ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಜೆನ್‌-Zee ಗಳು ಆಲ್ಕೋಹಾಲ್‌ ಕುಡಿಯುವುದನ್ನು ಕಡಿಮೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಹೊರಬಿತ್ತು. ಅದು ನಿಜವೂ ಹೌದು. ಈಗಿನ ಯುವಕರು ಚಟಗಳನ್ನು ಅಂಟಿಸಿಕೊಳ್ಳುವ ಬದಲು ತಮ್ಮ ಆರೋಗ್ಯದ ಮೇಲೆ ಜಾಸ್ತಿ ಗಮನ ವಹಿಸುತ್ತಾರೆ. ಡಿ ಟಾಕ್ಸಿಫಿಕೇಷನ್‌, ಧ್ಯಾನ, ಯೋಗ, ಜಿಮ್‌, ಸ್ಪಾ, ಆಯುರ್ವೇದ, ಹೀಲಿಂಗ್‌ಗಳ ಮೇಲೆ ಗಮನ ಜಾಸ್ತಿ ನೀಡುತ್ತಾರೆ. ಕುಡಿತದಂಥ ಕೆಟ್ಟ ಚಟಗಳಿಂದ ಸ್ವಲ್ಪ ದೂರವಿರಲು ಪ್ರಯತ್ನಿಸುತ್ತಾರೆ. ಕುಡಿದರೂ ಸ್ವಲ್ಪವೇ ಕುಡಿಯುತ್ತಾರೆ. ಮೊದಲೆಲ್ಲ ಪ್ರವಾಸಕ್ಕೆ ಹೋದರೆ, ಕುಡಿದು ಮಜಾ ಮಾಡಬೇಕು, ಡ್ಯಾನ್ಸ್‌ ಮಾಡಬೇಕು, ಓಡಾಡಬೇಕು ಅಂತಿದ್ದ ಪೀಳಿಗೆ, ಈಗ ಪ್ರವಾಸದಲ್ಲಿ ಶಾಂತಿ ಬೇಕು, ನೈಸರ್ಗಿಕ ವಾತಾವರಣ ಬೇಕು ಎಂದು ಕೇಳಲು ಶುರು ಮಾಡಿದ್ದಾರೆ. ಅಂಥವರ ಬಯಕೆಗಳನ್ನು ಪೂರೈಸಲೆಂದೇ ಆ ರೀತಿಯ ರೆಸಾರ್ಟ್‌ಗಳು, ಆಯುರ್ವೇದದ ಸಂಸ್ಥೆಗಳು, ನೈಸರ್ಗಿಕ ಕ್ಲಿನಿಕ್‌ಗಳು ತಲೆ ಎತ್ತುತ್ತಿವೆ.

ಇದನ್ನೂ ಓದಿ: ಕಿಷ್ಕಿಂದಾದಲ್ಲಿ ಇದ್ದಷ್ಟು ಹೊತ್ತೂ ದಿಲ್‌ ಖುಷ್!

