ಈ ವರ್ಷ ಕರ್ನಾಟಕದಲ್ಲಿ ಅದ್ಭುತವಾಗಿ ಮಳೆಯಾಗುತ್ತಿದೆ. ನದಿಗಳು ತುಂಬಿ ಹರಿಯುತ್ತಿವೆ. ಜಲಾಶಯಗಳು ಭರ್ತಿಯಾಗಿ ಗೇಟ್ ತೆರೆಯಲ್ಪಡುತ್ತಿವೆ. ಜಲಪಾತಗಳು ಭೋರ್ಗರೆದು ಧುಮುಕುತ್ತಿವೆ. ಜೋಗ್ ಫಾಲ್ಸ್, ಶಿವನಸಮುದ್ರದ ಗಗನ ಚುಕ್ಕಿ ಭರಚುಕ್ಕಿ, ಸಿಗಂದೂರಿನ ಶರಾವತಿ ಹಿನ್ನೀರು, ತಲಕಾಡಿನ ಕಾವೇರಿ, ಹೊಗೆನಕಲ್ ಫಾಲ್ಸ್, ಕೃಷ್ಣಗಿರಿ ಅಣೆಕಟ್ಟು ಇವೆಲ್ಲವನ್ನೂ ಈ ಮಳೆಯ ಸೊಬಗಲ್ಲಿ ನೋಡಲು ಪುಣ್ಯ ಮಾಡಿರಬೇಕು. ಕರ್ನಾಟಕದ ಪ್ರವಾಸಿಗರು ಮಾನ್ಸೂನ್ ಪ್ರವಾಸಕ್ಕೆ ಕೇರಳಕ್ಕೋ ವಿದೇಶಕ್ಕೋ ಹೋಗಬೇಕಿಲ್ಲ. ಎಲ್ಲಾ ಇದೆಯೋ ನಮ್ಮೊಳಗೆ ಎಂಬಂತೆ ಕರ್ನಾಟಕ ಈಗ ಮಳೆ ಪ್ರವಾಸೋದ್ಯಮಕ್ಕೆ ತೆರೆದುಕೊಂಡಿದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಂದ್ರೆ ಕೆಎಸ್‌ಟಿಡಿಸಿ ಪ್ರವಾಸಿಗರಿಗೆಂದೇ ವಿಶೇಷವಾದ ಮಾನ್ಸೂನ್ ಪ್ಯಾಕೇಜ್‌ನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಜೋಗ್ ಫಾಲ್ಸ್ ಮತ್ತು ಸಿಗಂದೂರು, ಹೊಗೆನಕಲ್ ಜಲಪಾತ ಮತ್ತು ಕೃಷ್ಣಗಿರಿ ಅಣೆಕಟ್ಟು ಹಾಗೂ ಸೋಮನಾಥಪುರ, ತಲಕಾಡು ಮತ್ತು ಶಿವನಸಮುದ್ರ (ಗಗನಚುಕ್ಕಿ ಮತ್ತು ಭರಚುಕ್ಕಿ) ಜಲಪಾತಗಳಿಗೆ ಭೇಟಿ ನೀಡುವ ಮೂರು ಹೊಸ ಪ್ಯಾಕೇಜ್ ತಂದಿದೆ. ಈ ಪ್ಯಾಕೇಜ್‌ನೊಂದಿಗೆ ಪ್ರಕೃತಿಯ ಸೌಂದರ್ಯ, ಅಧ್ಯಾತ್ಮಿಕತೆ ಮತ್ತು ಐತಿಹಾಸಿಕ ಭವ್ಯತೆಯನ್ನು ಈ ಮೂರು ಮಳೆ ಪ್ರವಾಸದಲ್ಲಿ ಸಂಪೂರ್ಣವಾಗಿ ಆಸ್ವಾದಿಸಬಹುದು.

