Wednesday, March 11, 2026
Wednesday, March 11, 2026

ಚರ್ಚಿಲ್‌ ಈ ಕ್ಲಬ್‌ನ 13ರು. ಬಾಕಿ ಇನ್ನೂ ಕೊಟ್ಟೇ ಇಲ್ಲ!

ಇದು ಸಾಧಾರಣ ಕ್ಲಬ್‌ ಅಲ್ಲ, ಹಲವಾರು ಶತಮಾನಗಳಿಂದ ಬೆಂಗಳೂರು ನಗರದ ಗಣ್ಯರಿಗೆ ಹಾಟ್‌ ಫೆವರೀಟ್‌ ಎನ್ನಬಹುದು. ಬ್ರಿಟೀಷರು ಸಮಯಕಳೆಯಲು, ಉಳಿಯಲು, ಕುಡಿಯಲು ಬಳಸುತ್ತಿದ್ದ ಕ್ಲಬ್‌ಲ್ಲಿ, ಈಗ ಭಾರತೀಯರೂ ಅದನ್ನು ಮಾಡಬಹುದು. ಹಾಗೇ ವಿಶ್ವದಲ್ಲೆಡೆ ತನ್ನ ಹೆಸರನ್ನು ಪಸರಿಸಿರುವ ಈ ಕ್ಲಬ್‌ಗೆ ವಿನ್‌ಸ್ಟನ್‌ ಚರ್ಚಿಲ್‌ ಸಹ ಸದಸ್ಯರಾಗಿದ್ದರು. ಅವರ ಜತೆಗೆ ಹಲವಾರು ಬ್ರಿಟೀಷ್‌ ಅಧಿಕಾರಿಗಳೂ ಈ ಕ್ಲಬ್‌ನ ಸದಸ್ಯರಾಗಿದ್ದರು. ಬ್ರಿಟಿಷ್‌ ವಾಸ್ತುಶಿಲ್ಪದಲ್ಲಿ ಅರಮನೆಯಂತಿರುವ ಈ ಕ್ಲಬ್‌ನ ಬಗ್ಗೆ…

ಸ್ವತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ತಮಗಂತನೇ ಹಲವಾರು ಹೊಟೇಲ್‌, ರೆಸ್ಟೋರೆಂಟ್‌, ಕ್ಲಬ್‌ಗಳನ್ನು ಕಟ್ಟಿಕೊಂಡಿದ್ದರು. ಆಗ ಕಟ್ಟಿಕೊಂಡಿದ್ದ ಹಳೇ ಹೊಟೇಲ್‌ಗಳು ಇನ್ನೂ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿನ ಎಂಜಿ ರೋಡ್‌ನಲ್ಲಿರುವ ಹಾರ್ಡ್‌ ರಾಕ್‌ ಕೆಫೆ ಮೊದಲು ಬ್ರಿಟೀಷರ ಕೆಫೆ ಆಗಿತ್ತು. ಈಗಿನ ತಾಜ್‌ ವೆಸ್ಟ್‌ ಎಂಡ್‌ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಾನ್ಸನ್ಸ್‌ ವೆಸ್ಟ್‌ ಎಂಡ್‌ ಆಗಿತ್ತು. ಬೆಂಗಾಲ್‌ ಕ್ಲಬ್‌, ರಾಯಲ್‌ ಕೋಲ್ಕತ್ತಾ ಟರ್ಫ್‌ ಕ್ಲಬ್‌, ದೆಹಲಿ ಜಿಮ್‌ ಖಾನಾ ಕ್ಲಬ್‌, ಊಟಿ ಕ್ಲಬ್‌, ರಾಯಲ್‌ ಕೋಲ್ಕತ್ತಾ ಗಾಲ್ಫ್‌ ಕ್ಲಬ್‌ಗಳನ್ನೆಲ್ಲ ತಮ್ಮಶೋಕಿಗೆ, ಸ್ನೇಹಿತರೆಲ್ಲ ಮಜಾ ಮಾಡಲು, ಗುಂಡು ಹಾಕಲು. ಗರ್ಲ್‌ ಫ್ರಂಡ್‌ ಜತೆ ಕಾಲ ಕಳೆಯಲು ಹೀಗೆ ಇಂಥ ವಿಚಾರಕ್ಕೆ, ಬೇಕಾದ ಕಡೆಗಳಲ್ಲಿ ಕ್ಲಬ್‌ಗಳನ್ನು ಕಟ್ಟಿಸಿಕೊಂಡು ಬರುತ್ತಿದ್ದರು. ಅವರು ಹೋದ ಮೇಲೆ ಕೆಲವು ಕಲ್ಬ್‌ಗಳು ಸರಕಾರದ ಸ್ವಾಧೀನದಲ್ಲಿದ್ದರೆ. ಇನ್ನುಳಿದವು ತಮ್ಮದೇ ಆದ ಮ್ಯಾನೇಜ್‌ಮೆಂಟ್‌ ಹೊಂದಿದ್ದಾವೆ.

