Saturday, October 17, 2026
Saturday, October 17, 2026

ಕಾವೇರಿ ತೀರದಲ್ಲಿ..ನಿಸರ್ಗದ ನಡುವಿನಲ್ಲಿ..

ಶಿವಮೊಗ್ಗ,ದಕ್ಷಿಣ ಕನ್ನಡ ಮತ್ತು ಉಡುಪಿ,ಚಿಕ್ಕಮಗಳೂರು, ಉತ್ತರ ಕನ್ನಡ, ದಾವಣಗೆರೆ ಮತ್ತು ಚಿತ್ರದುರ್ಗ, ತುಮಕೂರು ಹಾಗೂ ಕೊಡಗಿನ ಅನೇಕ ಭಾಗಗಳಲ್ಲಿ ಮಾತ್ರ ಕಾಣಸಿಗುವ ತೋಟಗಾರಿಕಾ ಬೆಳೆ ಅಡಿಕೆ ಕೃಷಿ. ಸಾಲಾಗಿ ಜೋಡಿಸಿದಂತಿರುವ ಅಡಿಕೆ ತೋಟಗಳ ನಡುವೆ ಪುಟ್ಟ ಬಿಡಾರ ಹೂಡಿ ಸುಂದರ ಕ್ಷಣಗಳನ್ನು ಕಳೆಯುವ ಬಗ್ಗೆ ನೀವೆಂದಾದರೂ ಯೋಚಿಸಿದ್ದೀರಾ? ಅಂಥ ಅನುಭವ ಪಡೆಯೋದಕ್ಕೆ ಮೈಲುಗಳ ದೂರ ಸಾಗಬೇಕಿಲ್ಲ..ಬೆಂಗಳೂರಿನಿಂದ 2 ಗಂಟೆಗಳ ಅಂತರದಲ್ಲೇ ಅಂಥದೊಂದು ವಿಶೇಷ ಅನುಭವ ಪಡೆಯೋದಕ್ಕೆ ನಿಮ್ಮಿಂದಲೂ ಸಾಧ್ಯ..

ಪಾಂಡವಪುರವು ತನ್ನ ಪೌರಾಣಿಕ ಹಿನ್ನೆಲೆ, ಐತಿಹಾಸಿಕ ಪ್ರಾಮುಖ್ಯತೆ ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಕುಂತಿ ಬೆಟ್ಟ, ತೊಣ್ಣೂರು ಕೆರೆ, ವೇಣುಗೋಪಾಲಸ್ವಾಮಿ ಮತ್ತು ನಂಬಿನಾರಾಯಣ ದೇವಸ್ಥಾನದಂಥ ಪ್ರವಾಸಿ ತಾಣಗಳನ್ನು ನೋಡುವ ಸಲುವಾಗಿ ನಿತ್ಯವೂ ಇಲ್ಲಿಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಒಂದೇ ದಿನದಲ್ಲಿ ಪಾಂಡವಪುರವನ್ನು ಸುತ್ತುವುದು ಕಷ್ಟವೆನ್ನುವ ಮಂದಿ ಸಮೀಪದಲ್ಲಿ ವಾಸ್ತವ್ಯಕ್ಕಿರುವ ತಾಣಗಳಿಗಾಗಿ ಹುಡುಕಾಡುವುದು ಸಾಮಾನ್ಯ. ಅಂಥ ಮಂದಿಗಾಗಿಯೇ ಪಾಂಡವಪುರದಲ್ಲಿ ಸದ್ದಿಲ್ಲದೇ ಕಾರ್ಯನಿರ್ವಹಿಸುತ್ತಿದೆ ಜಿಗ್ಲು ವ್ಯಾಲಿ ರೆಸಾರ್ಟ್.

ಇದನ್ನೂ ಓದಿ: ಮಲೆನಾಡಿನ ಮಡಿಲಲ್ಲೊಂದು ‘ಮಾಲ್ಡೀವ್ಸ್’

ನಗರದ ಗದ್ದಲ, ವಾಹನಗಳ ಶಬ್ದ ಮತ್ತು ದಿನನಿತ್ಯದ ಒತ್ತಡದಿಂದ ಕೊಂಚ ದೂರ ಸರಿದು ಪ್ರಕೃತಿಯ ನಡುವೆ ನೆಮ್ಮದಿಯ ಕ್ಷಣಗಳನ್ನು ಕಳೆಯಬೇಕು ಎನ್ನುವವರಿಗೆ ಜಿಗ್ಲು ವ್ಯಾಲಿ ರೆಸಾರ್ಟ್ ಉತ್ತಮ ತಾಣವಾಗಬಹುದು. ಹಸಿರು ಪರಿಸರ, ಪ್ರಶಾಂತ ವಾತಾವರಣ ಹಾಗೂ ಗ್ರಾಮೀಣ ಸೊಬಗಿನ ಅನುಭವವನ್ನು ಒಂದೇ ಕಡೆ ನೀಡುವ ಈ ರೀತಿಯ ರೆಸಾರ್ಟ್‌ಗಳು ವೀಕೆಂಡ್ ಪ್ರವಾಸಕ್ಕೆ ಹೊಸ ಅನುಭವ ನೀಡುತ್ತವೆ.