ಜೋಗ್ ಫಾಲ್ಸ್ ಮತ್ತು ಸಿಗಂದೂರು

ಕರ್ನಾಟಕದ ಪಶ್ಚಿಮ ಘಟ್ಟಗಳ ಹಸಿರಿನ ನಡುವೆ ನೆಲೆಗೊಂಡಿರುವ ಜೋಗ್ ಫಾಲ್ಸ್, ವಿಶ್ವದ ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ. ಶರಾವತಿ ನದಿಯು 253 ಮೀಟರ್‌ಗಳಷ್ಟು ಎತ್ತರದಿಂದ ಧುಮುಕುವ ಈ ಜಲಪಾತವು ಮಾನ್ಸೂನ್ ಋತುವಿನಲ್ಲಿ ತನ್ನ ಸಂಪೂರ್ಣ ವೈಭವವನ್ನು ಪ್ರದರ್ಶಿಸುತ್ತದೆ. ಧುಮ್ಮಿಕ್ಕುವ ನೀರಿನ ಶಬ್ದ, ಮಂಜಿನ ಸಿಂಚನ, ಮತ್ತು ಸುತ್ತಲಿನ ಹಸಿರಿನ ಸೌಂದರ್ಯವು ನಿಮ್ಮನ್ನು ಪ್ರಕೃತಿಯ ಮಡಿಲಿಗೆ ಕರೆದೊಯ್ಯುತ್ತದೆ. ಜೋಗ್ ಫಾಲ್ಸ್‌ನ ವ್ಯೂ ಪಾಯಿಂಟ್ ನಿಂದ ಈ ನೈಸರ್ಗಿಕ ಅದ್ಭುತವನ್ನು ಕಣ್ತುಂಬಿಕೊಳ್ಳುವುದು ನಿಜಕ್ಕೂ ರೋಮಾಂಚಕ ಅನುಭವ.

jog falls

ಜೋಗ್ ಫಾಲ್ಸ್‌ನ ಜೊತೆಗೆ, ಈ ಪ್ಯಾಕೇಜ್ ನಿಮ್ಮನ್ನು ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೂ ಕರೆದೊಯ್ಯುತ್ತದೆ. ಶರಾವತಿ ನದಿಯ ತೀರದಲ್ಲಿ ನೆಲೆಗೊಂಡಿರುವ ಈ ದೇವಾಲಯದ ಬಗ್ಗೆ ಇಡೀ ಕರ್ನಾಟಕಕ್ಕೆ ಗೊತ್ತು. ದೇವಿಯ ದರ್ಶನದ ಜತೆಗೆ, ಸಿಗಂದೂರಿನ ನದಿಯ ದಡದ ಸೌಂದರ್ಯ, ಹೊಸ ಭವ್ಯ ಸೇತುವೆ ಮತ್ತು ನೀಲಿ ಹಸಿರು ನೀರು, ಲಾಂಚ್ ನಲ್ಲಿ ಪಯಣ ಇವೆಲ್ಲವೂ ನಿಮಗೆ ಕೊಡುವ ಅನುಭವವೇ ಅದ್ಭುತ.

ಹೊಗೆನಕಲ್ ಫಾಲ್ಸ್ ಮತ್ತು ಕೃಷ್ಣಗಿರಿ ಡ್ಯಾಮ್

ಹೊಗೆನಕಲ್ ಜಲಪಾತ, ಕಾವೇರಿ ನದಿಯಿಂದ ರೂಪಗೊಂಡಿರುವ ಈ ಜಲಪಾತಕ್ಕೆ ದೊಡ್ಡ ಅಭಿಮಾನಿವರ್ಗವೇ ಇದೆ. ಸ್ಟಾರ್ ಆಫ್ ಕಾವೇರಿ ಎನಿಸಿಕೊಳ್ಳುವ ಇದು ಮಾನ್ಸೂನ್‌ನಲ್ಲಿ ಮೈದುಂಬಿ ನಲಿಯುತ್ತದೆ. ದೋಣಿಯ ಮೂಲಕ ಜಲಪಾತಕ್ಕೆ ತಲುಪುವ ರೋಮಾಂಚಕ ಅನುಭವವನ್ನು ಮಿಸ್ ಮಾಡುವಂತೆಯೇ ಇಲ್ಲ.

