Friday, February 20, 2026
Friday, February 20, 2026

ರೈಲೂಟ ರೆಡಿ..!

ದೇಶದ ಹೆಸರಾಂತ ಫುಡ್‌ ಬ್ರ್ಯಾಂಡ್‌ಗಳ ಪೈಕಿ ಒಂದಾಗಿರುವ ಹಲ್ದೀರಾಮ್ಸ್‌ನ ಅನೇಕ ಸ್ನ್ಯಾಕ್ಸ್‌ ಐಟಂಗಳನ್ನು ನೀವು ತಿಂದಿರಬಹುದು. ಆದರೆ ಹಲ್ದೀರಾಮ್ಸ್ ಟ್ರೇನ್ ರೆಸ್ಟೋರೆಂಟ್‌ನಲ್ಲಿ ಕುಳಿತು ಅವರು ತಯಾರಿಸುವ ಸ್ವಾದಿಷ್ಟ ಆಹಾರದ ರುಚಿ ನೋಡಿದ್ದೀರಾ? ಹಲ್ದೀರಾಮ್ಸ್ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ವಿಭಿನ್ನವಾದ ಟ್ರೇನ್ ರೆಸ್ಟೋರೆಂಟ್‌ ನಿರ್ಮಿಸಿದ್ದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಮಾನ ಪ್ರಯಾಣ ಬಲು ದುಬಾರಿ ಎನ್ನುವವರು, ಬಸ್‌ನಲ್ಲಿ ಆರಾಮದಾಯಕ ಪ್ರಯಾಣ ಕಷ್ಟವೆನ್ನುವ ಅನೇಕರು ರೈಲ್ವೇ ಪ್ರಯಾಣವೇ ಉತ್ತಮ ಆಯ್ಕೆಯೆನ್ನುತ್ತಾರೆ. ಆದರೆ ಆಹಾರದ ವಿಚಾರದಲ್ಲಿ ಮಾತ್ರ ರೈಲ್ವೇ ಇಲಾಖೆಯ ಬಗೆಗೆ ಅನೇಕ ಆರೋಪಗಳಿರುವುದು ಸುಳ್ಳಲ್ಲ. ಕೆಲವರು ಆಹಾರ ಬಲು ದುಬಾರಿ ಅಂದರೆ, ಮತ್ತೆ ಕೆಲವರು ರೈಲಿನ ಆಹಾರ ರುಚಿಕರ ಹಾಗೂ ಆರೋಗ್ಯಕರವೆನಿಸುವುದಿಲ್ಲ ಎಂದು ಹೇಳುತ್ತಾರೆ. ಇನ್ನು ರೈಲ್ವೇ ನಿಲ್ದಾಣದ ಆವರಣದಲ್ಲಿರುವ ಅನೇಕ ಹೊಟೇಲ್‌ಗಳಂತೂ ರುಚಿಯೂ ಇರದೆ, ಶುಚಿಯಂತೂ ಮೊದಲೇ ಇರದೆ ಗ್ರಾಹಕರಿಲ್ಲದೆ ಖಾಲಿ ಹೊಡೆಯುತ್ತಿರುತ್ತವೆ.