ಚಿಕ್ಕಮಗಳೂರಿನಲ್ಲಿ ಒಂದು ರೆಸಾರ್ಟ್‌ ಇದೆ. ಅದು ಸಾಧಾರಣ ರೆಸಾರ್ಟ್‌ ಅಲ್ಲ, ಅತ್ಯಂತ ಲಕ್ಸುರಿಯಸ್‌ ರೆಸಾರ್ಟ್‌. ಇಲ್ಲಿ ಪಾರ್ಟಿ ಹಾಲ್‌ನಿಂದ, ಪ್ರೈವೇಟ್‌ ಸ್ವಿಮ್ಮಿಂಗ್‌ ಪೂಲ್‌ನ ವರೆಗೆ ಎಲ್ಲವೂ ಇವೆ. ಸ್ಪಾ ಇದೆ, ಕಾಫೀ ಪ್ಲಾಂಟೇಷನ್‌ಗೆ ಸಣ್ಣ ಪ್ರವಾಸವಿದೆ, ಮುಳ್ಳಯ್ಯನಗಿರಿಯಲ್ಲಿ ಟ್ರೆಕ್‌ ಮಾಡಬಹುದು. ನಿಮ್ಮ ಪ್ರೀತಿ ಪಾತ್ರರ ಜತೆಗೆ ದಿನ್ನರ್‌ ಮಾಡಬಹುದು. ಕಾಡಿನ ದಾರಿಯಲ್ಲಿ ಸೈಕ್ಲಿಂಗ್‌ ಮಾಡಬಹುದು. ಸಂಸ್ಕೃತಿ ಮತ್ತು ಪರಂಪರೆಯನ್ನು ತಿಳಿದುಕೊಳ್ಳಲು ಸಮೀಪದ ಬೇಲೂರು, ಹಳೇಬೀಡಿಗೂ ಹೋಗಿಬರಬಹುದು. ಇಷ್ಟೊಂದು ಆಯ್ಕೆಗಳನ್ನೆಲ್ಲ ತುಂಬಿಕೊಂಡಿರುವ ರೆಸಾರ್ಟ್‌ ಯಾವುದು ಗೊತ್ತಾ? ದಿ ಸೆರಾಯ್‌!

Untitled design - 2026-03-06T115129.529

ದೇಶಾದ್ಯಂತ ಶಾಖೆಗಳನ್ನು ಹೊಂದಿರುವ ದಿ ಸೆರಾಯ್‌, ಚಿಕ್ಕಮಗಳೂರಿನಲ್ಲೂ ಒಂದು ವಿಶಿಷ್ಟವಾದ ರೆಸಾರ್ಟ್‌ ಹೊಂದಿದೆ. ಅವರೇ ಹೇಳಿಕೊಳ್ಳುವಂತೆ; ʼಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮತ್ತು ಇಳಿಜಾರುಗಳಲ್ಲಿ, ದಟ್ಟವಾದ ಕಡು ಹಸಿರು ವಾತಾವರಣ ಮತ್ತು ಸಣ್ಣ ಪಟ್ಟಣ, ಹಳ್ಳಿಗಳ ನಡುವೆ, ಕರ್ನಾಟಕದ ಮಲೆನಾಡು ಇದೆ. ಈ ಪ್ರದೇಶದೊಳಗೆ ಚಿಕ್ಕಮಗಳೂರು ಇದೆ - ಭಾರತದ ಕಾಫಿ ಪ್ರವರ್ಧಮಾನಕ್ಕೆ ಬಂದ ಬೇರುಗಳು, ಹೊಯ್ಸಳ ರಾಜವಂಶದ ಐತಿಹಾಸಿಕ ಕೇಂದ್ರಬಿಂದು, ಕರ್ನಾಟಕದ ಅತ್ಯುನ್ನತ ಶಿಖರ - ಮುಳ್ಳಯ್ಯನಗಿರಿಯಿಂದ ಕೂಡಿದೆ. ವಿಶಾಲವಾದ ಅರಣ್ಯದಲ್ಲಿ, ಸುತ್ತುವರಿದ ಮೆಣಸಿನ ಎಲೆಗಳ ವೈಭವ, ಎತ್ತರದ ಮರಗಳ ಕೆಳಗೆ, ಮಳೆ ಮತ್ತು ಮಳೆಕಾಡುಗಳ ರಸವಿದ್ಯೆಯಲ್ಲಿ, ಹೇರಳವಾದ ತೋಟದಲ್ಲಿ, ಸೆರಾಯ್ ಇದೆ. ಇಲ್ಲಿ ಒಟ್ಟು 29 ವಿಲ್ಲಾಗಳಿವೆ. ಪ್ರತಿಯೊಂದು ವಿಲ್ಲಾದ ಕಿಟಕಿಯೂ ದಟ್ಟವಾದ ತೋಟಗಳನ್ನು ನೋಡುವಂತೆ ಕಾಣುತ್ತವೆ. ಖಾಸಗಿ ಈಜುಕೊಳಗಳ ಜತೆಗೆ ವಿನ್ಯಾಸಗೊಳಿಸಲಾಗಿದೆ. ತೋಟದ ನಡುವೆ ನಡೆಯುವಾಗ ಸೂರ್ಯ, ಪಕ್ಷಿಗಳು, ಮಿನಿವೆಟ್‌ಗಳು, ಡ್ರೊಂಗೋಗಳು, ಮರಕುಟಿಕಗಳು ನಿಮ್ಮ ನಡಿಗೆಯನ್ನು ಮತ್ತಷ್ಟು ಸುಮಧುರಗೊಳಿಸುತ್ತವೆ.ʼ