ಇದೇ ಪ್ಯಾಕೇಜ್‌ನಲ್ಲಿ, ನೀವು ಕೃಷ್ಣಗಿರಿ ಡ್ಯಾಮ್ ಗೂ ಭೇಟಿ ನೀಡಬಹುದು. ಕಾವೇರಿ ನದಿಯ ಮೇಲೆ ನಿರ್ಮಿತವಾದ ಈ ಅಣೆಕಟ್ಟು ತನ್ನ ವಿಶಾಲತೆ ಮತ್ತು ಶಾಂತ ಸೌಂದರ್ಯದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸೂರ್ಯಾಸ್ತದ ಸಮಯದಲ್ಲಿ ಅಣೆಕಟ್ಟಿನ ಸುತ್ತಲಿನ ದೃಶ್ಯವು ಕಣ್ಣಿಗೆ ಹಬ್ಬ.. ಅದ್ಭುತ ಫೋಟೋಗ್ರಾಫಿಯನ್ನೂ ಮಾಡಬಹುದು.

ಸೋಮನಾಥಪುರ, ತಲಕಾಡು, ಶಿವನಸಮುದ್ರ

ಸೋಮನಾಥಪುರದಲ್ಲಿರುವ ಕೇಶವ ದೇವಾಲಯವು 13ನೇ ಶತಮಾನದ ಹೊಯ್ಸಳರ ಕಲಾಕೃತಿಯ ಸಾಕ್ಷಿಯಾಗಿದೆ. ಈ ದೇವಾಲಯದ ಕೆತ್ತನೆಗಳು ಮತ್ತು ವಾಸ್ತುಶಿಲ್ಪವು ಇತಿಹಾಸ ಪ್ರಿಯರಿಗೆ ಮತ್ತು ಕಲಾಸಕ್ತರಿಗೆ ರಸದೌತಣ. ಕಾವೇರಿ ನದಿಯ ದಡದಲ್ಲಿ ನೆಲೆಗೊಂಡಿರುವ ಈ ದೇವಾಲಯ ಮಳೆಗಾಲದಲ್ಲಿ ಬೇರೆಯದೇ ಸೌಂದರ್ಯ ಹೊಂದುತ್ತದೆ.

somanathapura

ತಲಕಾಡು, "ಕರ್ನಾಟಕದ ಕಾಶಿ" ಎಂದೇ ಖ್ಯಾತ. ಇದಕ್ಕೆ ಅಧ್ಯಾತ್ಮಿಕ ಮತ್ತು ಐತಿಹಾಸಿಕ ಮಹತ್ವ ಇರುವುದು ಇಡೀ ಕರ್ನಾಟಕಕ್ಕೆ ಗೊತ್ತು. ತಲಕಾಡಿನ ಕಾವೇರಿ ನದಿ ಮತ್ತು ನದಿ ತೀರದ ಮರಳು ಎಂಥ ಸುಂದರ ಕಾಂಬಿನೇಷನ್ ಎಂದು ಪ್ರವಾಸಿಗರನ್ನು ಕೇಳಿ.

ಬ್ಲಫ್ ಎಂದು ಕರೆಸಿಕೊಳ್ಳುವ ಶಿವನಸಮುದ್ರದ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ಕಾವೇರಿ ನದಿಯಿಂದ ಹುಟ್ಟಿದ ಫಾಲ್ಸ್. ಈಗಾಗಲೇ ಇವುಗಳ ಫೊಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಲ್ಲಿ ನೋಡಿದರೆ ಸಿಗುವ ಅನುಭವ ಕೇವಲ ಒಂದು ಪರ್ಸೆಂಟ್. ಪ್ರತ್ಯಕ್ಷವಾಗಿ ಕೆಎಸ್ ಟಿ ಡಿಸಿ ಪ್ಯಾಕೇಜ್ ನಲ್ಲಿ ಹೋಗಿ ನೋಡಿದರೆ ಸಿಗುವ ಅನುಭೂತಿ ಹಂಡ್ರೆಡ್ ಪರ್ಸೆಂಟ್!

ಕೆಎಸ್‌ಟಿಡಿಸಿಯೊಂದಿಗೆ ಏಕೆ ಪ್ರವಾಸ?