ಇದನ್ನೂ ಓದಿ: ಆರ್‌ಜಿ ಫಾರ್ಮ್ ಹೌಸ್‌: ದುಬಾರಿಯಲ್ಲ ಈ ಕುಬೇರನ ಅರಮನೆ

ಆದರೆ ಇತ್ತೀಚೆಗೆ ನಮ್ಮ ಬೆಂಗಳೂರಿನ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣ ಭಾರಿ ಸದ್ದು ಮಾಡುತ್ತಿದೆ. ಸೋಷಿಯಲ್‌ ಮೀಡಿಯಾದ ತುಂಬಾ ಮೆಜೆಸ್ಟಿಕ್‌ ರೈಲ್ವೇ ನಿಲ್ದಾಣದಲ್ಲಿ ಹೊಸದಾಗಿ ಪ್ರಾರಂಭವಾಗಿರುವ ರೆಸ್ಟೋರೆಂಟ್‌ನ ವಿಡಿಯೋಗಳು, ರೀಲ್ಸ್‌ಗಳದ್ದೇ ಕಾರುಬಾರು. ಹೌದು, ರೈಲ್ವೇ ನಿಲ್ದಾಣದ ಪ್ರವೇಶ ಭಾಗದಲ್ಲೇ ಕಾಣಸಿಗುವ ಈ ರೆಸ್ಟೋರೆಂಟ್‌ ಮೊದಲ ನೋಟಕ್ಕೆ ರೈಲಿನ ಬೋಗಿಯಂತೆ ಕಂಡು ನಿಮ್ಮನ್ನೊಮ್ಮೆ ಗೊಂದಲಕ್ಕೀಡುಮಾಡಬಹುದು. ಆದರೆ ಅದು ದೇಶದ ಬಹು ದೊಡ್ಡ ಆಹಾರ ಬ್ರ್ಯಾಂಡ್‌ ಹಲ್ದೀರಾಮ್ಸ್‌ ಇದೇ ಮೊದಲ ಬಾರಿಗೆ ಬೆಂಗಳೂರಿಗರಿಗೆ ಪರಿಚಯಿಸಿರುವ ಹಲ್ದೀರಾಮ್ಸ್ ಎಕ್ಸ್‌ ಪ್ರೆಸ್ ಎಂಬ ವಿಭಿನ್ನ ಬಗೆಯ ರೆಸ್ಟೋರೆಂಟ್.‌

Untitled design (22)

ಬಹು ಬೇಡಿಕೆಯ ಹಲ್ದೀರಾಮ್ಸ್‌ ಎಕ್ಸ್‌ ಪ್ರೆಸ್

ಟೇಸ್ಟ್‌ ಆಫ್‌ ಟ್ರೆಡಿಷನ್‌ ಎಂಬ ಟ್ಯಾಗ್‌ ಲೈನ್‌ ಹೊಂದಿರುವ ಹಲ್ದೀರಾಮ್ಸ್‌ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ನೆನಪಾಗುವುದು ರುಚಿಕರವಾದ ಹಲ್ದೀರಾಮ್ಸ್‌ ಆಲೂ ಭುಜಿಯಾ, ಟೇಸ್ಟೀ ನಟ್ಸ್‌, ಮಿನಿ ಬಾಖರ್‌ವಾಡಿ, ಮಿಕ್ಸ್ಚರ್‌ ಕ್ರಂಚೀ, ಚಿವ್ಡಾ ಹಾಗೂ ವಿಭಿನ್ನ ರುಚಿಯ ಸೋನ್‌ ಪಾಪ್ಡಿಗಳು. ಆದರೆ ಇನ್ನುಮುಂದೆ ಹಲ್ದೀರಾಮ್ಸ್‌ ಅಂದರೆ ರೈಲ್ವೇ ನಿಲ್ದಾಣದ ಬಳಿಯ ಈ ರೆಸ್ಟೋರೆಂಟ್ ಕೂಡ ಆ ಲಿಸ್ಟಿನಲ್ಲಿ ಸೇರುತ್ತದೆ.