ಬೇರೆ ರೆಸಾರ್ಟ್‌ಗಳ ಜತೆಗೆ ಹೋಲಿಸಿ ನೋಡಿದರೆ, ಇದು ಬೆಸ್ಟ್‌ ಅನ್ನುವುದಕ್ಕೆ ಹಲವಾರು ನಿದರ್ಶನಗಳಿವೆ. ಪ್ರೈವೇಟ್‌ ಪೂಲ್ ಅಥವಾ ಜಕುಝಿ ಪೂಲ್‌ನೊಂದಿಗೆ ಬರುವ ವಿಲ್ಲಾಗಳು ಶಾಂತ ಮತ್ತು ವೈಭವಯುತವಾಗಿದೆ. ಪೂಲ್ ಪಕ್ಕದ ಗೆಜೆಬೋ, ವಿಶ್ರಾಂತಿ ಟಬ್ ಮತ್ತು ಹೊರಾಂಗಣ ಶವರ್ ಅನ್ನು ಹೊಂದಿದೆ. ಹಾಸಿಗೆ ಅಥವಾ ಬೇ ವಿಂಡೋಗಳಲ್ಲಿನ ನೋಟಗಳು ವಿಲ್ಲಾವನ್ನು ಹೈಲೈಟ್ ಮಾಡುತ್ತದೆ. ಎಸ್ಟೇಟ್ ವಿಲ್ಲಾಗಳು ಒಂದು ಸುಂದರವಾದ ಎಸ್ಟೇಟ್ ರಿಟ್ರೀಟ್ ಆಗಿದೆ.

Untitled design - 2026-03-06T115207.656

ನಿಮ್ಮ ಹುಟ್ಟುಹಬ್ಬ, ಮದುವೆಯ ವಾರ್ಷಿಕೋತ್ಸವ ಅಥವಾ ಇನ್ನಿತರ ಯಾವುದೇ ಸಮಾರಂಭ ಮಾಡಲೂ ಇಲ್ಲಿ ಅನುಕೂಲವಿದೆ. ನಿಮಗೆ ಬೇಕಾದಂತೆ ಅಲಂಕಾರವನ್ನು ಮಾಡಿಕೊಡುತ್ತಾರೆ. ನಿಮ್ಮ ಸಂಭ್ರಮವನ್ನು ಸೆರೆಹಿಡಿಯಲು ಒಬ್ಬ ಫೊಟೋಗ್ರಫರ್‌ನನ್ನೂ ಇವರೇ ಕಳಿಸುತ್ತಾರೆ. ಅದರ ಜತೆಗೆ ಕೇಕ್‌, ರೋಸ್‌ ಬೊಟಿಕ್‌, ಥೀಮ್‌ನ ಮೇಲೆ ಸರ್ವಿಸ್‌ ಹೀಗೆ ಹಲವಾರು ಆಯ್ಕೆಗಳು ನಿಮಗೆ ಸಿಗುತ್ತವೆ. ಹಾಗೇ ಇಲ್ಲಿ ಅಡುಗೆಯನ್ನು ಮಾಡುವುದರ ಮೇಲೆ ಮಕ್ಕಳಿಗೆ ಆಸಕ್ತಿ ಬರಲಿ ಎಂದು, ಇವರೇ ಮಕ್ಕಳಿಂದ ಅಡುಗೆ ಮಾಡಿಸುತ್ತಾರೆ. ಮಕ್ಕಳಿಗೆ ಲಘುವಾದ ಮತ್ತು ಸಿಂಪಲ್‌ ಆಗಿ ತಯಾರಿಸಬಲ್ಲ ಅಡುಗೆಗಳನ್ನು ಕಲಿಸಿ ಕೊಡುತ್ತಾರೆ. ಇಲ್ಲಿನ ಶೆಫ್‌ಗಳು ನಮಗೆ ಬೇಕಾದಂಥ ಅಡುಗೆಯನ್ನು ಮಾಡಿಕೊಡುವಲ್ಲಿ ನಿಪುಣರು, ಹಾಗೇ ತೋಟದ ಮಧ್ಯದಲ್ಲೂ ಊಟ ಮಾಡಲು ಅನುಕೂಲ ಮಾಡಿಕೊಡುತ್ತಾರೆ. ಫಾರ್ಮ್‌ ಟು ಟೇಬಲ್‌ ಕಾನ್ಸೆಪ್ಟ್‌ ಸಹ ಇಲ್ಲಿದೆ. ನೀವು ಹನಿಮೂನ್‌ ಆಚರಿಸಲು ಅಥವಾ ಬೇರೆ ಏನೋ ಯೋಜನೆಯನ್ನು ಹಾಕಿಕೊಂಡು ಬಂದಿದ್ದರೆ, ಅದಕ್ಕೂ ಇಲ್ಲಿ ಅನುಕೂಲಗಳಿವೆ. ಕೆರೆಯ ಪಕ್ಕದಲ್ಲಿ ಕುಳಿತು ಒಂದೊಳ್ಳೆ ತಿಂಡಿ ಮಾಡಬಹುದು. ಕಪಲ್‌ಗೆಂದೇ 3ಘಂಟೆ ಅವಧಿಯ ವಿಶೇಷ ಸ್ಪಾ ಮಾಡುತ್ತಾರೆ. ಸಂಜೆ ಸಮಯದಲ್ಲಿ ಪೂಲ್‌ ಪಕ್ಕ ಕುಳಿತು, ನಿಮ್ಮ ಸಂಭ್ರಮದ ಕ್ಷಣಗಳನ್ನು ಕಳೆಯಬಹುದು. (ಪ್ರೈವೇಟ್‌ ಪೂಲ್‌ ಕೂಡ ಇದೆ)

ಸಹ್ಯಾದ್ರಿ ಪರ್ವತಗಳಲ್ಲಿಯೇ ಎತ್ತರದ ಪಾಯಿಂಟ್‌ ಎನಿಸಿಕೊಂಡಿರುವ ಮುಳ್ಳಯ್ಯನಗಿರಿಗೆ ಟ್ರೆಕ್ಕಿಂಗ್‌ಗೆ ಕರೆದುಕೊಂಡು ಹೋಗುತ್ತಾರೆ. ನಿಮಗೆ ಟ್ರೆಕ್ಕಿಂಗ್‌ ಮಾಡಲು ಆಗುವುದಿಲ್ಲವೆಂದರೆ, ಡ್ರೈವ್‌ ಮಾಡಿಕೊಂಡು ಹೋಗಬಹುದು. ಪಶ್ಚಿಮ ಘಟ್ಟಗಳ ಪರಿಚಯ ಮಾಡಿಸುವ ಟೂರ್‌ ಸಹ ಇಲ್ಲಿ ಇರಲಿದೆ.

ನಿಮಗೆ ಸೈಕಲ್‌ ಹೊಡೆಯಲು ಇಷ್ಟಾನಾ? ಅದನ್ನೂ ಇಲ್ಲಿ ಮಾಡಬಹುದು. ಇಲ್ಲಿನ ಸೈಕಲ್‌ಗಳನ್ನು ತೆಗೆದುಕೊಂಡು ಚಿಕ್ಕಮಗಳೂರಿನ ಹಳ್ಳಿಗಳಲ್ಲಿ ಸುತ್ತಾಡಬಹುದು. ಅಲ್ಲಿನ ಜನಜೀವನದ ಬಗ್ಗೆ ತಿಳಿದುಕೊಳ್ಳಬಹುದು. 10-14 ಕಿಮೀನ ಒಂದು ರೈಡ್‌ನಲ್ಲಿ ಒಂದೊಳ್ಳೆ ಸೈಕಲ್‌ರೈಡ್ನ ಅನುಭವವನ್ನು ಪಡೆಯಬಹುದು.