ಇದನ್ನೂ ಓದಿ: ಈ ಜಂಗಲ್‌ ರೆಸಾರ್ಟ್‌ನಲ್ಲಿ ಉಳಿದರೆ ದಂಗಾಗ್ತೀರಿ!..

ಬೆಂಗಳೂರಿನ ಅತ್ಯಂತ ಹಳೆಯ ಕ್ಲಬ್‌ ಎಂದರೆ, ಬೆಂಗಳೂರು ಕ್ಲಬ್‌! 1868 ರಲ್ಲಿ ಶುರುವಾದ ಈ ಕ್ಲಬ್‌ ಇನ್ನೂ ಕಾರ್ಯನಿರ್ವಹಿಸುತ್ತಿದೆ. ಇದು ಮೊದಲಿಗೆ ಬೆಂಗಳೂರು ಯುನೈಟೆಡ್‌ ಸರ್ವಿಸಸ್‌ ಕ್ಲಬ್‌ ಫಾರ್‌ದ ಆಫೀಸರ್ಸ್‌ ಅಂತ ಶುರುವಾಯಿತು. ಇದು 1860ರಲ್ಲಿಯೇ ಶುರುವಾಗಿತ್ತು, 1863ರಲ್ಲಿ ಕೆಲವು ಆಫೀಸರ್‌ಗಳು ತಮ್ಮ ಸಮಯವನ್ನು ಇಲ್ಲಿ ಕಳೆಯುತ್ತಿದ್ದರು. ಆದರೆ, 1868ರ ವರೆಗೆ ಅಧಿಕೃತವಾಗಿ ಈ ಕ್ಲಬ್‌ನ್ನು ಘೋಷಣೆ ಮಾಡಿರಲಿಲ್ಲ. 1868ರಲ್ಲಿ ಬೆಂಗಳೂರು ಯುನೈಟೆಡ್‌ ಸರ್ವಿಸಸ್‌ ಎಂದು ಈ ಕ್ಲಬ್‌ ಶುರುವಾಯಿತು.

New Project (55)

150 ವರ್ಷಗಳಿಂದ ತನ್ನ ಲೆಗಸಿಯನ್ನು ತೆಗೆದುಕೊಂಡು ಬಂದಿರುವ ಬೆಂಗಳೂರು ಕ್ಲಬ್‌, ಬೆಂಗಳೂರಿನ ಹಲವಾರು ಕುಟುಂಬಗಳು ಸಮಯ ಕಳೆಯಲು, ರಾಜಕೀಯ ನಾಯಕರಿಗೆ ಸ್ನೇಹಿತ ಮತ್ತು ಕಾರ್ಯಕರ್ತರನ್ನು ಭೇಟಿ ಮಾಡಲು, ವ್ಯಾಪಾರಸ್ಥರು ತಮ್ಮ ಮೀಟಿಂಗ್‌ಗಳನ್ನು ಮಾಡಲು ಬಳಸುತ್ತಿದ್ದಾರೆ. ಬೆಂಗಳೂರು ನಗರದ ಹೃದಯ ಭಾಗದಲ್ಲಿ 15 ಎಕರೆ, ಸುಂದರ, ಶಾಂತ, ಹಸಿರು ವಾತಾವರಣವನ್ನು ಹೊಂದಿದೆ. ಹಾಗೇ ಮೊದಲಿನಿಂದ ಊರಿನ ಶ್ರೀಮಂತರಿಗೆ ಇದು ‘a home away from home’ ಆಗಿದೆ.

