ಹಾಗೂ ಟೇಲರ್ ಸ್ವಿಫ್ಟ್‌ ಅಂತ ಅಂತಾರಾಷ್ಟ್ರೀಯ ಖ್ಯಾತ ಹಾಡುಗಾರ್ತಿಯವರ ಕಾನ್ಸರ್ಟ್ ಗಳಿಗೆಂದೇ ಹಲವಾರು ಅಭಿಮಾನಿಗಳು ದುಬೈ ಪ್ರವಾಸಮಾಡಿದ್ದರು. ಇದನ್ನೆಲ್ಲಾ ಗಮನಿಸುತ್ತಿದ್ದರೆ ಮ್ಯೂಸಿಕಲ್ ಕಾನ್ಸರ್ಟ್ ಗಳು ಪ್ರವಾಸೋದ್ಯಮವನ್ನು ಬೆಳೆಸುವಲ್ಲಿ ತಮ್ಮದೇ ಆದ ಛಾಪನ್ನು ಮುಡಿಸುತ್ತಿವೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಅಬುಧಾಬಿಯಲ್ಲಿ ನಡೆಯುವ ಫಾರ್ಮುಲಾ 1 ರೇಸ್ ಕೂಡಾ ವೀಕ್ಷಕರನ್ನು ಸೆಳೆಯುತ್ತಿದೆ. "ಇವುಗಳಿಂದ ಪ್ರವಾಸವು ಕೇವಲ ವೀಕ್ಷಣೆಗೆ ಸೀಮಿತವಲ್ಲ, ಒಂದು ಆನಂದದ ಅನುಭವವನ್ನಾಗಿ ಪರಿವರ್ತನೆಗೊಂಡಿದೆ," ಎಂದು ಬೆವನ್ ಹೇಳಿದರು.

ಈ ಮಟ್ಟದ ಈವೆಂಟ್‌ಗಳಿಗೆ ಕಾರಣವಾಗುವ ಅಧಿಕ ದಟ್ಟತೆ ಏರ್ಪಡಿಸುತ್ತಿರುವ ಚಿಂತನೆಗಳ ನಡುವೆಯೂ, ಯುಎಇ ಈ ಬೃಹತ್ ಬೇಡಿಕೆಗೆ ತಕ್ಕಂತೆ ಮೂಲಸೌಕರ್ಯವನ್ನು ನಿರ್ಮಿಸುವಲ್ಲಿ ಗಮನಹರಿಸಿದೆ. ದುಬೈ ಮತ್ತು ಅಬುಧಾಬಿಯ ನಡುವೆ ಸುಲಭ ಸಂಪರ್ಕವಿದೆ, ಆದರೆ ರೈಲು ವ್ಯವಸ್ಥೆ ಇನ್ನೂ ಸರಿಯಾಗಿಲ್ಲ.

ಮತ್ತೊಂದೆಡೆ, ವಿಶೇಷ ರೈಲು ಸೇವೆಗಳು ಮತ್ತಷ್ಟು ಜನಪ್ರಿಯವಾಗುತ್ತಿವೆ. ‘ಸ್ಲೋ ಟ್ರಾವೆಲ್’ ಎಂದರೆ, ವೇಗವಿಲ್ಲದ ಆದರೆ ತೃಪ್ತಿದಾಯಕ ಪ್ರಯಾಣ – ಇದನ್ನು ಮಿಲೇನಿಯಲ್‌ಗಳು ಮತ್ತು ಜೆನ್ ಎಕ್ಸ್ ತಲೆಮಾರಿಗೆ ಹೆಚ್ಚು ಮೆಚ್ಚುಗೆ. ಪ್ರವಾಸದಲ್ಲಿ ಸಂಸ್ಕೃತಿಯೊಳಗಿನ ಅನುಭವ, ಆರೋಗ್ಯಪೂರ್ಣ ವಿಶ್ರಾಂತಿ ಹಾಗೂ ಕೆಲಸ ಮತ್ತು ವಿಶ್ರಾಂತಿಯ ಸಮತೋಲನವೇ ಅವರ ಧ್ಯೇಯ.

Vinay Khan

Vinay Khan

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಗಡಿನಾಡು ಕಾಸರಗೋಡಿನ ನಯನಮನೋಹರ ಪ್ರವಾಸಿ ತಾಣಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ...

Read Next

ಗಡಿನಾಡು ಕಾಸರಗೋಡಿನ ನಯನಮನೋಹರ ಪ್ರವಾಸಿ ತಾಣಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ...