ಡೆಸ್ಟಿನೇಷನ್‌ ವೆಡ್ಡಿಂಗ್‌ ಎಂಬ ಸಂಪ್ರದಾಯವೊಂದು ಈಗ ಹೆಚ್ಚು ಸುದ್ದಿಯಲ್ಲಿದೆ. ಮೊದಲೆಲ್ಲಾ ಬರಿಯ ಸಿನಿಮಾ ತಾರೆಯರು, ಸೆಲೆಬ್ರಿಟಿಗಳು, ಬ್ಯುಸಿನೆಸ್‌ ಮ್ಯಾನ್‌ ಗಳಷ್ಟೇ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಳ್ಳುತ್ತಿದ್ದರು. ಆದರೆ ಈಗಂತೂ ಅಂತಸ್ಥಿನ ಭೇದವಿಲ್ಲದೆ ಡೆಸ್ಟಿನೇಷನ್ ವೆಡ್ಡಿಂಗ್​ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚೇ ಇದೆ.

ತಮ್ಮ ಪರಿಸರವನ್ನು ಹೊರತುಪಡಿಸಿ ಬೇರೆಯದೇ ದೇಶವಾಗಿರಲಿ, ರಾಜ್ಯವಾಗಿರಲಿ ಒಟ್ಟಿನಲ್ಲಿ ಇಷ್ಟಪಟ್ಟ ಪ್ರದೇಶಕ್ಕೆ ತೆರಳಿ ಕುಟುಂಬ, ಸ್ನೇಹಿತರು ಹೀಗೆ ಆಯ್ದ ಬಳಗದ ಸಮ್ಮುಖದಲ್ಲಿ ಮದುವೆ ಮಾಡಿಕೊಳ್ಳಬೇಕೆಂಬುದು ಅನೇಕರ ಕನಸು. ಈ ಆಚರಣೆಗಳಿಂದ ಬರಿಯ ಸಂತೋಷ, ಸಂಭ್ರಮವಷ್ಟೇ ಸಿಗುವುದಲ್ಲ, ಬದಲಾಗಿ ವಿಭಿನ್ನ ವಾತಾವರಣದಿಂದಾಗಿ ವಿವಾಹವಾಗಿ ವರ್ಷಗಳೇ ಕಳೆದರೂ ಸದಾ ಎಲ್ಲರ ನೆನಪಿನಲ್ಲಿ ಹಸಿರಾಗಿ ಉಳಿಯುತ್ತದೆ. ಅತಿಥಿಗಳಂತೂ ಪ್ರಯಾಣ ಮತ್ತು ಪ್ರವಾಸದ ಖುಷಿಯಲ್ಲಿ ತೇಲುವಂತೆ ಮಾಡುತ್ತದೆ. ಹೀಗೆ ಡೆಸ್ಟಿನೇಷನ್‌ ವೆಡ್ಡಿಂಗ್‌ ಮಾಡಿಕೊಳ್ಳಲು ಬಯಸುವವರಿಗೆ ಬೆಂಗಳೂರಿನ ಆಸುಪಾಸಿನಲ್ಲಿ ʻಅಮಿತರಸʼ ಪ್ರಮುಖ ಆಯ್ಕೆಯಾಗಿರಲಿದೆ.

ನಂದಿ ಬೆಟ್ಟಗಳ ನೆರಳಿನಲ್ಲಿ 2021ನ ನವೆಂಬರ್‌ ರಲ್ಲಿ ತಲೆಎತ್ತಿರುವ ಅಮಿತರಸ ಬಹುಬೇಗನೆ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆದುಕೊಂಡಿದೆ. ಈವರೆಗೂ 200ಕ್ಕೂ ಹೆಚ್ಚು ಡೆಸ್ಟಿನೇಷನ್‌ ವೆಡ್ಡಿಂಗ್‌ ಗಳನ್ನು ಇಲ್ಲಿ ಮಾಡಲಾಗಿದ್ದು, ಜೀವನದ ಸುಂದರ ಕ್ಷಣಗಳನ್ನು ಸೆರೆಹಿಡಿಯಲು ಇದು ಸೂಕ್ತ ತಾಣ. 28 ಎಕರೆ ವಿಸ್ತೀರ್ಣದಷ್ಟು ಹರಡಿ ನಿಂತಿರುವ ಈ ಪ್ರದೇಶದಲ್ಲಿ, ಸುಮಾರು 12 ಎಕ್ರೆಯಷ್ಟು ಭಾಗದಲ್ಲಷ್ಟೇ ಅಮಿತರಸ ಚಿತ್ರ ಚಿತ್ತಾರವಾಗಿ ನಿರ್ಮಾಣವಾಗಿದೆ. ವಿಶೇಷವಾಗಿ ಭೋಗ ನಂದೀಶ್ವರ ದೇವಾಲಯ ಮಾತ್ರವಲ್ಲದೆ ಹಂಪಿಯ ದೇಗುಲದ ವಾಸ್ತುಶಿಲ್ಪ, ಕಲ್ಲಿನ ಕೆತ್ತನೆ,ಕಲಾಕೃತಿಗಳಿಂದ ಪ್ರೇರಿತವಾಗಿ ನಿರ್ಮಾಣಗೊಂಡಿರುವ ಈ ಅದ್ಭುತ ಲೋಕ, ದೇಶ-ವಿದೇಶಿಗರನ್ನೂ ಕ್ಷಣಮಾತ್ರದಲ್ಲೇ ಸೆಳೆದುಬಿಡುತ್ತದೆ. ವಿವಾಹವಾದರೆ ʻಅಮಿತರಸʼದಲ್ಲಿಯೇ ಎಂಬ ನಿರ್ಧಾರಕ್ಕೆ ಬರುವಂತೆ ಮಾಡುತ್ತದೆ.

weddingvenues-amita-rasa-eventspace-2_15_430200-166849155831730

ಅಮಿತರಸದೊಳಗಿದೆ ಅದ್ಭುತ ಲೋಕ

ಅಮಿತರಸದೊಳಗೆ ಒಮ್ಮೆ ನಡೆದರೆ ಸಾಕು ಇಂಥ ಲೋಕಕ್ಕೆ ಈ ಮೊದಲು ಭೇಟಿ ನೀಡಿಯೇ ಇಲ್ಲವೆಂಬ ಭಾವನೆ ಮೂಡಿಸುತ್ತದೆ. ಇದಕ್ಕೆ ಕಾರಣ ಇಲ್ಲಿನ ಒಳಾಂಗಣದಲ್ಲಿ ನಿರ್ಮಾಣವಾದ ಸುಂದರ ಪ್ರಪಂಚ. ಇಲ್ಲಿ ಮಂಟಪ, ಕಲ್ಯಾಣಿ, ಕಲ್ಯಾಣಿ ಆಂಫಿಥಿಯೇಟರ್, ಬಾಗ್ ಹಾಗೂ ಆಂಗನ್

ಹುಲ್ಲುಗಾವಲುಗಳು, ಆಹಾರ ಎಂಬ ವಿಶೇಷವಾದ ಊಟದ ಹಾಲ್, ಉಳಿದುಕೊಳ್ಳುವುದಕ್ಕೆ ಆಕಾಶ ಹಾಗೂ ಭೂಮಿ ಎಂಬ ಹೆಸರಿನ ವಿಲ್ಲಾಗಳು ಇವೆಲ್ಲದರ ನಡುವೆ ಪ್ರಾಣ ಪ್ರತಿಷ್ಠಾಪೆಗೊಂಡಿರುವ ಸುಂದರವಾದ ವಿಘ್ನವಿನಾಯಕ ಗಣಪನ ಗುಡಿಯಿದೆ.

