Thursday, April 9, 2026
Thursday, April 9, 2026

ವೈಲ್ಡ್‌ ವ್ಯಾಲಿ ಮೌಂಟೆನ್‌ ಬೇರ್‌

ಇನ್ನೇನು ಕೆಲವೇ ದಿನಗಳಲ್ಲಿ ಮಕ್ಕಳಿಗೆ ಬೇಸಗೆ ರಜೆ ಶುರುವಾಗುತ್ತಿದೆ. ಬೆಂಗಳೂರಿನ ಆಸುಪಾಸಿನಲ್ಲೇ ಸುಂದರವಾದ ರೆಸಾರ್ಟ್‌ ವಾತಾವರಣದಲ್ಲಿ ಮಕ್ಕಳೊಂದಿಗೆ ಒಂದೆರಡು ದಿನಗಳ ಕಾಲ ಕಳೆಯಬೇಕು ಅಂದುಕೊಳ್ಳುವ ಪೋಷಕರೇ ನಮ್ಮ ನಡುವೆ ಹೆಚ್ಚು. ಆದರೆ ಕಿಡ್ಸ್‌ ಫ್ರೆಂಡ್ಲೀ ಎನಿಸುವ ರೆಸಾರ್ಟ್‌ ಯಾವುದಿದೆ ? ಹೆತ್ತವರ ಜತೆಗೆ ಮಕ್ಕಳು ಎಂಜಾಯ್‌ ಮಾಡಬಹುದಾದಂಥ ರೆಸಾರ್ಟ್‌ ಹುಡುಕುವವರು ನೀವಾದರೆ ನಿಮ್ಮ ಬಕೆಟ್‌ ಲಿಸ್ಟ್‌ನಲ್ಲಿ ವೈಲ್ಡ್‌ ವ್ಯಾಲಿ ಮೌಂಟೆನ್‌ ಬೇರ್‌ ಅನ್ನು ಸೇರಿಸಿಕೊಳ್ಳಿ.

ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮರುನಾಮಕರಣಗೊಂಡಿರುವ ರಾಮನಗರವು ʻರೇಷ್ಮೆ ನಾಡುʼ ಅಂತಲೇ ಪ್ರಸಿದ್ಧಿ ಪಡಿದಿದೆ. ಸುತ್ತಲೂ ಹರಡಿಕೊಂಡಿರುವ ಸಾವನದುರ್ಗ, ರಾಮನಗರ ಬೆಟ್ಟ, ಕರಡಿ ಬೆಟ್ಟ, ರೇವಣ ಸಿದ್ದೇಶ್ವರ ಬೆಟ್ಟಗಳಂತೂ ಚಾರಣಕ್ಕೆ ಹೆಸರುವಾಸಿಯಾಗಿದೆ. ಆದರೆ ಬಂಡೆಗಳ ನಾಡಾದರೂ ರಾಮನಗರದಲ್ಲಿ ಬೇಸಗೆಯಲ್ಲೂ ತಣ್ಣನೆಯ ವಾತಾವರಣವನ್ನು ನೀಡುವ ಅನೇಕ ಪರಿಸರವಿದೆ. ಇಲ್ಲಿರುವ ಆಯ್ದ ಕೆಲವು ರೆಸಾರ್ಟ್‌ಗಳಂತೂ ಬಿಸಿಲ ಬೇಗೆಗೆ ಕೂಲ್‌ ಕೂಲ್‌ ವಾತಾವರಣವನ್ನು ಕಲ್ಪಿಸುತ್ತದೆಯೆಂದರೆ ನಂಬಲೇಬೇಕು.

ರಾಮನಗರದಿಂದ ಕೂಗಳತೆಯ ದೂರದಲ್ಲಿರುವ ವೈಲ್ಡ್‌ ವ್ಯಾಲಿ ಮೌಂಟೆನ್ ಬೇರ್‌ ಗ್ರಾಹಕರ ಬೇಡಿಕೆಗೆ ತಕ್ಕಂತೆ ನಿರ್ಮಾಣವಾಗಿರುವ ವಿಶೇಷ ರೆಸಾರ್ಟ್.‌ ಮೊದಲ ನೋಟಕ್ಕೆ ಹಳ್ಳಿಯ ಮನೆಗಳ ಅನುಭವ ನೀಡುವ ಈ ರೆಸಾರ್ಟ್‌ನಲ್ಲಿ ಅತಿಥಿಗಳಿಗಾಗಿ ರುಚಿಕರ ಆಹಾರ ಹಾಗೂ ವಿಹಾರಕ್ಕೂ ಅವಕಾಶವನ್ನು ಕಲ್ಪಿಸಲಾಗಿದೆ.