Untitled design - 2026-03-06T115335.080

ಬಾಬಾಬುಡನ್‌ರು ಮೆಕ್ಕಾದಿಂದ ಬರುವಾಗ ಕಾಫಿ ಬೀಜಗಳನ್ನು ತಂದು, ಚಿಕ್ಕಮಗಳೂರಿನಲ್ಲಿ ಬಿತ್ತಿ, ಕಾಫಿ ಬೆಳೆಯುವುದನ್ನು ಶುರು ಮಾಡಿದರು. ಇದರಿಂದ ಪ್ರಪಂಚದಲ್ಲಿ ದೊಡ್ಡ ಕ್ರಾಂತಿಯೇ ಆಯಿತು. ಅದರಿಂದಲೇ ಇಲ್ಲಿನ ಒಂದು ಬೆಟ್ಟಕ್ಕೆ ಬಾಬಾ ಬುಡನ್‌ ಗಿರಿ ಎಂದು ಹೆಸರಿಟ್ಟಿದ್ದಾರೆ. ಇಲ್ಲಿ ಕಾಫಿ ಪ್ಲಾಂಟ್‌ನಲ್ಲಿ ಒಂದು ವಾಕ್‌ ಹೋಗಿ ಕಾಫಿ ಬೆಳೆಯ ಬಗ್ಗೆ ತಿಳಿಯಬಹುದು. ಕಾಫಿ ಬೀಜದಿಂದ ಕಪ್‌ ನಲ್ಲಿ ಕಾಫಿ ಆಗಿಬರುವ ವರೆಗಿನ ಹಂತಗಳನ್ನು ತಿಳಿಯಬಹುದು. ನವೆಂಬರ್‌ನಿಂದ ಜನವರಿಯ ವರೆಗೆ ಕಾಫಿ ಫಸಲು ಬಂದಿರುವ ಸಮಯದಲ್ಲಿ ನೀವು, ಅಲ್ಲಿನ ಕಾರ್ಮಿಕರ ಜತೆ ಕೈ ಗೂಡಿಸಿ, ಕಾಫಿ ಬೀಜಗಳನ್ನು ಕೀಳಬಹುದು. ಚಿಕ್ಕಮಗಳೂರಿನ ಸಮೀಪದಲ್ಲೇ ಹಲವಾರು ಐತಿಹಾಸಿಕ ಪಟ್ಟಣಗಳಿವೆ. ಅದರಲ್ಲೂ ಹೊಯ್ಸಳರ ರಾಜಧಾನಿಯಾಗಿದ್ದ ಬೇಲೂರು-ಹಳೇಬೀಡಿಗೆ ಕರೆದುಕೊಂಡು ಹೋಗಿ, ಅದರ ಬಗ್ಗೆಯೂ ತಿಳಿಸಿಕೊಡುತ್ತಾರೆ.

ಇಲ್ಲಿನ ಓಮಾ ಸ್ಪಾ ಬಗ್ಗೆ ಹೇಳಲೇಬೇಕು. ಸಂಸ್ಕೃತದಲ್ಲಿ ಓಮಾ ಅಂದರೆ, ಜೀವ ಕೊಡುವವರು ಎಂದು ಅರ್ಥ. ಇಲ್ಲಿನ ಸ್ಪಾಗೆ ಹೋಗಿ ಅತ್ಯುತ್ತಮ ಥೆರಪಿಯನ್ನು ಪಡೆದುಕೊಳ್ಳಬಹುದು..

ಸಂಪರ್ಕ:

ವಿಳಾಸ: ಮುಗ್ತಿಹಳ್ಳಿ ಪೋಸ್ಟ್, ಕಾಮ್ ರೆಡ್, ಚಿಕ್ಕಮಗಳೂರು ಕರ್ನಾಟಕ 577133

ದೂರವಾಣಿ: 080 4889 3964