ಮಂಟಪ ಹೀಗೆದ್ದರಷ್ಟೇ ಚೆನ್ನ..

ಈ ಪರಿಸರದ ಹೃದಯಭಾಗದಲ್ಲಿರುವ ಮಂಟಪವು ಅಮಿತರಸದ ಪ್ರಮುಖ ಆಕರ್ಷಣೆ. ಸಾಂಪ್ರದಾಯಿಕತೆಯ ಜತೆಗೆ ಆಧುನಿಕತೆ ಸಮ್ಮಿಲನದಂತಿರುವ ಈ ಮಂಟಪ ಗ್ರಾನೈಟ್ ಸ್ತಂಭಗಳಿಂದ ಸುತ್ತುವರಿದಿದೆ. ಮುಖ್ಯವಾಗಿ ಕಾರ್ಯಕ್ರಮಗಳಲ್ಲಿ ವೇದಿಕೆಯಾಗಿ ಬಳಕೆ ಮಾಡುವ ಈ ಮಂಟಪದಲ್ಲಿ ವಿವಾಹ ಮುಹೂರ್ತ ಸಮಾರಂಭ ಇಲ್ಲವೇ ಯಾವುದೇ ಶುಭ ಸಮಾರಂಭಗಳ ಮುಖ್ಯ ಕಾರ್ಯಕ್ರಮದ ಆಚರಣೆಯನ್ನು ಮಾಡಲಾಗುತ್ತದೆ. ಈ ಮಂಟಪ ಸುತ್ತಲೂ 650-800 ಜನರಿಗೆ ಆರಾಮವಾಗಿ ಕುಳಿತುಕೊಳ್ಳಲು ತೆರೆದ ವಾತಾವರಣದಲ್ಲಿ ವಿಶೇಷ ಆಸನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

amitarasa 1

ಕಲ್ಯಾಣಿ - ಆಂಫಿಥಿಯೇಟರ್

ಸಾಂಪ್ರದಾಯಿಕ ಮೆಟ್ಟಿಲುಬಾವಿಗಳಿಂದ ಪ್ರೇರಿತರಾಗಿರುವ ಈ ಕಲ್ಯಾಣಿ ಆಂಫಿಥಿಯೇಟರ್ ನಲ್ಲಿ ಮದುವೆಯ ಮೊದಲು ಇರುವಂಥ ಅನೇಕ ಆಚರಣೆಗಳಾದ ಮೆಹೆಂದಿ ಅಥವಾ ಸಂಗೀತ್ ಕಾರ್ಯಕ್ರಮಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಕಲ್ಯಾಣಿಯಲ್ಲಿ ಸುಮಾರು 600 ಜನರಿಗೆ ಕುಳಿತುಕೊಳ್ಳಬಹುದು.ವಿಶೇಷವಾದ ಇದರ ವಿನ್ಯಾಸವಂತೂ ಫೋಟೋಶೂಟ್‌ ಮಾಡಿಸಿಕೊಳ್ಳಲು ಒಳ್ಳೆಯ ವಾತಾವರಣವನ್ನು ಸೃಷ್ಟಿಸಿಕೊಡುತ್ತಿದ್ದು, ವರುಷಗಳೇ ಕಳೆದರೂ ನಿಮ್ಮ ಆ ಸುಂದರ ಕ್ಷಣವನ್ನು ಮತ್ತೆ ನೆನಪಿಸುವಂತೆ ಮಾಡುತ್ತದೆ.

ಬಾಗ್,ಆಂಗನ್ ಎಂಬ ಮೆತ್ತನೆಯ ಹುಲ್ಲುಹಾಸು

ನಂದಿ ಬೆಟ್ಟದ ತಪ್ಪಲಿನಲ್ಲಿರುವ ನಮ್ಮ ಸ್ಥಳದ ಇಳಿಜಾರಿನ ಪ್ರದೇಶದಲ್ಲಿ ಎರಡು ಹಂತಗಳಲ್ಲಿ ಎರಡು ಹುಲ್ಲುಹಾಸುಗಳಿವೆ. ಆಂಗನ್ ಮತ್ತು ಬಾಗ್ ಹಲ್ಲುಹಾಸು ʼಆಹಾರʼದಲ್ಲಿನ ಊಟದ ಸ್ಥಳಕ್ಕೆ ಕರೆದೊಯ್ಯುವ ವಿಶೇಷ ಪರಿಸರ. ಬೆಟ್ಟಗಳ ಸುಂದರ ನೋಟ ನೀಡುವ ಪ್ರತಿ ಹುಲ್ಲುಹಾಸಿನಲ್ಲಿ 300-350 ಜನರಿಗೆ ಆರಾಮವಾಗಿ ಕಾಲ ಕಳೆಯಲು ಅವಕಾಶ ನೀಡಲಾಗಿದೆ.

ಆಹಾ ʻಆಹಾರʼ..

ಅಮಿತರಸದಲ್ಲಿರುವ ಊಟದ ಹಾಲ್‌ಗಳು ಎರಡು ಮಹಡಿಗಳನ್ನು ಒಳಗೊಂಡಿದ್ದು, ಪ್ರತಿಯೊಂದೂ ಹುಲ್ಲುಹಾಸಿಗೆ ತೆರೆದುಕೊಳ್ಳುತ್ತದೆ. ಪ್ರತಿ ಮಹಡಿಯಲ್ಲಿ 250-300 ಜನರು ಕುಳಿತುಕೊಳ್ಳಬಹುದು. ಸಾಂಪ್ರದಾಯಿಕ ಬಾಳೆ ಎಲೆಯ ಊಟದಿಂದ ಹಿಡಿದು, ಬಫೆ ಹಾಗೂ ಕಾರ್ನಿವಲ್‌ ಗಳಿಗೂ ಇಲ್ಲಿ ವ್ಯವಸ್ಥೆಯಿದೆ. ಆಹಾರಪ್ರಿಯರ ಮನಸ್ಸಿಗೊಪ್ಪುವಂತೆ ಆಹಾರದ ವಿನ್ಯಾಸ ಮಾಡಲಾಗಿದೆ. ಆದರೆ ಊಟ ತಯಾರಿಕೆಗಿಲ್ಲಿ ಅವಕಾಶವಿಲ್ಲ.

ವಾಸ್ತವ್ಯ ಆಕಾಶವೋ ಭೂಮಿಯಲ್ಲೋ ನಿಮಗೆ ಬಿಟ್ಟಿದ್ದು

ಡೆಸ್ಟಿನೇಷನ್‌ ವೆಡ್ಡಿಂಗ್‌ಗಾಗಿ ವಿಶೇಷವಾಗಿ ನಿರ್ಮಾಣಗೊಂಡಿರುವ ಅಮಿತರಸದಲ್ಲಿ ಅದಕ್ಕೆ ಹೊರತಾಗಿ ನಾಂಕರಣ, ಸೀಮಂತ, ವಿವಾಹ ವಾರ್ಷಿಕೋತ್ಸವ, ಹುಟ್ಟುಹಬ್ಬದ ಆಚರಣೆ ಮಾತ್ರವಲ್ಲದೆ ಕಾರ್ಪೊರೇಟ್ ಇವೆಂಟ್‌ ಗಳನ್ನೂ ಸಂಭ್ರಮಿಸಬಹುದು. ಅಲ್ಲದೆ