ನಾಲ್ಕು ರೂಮುಗಳಿರುವ ಬೃಹತ್‌ ಪ್ರೈವೆಟ್‌ ವಿಲ್ಲಾ ಇದಾಗಿದ್ದು, ಟೆಂಟ್‌ ಹೌಸ್‌ಗಳಿಗೂ ಇಲ್ಲಿ ಅವಕಾಶವಿದೆ. ಊರಿನ ವಾತಾವರಣದಂತೆ ಎಲ್ಲೆಡೆ ಹಸಿರಿನ ಸಿರಿ, ಹಕ್ಕಿಗಳ ಕಲರವಕ್ಕೆ ಮನಸೋಲದವರೇ ಇಲ್ಲ.

ರೆಸಾರ್ಟ್‌ಗೆ ಹೆಸರಿನ ಹಿಂದಿದೆ ಹೀಗೊಂದು ಕತೆ

ಈ ರೆಸಾರ್ಟ್‌ಗೆ ವೈಲ್ಡ್‌ ವ್ಯಾಲಿ ಮೌಂಟೆನ್ ಬೇರ್‌ ಎಂದು ಹೆಸರು ಬರುವುದಕ್ಕೂ ಒಂದು ಕಾರಣವಿದೆ. ಮೊದಲು ಬರಿಯ ತೋಟದ ಮನೆಯಾಗಿದ್ದ ಜಾಗದಲ್ಲಿ ಹತ್ತಿರದಲ್ಲೇ ಇದ್ದ ಕರಡಿ ಬೆಟ್ಟದಿಂದ ಸಾಕಷ್ಟು ಕರಡಿಗಳು ಬರುತ್ತಿದ್ದವಂತೆ. ಈ ಪ್ರದೇಶ ಅಭಿವೃದ್ಧಿ ಕಾಣುತ್ತಲೇ ಕರಡಿಗಳು ಕಾಡಿನೊಳಗೇ ಉಳಿದುಕೊಳ್ಳಲು ಪ್ರಾರಂಭಿಸಿದ್ದವು. ಈ ಕಾರಣದಿಂದ ತೋಟದ ಮನೆ ರೆಸಾರ್ಟ್‌ ಆಗಿ ಹೊಸ ರೂಪ ಪಡೆದನಂತರ ಇದಕ್ಕೆ ವೈಲ್ಡ್‌ ವ್ಯಾಲಿ ಮೌಂಟೆನ್ ಬೇರ್‌ ಎಂದು ಮರುನಾಮಕರಣ ಮಾಡಲಾಗಿದೆ.

New Project (3)

ಇಂಡೋರ್‌ -ಔಟ್‌ಡೋರ್‌ ಗೇಮ್ಸ್‌

ರೆಸಾರ್ಟ್‌ ಅಂದಮೇಲೆ ಅಡ್ವೆಂಚರಸ್‌ ಗೇಮ್ಸ್‌ ಇಲ್ಲವಾದರೆ ಹೇಗೆ ? ಗ್ರಾಹಕರ ಆಯ್ಕೆಯಂತೆ ಆಯ್ದ 10-12 ಅಡ್ವೆಂಚರಸ್‌ ಗೇಮ್ಸ್‌ ಇಲ್ಲಿದ್ದು, ಎಲ್ಲವನ್ನೂ ಉಚಿತವಾಗಿಯೇ ಬಳಕೆ ಮಾಡಿಕೊಳ್ಳಬಹುದು. ಇಂಡೋರ್‌ ಗೇಮ್ಸ್‌ ಪೈಕಿ ಟೇಬಲ್‌ ಟೆನಿಸ್‌, ಕ್ಯಾರಂ ಬೋರ್ಡ್‌, ಚೆಸ್‌, ಜಂಗಾ ಬಾಕ್ಸ್‌ ಹೀಗೆ ಅನೇಕ ಅವಕಾಶವಿದೆ. ರೋಪ್‌ ಆಕ್ಟಿವಿಟೀಸ್‌, ಜಿಪ್‌ ಲೈನ್‌ ಮಾತ್ರವಲ್ಲದೆ ಮಕ್ಕಳಿಗಾಗಿಯೇ ವಿಶೇಷ ಪ್ಲೇ ಏರಿಯಾ ಹೀಗೆ ಹಲವು ಫನ್‌ ಆಕ್ಟಿವಿಟಿಗಳಿಗೆ ನೀವು ಸಾಕ್ಷಿಯಾಗಬಹುದು.