ಇಲ್ಲಿ ಏನೆಲ್ಲ ಇದೆ ಗೊತ್ತಾ?

ಕ್ಲಬ್‌ ಹೌಸ್‌

ಕ್ಲಬ್ ಹೌಸ್‌ನಲ್ಲಿ 19ನೆಯ ಶತಮಾನದ ವಾಸ್ತುಶಿಲ್ಪ ಮತ್ತು ವೈಬ್‌ನ್ನು ಹೊಂದಿದೆ. ಇಲ್ಲಿನ ಮುಖ್ಯ ಲಾಂಜ್‌ನಲ್ಲಿ ಬೇಟೆ ಆಡಿದ ಪ್ರಾಣಿಗಳ ಕುರುಹು, ಯುದ್ಧದ ಸ್ಮರಣಿಕೆಗಳು ಮತ್ತು ಕ್ಲಬ್‌ನ ಇತಿಹಾಸವನ್ನು ಚಿತ್ರಿಸುವ ವಿಂಟೇಜ್ ಛಾಯಾಚಿತ್ರಗಳನ್ನು ಹೊಂದಿದೆ. ಇಲ್ಲಿ ವಿನ್‌ಸ್ಟನ್‌ ಚರ್ಚಿಲ್‌ಗೆ ಮೀಸಲಾಗಿರುವ ಒಂದು ಮೂಲೆಯೂ ಇದೆ.

ದಿ ಬಾರ್‌

New Project (52)

ಕಟ್ಟಿಗೆಯಿಂದ ಆವೃತವಾದ ಗತಕಾಲದ ವೈಭವುಳ್ಳ, ಚರ್ಮದ ಪೀಠೋಪಕರಣಗಳನು ಹೊಂದಿದ ಬಾರ್‌, ಗುಂಡು ಪ್ರಿಯರಿಗೆ ಗುಂಗು ಹಿಡಿಸಬಹುದು.

ಬಾರ್‌ ಪಾಷಿಯೋ

ದಿ ಬಾರ್‌ಗೆ ಹತ್ತಿಕೊಂಡಿರುವ, ಈ ಹೊರಾಂಗಣ ಬಾರು. ತಾಜಾ ಗಾಳಿಯಲ್ಲಿ ಸ್ನೇಹಿತರ ಜತೆಗೆ ಮಾತನಾಡಿತ್ತಾ, ತಿನ್ನುತ್ತಾ, ಕುಡಿಯುತ್ತ ಸಮಯ ಕಳೆಯುವವರಿಗೆ ಹೇಳಿ ಮಾಡಿಸಿದ ಹಾಗೆ ಇದೆ.

ಡೈನಿಂಗ್‌ ಹಾಲ್‌

ಹಾಲ್‌ನ ಮಧ್ಯದಲ್ಲಿ ವೈಭವೋಪಿತ ಸುಂದರವಾದ ಟೇಬಲ್‌, ಕಣ್ಮನ ತಣಿಸುವ ಶಾಂಡೆಲಿಯರ್‌, ಜತೆಗೆ ರಾಯಲ್‌ ಆಗಿ ನಿಮ್ಮ ಸಮಯವನ್ನು ಕಳೆಯಬಹುದು. 150 ವರ್ಷಗಳ ಹಿಂದಿನ ಈ ಡೈನಿಂಗ್‌ ಹಾಲ್‌ ಕ್ಲಬ್‌ ಹೌಸ್‌ನಲ್ಲಿದೆ.