ಈ ಸಮಾರಂಭಗಳಿಗೆ ಬರುವ ಅತಿಥಿಗಳಿಗಾಗಿ ಇಲ್ಲಿ ವಾಸ್ತವ್ಯಕ್ಕೂ ಸುಸಜ್ಜಿತ ವಿಲ್ಲಾಗಳನ್ನೇ ನಿರ್ಮಾಣ ಮಾಡಲಾಗಿದೆ. ತೊಟ್ಟಿಮನೆ ವಿನ್ಯಾಸದಲ್ಲಿ ನಿರ್ಮಾಣಗೊಂಡಿರುವ ಈ ಕೋರ್ಟ್‌ ಯಾರ್ಡ್ಸ್ ನ ಒಳಭಾಗದಲ್ಲೇ ಸಾಕಷ್ಟು ಸ್ಥಳಾವಕಾಶವಿದ್ದು 20ರಿಂದ 25 ಮಂದಿ ಸೇರುವ ಸಣ್ಣ ಕಾರ್ಯಕ್ರಮಗಳಿಗೆ ಅನುವು ಮಾಡಿಕೊಡಲಾಗುತ್ತದೆ.

amitarasa

ಗಣಪನ ಗುಡಿ

ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮಗಳನ್ನು ಪ್ರಾರಂಭಿಸುವ ಮುನ್ನ ಗಣಪತಿಯನ್ನು ಸ್ಮರಿಸಿ, ಪೂಜಿಸುವ ವಾಡಿಕೆ ಅನೇಕರಿಗಿದೆ.ಇಂಥವರಿಗಾಗಿಯೇ ಇಲ್ಲಿ ಸುಂದರವಾದ ಗುಡಿಯಿದ್ದು ಪ್ರಾಣ ಪ್ರತಿಷ್ಠಾಪನೆಗೊಂಡ ಗಣಪನನ್ನು ಪೂಜಿಸಲು ಅವಕಾಶವಿದೆ. ಮದುವೆಗೂ ಮೊದಲು ಮಾಡಬೇಕಾದ ವರಪೂಜೆ, ಗೌರಿ ಪೂಜೆ, ಗಂಗಾ ಪೂಜೆ, ಕಾಶಿಯಾತ್ರೆ, ಬ್ರೈಡ್‌ ವೆಲ್‌ಕಮ್, ಗ್ರೂಮ್‌ ವೆಲ್‌ಕಮ್‌ ಹೀಗೆ ವಿವಾಹದ ಯಾವುದೇ ಆಚರಣೆಗಳನ್ನು ಮಾಡಲೂ ಇಲ್ಲಿ ಅವಕಾಶವಿದೆ.

ವೀಲ್ ಚೇರ್‌ ಫ್ರೆಂಡ್ಲಿ

ಅಮಿತರಸ ವಿಶಾಲದ ಪರಿಸರ, ಎತ್ತರ ತಗ್ಗಿನ ವಿಶಿಷ್ಟ ತಾಣವಾಗಿರುವುದರಿಂದ ವಯಸ್ಸಾದವರಿಗೆ ಓಡಾಡುವುದಕ್ಕೆ, ಹತ್ತಿ ಇಳಿದು ಮಾಡುವುದಕ್ಕೆ ಕಷ್ಟಸಾಧ್ಯ ಎಂದು ಯೋಚಿಸಬೇಕಿಲ್ಲ. ಅಂಥವರನ್ನು ಗಮನದಲ್ಲಿಟ್ಟೊಂಡು ಅಮಿತರಸವನ್ನು ಪೂರ್ತಿಯಾಗಿ ವೀಲ್ ಚೇರ್‌ ಫ್ರೆಂಡ್ಲಿಯಾಗಿಸಲಾಗಿದೆ. ಮಂಟಪ, ಲಾನ್,‌ ಗಣೇಶನ ಗುಡಿ, ಊಟದ ಹಾಲ್‌ ಹೀಗೆ ಎಲ್ಲ ಕಡೆಗಳಲ್ಲೂ ಪ್ರತ್ಯೇಕವಾಗಿ ಹೈಜೀನಿಕ್‌ ಆಗಿರುವ ಶೌಚಾಲಯಗಳ ವ್ಯವಸ್ಥೆಯೂ ಇದೆ.