ಗ್ರಾಹಕ ಪ್ರೈವೆಟ್‌ ಟೈಂಗೆ ಹೆಚ್ಚಿನ ಮಹತ್ವ ನೀಡುವ ಇಲ್ಲಿನ ಸಿಬ್ಬಂದಿ ಬಾಲ್ಕನಿ ಸೈಡ್‌ ರೂಂಗಳಲ್ಲಿ ಬೇಡಿಕೆಗನುಸಾರವಾಗಿ ಪ್ರತ್ಯೇಕವಾದ ನೇಚರ್‌ ವ್ಯೂ ವಾತಾವರಣವನ್ನು ನಿರ್ಮಿಸಿಕೊಡುತ್ತಾರೆ. ಇನ್ನು ರಾತ್ರಿ ವೇಳೆಗೆ ಕ್ಯಾಂಡಲ್‌ ಲೈಟ್‌ ಡಿನ್ನೆರ್‌ ಬೇಕೆನ್ನುವವರು ಮುಂಚಿತವಾಗಿ ತಿಳಿಸಿದರೆ, ಹೆಚ್ಚುವರಿ ಶುಲ್ಕವನ್ನು ಕೇಳದೆಯೇ ಪೂಲ್‌ ಸೈಡ್‌ನಲ್ಲಿ ಕಲರ್‌ವಫುಲ್‌ ಕ್ಯಾಂಡಲ್‌ ಲೈಟ್‌ ಡಿನ್ನರ್‌ಗೆ ವೇದಿಕೆಯನ್ನು ಸಜ್ಜುಗೊಳಿಸುತ್ತಾರೆ.

ಕಾಡು ನೋಡಲು ಹೋದವರು ಕವಿತೆಯೊಡನೆ ಬರದಿದ್ದರೆ?..

ಕಾಡು, ಬೆಟ್ಟ -ಗುಡ್ಡಗಳ ನಡುವಿನ ರೆಸಾರ್ಟ್‌ ಎಂದಮೇಲೆ ಟ್ರೆಕಿಂಗ್‌ ಇಲ್ಲವಾದರೆ ಹೇಗೆ. ನೀವು ಟ್ರೆಕಿಂಗ್‌ ಪ್ರಿಯರಾಗಿದ್ದರೆ ಮುಂಜಾನೆಯೇ ಪಕ್ಕದಲ್ಲಿರುವ ಎಸ್‌ ಆರ್‌ ಎಸ್‌ ಬೆಟ್ಟ ಅಥವಾ ಕರಡಿ ಬೆಟ್ಟಕ್ಕೆ ಸಿಬ್ಬಂದಿ ಜತೆಗೆ ನಿಮ್ಮನ್ನು ಚಾರಣಕ್ಕೆ ಕರೆದೊಯ್ಯುತ್ತಾರೆ. ಅಲ್ಲೇ ಸಮೀಪದಲ್ಲಿ ಕಯಾಕಿಂಗ್‌ ವ್ಯವಸ್ಥೆಯೂ ಇದ್ದು ಅದರ ಅನುಭವವನ್ನೂ ಮಿಸ್‌ ಮಾಡಿಕೊಳ್ಳಬೇಡಿ.

ಒಟ್ಟಿನಲ್ಲಿ ಬೆಂಗಳೂರಿನಿಂದ ಸುಮಾರು 50-60 ಕಿಮೀ. ದೂರದಲ್ಲೇ ಇರುವ ರಾಮನಗರದ ವೈಲ್ಡ್‌ ವ್ಯಾಲಿ ಮೌಂಟೆನ್ ಬೇರ್‌ ರೆಸಾರ್ಟ್‌ ಏಕಕಾಲಕ್ಕೆ ರೆಸಾರ್ಟ್‌, ರೆಸ್ಟೋರೆಂಟ್‌, ಫನ್‌ ಗೇಮ್ಸ್‌, ಟ್ರೆಕಿಂಗ್‌, ಕಯಾಕಿಂಗ್‌, ನೇಚರ್‌ ರೌಂಡ್ಸ್‌ ಹೀಗೆ ಎಲ್ಲದರ ಅನುಭವವನ್ನೂ ಗ್ರಾಹಕರಿಗೆ ನೀಡುವ ಮೂಲಕ ರಾಮನಗರದ ಬೆಸ್ಟ್‌ ರೆಸಾರ್ಟ್‌ ಎನಿಸಿಕೊಂಡಿದೆ.