ಮೈಸೂರು ರೂಮ್‌

New Project (51)

ಈ ಕೊಠಡಿ, ಬೆಂಗಳೂರು ಕ್ಲಬ್‌ ಮತ್ತು ಮೈಸೂರು ಮಹಾರಾಜರ ಕುಟುಂಬದ ಜತೆಗಿನ ಒಡನಾಟದ ಸ್ಮರಣಿಕೆಯಾಗಿ ಈ ರೂಮ್‌ ಇರುವುದು. ಮೈಸೂರಿನ ಮಹಾರಾಜರು 1914ರಲ್ಲಿ ಮೊದಲನೇ ಬಾರಿಗೆ ಇಲ್ಲಿಗೆ ಆಹ್ವಾನಿತರಾಗಿದ್ದರು. ಈ ರೂಮ್‌ನಲ್ಲಿ ಪಾರಂಪರಿಕ ಪೇಂಟಿಂಗ್‌ಗಳು, ಕೆತ್ತನೆಗಳು, ಕಟ್ಟಿಗೆಯ ಫರ್ನಿಚರ್‌ಗಳನ್ನು ಹೊಂದಿದೆ. ಮೈಸೂರು ರೂಮ್‌ನಲ್ಲಿ ಶಾಂತಿಯುತವಾಗಿ ಆರಾಮವಾಗಿ ಸಮಯ ಕಳೆಯಬಹುದು.

ಇಷ್ಟಲ್ಲದೇ, ಇಲ್ಲಿ ಪೋಲೋ ಬಾರ್‌, ಬ್ರಿಗೇಡಿಯರ್‌ ಹಿಲ್‌ ಟೆರಸ್‌, ಓವಲ್‌ ಲಾನ್‌, ಬ್ರಿಗೇಡಿಯರ್‌ ಹಿಲ್‌ ಅನ್ನೆಕ್ಸ್‌, ಆಂಕರ್‌ ಹಾಲ್‌ ಮತ್ತು ಲಾನ್‌, ಮೇನ್‌ ಲಾನ್‌, ಮಕ್ಕಳಿಗೆ ಆಟದ ಮೈದಾನ, ಲೈಬ್ರರಿ, ಲೈಬ್ರರಿ ಕಾರಿಡಾರ್‌, ಸ್ಪೋರ್ಸ್ಟ್‌ ಬಾರ್‌, ಜೆನರಲ್‌ ಭಾಟಿಯಾ ಸುಟ್‌ನ್ನು ಹೊಂದಿದೆ. ಈ ಎಲ್ಲ ಸ್ಥಳಗಳು ಒಂದಕ್ಕಿಂತ ಒಂದು ವಿಭಿನ್ನವಾಗಿಯೂ ಸುಂದರವಾಗಿಯೂ ಇದ್ದಾವೆ.

ಇಷ್ಟೇ ಅಲ್ಲ, ಇಲ್ಲಿ ಸ್ವಿಮ್ಮಿಂಗ್‌ ಪೂಲ್‌, ಬ್ಯಾಡ್ಮಿಟನ್‌ ಮೈದಾನ, ಸ್ಕ್ವಾಶ್‌ ಮೈದಾನ, ಟೆನ್ನಿಸ್‌ ಮೈದಾನ, ಬಿಲಿಯಾರ್ಡ್ಸ್‌, ಟೇಬಲ್‌ ಟೆನ್ನಿಸ್‌, ಫುಟ್‌ ಬಾಲ್‌-ಬಾಸ್ಕೇಟ್‌ಬಾಲ್‌ ಮೈದಾನ, ಹೆಲ್ತ್‌ ಕ್ಲಬ್‌, ಸೌನಾ ಮತ್ತು ಸ್ಟೀಮ್‌ ರೂಮ್‌ಗಳು, ಮಸ್ಸಾಜ್‌ ಮತ್ತು ಯೋಗಾ ಕೋಚಿಂಗ್‌ ಕೂಡಾ ಇರುತ್ತದೆ. ಇಲ್ಲಿ ಉಳಿದುಕೊಳ್ಳಲು ಹಲವಾರು ರೀತಿಯ ರೂಮ್‌ಗಳೂ ಇವೆ. ಶಾಪಿಂಗ್‌ ಮಾಡಲು ಅಂಗಡಿಗಳೂ ಇವೆ.