ಪ್ಯಾಕೇಜ್‌ ಗಳು ಹಲವು :

24 ಗಂಟೆಗಳ ಪ್ಯಾಕೇಜ್

48 ಗಂಟೆಗಳ ಪ್ಯಾಕೇಜ್‌ ‌

2ಕ್ಕಿಂತ ಹೆಚ್ಚು ದಿನಗಳ ಪ್ಯಾಕೇಜ್‌

66ffd5c703b812ea13ecce86_AMT-6

ಗ್ರಾಹಕರಿಗೆ ಒಂದು ದಿನಕ್ಕಿಂತ ಹೆಚ್ಚಿಗೆ ಕಾರ್ಯಕ್ರಮವಿದ್ದಾಗ ಅಂದರೆ, ಸಂಗೀತ್‌, ಮೆಹೆಂದಿ, ಹಲ್ದೀ, ರಿಸೆಪ್ಶನ್, ಮುಹೂರ್ತ, ಪೋಸ್ಟ್‌ ವೆಡ್ಡಿಂಗ್‌ ರಿಚುವಲ್ಸ್‌ ನಂಥ ಆಚರಣೆಗಳಿರುವ ವೇಳೆ ಮೂರು-ನಾಲ್ಕು ದಿನಗಳವರೆಗೆ ಬುಕ್‌ ಮಾಡಿಕೊಳ್ಳುತ್ತಾರೆ. ಆಗ ಎಕ್ಸ್‌ ಕ್ಲೂಸಿವ್‌ ಆಗಿ ನಮ್ಮ ಪ್ರಾಪರ್ಟಿ ಕೊಡುತ್ತೇವೆ. ನಮ್ಮಲ್ಲಿ ಪಾರ್ಶಿಯಲ್‌ ಪ್ರಾಪರ್ಟಿ ಪಡೆಯುವ ಅವಕಾಶವಿಲ್ಲ.
- ಗೋವಿಂದ ರಾಜು, ಅಸಿಸ್ಟೆಂಟ್‌ ಫೆಸಿಲಿಟಿ ಮ್ಯಾನೇಜರ್‌ , ಅಮಿತರಸ

ಇರುವುದೆಲ್ಲಿ ?

ಬೆಂಗಳೂರಿನ ಸಮೀಪದಲ್ಲೇ ಇರುವ ʻಅಮಿತರಸʼ ನಂದಿಗಿರಿ, ಚಂದ್ರಗಿರಿ, ಬ್ರಹ್ಮಗಿರಿ, ದಿವ್ಯಗರಿ, ಸ್ಕಂದಗಿರಿ 5 ಗಿರಿಧಾಮಗಳಿಂದ ಸುತ್ತುವರಿದಿದೆ. ಪುರಾತನ ಕಾಲದ ಕಣಿವೆ ನಂದೀಶ್ವರ ದೇವಾಲಯ ಹಾಗೂ ಭೋಗ ನಂದೀಶ್ವರ ದೇವಾಲಯಗಳ ಪಕ್ಕದಲ್ಲೇ ಇರುವ ಈ ಡೆಸ್ಟಿನೇಷನ್‌ ವೆಡ್ಡಿಂಗ್ ಸೆಂಟರ್, ವಾಸ್ತು ಪ್ರಕಾರವೇ ನಿರ್ಮಾಣಗೊಂಡಿದೆ..

ಬೆಂಗಳೂರಿನ ಹೆಬ್ಬಾಳದಿಂದ 48 ಕಿಮೀ ದೂರದಲ್ಲಿರುವ ಈ ಪ್ರಾಪರ್ಟಿ, ಏರ್‌ ಪೋರ್ಟ್‌ ನಿಂದ 25 ರಿಂದ 30 ಕಿ.ಮೀ ದೂರದಲ್ಲಿದೆ.