New Project (1)

ಮೆನು ನೋಡಲು ಮರೆಯದಿರಿ

ಬ್ರೇಕ್‌ ಫಾಸ್ಟ್‌ 9-10.30

ವೆಜ್‌ ಹಾಗೂ ನಾನ್‌ ವೆಜ್‌ ಲಂಚ್‌ 1-2

ಹೈ ಟೀ 5-6

ಪೂಲ್‌ ಟೈಮ್‌ ಬೆಳಗ್ಗೆ 9ರಿಂದ ಸಂಜೆ 6 ಗಂಟೆ

ರೈನ್‌ ಡ್ಯಾನ್‌ ಸಂಜೆ 4ರಿಂದ 5 ಗಂಟೆ

ಗೇಮ್ಸ್‌ ಬೆಳಗ್ಗೆ 9ರಿಂದ ಸಂಜೆ 6 ಗಂಟೆ

New Project (4)

ಬೇರೆ ರೆಸಾರ್ಟ್‌ಗಳಿಗಿಂತ ಹೇಗೆ ಭಿನ್ನ

- ಬೇರೆ ರೆಸಾರ್ಟ್‌ಗಳಲ್ಲಿ ಅಡ್ವೆಂಚರ್‌ ಗೇಮ್ಸ್‌ ಹಾಗೂ ಜಿಪ್‌ ಲೈನ್‌ ಏರುವುದಕ್ಕೂ ಕೂಪನ್‌ ಕೊಂಡುಕೊಳ್ಳಬೇಕು. ಅದೂ ಸೀಮಿತ ಅವಕಾಶವಿರುತ್ತದೆ. ಆದರೆ ವೈಲ್ಡ್‌ ವ್ಯಾಲಿ ಮೌಂಟೆನ್ ಬೇರ್‌ ನಲ್ಲಿ ಅಡ್ವೆಂಚರ್‌ ಗೇಮ್ಸ್‌ ಸಂಪೂರ್ಣ ಉಚಿತವಾಗಿರುತ್ತದೆ. ಪ್ಯಾಕೇಜ್‌ ನಲ್ಲೇ ಎಲ್ಲವೂ ಸೇರಿರುವುದರಿಂದ ಎಷ್ಟು ಬಾರಿ ಬೇಕಿದ್ದರೂ ಈ ಚಟುವಟಿಕೆಗಳನ್ನು ಪುನರಾವರ್ತಿಸಬಹುದು.

- ರೆಸಾರ್ಟ್‌ಗಳಲ್ಲಿ ಕೊಡುವ ಮೊತ್ತಕ್ಕೆ ಶುಚಿ ರುಚಿಯಾದ ಆಹಾರ ಸಿಗುವುದು ಕಷ್ಟ. ಆದರೆ ಇಲ್ಲಿ 20ಕ್ಕೂ ಹೆಚ್ಚು ಅನ್‌ ಲಿಮಿಟೆಡ್‌ ಆಹಾರ ಪದಾರ್ಥಗಳಿದ್ದುಆಯ್ಕೆ ನಿಮಗೆ ಬಿಟ್ಟಿದ್ದು.

- ಕ್ಯಾಂಡಲ್‌ ಲೈಟ್‌ ಡಿನ್ನರ್‌ ಗೆ ಹೆಚ್ಚುವರಿ ಮೊತ್ತವನ್ನು ಭರಿಸಬೇಕಾಗುತ್ತದೆ. ಆದರೆ ಇಲ್ಲಿ ಉಚಿತವಾಗಿಯೇ ಕ್ಯಾಂಡಲ್‌ ಲೈಟ್‌ ಡಿನ್ನರ್‌ ಅವಕಾಶ ನಿಮ್ಮದಾಗುತ್ತದೆ.

- ಟ್ರೆಕಿಂಗ್‌ ಸ್ಥಳಗಳ ಸಮೀಪವಿರುವ ಕೆಲವು ರೆಸಾರ್ಟ್‌ಗಳಲ್ಲಿ ಟ್ರೆಕಿಂಗ್ ಫ್ರೀ ಎಂಬ ಹೆಸರಲ್ಲಿ ಚಾರಣಕ್ಕೆ ಅವಕಾಶ ನೀಡುತ್ತಾರೆ. ಆದರೆ ಇಲ್ಲಿ ಟ್ರೆಕಿಂಗ್ ಜತೆಗೆ ಕೇವ್‌ ಎಕ್ಸ್‌ಪ್ಲೋರೇಷನ್‌ ಹಾಗೂ ಬರ್ಡ್‌ ವಾಚಿಂಗ್‌ ಹಾಗೂ ನೇಚರ್‌ ರೌಂಡ್ಸ್‌ ಗೂ ಉಚಿತ ಅವಕಾಶವನ್ನು ಕಲ್ಪಿಸಲಾಗಿದೆ. ‌

ಬುಕಿಂಗ್‌ಗಾಗಿ:

ವೈಲ್ಡ್ ವ್ಯಾಲಿ ಮೌಂಟೇನ್ ಬೇರ್, ಸಿರ್ಸ್ ಹಿಲ್ಸ್ ಹತ್ತಿರ, ಎಸ್.ಆರ್.ಎಸ್. ಬೆಟ್ಟ, ರಾಮನಗರ, ಕರ್ನಾಟಕ 562138

ಮೊ: 7551155113

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