New Project (54)

ಹಾಗೇ ಇದು ಎಲ್ಲ ಹೊಟೇಲ್‌ ಮತ್ತು ಕ್ಲಬ್‌ ಥರವಲ್ಲ. ಇಲ್ಲಿಗೆ ಹೋಗಲು ಡ್ರೆಸ್‌ ಸೆನ್ಸ್‌ ಇದೆ. ಬಾಲ್‌ ರೂಮ್‌ನಲ್ಲಿ ಕೂರಲು ಗಂಡಸರು ಸೂಟ್‌ ಮತ್ತು ಟೈಗಳನ್ನು ಹಾಕಿಕೊಳ್ಳಲೇಬೇಕು. ಹೆಂಗಸರು ಸೀರೆಯನ್ನು ಹಾಕಿಕೊಳ್ಳಬಹುದು. ಎಷ್ಟೋ ಜನ ಬೇಜಾರಾದಾಗೆಲ್ಲ ಬೆಳಗ್ಗಿನ ಕಾಫೀಯನ್ನು ಇಲ್ಲೇ ಹೀರಿ, ರಾತ್ರಿಯ ಗುಂಡುಗಳನ್ನೂ ಇಲ್ಲೇ ಹೀರುತ್ತಾರೆ. ಪರಿಚಿತ ಸದಸ್ಯರೊಡನ್‌ ಮನೋರಂಜನೆ ಪಡೆಯುತ್ತಾರೆ. ಇಲ್ಲಿ ಆಗಾಗ ಹಲವಾರು ಕಾರ್ಯಕ್ರಮಗಳೂ ನಡೆಯುತ್ತಿರುತ್ತದೆ. ಅದಕ್ಕೆಲ್ಲ ಹಾಜರಾಗುತ್ತಾರೆ. ಆಟದ ಸ್ಪರ್ಧೆ, ನೃತ್ಯ, ಸಂಗೀತ ಎಲ್ಲವೂ ಇರುತ್ತದೆ. ಇನ್ನೂ ಇಲ್ಲಿ ಗಿಡ ಮರಗಳನ್ನು ನೆಟ್ಟಿ, ಅದರ ಹಾರೈಕೆಗೆ ಆಗಾಗ ಬರುವವರು ಇದ್ದಾರೆ ಅಂದರೆ ನೀವು ನಂಬಲೇಬೇಕು.