ರೈಲಿನಲ್ಲೇ ರುಚಿಯಾದ ಆಹಾರ ಸೇವಿಸಿ

ನೋಡುವುದಕ್ಕೆ ಪಕ್ಕಾ ರೈಲಿನ ಬೋಗಿಯಂತೆ ಕಾಣುವ ಹಲ್ದೀರಾಮ್ಸ್ ಎಕ್ಸ್‌ಪ್ರೆಸ್‌ ರೆಸ್ಟೋರೆಂಟ್‌ ಸೀಟಿಂಗ್‌ ವ್ಯವಸ್ಥೆಯಲ್ಲೂ ರೈಲನ್ನೇ ಹೋಗುತ್ತದೆ. ರೆಸ್ಟೋರೆಂಟ್‌ ಪ್ರವೇಶಿಸುತ್ತಿದ್ದಂತೆಯೇ ಇವರದ್ದೇ ಬ್ರ್ಯಾಂಡ್‌ನ ಸಾಫ್ಟೀ ಸೆಂಟರ್‌ ಇದ್ದು ಫ್ಲೇವರ್‌ ನಿಮ್ಮ ಆಯ್ಕೆಗೆ ಬಿಟ್ಟಿದ್ದು. ಇನ್ನು ದಿನದ 24 ಗಂಟೆಗಳ ಕಾಲವೂ ಉತ್ತಮ ಸೇವೆಯನ್ನು ನೀಡುವ ಈ ನಾರ್ತ್‌ ಇಂಡಿಯನ್‌ ವೆಜ್‌ ರೆಸ್ಟೋರೆಂಟ್‌ನಲ್ಲಿ ಸೌತ್‌ ಇಂಡಿಯನ್‌ ಡಿಶಸ್, ಸ್ಯಾಂಡ್‌ವಿಚ್‌, ಜೈನ್‌ ಡಿಲೈಟ್ಸ್, ಬ್ರೆಡ್‌ ಆಪ್ಶನ್ಸ್, ಕ್ವಿಕ್‌ ಬೈಟ್‌, ಡೆಸರ್ಟ್ಸ್‌, ಕಿಡ್ಸ್‌ ಸ್ಪೆಷಲ್‌, ರೈಸ್‌ ಬೌಲ್ಸ್‌, ಕಾಂಬೋಸ್‌, ಹಾಟ್‌ ಆಂಡ್‌ ಕೋಲ್ಡ್‌ ಬೆವೆರೇಜಸ್‌ ಹೀಗೆ ಎಲ್ಲವೂ ಲಭ್ಯವಿದೆ. ಇನ್ನು ಆರ್ಡರ್‌ ಕೊಟ್ಟು ಕುಳಿತು ತಿನ್ನಲು ಸಮಯವಿಲ್ಲ, ರೈಲು ಮಿಸ್‌ ಆದೀತು ಎಂಬ ಚಿಂತೆಯಿದ್ದರೆ ಟೇಕ್‌ ಅವೇ ಸೆಂಟರ್‌ ಕೂಡಾ ಇಲ್ಲಿದ್ದು, ಆರ್ಡರ್‌ ಕೊಟ್ಟರೆ ನಿಮಿಷಗಳೊಳಗೆ ಪಿಕ್‌ ಮಾಡಬಹುದು.

Untitled design (19)

ಒಟ್ಟಿನಲ್ಲಿ ಬೆಂಗಳೂರಿನ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದ ಆವರಣದಲ್ಲಿಯೇ ಶುಚಿ ರುಚಿಗೆ ಹೆಸರು ಮಾಡಿರುವ ಸರಿಯಾದ ಹೊಟೇಲ್‌, ರೆಸ್ಟೋರೆಂಟ್‌ ಇಲ್ಲ ಎಂಬ ಆರೋಪಗಳಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಇನ್ಮುಂದೆ ಈ ಹಾದಿಯ ರೈಲ್ವೇ ಪ್ರಯಾಣಿಕರಿಗೆ, ಮೆಜೆಸ್ಟಿಕ್‌ ಸುತ್ತಮುತ್ತ ಬೆಸ್ಟ್‌ ಫುಡ್‌ ಗಾಗಿ ಹುಡುಕಾಡುತ್ತಿರುವ ಆಹಾರ ಪ್ರಿಯರಿಗೆ ಹಲ್ದೀರಾಮ್ಸ್‌ ಎಕ್ಸ್‌ ಪ್ರೆಸ್ ರೆಸ್ಟೋರೆಂಟ್‌ ಸೂಕ್ತ ಆಯ್ಕೆಯಾಗಲಿದೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