Untitled design (93)

ನಿಸರ್ಗವೇ ಆಕರ್ಷಣೆ

ಜಿಗ್ಲು ವ್ಯಾಲಿ..ಹೆಸರು ವಿಚಿತ್ರವೆನಿಸಿದರೂ ನೈಸರ್ಗಿಕ ವಾತಾವರಣದಿಂದಲೇ ಎಲ್ಲರನ್ನೂ ತನ್ನತ್ತ ಸೆಳೆಯುವ ರೆಸಾರ್ಟ್‌ ಇದು. ಸುತ್ತಲೂ ಕಾಣಿಸುವ ಹಸಿರು, ತಂಪಾದ ಗಾಳಿ ಹಾಗೂ ನಗರದಿಂದ ದೂರವಿರುವ ಶಾಂತ ವಾತಾವರಣ ಪ್ರವಾಸಿಗರಿಗೆ ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ. ಕುಟುಂಬದೊಂದಿಗೆ ಸಮಯ ಕಳೆಯಲು, ಸ್ನೇಹಿತರೊಂದಿಗೆ ವೀಕೆಂಡ್ ಎಂಜಾಯ್ ಮಾಡಲು ಅಥವಾ ಕೆಲಸದ ಒತ್ತಡದಿಂದ ಬ್ರೇಕ್ ಪಡೆಯಲು ಇದು ಸೂಕ್ತ ಆಯ್ಕೆಯಾಗಬಹುದು. 999ರು. ಗೆ ಡೇ ಔಟ್‌ ಪ್ಯಾಕೇಜ್‌ ಪ್ರಾರಂಭವಾಗುತ್ತಿದ್ದು, ವಾಸ್ತವ್ಯ ಬೇಕೆಂದರೆ 1999ರು. ಗೆ ಲಭ್ಯವಿರುವುದರಿಂದ ದುಬಾರಿ ರೆಸಾರ್ಟ್‌ ಎಂಬ ಚಿಂತೆ ಬೇಕಾಗಿಲ್ಲ.

ಅಡಿಕೆ ತೋಟದ ನಡುವೆ ವಾಸ್ತವ್ಯ

ರೆಸಾರ್ಟ್‌ನಲ್ಲಿ ಪ್ರಕೃತಿಯೊಂದಿಗೆ ಬೆರೆತು ಕಾಲ ಕಳೆಯುವ ಅವಕಾಶವೇ ವಿಶೇಷ. ಇಲ್ಲಿ ಉಳಿದುಕೊಳ್ಳುವುದಕ್ಕೆ ಫ್ಯಾಮಿಲಿ ರೂಮ್‌, ಡಾರ್ಮೆಟರಿ, ಕಪಲ್‌ ರೂಮ್ಸ್‌ ಹಾಗೂ ಲಕ್ಸುರಿ ಟೆಂಟ್‌ ರೂಮುಗಳಿದ್ದು, ಒಂದಕ್ಕೀಮತ ಒಂದು ವಿಶೇಷ ಅನುಭವವನ್ನು ನೀಡುತ್ತದೆ. ಬೆಳಗಿನ ಜಾವ ಹಸಿರಿನ ನಡುವೆ ನಡೆಯುವುದು, ಪಕ್ಷಿಗಳ ಕಲರವ ಆಲಿಸುವುದು, ತೆರೆದ ವಾತಾವರಣದಲ್ಲಿ ಕುಳಿತು ಕಾಫಿ ಅಥವಾ ಚಹಾ ಸವಿಯುವುದು ಪ್ರವಾಸದ ಅನುಭವವನ್ನು ಮತ್ತಷ್ಟು ಸುಂದರಗೊಳಿಸುತ್ತದೆ. ನಗರದ ಕಾಂಕ್ರೀಟ್ ಕಟ್ಟಡಗಳ ಬದಲು ಮರಗಿಡಗಳ ನಡುವೆ ಸಮಯ ಕಳೆಯುವುದು ಮನಸ್ಸಿಗೆ ಹೊಸ ಚೈತನ್ಯ ನೀಡುತ್ತದೆ.

Untitled design (92)

ಸಮಯ ಕಳೆಯಲು ಆಯ್ಕೆಗಳು ಹಲವು

ವೀಕೆಂಡ್ ಪ್ರವಾಸಕ್ಕೆ ಇನ್ನಷ್ಟು ರೋಚಕತೆಯನ್ನು ತುಂಬಲು ರೆಸಾರ್ಟ್‌ನಲ್ಲಿ ವಿವಿಧ ಒಳಾಂಗಣ ಮತ್ತು ಹೊರಾಂಗಣ ಚಟುವಟಿಕೆಗಳನ್ನು ಆಯೋಜಿಸಲು ಅವಕಾಶವಿರುತ್ತದೆ. ಮಕ್ಕಳೊಂದಿಗೆ ಬರುವ ಕುಟುಂಬಗಳಿಗೆ ಆಟ-ಮನರಂಜನೆಯ ಕ್ಷಣಗಳು, ಸ್ನೇಹಿತರ ಗುಂಪಿಗೆ ಒಟ್ಟಾಗಿ ಕಾಲ ಕಳೆಯುವ ಅವಕಾಶಗಳು ಹಾಗೂ ಪ್ರಕೃತಿ ಪ್ರಿಯರಿಗೆ ನಿಶ್ಶಬ್ದ ಪರಿಸರ ಪ್ರಮುಖ ಆಕರ್ಷಣೆಯಾಗಬಹುದು.