ಬ್ರಿಗೇಡಿಯರ್‌ ಆರ್‌ಸಿಆರ್‌ ಹಿಲ್‌ ಈ ಕ್ಲಬ್‌ನಲ್ಲಿ 20 ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು. ಈ ಕ್ಲಬ್‌ನ ಸಂವಿಧಾನದ ಡ್ರಾಫ್ಟಿಂಗ್‌ನನ್ನು ನೋಡಿಕೊಂಡರು. ಅದಾದ ಮೇಲೆ ವಿರೋಧದ ನಡುವೆಯೂ ಭಾರತೀಯರಿಗೆ ಪ್ರವೇಶ ನೀಡಿದರು. ಹೌದು ಮೊದಲಿಗೆ ಇಲ್ಲಿ ಭಾರತೀಯರಿಗೆ ಪ್ರವೇಶವಿರಲಿಲ್ಲ. ಇದೂ ಒಂದು ಲೆಕ್ಕಕ್ಕೆ, ‘Indians and Dogs are not Allowed Here’ ಎಂದು ಬೋರ್ಡ್‌ ಹಾಕಿದ್ದಿರಬಹುದು. ಅದರ ಬಗ್ಗೆ ಮಾಹಿತಿ ಇಲ್ಲ. ಹಿಲ್‌ರ ಅಧ್ಯಕ್ಷತೆಯಲ್ಲೇ ಶ್ರೀಮಂತ, ಅಧಿಕಾರಿ ವರ್ಗದ ಭಾರತೀಯರಿಗೆ ಸದಸ್ಯತ್ವ ನೀಡಲು ಶುರು ಮಾಡಿದರು. ಮೈಸೂರಿನ ಮಹಾರಾಜರೇ 1901 ಕ್ಲಬ್‌ನಿಂದ ಆಹ್ವಾನಿತರಾದ ಮೊದಲ ಭಾರತೀಯರು. ಏನೇ ಇರಲಿ ಈಗ ಅಲ್ಲಿ ಭಾರತೀಯರೇ ಅಲ್ಲಿನ ಮುಖ್ಯಸ್ಥರು.

ಈ ಕ್ಲಬ್‌ ಶುರುವಿನಿಂದ ಬೆಂಗಳೂರು ಯುನೈಟೆಡ್‌ ಸರ್ವಿಸಸ್‌ ಕ್ಲಬ್‌ ಫಾರ್‌ದ ಆಫೀಸರ್ಸ್‌ ಎಂದು ಹೆಸರಿಟ್ಟಿದ್ದರು. ಆದರೆ, ಭಾರತಕ್ಕೆ ಸ್ವಾತಂತ್ರ್ಯ ಬರುವ ಸಮಯದಲ್ಲಿ ಅಂದರೆ, 1946ರಲ್ಲಿ ಇದು ಬೆಂಗಳೂರು ಕ್ಲಬ್‌ ಆಯಿತು. ಈ ಕ್ಲಬ್‌ ಅಷ್ಟೊಂದು ಹಳೆಯದ್ದಾಗಿದ್ದರೂ, ಈಗಿನ ಕಾಲಕ್ಕೆ ತಕ್ಕಹಾಗೆ ಆಗಾಗ ಅಪ್‌ಗ್ರೇಡ್‌ ಆಗುತ್ತಿರುತ್ತದೆ. 1992ರಲ್ಲಿ ವೇಲ್‌ನ ಪ್ರಿನ್ಸ್‌ ಚಾರ್ಲ್ಸ್‌ ಸಹ ಇಲ್ಲಿಗೆ ಭೇಟಿ ನೀಡಿದ್ದರು. ಹಾಗೇ ಇಲ್ಲಿನ ಆಹಾರದ ಬಗ್ಗೆ ಮಾತನಾಡಲೇಬೇಕು. ಇಷ್ಟು ವರ್ಷಗಳಿಂದ ಕ್ಲಬ್‌ ನಡೆಸಿಕೊಂಡು ಬರುತ್ತಿರುವುದರಿಂದ ಕ್ಲಬ್‌ನ ಆಹಾರ ಯಾವಾತ್ತೂ ಅತ್ಯಂತ ರುಚಿಕರವಾಗಿದ್ದು, ಅದನ್ನು ತಿಂದವರು ಅದಕ್ಕೆಲ್ಲ ಶಹಭಾಷ್‌ ಹೇಳುವುದು ಕಾಮನ್‌, ಹಾಗೆ ಗುಂಡುಗಳು, ಕಾಕ್‌ಟೇಲ್‌ಗಳೂ ಇಲ್ಲಿ ಫಸ್ಟ್‌ ಕ್ಲಾಸ್‌!