ಕೆಎಸ್‌ಟಿಡಿಸಿಯ ಮಾನ್ಸೂನ್ ಪ್ಯಾಕೇಜ್ ನಿಮಗೆ ಬೇರೆ ಎಲ್ಲೂ ದೊರೆಯದ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜನೆಯ ಪ್ರವಾಸದ ಗ್ಯಾರಂಟಿ ನೀಡುತ್ತದೆ.

ಆರಾಮದಾಯಕ ಪ್ರಯಾಣ: ಆಧುನಿಕ ಬಸ್‌ಗಳು ಮತ್ತು ಅನುಭವಿ ಚಾಲಕರೊಂದಿಗೆ ಸುರಕ್ಷಿತ ಪ್ರಯಾಣ ಮಾಡಬಹುದು.

ವಿಶೇಷ ಗೈಡ್‌ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್‌ಗಳು ನಿಮ್ಮೊಂದಿಗೆ ಇರುತ್ತಾರೆ.

ಸಮಗ್ರ ಯೋಜನೆ: ಪ್ಯಾಕೇಜಲ್ಲಿ ಇರುವ ಎಲ್ಲ ತಾಣಗಳನ್ನೂ ಮನಸ್ಸಿಗೆ ಸಮಾಧಾನ ಆಗುವ ರೀತಿಯಲ್ಲಿ ನೋಡಬಹುದು ಮತ್ತು ಸಮಯದ ಪ್ಲ್ಯಾನಿಂಗ್ ಕೂಡ ಶಿಸ್ತಿನಿಂದ ರೂಪಿಸಿರಲಾಗುತ್ತದೆ.

ಕೈಗೆಟುಕುವ ಬೆಲೆ: ಎಲ್ಲರಿಗೂ ಒಗ್ಗುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ..

ಹಾಗಾದ್ರೆ ಇನ್ನೇಕೆ ತಡ ಈಗಲೇ ಬುಕ್ ಮಾಡಬಹುದಲ್ಲ!

kstdc

ಪ್ಯಾಕೇಜ್ 1: ಹೊಗೆನಕಲ್ ಫಾಲ್ಸ್ ಮತ್ತು ಕೃಷ್ಣಗಿರಿ ಅಣೆಕಟ್ಟು
( ಒಂದು ದಿನದ ಟ್ರಿಪ್ )

6.00 am - ಬೆಂಗಳೂರು ಕೆ ಎಸ್ ಟಿ ಡಿ ಸಿ ಬುಕಿಂಗ್ ಕೌಂಟರ್ , ಯಶವಂತಪುರ ಬಿಎಂಟಿಸಿ ಬಸ್ ಸ್ಟಾಂಡ್ ನಿಂದ ಹೊರಡುವುದು.

9.00 am – 9.30 am - ತಿಂಡಿ

10.00 am – 11.00 am - ಕೃಷ್ಣಗಿರಿ ಅಣೆಕಟ್ಟು ವೀಕ್ಷಣೆ

1.00 pm – 2 .00 pm - ಊಟ

2.00 pm – 5.00 pm - ಹೊಗೆನಕಲ್ ಜಲಪಾತ ವೀಕ್ಷಣೆ

5.00 pm – 9.00 pm - ವಾಪಸ್ ಬೆಂಗಳೂರು

ಪ್ಯಾಕೇಜ್ 2: ಸಿಗಂದೂರು ಮತ್ತು ಜೋಗ್ ಫಾಲ್ಸ್ ಪ್ರವಾಸ
( ಮೂರು ದಿನದ ಟ್ರಿಪ್ )

ಒಂದನೇ ದಿನ

09.00 pm - ಬೆಂಗಳೂರು ಕೆ ಎಸ್ ಟಿ ಡಿ ಸಿ ಬುಕಿಂಗ್ ಕೌಂಟರ್ , ಯಶವಂತಪುರ ಬಿಎಂಟಿಸಿ ಬಸ್ ಸ್ಟಾಂಡ್ ನಿಂದ ಹೊರಡುವುದು.

05.00 am - ಸಾಗರಕ್ಕೆ ಆಗಮನ. ಫ್ರೆಷ್ ಅಪ್ ಆಗಿ ರೆಡಿಯಾಗುವುದು.