ಇಲ್ಲಿನ ಮತ್ತೊಂದು ವಿಶೇಷತೆ ಎಂದರೆ ‘ಸ್ಲೋ ಟ್ರಾವೆಲ್’ ಅನುಭವ. ಪ್ರತಿಯೊಂದು ಕ್ಷಣವನ್ನೂ ಅವಸರವಿಲ್ಲದೆ ಆಸ್ವಾದಿಸುವುದು, ಮೊಬೈಲ್ ಮತ್ತು ನಗರದ ಬ್ಯುಸಿ ಜೀವನದಿಂದ ಕೊಂಚ ದೂರವಿರುವುದು ಪ್ರವಾಸದ ಭಾಗವಾಗುತ್ತದೆ. ಬೆಳಗಿನ ಪ್ರಕೃತಿ ಸೌಂದರ್ಯದಿಂದ ಹಿಡಿದು ಸಂಜೆ ತಂಪಾದ ವಾತಾವರಣದವರೆಗೆ ದಿನದ ಪ್ರತಿಯೊಂದು ಹೊತ್ತೂ ವಿಭಿನ್ನ ಅನುಭವ ನೀಡುತ್ತದೆ.

ಕುಟುಂಬ ಸಮಾರಂಭಗಳು, ಸ್ನೇಹಿತರ ಭೇಟಿಗಳು, ಕಾರ್ಪೊರೇಟ್ ಔಟಿಂಗ್‌ಗಳು ಅಥವಾ ವಿಶೇಷ ದಿನಗಳ ಆಚರಣೆಗೆ ಪ್ರಕೃತಿಯ ನಡುವೆ ಸಮಯ ಕಳೆಯಲು ಬಯಸುವವರಿಗೂ ಜಿಗ್ಲು ವ್ಯಾಲಿ ವಿಶೇಷ ವೇದಿಕೆಯನ್ನು ಕಲ್ಪಿಸಿಕೊಡುತ್ತದೆ. ಫೊಟೋಗ್ರಫಿ ಇಷ್ಟಪಡುವವರಿಗೆ ಹಸಿರು ಹಿನ್ನೆಲೆ ಮತ್ತು ನೈಸರ್ಗಿಕ ವಾತಾವರಣ ಹಲವು ಸುಂದರ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಅವಕಾಶ ನೀಡುತ್ತದೆ.

ಒಟ್ಟಿನಲ್ಲಿ, ಪಾಂಡವಪುರ ಸುತ್ತಾಡಿ ಬರುವ ನಡುವೆ ಸುಂದರವಅದ ವಾಸ್ತವ್ಯಕ್ಕಾಗಿ ನೀವು ಹುಡುಕಾಡುತ್ತಿದ್ದರೆ ಜಿಗ್ಲು ವ್ಯಾಲಿ ರೆಸಾರ್ಟ್ ನಿಮ್ಮ ಪ್ರವಾಸಕ್ಕೆ ಹೊಸ ಅರ್ಥ ನೀಡಲಿದೆ. ರೆಸಾರ್ಟ್‌ ಪ್ರವಾಸ ಇಷ್ಟೊಂದು ಅದ್ಬುತವಾಗಿರುತ್ತಾ ಎಂದು ಬೆರಗಾಗುವಂತೆ ಮಾಡುವುದರಲ್ಲಿ ಸಂದೇಹ ಬೇಕಿಲ್ಲ.

Untitled design (91)

ಏನ್‌ ವಿಶೇಷ ?

ಬೃಹತ್‌ ಈಜುಕೊಳ

ಇನ್‌ಡೋರ್‌ ಹಾಗೂ ಔಟ್‌ಡೋರ್‌ ಗೇಮ್ಸ್‌

ಫೈರ್‌ ಕ್ಯಾಂಪ್‌

ಫಿಶಿಂಗ್‌ ಸೌಲಭ್ಯ

ಪ್ರಾಪರ್ಟಿ ಸಮೀಪದಲ್ಲೇ ಕಾವೇರಿ ನದಿ

ಸುಸಜ್ಜಿತವಾದ ರೂಮ್‌ಗಳು

ರುಚಿಕರ ಮನೆಯೂಟ

ವಿಳಾಸ:

ಜಿಗ್ಲು ಕಣಿವೆ ರಿಟ್ರೀಟ್

ಕುಂತಿಬೆಟ್ಟದ ಹತ್ತಿರ, ಪಾಂಡವಪುರ, ಮಂಡ್ಯ

ಮೊಬೈಲ್:‌ +91 8150-002100

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