ಆದರೆ, ಇಲ್ಲಿ ಒಳಗಡೆ ಹೋಗಲು ಎಲ್ಲರಿಂದ ಆಗುವುದಿಲ್ಲ. ಕ್ಲಬ್‌ನ ಸದಸ್ಯರೇ ಕರೆದುಕೊಂಡು ಹೋಗಬೇಕು. ಅಥವಾ ಅವರ ಕಾರ್ಡ್‌ ನಿಮ್ಮ ಬಳಿ ಇರಬೇಕು. ಇದರ ಅಜೀವ ಸದಸ್ಯತ್ವ 30 ಸಾವಿರ ರುಪಾಯಿಗಳಷ್ಟಿದೆ. ಆದರೆ, ಆ ಸದಸ್ಯತ್ವ ಸಿಗುವುದು ಅಷ್ಟೊಂದು ಸಾಧಾರಣವಲ್ಲ. ದೇಶದ ಅತ್ಯುನ್ನತ ಕ್ಲಬ್‌ಗಳಲ್ಲಿ ಒಂದಾಗಿರುವ ಇಲ್ಲಿ, ಹೊಸ ಸದಸ್ಯತ್ವ ಸಿಗಲು ವರ್ಷಗಳ ವರೆಗೆ ಕಾಯಬೇಕು. ಬೇರೆ ಸದಸ್ಯರು ನಿಮಗೆ ರೆಕಮಂಡ್‌ ಮಾಡಬೇಕು. ಆದರೆ, ಇಲ್ಲಿ ನೀವು ಹೋಗಿ ಇದರ ವೈಭವವನ್ನು ಸವಿಯಬೇಕಿದ್ದರೆ, ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಸದಸ್ಯರಿದ್ದು ಅವರ ಜತೆಗೆ ಹೋಗಿ ಬರುಬಹುದು. ಒಂದು ವಿಶೇಷ ಅನುಭವವನ್ನು ಪಡೆಯಬಹುದು.

ಬಾಕಿ ಉಳಿಸಿಕೊಂಡಿದ್ದ ಚರ್ಚಿಲ್‌

New Project (49)