ಎರಡನೇ ದಿನ

06.30 am - ಸಾಗರದಿಂದ ನಿರ್ಗಮನ

07.30 am- 10.00 am - ಹೊಳೆಬಾಗಿಲು ತಲುಪಿ, ಲಾಂಚ್ ಮೂಲಕ ಶರಾವತಿ ಹಿನ್ನೀರಿನಲ್ಲಿ ಸಿಗಂದೂರಿಗೆ ಯಾನ

10.00 am - ಚೌಡೇಶ್ವರಿ ದರ್ಶನ

12.30 pm – 05.00 pm - ಜೋಗ್ ಫಾಲ್ಸ್ ವೀಕ್ಷಣೆ
ಬ್ರಿಟಿಷ್ ಬಂಗ್ಲೆಯಿಂದ ಲಿಂಗನಮಕ್ಕಿ ಡ್ಯಾಮ್ ನ ಹೊರಭಾಗ ವೀಕ್ಷಣೆ.
ಊಟ ಮಾಡಿ ಜಲಪಾತದ ಮುಂಭಾಗದಿಂದ ವೀಕ್ಷಣೆ

05.00 pm - ಜೋಗ್ ಫಾಲ್ಸ್ ನ ಸಂಜೆ ವೀಕ್ಷಣೆ

08.30 pm - ರಾತ್ರಿಯ ಊಟ

09.00 pm - ಶಿವಮೊಗ್ಗದಿಂದ ಬೆಂಗಳೂರಿನತ್ತ ಪಯಣ

ಮೂರನೇ ದಿನ

06:00 am - ಬೆಂಗಳೂರಿಗೆ ವಾಪಸ್ ತಲುಪುವುದು

ಪ್ಯಾಕೇಜ್ 3: ಶಿವನಸಮುದ್ರ – ತಲಕಾಡು

ಒಂದು ದಿನದ ಪ್ರವಾಸ

06.30 am - ಬೆಂಗಳೂರು ಕೆ ಎಸ್ ಟಿ ಡಿ ಸಿ ಬುಕಿಂಗ್ ಕೌಂಟರ್ , ಯಶವಂತಪುರ ಬಿಎಂಟಿಸಿ ಬಸ್ ಸ್ಟಾಂಡ್ ನಿಂದ ಹೊರಡುವುದು.

09.00 am – 09.30 am - ಚನ್ನ ಪಟ್ಟಣ ಕಾಮತ್ ಹೊಟೇಲ್ ನಲ್ಲಿ ಉಪಾಹಾರ

09.30 am - ಕಾಮತ್ ಹೊಟೇಲ್ ನಿಂದ ನಿರ್ಗಮನ

11.00 am – 12.00 pm - ಗಗನ ಚುಕ್ಕಿ ವೀಕ್ಷಣೆ

12.00 pm - ಗಗನಚುಕ್ಕಿಯಿಂದ ನಿರ್ಗಮನ

12.30 pm – 01.00 pm - ಮಧ್ಯರಂಗ ದೇವಾಲಯ ಮತ್ತು ಭರಚುಕ್ಕಿಗೆ ಭೇಟಿ

01.15 pm – 02.00 pm - ಮಯೂರ ಭರಚುಕ್ಕಿ ಹೊಟೇಲ್ ನಲ್ಲಿ ಮಧ್ಯಾಹ್ನದ ಭೋಜನ

02.00 pm – 03.30 pm - ಭರಚುಕ್ಕಿ ಜಲಪಾತ ವೀಕ್ಷಣೆ

03.30 pm - ಭರಚುಕ್ಕಿಯಿಂದ ಹೊರಡುವುದು

04.00pm to 6.00pm - ತಲಕಾಡು ವೈದ್ಯನಾಥೇಶ್ವರ ದೇವಾಲಯ ದರ್ಶನ

06.00 pm - ತಲಕಾಡಿನಿಂದ ನಿರ್ಗಮನ

09.00 pm - ವಾಪಸ್ ಬೆಂಗಳೂರು ತಲುಪುವುದು