ಈ ಕ್ಲಬ್‌ ಒಂದು ಕಾಲದಲ್ಲಿ ವಿಶ್ವದೆಲ್ಲೆಡೆ ತನ್ನ ಗಮನವನ್ನು ಸೆಳೆದಿತ್ತು. ಅದು ಊಟ-ವಸತಿ ಅಥವಾ ಯಾವುದೋ ಸ್ಕ್ಯಾಮ್‌ನಿಂದ ಅಲ್ಲ. ಒಬ್ಬ ಮಹಾನ್‌ ಪುರುಷ ದುಡ್ಡು ಕೊಡದೇ ಹೋಗಿದ್ದಕ್ಕೆ. ಅವರು ಬ್ರಿಟನ್‌ನ ಪ್ರಧಾನ ಮಂತ್ರಿಯಾಗಿದ್ದ ವಿನ್‌ಸ್ಟನ್‌ ಚರ್ಚಿಲ್‌! 1896ರ ಆಸುಪಾಸಿನಲ್ಲಿ ಇವರು ಬ್ರಿಟೀಷ್‌ ಅಧಿಕಾರಿಯಾಗಿ ಭಾರತದಲ್ಲಿ ಕೆಲವರ್ಷ ಕೆಲಸ ಮಾಡಿದ್ದರು. ಆಗ ಬೆಂಗಳೂರಿನಲ್ಲೂ ಇದ್ದರು. ಆ ಸಮಯದಲ್ಲಿ ಬೆಂಗಳೂರು ಕ್ಲಬ್‌ನಲ್ಲಿ ಮೂರುವರ್ಷಗಳ ಕಾಲ ಮೆಂಬರ್‌ ಆಗಿದ್ದರು. ಒಮ್ಮೆ, 13 ರು. ಬಿಲ್‌ ಪಾವತಿ ಮಾಡದೇ ʼಎಸ್ಕೇಪ್‌ʼ ಆಗಿದ್ದರು. ವಿನ್‌ಸ್ಟನ್‌ ಚರ್ಚಿಲ್‌ ಬೆಂಗಳೂರಿನಲ್ಲಿ 1896 ರಿಂದ 1899ವರೆಗೆ ಬೆಂಗಳೂರಿನಲ್ಲಿ ಬ್ರಿಟೀಷ್‌ ಅಧಿಕಾರಿಯಾಗಿದ್ದರು. ಕಬ್ಬನ್‌ ರೋಡ್‌ನಲ್ಲಿ ಅವರ ಮನೆಯೂ ಇತ್ತು. ಚರ್ಚಿಲ್‌ ತನ್ನ ಕಚೇರಿಗಿಂತ ಜಾಸ್ತಿ ಇದೇ ಕ್ಲಬ್‌ನಲ್ಲಿ ಕಾಲ ಕಳೆಯುತ್ತಿದ್ದರಂತೆ. ಒಂದು ಸುಂದರ ಇಂಗ್ಲಿಷ್‌ ಹುಡುಗಿ ಪಮೇಲಾ ಪ್ಲೋವ್ಡೆನ್‌, ಚರ್ಚಿಲ್‌ನ ಗರ್ಲ್‌ ಫ್ರೆಂಡ್‌ ಆಗಿದ್ದರು. ಚರ್ಚಿಲ್‌ 3 ಯುದ್ಧಗಳಲಿ ಭಾಗವಹಿಸಿದ್ದರು. ಪೋಲೋ ಆಡುತ್ತಿದ್ದರು. ಹಾಗೇ ಅವರು ಒಳ್ಳೆಯ ಓದು ಎಂಬ ಅಗ್ಗಳಿಕೆಯನ್ನು ಪಡೆದಿದ್ದರು. ತಮ್ಮ ಆಫೀಸ್‌ಗಿಂತ ಜಾಸ್ತಿ ಸಮಯವನ್ನು ಈ ಕ್ಲಬ್‌ನಲ್ಲಿ ಕಳೆಯುತ್ತಿದ್ದರು. ಅವಾಗಲೇ 13ರು. ಬಾಕಿ ಬಿಟ್ಟಿದ್ದು. ಅದನ್ನು 1.6.1899ರಲ್ಲಿ ಕ್ಲಬ್‌ ಕಮಿಟಿ ‘irrecoverable sum’ ಸಮ್‌ ಅಂತ ಕೈಬಿಟ್ಟರು. ಅದಾಗಿ ಕೆಲ ವರ್ಷಗಳ ನಂತರ ರಾಜಕೀಯಕ್ಕೆ ಬಂದು, ಚುನಾವಣೆಗಳನ್ನು ಗೆದ್ದು, ಜನ ನಾಯಕ ಆದಮೇಲೆ, ಕ್ಲಬ್‌ನಲ್ಲಿರುವವರು ಚರ್ಚಿಲ್‌ ಕೊಡಬೇಕಾದ ಬಿಲ್‌ನ್ನು ಗೋಡೆಯ ಮೇಲೆ ಹಾಕಿಕೊಂಡಿದ್ದಾರೆ. ಆಮೇಲೆ ಆ ಬಿಲ್‌ನ್ನು ಕೊಡಲು ಬಂದರೂ, ಇವರು ಪಾವತಿ ಮಾಡಿಸಿಕೊಳ್ಳಲಿಲ್ಲ.

ಸಂಪರ್ಕ

ಬೆಂಗಳೂರು ಕ್ಲಬ್

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ರಸ್ತೆ

ಬೆಂಗಳೂರು - 560 025

ಫೋನ್‌ ನಂಬರ್‌: +91 80 40220000

ಮೇಲ್‌: secretary@bangaloreclub.com

Vinay Khan

Vinay Khan

Travel blogger and adventurer passionate about exploring new cultures and sharing travel experiences.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